ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯ ಆಸ್ತಿ ಮಾರಲು ಯುಕೆ ಕೋರ್ಟ್ ಸಮ್ಮತಿ, ಭಾರತದ ಬ್ಯಾಂಕ್ ಗಳು ನಿರಾಳ

|
Google Oneindia Kannada News

ನವದೆಹಲಿ, ಜುಲೈ 6: ಮದ್ಯದ ಉದ್ಯಮಿ- ಸದ್ಯಕ್ಕೆ ಲಂಡನ್ ನಲ್ಲಿರುವ ವಿಜಯ್ ಮಲ್ಯ ಆಸ್ತಿಗಳನ್ನು ಪತ್ತೆ ಹಚ್ಚಿ, ಅದನ್ನು ಮಾರುವ ಮೂಲಕ ಸಾಲ ವಸೂಲಿ ಮಾಡಿಕೊಳ್ಳಿ ಎಂದು ಬ್ರಿಟಿಷ್ ಕೋರ್ಟ್ ಹೇಳಿದೆ. ಯು.ಕೆ.ನಲ್ಲಿರುವ ತನಿಖಾ ಸಂಸ್ಥೆಗಳೂ ಸೇರಿದ ಹಾಗೆ ವಿವಿಧ ತನಿಖಾ ಸಂಸ್ಥೆಗಳ ಜತೆ ಭಾರತದ ಬ್ಯಾಂಕ್ ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಎಸ್ ಬಿಐ ಎಂ.ಡಿ. ಅರ್ಜಿತ್ ಬಸು ಶುಕ್ರವಾರ ಹೇಳಿದ್ದಾರೆ.

"ಸರಕಾರವೂ ಸೇರಿದ ಹಾಗೆ ವಿವಿಧ ತನಿಖಾ ಸಂಸ್ಥೆಗಳು ಪಟ್ಟ ಶ್ರಮದ ಕಾರಣಕ್ಕೆ ಇಲ್ಲಿಯವರೆಗೆ ಬರುವುದಕ್ಕೆ ಸಾಧ್ಯವಾಗಿದೆ. ನಮಗೆ ಕೋರ್ಟ್ ಆದೇಶದಿಂದ ಸಂತೋಷವಾಗಿದೆ. ಇಂಥ ಆದೇಶದಿಂದ ಆ ಎಲ್ಲ ಆಸ್ತಿಗಳನ್ನು ವಶಕ್ಕೆ ಪಡೆಯುವುದಕ್ಕೆ ಸಾಧ್ಯವಾಗುತ್ತದೆ" ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಅವರು ಹೇಳಿದ್ದಾರೆ.

ಮಲ್ಯಗೆ ಹೆಚ್ಚಿದ ಸಂಕಷ್ಟ: ಲಂಡನ್‌ನಲ್ಲಿನ ಆಸ್ತಿ ಮುಟ್ಟುಗೋಲಿಗೆ ಅನುಮತಿಮಲ್ಯಗೆ ಹೆಚ್ಚಿದ ಸಂಕಷ್ಟ: ಲಂಡನ್‌ನಲ್ಲಿನ ಆಸ್ತಿ ಮುಟ್ಟುಗೋಲಿಗೆ ಅನುಮತಿ

ಸದ್ಯಕ್ಕೆ ಕಾರ್ಯನಿರ್ವಹಣೆಯನ್ನೇ ನಿಲ್ಲಿಸಿರುವ ಕಿಂಗ್ ಫಿಷರ್ ಏರ್ ಲೈನ್ಸ್ ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದಲ್ಲಿ 13 ಬ್ಯಾಂಕ್ ಗಳ ಒಕ್ಕೂಟವು 9000 ಕೋಟಿ ರುಪಾಯಿ ಸಾಲ ನೀಡಿದ್ದವು.

Very happy with UK court order, will go after Vijay Mallya’s assets: SBI

ಬಸು ಮಾತನಾಡಿ, ಹಲವಾರು ಕಾನೂನುಗಳು ದೇಶದ ಗಡಿ ದಾಟಿಯೂ ಬೇರೆ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ನಮ್ಮ ಶ್ರಮದ ಮೂಲಕ ಜಗತ್ತಿನಾದ್ಯಂತ ಸ್ಥಗಿತದ ಆದೇಶ ಪಡೆದಿದ್ದೇವೆ. ಆ ಎಲ್ಲ ಆಸ್ತಿಗಳನ್ನು ಮಾರಿದರೆ ಒಟ್ಟು ಸಾಲದಲ್ಲಿ ಎಲ್ಲ ಅಲ್ಲದಿದ್ದರೂ ದೊಡ್ಡ ಪ್ರಮಾಣದ ಮೊತ್ತ ವಾಪಸಾಗುತ್ತದೆ ಎಂದಿದ್ದಾರೆ. ಆದರೆ ಎಷ್ಟು ಮೊತ್ತ ಎಂಬುದನ್ನು ಬಹಿರಂಗಪಡಿಸಿಲ್ಲ.

ವಿಜಯ್ ಮಲ್ಯ ಆಸ್ತಿಗಳ ಮೌಲ್ಯಮಾಪನ ಮಾಡುವ ಸಲುವಾಗಿಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೌಲ್ಯಮಾಪಕರನ್ನು ನೇಮಕ ಮಾಡಿದೆ. ಇನ್ನು ಭಾರತದಲ್ಲಿರುವ ಮಲ್ಯ ಆಸ್ತಿಗಳ ಮಾರಾಟದಿಂದ 963 ಕೋಟಿ ರುಪಾಯಿ ವಸೂಲಾಗಿದೆ.

ಲಂಡನ್ ನಲ್ಲಿರುವ ವಿಜಯ್ ಮಲ್ಯ ಮನೆ- ಆಸ್ತಿಗಳ ಒಳಗೆ ಪ್ರವೇಶ ಮಾಡುವುದಕ್ಕೆ ಕೋರ್ಟ್ ಆದೇಶದಲ್ಲಿ ಅನುಮತಿ ಸಿಕ್ಕಿದೆ. ಜತೆಗೆ 1.145 ಬಿಲಿಯನ್ ಪೌಂಡ್ ಹಣವನ್ನು ವಸೂಲಿ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಜತೆಗೆ ವಿಜಯ್ ಮಲ್ಯಗೆ ಸೇರಿದ ವಸ್ತುಗಳನ್ನು ವಶಕ್ಕೆ ಪಡೆಯಲು ಸಹ ಒಪ್ಪಿಗೆ ಸಿಕ್ಕಂತಾಗಿದೆ. ಅಗತ್ಯ ಬಿದ್ದಲ್ಲಿ ಮಲ್ಯ ನಿವಾಸದೊಳಗೆ ಬಲ ಪ್ರಯೋಗಿಸಿ, ಪ್ರವೇಶ ಮಾಡಬಹುದು ಎಂದು ಕೂಡ ಹೇಳಲಾಗಿದೆ.

English summary
Indian banks are working very closely with various agencies, including in the UK, to recover maximum out of assets owned by Vijay Mallya after a British court allowed them to search and seize properties of the fugitive liquor baron, SBI MD Arijit Basu said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X