ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಹನ ಸ್ಕ್ರ್ಯಾಪೇಜ್ ನೀತಿ; ಅಭಿವೃದ್ಧಿ ಪಯಣದಲ್ಲಿ ಮಹತ್ವದ ಮೈಲಿಗಲ್ಲು

|
Google Oneindia Kannada News

ನವದೆಹಲಿ, ಆಗಸ್ಟ್ 13: ''ವಾಹನ ಸ್ಕ್ರ್ಯಾಪೇಜ್ ನೀತಿಗೆ ಇಂದು ಚಾಲನೆ ನೀಡಿರುವುದು ಭಾರತದ ಅಭಿವೃದ್ಧಿ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ'' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ: "ವಾಹನ ಸ್ಕ್ರ್ಯಾಪೇಜ್ ನೀತಿಗೆ ಇಂದು ಚಾಲನೆ ನೀಡಿರುವುದು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಸ್ಕ್ರ್ಯಾಪಿಂಗ್‌ ಮೂಲಸೌಕರ್ಯ ಸ್ಥಾಪನೆಗಾಗಿ ಗುಜರಾತ್‌ನಲ್ಲಿ ಹೂಡಿಕೆದಾರರ ಶೃಂಗಸಭೆಯು ಹೊಸ ಶ್ರೇಣಿಯ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನಾನು ನಮ್ಮ ಯುವ ಮತ್ತು ನವೋದ್ಯಮಗಳನ್ನು ವಿನಂತಿಸುತ್ತೇನೆ.'' ಎಂದಿದ್ದಾರೆ.

ಕೇಂದ್ರದ ಗುಜರಿ ನೀತಿ: ದುಬಾರಿಯಾಗಲಿದೆ ಹಳೆ ವಾಹನಗಳ ಬಳಕೆ, ಜನಸಾಮಾನ್ಯರಿಗೆ ಮತ್ತೊಂದು ಬರೆಕೇಂದ್ರದ ಗುಜರಿ ನೀತಿ: ದುಬಾರಿಯಾಗಲಿದೆ ಹಳೆ ವಾಹನಗಳ ಬಳಕೆ, ಜನಸಾಮಾನ್ಯರಿಗೆ ಮತ್ತೊಂದು ಬರೆ

''ಅನರ್ಹ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ವಿಲೇವಾರಿ ಮಾಡಲು ವಾಹನ ಸ್ಕ್ರ್ಯಾಪಿಂಗ್ ನೀತಿಯು ಸಹಾಯ ಮಾಡುತ್ತದೆ. ಕಾರ್ಯಸಾಧ್ಯವಾದ ವರ್ತುಲ ಆರ್ಥಿಕತೆಯನ್ನು(#circulareconomy) ಅಭಿವೃದ್ಧಿಪಡಿಸುವುದು ಹಾಗೂ ಪರಿಸರದ ಬಗ್ಗೆ ಜವಾಬ್ದಾರಿಯೊಂದಿಗೆ ಎಲ್ಲಾ ಮಧ್ಯಸ್ಥಗಾರರಿಗೆ ಮೌಲ್ಯವನ್ನು ತರುವುದು ನಮ್ಮ ಉದ್ದೇಶವಾಗಿದೆ." ಎಂದಿದ್ದಾರೆ.

ವಾಹನಗಳನ್ನು ಸ್ಕ್ರಾಪ್‌ಗೆ ಹಾಕುವ ಸಂಬಂಧ ಹೊಸ ಸ್ಕ್ರಾಪೇಜ್ ನೀತಿ

ವಾಹನಗಳನ್ನು ಸ್ಕ್ರಾಪ್‌ಗೆ ಹಾಕುವ ಸಂಬಂಧ ಹೊಸ ಸ್ಕ್ರಾಪೇಜ್ ನೀತಿ

20 ವರ್ಷದಷ್ಟು ಹಳೆಯದಾದ ಖಾಸಗಿ ವಾಹನಗಳು ಹಾಗೂ 15 ವರ್ಷಗಳಷ್ಟು ಹಳೆಯದಾದ ವಾಣಿಜ್ಯ ವಾಹನಗಳನ್ನು ಸ್ಕ್ರಾಪ್‌ಗೆ ಹಾಕುವ ಸಂಬಂಧ ಹೊಸ ಸ್ಕ್ರಾಪೇಜ್ ನೀತಿಯನ್ನು ನಿರ್ಮಲಾ ಸೀತಾರಾಮನ್ ಅವರು ಕಳೆದ ಬಜೆಟ್ ಸಂದರ್ಭದಲ್ಲಿ ಘೋಷಿಸಿದರು. ನಂತರ ಗುಜರಿ ನೀತಿ ಅಡಿ ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿಸುವವರಿಗೆ ಆಟೊ ಮೇಕರ್‌ಗಳಿಂದ 5%ರಷ್ಟು ವಿನಾಯಿತಿ ಸಿಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ವಿದ್ಯುತ್ ವಾಹನ (ಇವಿ) ಚಾರ್ಜಿಂಗ್ ಮಾರ್ಗದರ್ಶನ ಕೈಪಿಡಿ
ನೀತಿಯಲ್ಲಿ ನಾಲ್ಕು ಪ್ರಮುಖ ಅಂಶಗಳು ಇವೆ

