• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಯೂಮ್ಯಾತ್ ವೇದಿಕೆಗೆ ವಿದ್ಯಾಬಾಲನ್ ನೂತನ ರಾಯಭಾರಿ

|

ಬೆಂಗಳೂರು, ನ. 11: ಗಣಿತ ಕಲಿಕಾ ಎಡ್ ಟೆಕ್ ಪ್ಲಾಟ್ ಫಾರ್ಮ್ ಕ್ಯೂಮ್ಯಾತ್ ತನ್ನ ನೂತನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನ ಪರಿಪೂರ್ಣ ಮತ್ತು ಖ್ಯಾತ ಅಭಿನೇತ್ರಿ ವಿದ್ಯಾಬಾಲನ್ ಅವರನ್ನು ನೇಮಕ ಮಾಡಿಕೊಂಡಿದೆ.

ಅತ್ಯಂತ ಪ್ರತಿಭಾಶಾಲಿ ಗಣಿತತಜ್ಞೆಯಾಗಿದ್ದ ಶಕುಂತಲಾ ದೇವಿ ಅವರ ಕುರಿತಾದ ಚಿತ್ರದಲ್ಲಿ ಶಕುಂತಲಾ ದೇವಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾಗಿರುವ ವಿದ್ಯಾಬಾಲನ್ ಅವರು ಅತ್ಯದ್ಭುತವಾದ ನಟನಾ ಕೌಶಲ್ಯವನ್ನು ಹೊಂದಿರುವ ನಟಿಯಾಗಿದ್ದಾರೆ. ಇದೀಗ ಕ್ಯೂಮ್ಯಾತ್ ನ ಗಣಿತ ಕಲಿಕೆಯ ಹೊಸ ಜಾಹೀರಾತು ಅಭಿಯಾನದಲ್ಲಿ ವಿದ್ಯಾಬಾಲನ್ ಅವರು ಆಕರ್ಷಕವಾದ ರೀತಿಯಲ್ಲಿ ಕಲಿಕೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.

ದೂರದೃಷ್ಟಿಯುಳ್ಳ ಶಿಕ್ಷಕರಾದ ಮನನ್ ಖುರ್ಮಾ ಅವರು 2013 ರಲ್ಲಿ ಈ ಕ್ಯೂಮ್ಯಾತ್ ಅನ್ನು ಆರಂಭಿಸಿದರು. ಪ್ರಸ್ತುತ ಕ್ಯೂಮ್ಯಾತ್ ಭಾರತದ ಟಾಪ್ ಎಡ್-ಟೆಕ್ ಬ್ರ್ಯಾಂಡ್ ಗಳಲ್ಲಿ ಒಂದಾಗಿದೆ. ಇದುವರೆಗೆ 25 ಮಿಲಿಯನ್ ಗೂ ಅಧಿಕ ತರಗತಿಗಳನ್ನು ನಡೆಸಿದೆ ಮತ್ತು 40,000 ಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಮೂಲಕ ಶಿಕ್ಷಣ ಪಡೆದಿದ್ದಾರೆ. ಮತ್ತು ಸಂಸ್ಥೆಯು ಇನ್ನೂ ಬಲಯುತವಾಗಿ ಬೆಳವಣಿಗೆಯತ್ತ ದಾಪುಗಾಲು ಇಡುವುದನ್ನು ಮುಂದುವರಿಸಿದೆ.

ಕ್ಯೂಮ್ಯಾತ್ ನ ಹೊಸ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ವಿದ್ಯಾಬಾಲನ್ ಅವರು, ''ನಾನು ನನ್ನ ಹಿಂದಿನ ಚಿತ್ರದ ಸಂಶೋಧನೆ ಸಲುವಾಗಿ ಕ್ಯೂಮ್ಯಾತ್ ನ ಮಾದರಿ ತರಗತಿಗೆ ಹಾಜರಾಗಿದ್ದೇನೆ. ಆ 45 ನಿಮಿಷಗಳ ಮಾದರಿ ತರಗತಿಯಲ್ಲಿ ಕುಳಿತಾಗ ನನಗೆ ಗಣಿತದ ಪರಿಕಲ್ಪನೆಗಳನ್ನು ದೃಶ್ಯೀಕರಿಸುವುದನ್ನು ನಾನು ಕಲಿತಾಗ ಆಶ್ಚರ್ಯವಾಗಿತ್ತು. ನಾನು ಗಣಿತವನ್ನು ಕಾಣುತ್ತೇನೆ ಎಂದು ಊಹಿಸಿರಲೇ ಇಲ್ಲ. ತರಗತಿಯಲ್ಲಿ 12'' ನ ಪಿಜ್ಜಾಗೆ ಹೋಲಿಸಿದರೆ 8'' ನ ಎರಡು ಪಿಜ್ಜಾಗಳಲ್ಲಿ ಕಡಿಮೆ ಪ್ರಮಾಣ ಇರುತ್ತದೆ ಎಂದು ಶಿಕ್ಷಕರು ಉದಾಹರಣೆ ಮೂಲಕ ಹೇಳಿದಾಗ ನನಗೆ ಆಶ್ಚರ್ಯವಾಗಿತ್ತು. ಓಹ್, ನಾನು ತಪ್ಪು ಮಾರ್ಗದಲ್ಲಿ ಪಿಜ್ಜಾವನ್ನು ಆರ್ಡರ್ ಮಾಡುತ್ತಿದ್ದೆ ಎಂದು ಆಗ ನನಗನಿಸಿತು. ಇದು ಪಿಜ್ಜಾದ ವ್ಯಾಸಕ್ಕಿಂತ ಅದರ ಪ್ರಮಾಣ ಪ್ರಮುಖವಾಗಿದೆ ಎಂದು ಮನಗಂಡೆ. ಈ ಹಿನ್ನೆಲೆಯಲ್ಲಿ ಮುಂದಿನ ಬಾರಿ ಯಾವ ರೀತಿಯಲ್ಲಿ ಪಿಜ್ಜಾವನ್ನು ಆರ್ಡರ್ ಮಾಡಬೇಕೆಂಬುದು ನಿಮಗೆ ತಿಳಿದಿದೆ! ಇದುವೇ ಗಣಿತದ ಮೋಜು ಮತ್ತು ನಿಮ್ಮ ಇಂತಹ ಆತಂಕವನ್ನು ದೂರ ಮಾಡುವ ಕ್ಯೂಮ್ಯಾತ್ ನ ವಿಧಾನವಾಗಿದೆ. ಈ ಮೂಲಕ ಇದು 21 ನೇ ಶತಮಾನದ ಕಲಿಕೆಯ ಭವಿಷ್ಯವಾಗಿದೆ'' ಎಂದು ಪ್ರಶಂಸೆ ವ್ಯಕ್ತಪಡಿಸಿದರು.

English summary
Cuemath, the math learning edtech platform has associated with none other than the charming, witty and razor-sharp Vidya Balan as its new brand ambassador.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X