ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ರಿಟರ್ನ್ಸ್ ಪರಿಶೀಲನೆ ಅವಧಿ 120 ರಿಂದಂ 30 ದಿನಕ್ಕೆ ಇಳಿಕೆ

|
Google Oneindia Kannada News

ನವದೆಹಲಿ, ಆಗಸ್ಟ್ 2: ಭಾರತದಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ಐಟಿ ಇಲಾಖೆ ಸಿಹಿಸುದ್ದಿಯೊಂದನ್ನು ಕೊಟ್ಟಿದೆ. ದೇಶದಲ್ಲಿ ಇನ್ಮುಂದೆ ಆದಾಯ ತೆರಿಗೆ ಇಲಾಖೆಯು ಐಟಿಆರ್-ವಿಯ ಇ-ಪರಿಶೀಲನೆ ಅಥವಾ ಹಾರ್ಡ್ ಕಾಪಿ ಸಲ್ಲಿಕೆ, ತೆರಿಗೆದಾರರಿಂದ ರಿಟರ್ನ್ಸ್ ಸಲ್ಲಿಸಿದ ನಂತರದ ಅವಧಿಯನ್ನು 120 ದಿನಗಳಿಂದ 30 ದಿನಗಳಿಗೆ ಇಳಿಸಲಾಗಿದೆ.

ಆಗಸ್ಟ್ 1ರಿಂದ ಈ ಹೊಸ ನೀತಿ ಜಾರಿಗೆ ಬರಲಿದ್ದು, 30 ದಿನಗಳಲ್ಲಿ ಆದಾಯ ತೆರಿಗೆ ಮರುಪಾವತಿಯನ್ನು ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆದಾಯ ತೆರಿಗೆ ಇಲಾಖೆಯು ತಿಳಿಸಿದೆ.

ಜುಲೈ 31ರೊಳಗೆ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸದವರು ಏನು ಮಾಡಬೇಕು?ಜುಲೈ 31ರೊಳಗೆ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸದವರು ಏನು ಮಾಡಬೇಕು?

ಆದಾಯ ತೆರಿಗೆ ಇಲಾಖೆಯು ಜುಲೈ 29ರಂದು ಅಧಿಸೂಚನೆ ಹೊರಡಿಸಿದ್ದು, ಕಾಲಮಿತಿಯಲ್ಲಿ ಬದಲಾವಣೆ ಮಾಡಲಾಗಿದೆ. ಆದಾಯ ತೆರಿಗೆ ಮರುಪಾವತಿ(ITR)ಯ ಇ-ಪರಿಶೀಲನೆಯು ರಿಟರ್ನ್ ಫೈಲಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ಅದನ್ನು ನಿಗದಿತ ಸಮಯದೊಳಗೆ ಮಾಡದಿದ್ದರೆ, ಐಟಿಆರ್ ಅನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ.

Verification of Income Tax Return timeline reduced to 30 days from 120

ಐಟಿ ರಿಟರ್ನ್ಸ್ ಸಲ್ಲಿಕೆಯ ಸಮಯ ಮಿತಿ 30 ದಿನ: "ಈ ಅಧಿಸೂಚನೆಯ ದಿನಾಂಕದಂದು ಅಥವಾ ನಂತರದ ದಿನಾಂಕದಂದು ಯಾವುದೇ ಎಲೆಕ್ಟ್ರಾನಿಕ್ ರಿಟರ್ನ್ ಡೇಟಾಗೆ ಸಂಬಂಧಿಸಿದಂತೆ, ಇ-ಪರಿಶೀಲನೆ ಅಥವಾ ITR-V ಸಲ್ಲಿಕೆಗೆ ಸಮಯ-ಮಿತಿಯು ದಿನಾಂಕದಿಂದ 30 ದಿನಗಳು ಎಂದು ನಿರ್ಧರಿಸಲಾಗಿದೆ. ರಿಟರ್ನ್‌ನ ಡೇಟಾವನ್ನು ಆನ್ ಲೈನ್ ಮೂಲಕ ರವಾನಿಸುವುದು ಅಥವಾ ಅಪ್‌ಲೋಡ್ ಮಾಡುವುದು," ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಇಲ್ಲಿಯವರೆಗೆ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸಿದ ನಂತರ ITR ಅನ್ನು ಇ-ಪರಿಶೀಲಿಸಲು ಅಥವಾ ITR-V ಅನ್ನು ಪೋಸ್ಟ್ ಮೂಲಕ ಕಳುಹಿಸುವ ಸಮಯಾವಧಿಯು ITR ಅನ್ನು ಅಪ್‌ಲೋಡ್ ಮಾಡಿದ ದಿನಾಂಕದಿಂದ 120 ದಿನಗಳಾಗಿತ್ತು.

ITR ಅಥವಾ ಹಾರ್ಡ್ ಕಾಪಿ ITR-V ಯ ಇ-ಪರಿಶೀಲನೆಯನ್ನು 30 ದಿನಗಳ ಕಾಲಮಿತಿಯನ್ನು ಮೀರಿ ಪೋಸ್ಟ್ ಮೂಲಕ ಕಳುಹಿಸಿದರೆ, ರಿಟರ್ನ್ ಅನ್ನು ತಡವಾಗಿ ಅಥವಾ ನಿಗದಿತ ದಿನಾಂಕಕ್ಕಿಂತ ಮೀರಿ ಪರಿಗಣಿಸಲಾಗುವುದು ಎಂದು ಅಧಿಸೂಚನೆಯು ಸ್ಪಷ್ಟಪಡಿಸಿದೆ.

Verification of Income Tax Return timeline reduced to 30 days from 120

"ಆದಾಯ-ತೆರಿಗೆ ರಿಟರ್ನ್ ದಿನಾಂಕವನ್ನು ವಿದ್ಯುನ್ಮಾನವಾಗಿ ರವಾನಿಸುವ ದಿನಾಂಕದಿಂದ 30 ದಿನಗಳ ಅವಧಿಯನ್ನು ನಿರ್ಧರಿಸುವ ಉದ್ದೇಶಕ್ಕಾಗಿ ಸರಿಯಾಗಿ ಪರಿಶೀಲಿಸಿದ ITR-V ಯ ಸ್ಪೀಡ್ ಪೋಸ್ಟ್ ರವಾನೆಯ ದಿನಾಂಕವನ್ನು ಪರಿಗಣಿಸಲಾಗುತ್ತದೆ," ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಕಳುಹಿಸಲು ಸೂಚನೆ: ITR-V ಅನ್ನು ಹಾರ್ಡ್ ಕಾಪಿಯಲ್ಲಿ ಕಳುಹಿಸಲು ಬಯಸುವವರು ಅದನ್ನು "ಸ್ಪೀಡ್ ಪೋಸ್ಟ್ ಮೂಲಕ ಮಾತ್ರ" ಕೇಂದ್ರೀಕೃತ ಸಂಸ್ಕರಣಾ ಕೇಂದ್ರ, ಆದಾಯ ತೆರಿಗೆ ಇಲಾಖೆ, ಬೆಂಗಳೂರು-560500, ಕರ್ನಾಟಕ ಎಂಬ ವಿಳಾಸಕ್ಕೆ ಕಳುಹಿಸತಕ್ಕದ್ದು.

English summary
India Tax: Verification of Income Tax Return timeline reduced to 30 days from 120. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X