ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5ಜಿ ಪರೀಕ್ಷಾರ್ಥ ಪ್ರಯೋಗದಲ್ಲಿ ಗರಿಷ್ಠ 5ಜಿ ವೇಗ ದಾಖಲಿಸಿದ ವಿ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 19 : ಪ್ರಮುಖ ಟೆಲಿಕಾಂ ಆಪರೇಟರ್ ಕಂಪನಿಯಾದ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐ) ಸರ್ಕಾರದ ಹಂಚಿಕೆ ಮಾಡಿದ 5ಜಿ ಸ್ಪ್ರೆಕ್ಟ್ರಮ್‍ನಲ್ಲಿ ಪರೀಕ್ಷಾರ್ಥ ಪ್ರಯೋಗವನ್ನು ತನ್ನ ತಂತ್ರಜ್ಞಾನ ಮಾರಾಟಗಾರರ ಜತೆಗೆ ಮಹಾರಾಷ್ಟ್ರದ ಪುಣೆ ಮತ್ತು ಗುಜರಾತ್‍ನ ಗಾಂಧಿನಗರದಲ್ಲಿ ಕೈಗೊಂಡಿದೆ.

ಪುಣೆ ನಗರದಲ್ಲಿ, ವಿ ತನ್ನ 5 ಜಿ ಪ್ರಯೋಗವನ್ನು ಕ್ಲೌಡ್ ಕೋರ್, ಹೊಸ ತಲೆಮಾರಿನ ಸಾರಿಗೆ ಮತ್ತು ರೇಡಿಯೋ ಪ್ರವೇಶ ಜಾಲದ ಎಂಡ್-ಟು-ಎಂಡ್ ಕ್ಯಾಪ್ಟಿವ್ ನೆಟ್‍ವರ್ಕ್‍ನ ಲ್ಯಾಬ್ ಸೆಟಪ್‍ನಲ್ಲಿ ನಡೆಸಿದೆ. ಈ ಪ್ರಯೋಗದಲ್ಲಿ, ಎಂಎಂ ವೇವ್ ಸ್ಪೆಕ್ಟ್ರಮ್ ಬ್ಯಾಂಡ್‍ನಲ್ಲಿ ಅತಿ ಕಡಿಮೆ ಸುಪ್ತತೆಯೊಂದಿಗೆ ವಿ 3.7 ಜಿಬಿಪಿಎಸ್‍ಗಿಂತ ಹೆಚ್ಚಿನ ವೇಗವನ್ನು ಸಾಧಿಸಿದೆ. ಈ ವೇಗಗಳನ್ನು 5ಜಿ ಸ್ಯಾಂಡ್-ನಾನ್ ನೆಟ್ವರ್ಕ್ ಆರ್ಕಿಟೆಕ್ಚರ್ ಮತ್ತು ಎನ್‍ಆರ್ ರೇಡಿಯೋಗಳನ್ನು ಬಳಸಿಕೊಂಡು ಅತ್ಯಾಧುನಿಕ ಉಪಕರಣಗಳೊಂದಿಗೆ ಸಾಧಿಸಲಾಗಿದೆ.

ವಿ ಕಂಪನಿಗೆ ಎಂಎಂ ವೇವ್ ಹೈ ಬ್ಯಾಂಡ್‍ಗಳನ್ನು ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಡಿಓಟಿ ನೀಡಿದ 26 ಜಿಎಚ್‍ಝೆಡ್ ಹಾಗೂ 5 ಜಿ ನೆಟ್‍ವರ್ಕ್ ಟ್ರಯಲ್‍ಗಳಿಗಾಗಿ ಸಾಂಪ್ರದಾಯಿಕ 3.5 ಜಿಎಚ್‍ಝೆಡ್ ಸ್ಪೆಕ್ಟ್ರಮ್ ಬ್ಯಾಂಡ್ ಒಳಗೊಂಡಿದೆ. ಎಂಎಂವೇವ್ 5ಜಿ ಗಾಗಿ ಕಡಿಮೆ ಅಂತರದಲ್ಲಿ ವಿಶಾಲ ವರ್ಣಪಟಲ ಮತ್ತು ಸಾಮಥ್ರ್ಯವನ್ನು ನೀಡುತ್ತದೆ, ಮತ್ತು ಇದು ಅತ್ಯಂತ ಕಡಿಮೆ ಸುಪ್ತತೆಯನ್ನು ನೀಡುತ್ತದೆ.

