ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೊಡಾಫೋನ್ ಐಡಿಯಾ: ಬೆಂಗಳೂರಿನಲ್ಲಿ ಗಿಗಾನೆಟ್ 4ಜಿ ಸಂಪರ್ಕ ಹೆಚ್ಚಳ

|
Google Oneindia Kannada News

ಬೆಂಗಳೂರು, ಡಿಸೆಂಬರ್ 2: ವೊಡಾಫೋನ್ ಐಡಿಯಾ ಲಿಮಿಟೆಡ್, ಬೆಂಗಳೂರಿನಲ್ಲಿನ ತನ್ನ 3200 ಮೊಬೈಲ್ ಸೈಟ್‍ಗಳನ್ನು 3ಜಿ ತರಂಗಾಂತರದಿಂದ 4ಜಿ ತರಂಗಾಂತರಕ್ಕೆ ಯಶಸ್ವಿಯಾಗಿ ಮೇಲ್ದರ್ಜೆಗೆ ಏರಿಸಿದೆ. ಈ ಮೂಲಕ ನಗರದಲ್ಲಿ ಕಂಪನಿಯ ಗಿಗಾನೆಟ್ 4ಜಿ ಸಾಮರ್ಥ್ಯವು ಗಮನಾರ್ಹವಾಗಿ ಹೆಚ್ಚಳಗೊಂಡಿದೆ. ಆದರೆ, ವೊಡಾಫೋನ್ ಐಡಿಯಾ, ಬೆಂಗಳೂರಿನಲ್ಲಿ 2ಜಿ ಸೇವೆಯನ್ನೂ ಮುಂದುವರೆಸಲಿದೆ.

2019ರ ಕೊನೆಯಲ್ಲಿ 900 ಮೆಗಾಹರ್ಟ್ಸ್ ತರಂಗಾಂತರಗಳ 5 ಮೆಗಾಹರ್ಟ್ಸ್ ಗಳನ್ನು ಹೆಚ್ಚುವರಿಯಾಗಿ ಅಳವಡಿಸಿದ್ದರಿಂದ ಈ ಬದಲಾವಣೆ ಸಾಧ್ಯವಾಗಿದೆ. ಇದರರ್ಥ ಏನೆಂದರೆ, ಬೆಂಗಳೂರಿನಲ್ಲಿನ ವೊಡಾಫೋನ್ ಐಡಿಯಾ (Vi) ಗ್ರಾಹಕರು ಮನೆ, ಕಚೇರಿ ಒಳಗೆ ಉತ್ತಮ ಮೊಬೈಲ್ ಸಂಪರ್ಕದ ಜತೆಗೆ ಗರಿಷ್ಠ ವೇಗದ ದತ್ತಾಂಶ ಡೌನ್‍ಲೋಡ್ ಸೌಲಭ್ಯವನ್ನೂ ಪಡೆದುಕೊಳ್ಳಲಿದ್ದಾರೆ.

ಜಿಯೋ, ಏರ್‌ಟೆಲ್, VI: ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್ನಲ್ಲಿ ಪೋರ್ಟ್ ಮಾಡುವುದು ಹೇಗೆ?ಜಿಯೋ, ಏರ್‌ಟೆಲ್, VI: ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್ನಲ್ಲಿ ಪೋರ್ಟ್ ಮಾಡುವುದು ಹೇಗೆ?

3ಜಿ ತರಂಗಾಂತರದಿಂದ 4ಜಿಗೆ ಬದಲಾಗುವ ಮೂಲಕ ಸದ್ಯದ 4ಜಿ ಮೂಲಸೌಕರ್ಯಗಳನ್ನು ಬಲಪಡಿಸಲಾಗಿದೆ. ಇದರಿಂದ ಬೆಂಗಳೂರಿನ ಗ್ರಾಹಕರಿಗೆ ಮೂರು ಬಗೆಯ ಪ್ರಯೋಜನಗಳಾದ - ವ್ಯಾಪಕ ಕವರೇಜ್, ಉತ್ತಮ ಗುಣಮಟ್ಟದ ಸಂಪರ್ಕ ಮತ್ತು ಕರೆಗಳ ನಿರ್ವಹಣಾ ಸಾಮಥ್ರ್ಯ ಹೆಚ್ಚಳ ಲಭಿಸಲಿವೆ.