ನೀತಿಯಲ್ಲಿ ನಾಲ್ಕು ಪ್ರಮುಖ ಅಂಶಗಳು ಇವೆ

'ಈ ನೀತಿಯಲ್ಲಿ ನಾಲ್ಕು ಪ್ರಮುಖ ಅಂಶಗಳು ಇವೆ. ವಿನಾಯಿತಿಯ ಆಚೆಗೆ, ಹಸಿರು ತೆರಿಗೆಗಳು ಮತ್ತು ಹಳೆಯ ಮಾಲಿನ್ಯಕಾರಕ ವಾಹನಗಳ ಮೇಲೆ ಇತರೆ ಸುಂಕಗಳನ್ನು ವಿಧಿಸುವ ನಿಯಮಗಳು ಇವೆ. ಹಳೆಯ ವಾಹನಗಳು ಸ್ವಯಂಚಾಲಿತ ಸೌಲಭ್ಯ ಕೇಂದ್ರಗಳಲ್ಲಿ ಫಿಟ್ನೆಸ್ ಹಾಗೂ ಮಾಲಿನ್ಯ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಲಿದೆ. ಇದಕ್ಕಾಗಿ ದೇಶದೆಲ್ಲೆಡೆ ಫಿಟ್ನೆಸ್ ಕೇಂದ್ರಗಳನ್ನು ಸ್ಥಾಪಿಸಬೇಕಿದ್ದು, ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ' ಎಂದು ಹೇಳಿದ್ದಾರೆ.

ವಾಹನ ಮಾಲೀಕರ ಗಮನಕ್ಕೆ: ಕ್ಯೂರಿಯಸ್ ಕೇಸ್ ಆಫ್ 'ಗುಜರಿ ಪಾಲಿಸಿ'!ವಾಹನ ಮಾಲೀಕರ ಗಮನಕ್ಕೆ: ಕ್ಯೂರಿಯಸ್ ಕೇಸ್ ಆಫ್ 'ಗುಜರಿ ಪಾಲಿಸಿ'!

25 ನೋಂದಾಯಿತ ಸ್ವಯಂಚಾಲಿತ ಫಿಟ್ನೆಸ್ ಪರೀಕ್ಷೆ

25 ನೋಂದಾಯಿತ ಸ್ವಯಂಚಾಲಿತ ಫಿಟ್ನೆಸ್ ಪರೀಕ್ಷೆ

ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ವಯಂಚಾಲಿತ ಫಿಟ್ನೆಸ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸ್ಕ್ರಾಪಿಂಗ್ ಕೇಂದ್ರಗಳಿಗಾಗಿ ಖಾಸಗಿ ಪಾಲುದಾರರು ಮತ್ತು ರಾಜ್ಯ ಸರ್ಕಾರಗಳಿಗೆ ಸರ್ಕಾರ ಸಹಾಯ ಮಾಡಲಿದೆ. ಸ್ವಯಂಚಾಲಿತ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಲು ವಿಫಲವಾಗುವ ವಾಹನಗಳಿಗೆ ಭಾರಿ ದಂಡ ವಿಧಿಸಲಾಗುತ್ತದೆ ಮತ್ತು ವಶಕ್ಕೆ ಪಡೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ಖಾಸಗಿ ಮತ್ತು ವಾಣಿಜ್ಯ ವಾಹನಗಳಲ್ಲಿ ಸ್ವಯಂಚಾಲಿತ ಫಿಟ್ನೆಸ್ ಪರೀಕ್ಷೆಗೆ ಒಳಗಾಗದ ವಾಹನಗಳನ್ನು 'ವಾಹನ್'ದಿಂದ (ರಾಷ್ಟ್ರೀಯ ನೋಂದಣಿ ಇ-ಸೇವೆ) ತೆಗೆದುಹಾಕಲಾಗುತ್ತದೆ, ಪ್ರಸ್ತುತ ದೇಶದಾದ್ಯಂತ ಕೇವಲ 25 ನೋಂದಾಯಿತ ಸ್ವಯಂಚಾಲಿತ ಫಿಟ್ನೆಸ್ ಪರೀಕ್ಷೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಸ್ಕ್ರ್ಯಾಪೇಜ್ ನೀತಿ ಬಗ್ಗೆ ಮಿಶ್ರ ಪ್ರತಿಕ್ರಿಯೆ