Vi Records Top 5G Speeds in its ongoing 5G Trials

ವಿ 3.5 ಜಿಎಚ್‍ಝೆಡ್ ಬ್ಯಾಂಡ್ ಗಾಂಧಿನಗರ ಮತ್ತು ಪುಣೆ ನಗರದಲ್ಲಿ ಅದರ ಇಓಎಂ ಪಾಲುದಾರರೊಂದಿಗೆ. 5ಜಿ ಟ್ರಯಲ್ ನೆಟ್‍ವರ್ಕ್‍ನಲ್ಲಿ 1.5 ಜಿಬಿಪಿಎಸ್‍ವರೆಗಿನ ಗರಿಷ್ಠ ಡೌನ್‍ಲೋಡ್ ವೇಗವನ್ನು ಸಾಧಿಸಿದೆ.

ದೇಶಿ 5ಜಿ ಮೂಲಕ ಜಾಗತಿಕ ಡಿಜಿಟಲ್ ಕ್ರಾಂತಿಗೆ ಮುಂದಾದ ಜಿಯೋದೇಶಿ 5ಜಿ ಮೂಲಕ ಜಾಗತಿಕ ಡಿಜಿಟಲ್ ಕ್ರಾಂತಿಗೆ ಮುಂದಾದ ಜಿಯೋ

ಇಲ್ಲಿಯವರೆಗಿನ ಪ್ರಯೋಗದ ಸಾಧನೆ ಕುರಿತು ಪ್ರತಿಕ್ರಿಯಿಸಿದ ವೊಡಾಫೋನ್ ಐಡಿಯಾ ಲಿಮಿಟೆಡ್‍ನ ಸಿಟಿಒ ಜಗಬೀರ್ ಸಿಂಗ್, "ಸರ್ಕಾರದ ಹಂಚಿಕೆ ಮಾಡಿದ 5ಜಿ ಸ್ಪೆಕ್ಟ್ರಮ್‍ನಡಿ, 5ಜಿ ಪ್ರಯೋಗಗಳ ಆರಂಭಿಕ ಹಂತಗಳಲ್ಲಿ 5ಜಿ ಸ್ಪೆಕ್ಟ್ರಮ್ ಬ್ಯಾಂಡ್‍ಗಳ ವೇಗ ಮತ್ತು ವಿಳಂಬ ಫಲಿತಾಂಶಗಳು ನಮಗೆ ಸಂತಸ ತಂದಿದೆ. ಭಾರತದಲ್ಲಿ 4ಜಿ ನೆಟ್‍ವರ್ಕ್ ಪ್ಯಾನ್-ಇಂಡಿಯಾವನ್ನು ಸ್ಥಾಪಿಸಿ, ವೇಗದ 4ಜಿ ಮತ್ತು 5ಜಿ- ರೆಡಿ ನೆಟ್‍ವರ್ಕ್ ಅನ್ನು ನೀಡುತ್ತಿರುವ ನಾವು, ಮುಂದೆ ಭಾರತದಲ್ಲಿ ಉದ್ಯಮಗಳು ಮತ್ತು ಗ್ರಾಹಕರಿಗೆ ನಿಜವಾದ ಡಿಜಿಟಲ್ ಅನುಭವವನ್ನು ತರಲು ನೆಕ್ಸ್ಟ್‍ಜೆನ್ 5ಉ ತಂತ್ರಜ್ಞಾನವನ್ನು ಪರೀಕ್ಷಿಸುತ್ತಿದ್ದೇವೆ'' ಎಂದು ಹೇಳಿದರು.