Vi Ramps Up GIGAnet 4G Network Capacity In Bengaluru

ಬ್ರಾಡ್‍ಬ್ಯಾಂಡ್ ಪರೀಕ್ಷೆ ಮತ್ತು ಅಂತರ್ಜಾಲ ಆಧರಿಸಿದ ಸಂಪರ್ಕ ಜಾಲದ ದೋಷ ಪತ್ತೆಹಚ್ಚುವ ಅಪ್ಲಿಕೇಷನ್ಸ್ ಗಳ ಜಾಗತಿಕ ಪ್ರಮುಖ ಕಂಪನಿಯಾಗಿರುವ ಉಕ್ಲಾ, ವೊಡಾಫೋನ್ ಐಡಿಯಾದ ಗಿಗಾನೆಟ್, ಭಾರತದಲ್ಲಿನ ಅತ್ಯಂತ ಸುಸ್ಥಿರ ಮತ್ತು ವೇಗದ 4ಜಿ ನೆಟ್‍ವರ್ಕ್ ಎನ್ನುವ ಪ್ರಮಾಣಪತ್ರ ನೀಡಿದೆ. ಇನ್ನು ಮುಂದೆ ಬೆಂಗಳೂರಿನಲ್ಲಿನ ವೊಡಾಫೋನ್ ಐಡಿಯಾ (Vi) ಗ್ರಾಹಕರು 4ಜಿ ಮೊಬೈಲ್ ಮತ್ತು 4ಜಿ ಸಿಮ್ ಬಳಸಿ ಅತ್ಯಂತ ವೇಗದ 4ಜಿ ಅನುಭವ ಪಡೆದುಕೊಳ್ಳಲಿದ್ದಾರೆ.

2019ರಲ್ಲಿ ಸುಮಾರು 9 ಕೋಟಿ ಗ್ರಾಹಕರನ್ನು ಸೆಳೆದುಕೊಂಡ ರಿಲಯನ್ಸ್‌ ಜಿಯೋ: ಟ್ರಾಯ್ ವರದಿ2019ರಲ್ಲಿ ಸುಮಾರು 9 ಕೋಟಿ ಗ್ರಾಹಕರನ್ನು ಸೆಳೆದುಕೊಂಡ ರಿಲಯನ್ಸ್‌ ಜಿಯೋ: ಟ್ರಾಯ್ ವರದಿ

ವೊಡಾಫೋನ್ ಐಡಿಯಾದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಕ್ಲಸ್ಟರ್ ಮುಖ್ಯಸ್ಥ ಅರವಿಂದ ನೆವಾತಿಯಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, 'ಗ್ರಾಹಕರ ಡೇಟಾ ಬೇಡಿಕೆ ಈಡೇರಿಸುವುದರ ಜತೆಗೆ ಸುಧಾರಿತ 4ಜಿ ಡೇಟಾ ಅನುಭವ ಹೆಚ್ಚಿಸುವುದಕ್ಕೆ ಮೊಬೈಲ್ ಸಂಪರ್ಕ ಜಾಲದ ಬಲವರ್ಧನೆ ಮಾಡುವುದು ಅನಿವಾರ್ಯವಾಗಿತ್ತು. ಸದ್ಯ ಇರುವ 4ಜಿ ಮೂಲಸೌಕರ್ಯಗಳಿಗೆ ಪೂರಕವಾಗಿ 2100 ಮೆಗಾಹರ್ಟ್ಸ್ ನ ಇನ್ನೊಂದು ಸಂಪರ್ಕ ಸೌಲಭ್ಯದ ಅಳವಡಿಕೆಯು, ಬೆಂಗಳೂರಿನಲ್ಲಿನ ವೊಡಾಫೋನ್ ಐಡಿಯಾದ ಗ್ರಾಹಕರಿಗೆ ಮನೆ ಮತ್ತು ಕಚೇರಿ ಒಳಗಿನ ಮೊಬೈಲ್ ಸಂಪರ್ಕ ಗುಣಮಟ್ಟ ಹೆಚ್ಚಿಸಿರುವುದರ ಜತೆಗೆ, ದತ್ತಾಂಶ ವೇಗವೂ ಏರಿಕೆಯಾಗಿದೆ. ವೊಡಾಫೋನ್ ಐಡಿಯಾದ 3ಜಿ ಗ್ರಾಹಕರು ಸಾಧ್ಯವಾದಷ್ಟು ಬೇಗ ತಮಗೆ ಸಮೀಪದ ರಿಟೇಲ್ ಮಳಿಗೆಗೆ ಭೇಟಿ ನೀಡಿ 4ಜಿ ಸಿಮ್‍ಗೆ ಮೇಲ್ದರ್ಜೆಗೆ ಏರಿಸಿಕೊಳ್ಳಬೇಕು. ವೊಡಾಫೋನ್ ಐಡಿಯಾ ಗಿಗಾನೆಟ್ 4ಜಿ ಸೌಲಭ್ಯದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ನಾವು ಮನವಿ ಮಾಡಿಕೊಳ್ಳುತ್ತೇವೆ' ಎಂದು ಹೇಳಿದ್ದಾರೆ.

English summary
Vodafone Idea Limited has successfully refarmed 3G spectrum to 4G across 3200 sites in Bengaluru, thereby substantially enhancing GIGAnet 4G capacity in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X