ಮಿಶ್ರ ಪ್ರತಿಕ್ರಿಯೆ: 15 ವರ್ಷದಷ್ಟು ಹಳೆಯದಾದ ವಾಣಿಜ್ಯ ವಾಹನಗಳ ಫಿಟ್ನೆಸ್ ಪ್ರಮಾಣಪತ್ರ ಪಡೆಯುವ ವೆಚ್ಚ 62 ಪಟ್ಟು ಹೆಚ್ಚಾಗಲಿದೆ. ಹಾಗೆಯೇ ಖಾಸಗಿ ವಾಹನಗಳ ನೋಂದಣಿ ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಾಗಲಿದೆ. ಒಂದು ವೇಳೆ ಈ ಅವಧಿ ಮೀರಿದ ವಾಹನಗಳನ್ನು ಬಳಸುವುದಾದರೆ ಪ್ರತಿ ವಾಹನಗಳ ಮಾಲೀಕರು ರಸ್ತೆ ತೆರಿಗೆಗಿಂತಲೂ ಅಧಿಕ ಮೊತ್ತದ ಹಸಿರು ತೆರಿಗೆಯನ್ನು (ಗ್ರೀನ್ ಟ್ಯಾಕ್ಸ್) ರಾಜ್ಯಗಳಿಗೆ ಪಾವತಿಸಬೇಕಾಗುತ್ತದೆ ಎಂದು ವಾಹನ ಸವಾರರು ಗೋಳು ತೋಡಿಕೊಂಡಿದ್ದರು.

ವಾಹನ ಗುಜರಿ ನೀತಿ: ಯಾವ ವಾಹನದ ನವೀಕರಣಕ್ಕೆ ಎಷ್ಟು ಶುಲ್ಕ?ವಾಹನ ಗುಜರಿ ನೀತಿ: ಯಾವ ವಾಹನದ ನವೀಕರಣಕ್ಕೆ ಎಷ್ಟು ಶುಲ್ಕ?

''ಹಳೆಯ ಮತ್ತು ಅಯೋಗ್ಯ ವಾಹನಗಳನ್ನು ಹಂತ ಹಂತವಾಗಿ ಹೊರತರುವ ನಿಟ್ಟಿನಲ್ಲಿ ವಾಹನ ಗಳ ರದ್ದತಿ ನೀತಿಯನ್ನು ಜಾರಿಗೆ ತರುವುದು ಒಂದು ಉತ್ತಮ ಉಪಕ್ರಮವಾಗಿದೆ. ಇದು ಸ್ವಚ್ಛ ಮತ್ತು ಹಸಿರು ಭಾರತ ನಿರ್ಮಾಣಮಾಡುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ನಡೆ ಮಾತ್ರವಲ್ಲ, ದಕ್ಷ ಇಂಧನ ಬಳಕೆ ಮತ್ತು ಕಡಿಮೆ ನಿರ್ವಹಣಾ ವೆಚ್ಚಗಳನ್ನು ಖಚಿತಪಡಿಸುವ ಮೂಲಕ ವಾಹನ ಮಾಲೀಕರಿಗೆ ಗಮನಾರ್ಹವಾಗಿ ನೆರವಾಗಲಿದೆ,'' ಎಂದು ಸವಾರಿ ರೆಂಟಲ್ಸ್ ಕಾರ್ ರೆಂಟಲ್ಸ್ ಸಿಇಒ ಗೌರವ್ ಅಗರ್ವಾಲ್ ಪ್ರತಿಕ್ರಿಯಿಸಿದ್ದರು.

ಖಾಸಗಿ ವಾಹನಗಳೂ ದುಬಾರಿಯಾಗಲಿವೆ

ಇದೇ ರೀತಿ 15 ವರ್ಷಕ್ಕಿಂತ ಹೆಚ್ಚು ಹಳೆಯದಾದ ಖಾಸಗಿ ವಾಹನಗಳು ದುಬಾರಿಯಾಗಲಿವೆ. ದ್ವಿಚಕ್ರ ವಾಹನಗಳಿಗೆ ಪ್ರಸ್ತುತ ಇರುವ 300 ನೋಂದಣಿ ಶುಲ್ಕ 1,000 ರೂ.ಆಗಲಿದೆ. ಹಾಗೆಯೇ ಕಾರುಗಳ ನೋಂದಣಿ ದರ 600 ರೂ ದಿಂದ 5,000 ರೂ ಆಗಲಿದೆ. ರಾಜ್ಯಗಳು ಅಂತಹ ವಾಹನಗಳ ಮೇಲೆ ಐದು ವರ್ಷಗಳವರೆಗೆ ಗ್ರೀನ್ ಟ್ಯಾಕ್ಸ್ ವಿಧಿಸಬಹುದಾಗಿದ್ದು, ಅದು ರಸ್ತೆ ತೆರಿಗೆಗೆ ಹೆಚ್ಚುವರಿಯಾಗಿ ಸೇರಿಕೊಳ್ಳಲಿದೆ.

English summary
The launch of Vehicle Scrappage Policy today is a significant milestone in India’s development journey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X