ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್ ಎಫೆಕ್ಟ್: ಮೇ ತಿಂಗಳಿನಲ್ಲಿ ವಾಹನ ಮಾರಾಟ 90% ಇಳಿಕೆ

|
Google Oneindia Kannada News

ನವದೆಹಲಿ ಜೂನ್ 11: ಕೊರೊನಾವೈರಸ್ ಲಾಕ್‌ಡೌನ್‌ ಪರಿಣಾಮವು ದೇಶದ ಬಹುತೇಕ ಉದ್ಯಮದ ಮೇಲೆ ಪರಿಣಾಮ ಬೀರಿದ್ದು, ಆಟೋ ಮೊಬೈಲ್ ಕ್ಷೇತ್ರವು ಇದರಿಂದ ಹೊರತಾಗಿಲ್ಲ. ಮೇ ತಿಂಗಳಿನಲ್ಲಿ ವಾಹನಗಳ ಮಾರಾಟವೂ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.

Recommended Video

Kumaraswamy spoke about issues facing from Bengaluru Mysore highway | Oneindia Kannada

ದೇಶದಲ್ಲಲಿ ಲಾಕ್‌ಡೌನ್‌ ಪರಿಣಾಮ ಮೇ ತಿಂಗಳಿನಲ್ಲಿ ವಾಹನಗಳ ಚಿಲ್ಲರೆ ವ್ಯಾಪಾರವು ಕಳೆದ ವರ್ಷದ ಇದೇ ಅವಧಿಯಲ್ಲಿ ಹತ್ತನೇ ಒಂದು ಭಾಗಕ್ಕೆ ಸಂಕುಚಿತಗೊಂಡಿದೆ. ವಾಹನಗಳ ಮಾರಾಟ ವಿಭಾಗಳಲ್ಲಿ 88.9% ನಷ್ಟು ಇಳಿಕೆ ಕಂಡು ಕೇವಲ 2,00,000 ಯುನಿಟ್‌ಗಳಿಗೆ ತಲುಪಿದೆ.

ಲಾಕ್‌ಡೌನ್ ಎಫೆಕ್ಟ್‌: ಈ ವರ್ಷ ವಾಹನ ಮಾರಾಟ 25 ಪರ್ಸೆಂಟ್ ಕುಸಿತ ಸಾಧ್ಯತೆಲಾಕ್‌ಡೌನ್ ಎಫೆಕ್ಟ್‌: ಈ ವರ್ಷ ವಾಹನ ಮಾರಾಟ 25 ಪರ್ಸೆಂಟ್ ಕುಸಿತ ಸಾಧ್ಯತೆ

ಮೇ 2019 ರಲ್ಲಿ ವಾಹನಗಳ ಮಾರಾಟ 1.8 ಮಿಲಿಯನ್ ಯುನಿಟ್‌ಗಳಷ್ಟಿತ್ತು, ಆದರೆ 2020 ಮೇ ತಿಂಗಳಲ್ಲಿ 10ರಲ್ಲಿ ಒಂದು ಭಾಗದಷ್ಟು ವಾಹನ ಮಾರಾಟವಾಗಿದೆ. ವಾಹನ ಚಿಲ್ಲರೆ ವ್ಯಾಪಾರಿಗಳನ್ನು ಪ್ರತಿನಿಧಿಸುವ ಲಾಬಿ ಮತ್ತು ದೇಶದ 1,435 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ 1,225 ಕ್ಕೆ ನೋಂದಣಿಯನ್ನು ಪ್ರತಿಬಿಂಬಿಸುವ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್‌ಎಡಿಎ) ಈ ಡೇಟಾವನ್ನು ಸಂಗ್ರಹಿಸಿದೆ.

Vehicle Sales Dipped 90 Percent In May

"ಮೇ ಅಂತ್ಯದಲ್ಲಿ, ದೇಶಾದ್ಯಂತದ 26,500 ಮಳಿಗೆಗಳಲ್ಲಿ, (ಕೇವಲ) ಸುಮಾರು 60% ಶೋ ರೂಂಗಳು ಮತ್ತು 80% ಕಾರ್ಯಾಗಾರಗಳು ಕಾರ್ಯನಿರ್ವಹಿಸುತ್ತಿವೆ" ಎಂದು ಫಾಡಾ ಅಧ್ಯಕ್ಷ ಆಶಿಶ್ ಕೇಲ್ ಹೇಳಿದರು. "ಮೇ ದಾಖಲಾತಿಗಳು ಬೇಡಿಕೆಯ ಪರಿಸ್ಥಿತಿಯನ್ನು ಸೂಚಿಸುವುದಿಲ್ಲ, ಏಕೆಂದರೆ ಲಾಕ್‌ಡೌನ್ ಇನ್ನೂ ಅನೇಕ ಭಾಗಗಳಲ್ಲಿ ಮುಂದುವರೆದಿದೆ."

ಕೊರೊನಾ ಸಂಕಷ್ಟದಲ್ಲೂ, ಪಂಜಾಬ್‌ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳಿಗೆ 3 ದುಬಾರಿ ಆಡಿ ಕಾರು!ಕೊರೊನಾ ಸಂಕಷ್ಟದಲ್ಲೂ, ಪಂಜಾಬ್‌ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳಿಗೆ 3 ದುಬಾರಿ ಆಡಿ ಕಾರು!

ಹೀಗೆ ಕಳೆದ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟ ಇಳಿಕೆಯು ಜೂನ್ ತಿಂಗಳಲ್ಲೂ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ ಎಂದೇ ಹೇಳಲಾಗುತ್ತಿದೆ. ಹಾಗಿದ್ದರೆ ಮೇ ತಿಂಗಳಲ್ಲಿ ಯಾವೆಲ್ಲಾ ವಾಹನಗಳ ಮಾರಾಟ ಎಷ್ಟು ಇಳಿಕೆಯಾಗಿದೆ ಎಂಬುದು ಈ ಕೆಳಕಂಡಂತಿದೆ

ವಿಭಾಗ ಮೇ ತಿಂಗಳ ಮಾರಾಟ ಇಳಿಕೆ (ಪರ್ಸೆಂಟ್)
ದ್ವಿಚಕ್ರ ವಾಹನ 1,59,039 -88.80%
ತ್ರಿಚಕ್ರ ವಾಹನ 1,881 -96.34%
CV 2,711 -96.63%
PV 30,749 -86.97%
TRAC 8,317 -75.58%

English summary
The retail of automobiles in May Sales dipped 88.9% across categories to just over 200,000 units as against 1.8 million units in May 2019
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X