5ಜಿ ನೆಟ್‍ವರ್ಕ್‍ನ ಹೆಚ್ಚಿನ ವೇಗ ಮತ್ತು ಕಡಿಮೆ ಲೇಟೆನ್ಸಿ ಗುಣಲಕ್ಷಣಗಳು ಸುಧಾರಿತ ಕಣ್ಗಾವಲು ಮತ್ತು ವೀಡಿಯೋ ಸ್ಟ್ರೀಮಿಂಗ್/ಪ್ರಸಾರದಂತಹ ಅನೇಕ ಸಾಮರ್ಥ್ಯಗಳನ್ನು ಹೊಂದಿವೆ; ವರ್ಧಿತ ಆನ್‍ಲೈನ್ ಗೇಮಿಂಗ್ ಅನುಭವಕ್ಕಾಗಿ ಎಆರ್/ವಿಆರ್ ಸೌಲಭ್ಯವನ್ನು ಹೊಂದಿದೆ; ಮತ್ತು 5ಜಿ ಸ್ಮಾರ್ಟ್ ಕಾರ್ಖಾನೆಯ ವಿಕಾಸವನ್ನು ಇದು ಸಕ್ರಿಯಗೊಳಿಸುತ್ತದೆ. ಉದ್ಯಮ 4.0 ಮತ್ತು 5 ಜಿ ಸ್ಮಾರ್ಟ್ ಸಿಟಿ ಯೋಜನೆಗಳು 5ಜಿ ನಿಯೋಜನೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಮತ್ತು ದೇಶದಲ್ಲಿ ತಂತ್ರಜ್ಞಾನದ ಪ್ರಗತಿಯ ಭರವಸೆಯ ಹೊಸ ಯುಗಕ್ಕೆ ನಾಂದಿ ಹಾಡಲಿವೆ.

ಇನ್ನೊಂದೆಡೆ, ಕ್ವಾಲ್ಕಾಮ್ ಮತ್ತು ಜಿಯೋ ಭಾರತದಲ್ಲಿ 5 ಜಿ ಪ್ರಯೋಗಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು, ಜಿಯೋ 5 ಜಿ ವಿಭಾಗದಲ್ಲಿ, 1 ಜಿಬಿಪಿಎಸ್ ಮೈಲಿಗಲ್ಲು ಸಾಧಿಸಿದೆ ಎಂದು ರಿಲಯನ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ವಾರ್ಷಿಕ ವರದಿಯಲ್ಲಿ ತಿಳಿಸಿದ್ದಾರೆ.

"ಜಿಯೋ 5 ಜಿ ಕೋರ್ ನೆಟ್‌ವರ್ಕ್ ಮತ್ತು 5 ಜಿ ಸ್ಮಾರ್ಟ್‌ಫೋನ್‌ಗಳಲ್ಲಿ, 5 ಜಿ ರಾನ್ ಪ್ಲಾಟ್‌ಫಾರ್ಮ್ 1 ಜಿಬಿಪಿಎಸ್ ಮೈಲಿಗಲ್ಲನ್ನು ದಾಟಿದೆ" ಎಂದು ವರದಿ ತಿಳಿಸಿದೆ. ಈ ಸಾಧನೆಯು ಜಿಯೋನ 5 ಜಿ ಗುಣಮಟ್ಟಗಳನ್ನು ತಿಳಿಸುತ್ತದೆ ಮಾತ್ರವಲ್ಲ, ಜಿಯೋ ಮತ್ತು ಭಾರತವು 5 ಜಿ ಎನ್ಆರ್ ಉತ್ಪನ್ನಗಳ ವಿಭಾಗದಲ್ಲಿ ಪ್ರವೇಶಿಸುತ್ತಿರುವುದನ್ನು ಸೂಚಿಸುತ್ತದೆ.

English summary
Leading telecom operator, Vodafone Idea Limited (VIL) is conducting 5G trials on Govt. allocated 5G spectrum in the cities of Pune (Maharashtra) and Gandhinagar (Gujarat), along with its technology vendors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X