ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್App ಸುರಕ್ಷಿತವಲ್ಲ, ಬಳಕೆದಾರರಿಗೆ ಅಪಾಯ ಖಾತ್ರಿ ಎಚ್ಚರ!

|
Google Oneindia Kannada News

ಬೆಂಗಳೂರು, ಜುಲೈ 18: ಜನಸಾಮಾನ್ಯರಿಂದ ಸೆಲೆಬ್ರಿಟಿಗಳ ತನಕ ಅತ್ಯಂತ ಜನಪ್ರಿಯತೆ ಗಳಿಸಿರುವ 'ಫೇಸ್ ಆ್ಯಪ್' (FaceApp) ಬಳಕೆದಾರರಿಗೆ ಸೈಬರ್ ಲೋಕದ ತಜ್ಞರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಕೃತಕ ಬುದ್ಧಿಮತ್ತೆ ಬಳಸುವ ಈ ಅಪ್ಲಿಕೇಷನ್ ನಿಂದ ಸುಮಾರು 120 ಮಿಲಿಯನ್ ಬಳಕೆದಾರರ ಗೌಪ್ಯ ಮಾಹಿತಿ ಬಹಿರಂಗಗೊಳ್ಳುವ ಅಪಾಯವಿದೆ ಎಂದು ಎಫ್ ಬಿಐ ಹಾಗೂ ಸಿಐಎ ಎಚ್ಚರಿಸಿದೆ.

ರಷ್ಯಾ ಹಾಗೂ ಇನ್ನಿತರ ದೇಶಗಳ ತಂತ್ರಜ್ಞರು 2017ರಲ್ಲಿ ಹೊರ ತಂದ ಈ ಮೊಬೈಲ್ ಅಪ್ಲಿಕೇಷನ್ 2019ರಲ್ಲಿ ಭಾರಿ ಜನಪ್ರಿಯತೆ ಗಳಿಸುತ್ತಿದೆ. ಈ ಅಪ್ಲಿಕೇಷನ್ ಬಳಸಿ ಭಾವಚಿತ್ರವೊಂದರಲ್ಲಿ ಕಾಣುವ ಮುಖವನ್ನು ವೃದ್ಧಾಪ್ಯದಲ್ಲಿ ಹೇಗೆ ಕಾಣಿಸಬಹುದು, ಬಾಲ್ಯಾವಸ್ಥೆಯಲ್ಲಿ, ಗಡ್ಡಧಾರಿಯಾಗಿ, ಹಸನ್ಮುಖಿಯಾಗಿ, ಲಿಂಗ ಬದಲಾವಣೆ ಮಾಡಿ, ಕೂದಲಿನ ಬಣ್ಣ ಬದಲಾಯಿ, ಹೊಸ ಕೇಶ ರಾಶಿಯಲ್ಲಿ, ಹಿನ್ನಲೆ ಫೋಟೋ ಬದಲಾಯಿಸಿ, ಫೋಟೊ ಎಡಿಟ್ ಮಾಡಿ ಫಲಿತಾಂಶವನ್ನು ಪಡೆಯಬಹುದು. ಹೀಗೆ ಪಡೆದ ಚಿತ್ರವನ್ನು ತಕ್ಷಣವೇ ಸಾಮಾಜಿಕ ಜಾಲ ತಾಣಗಳಾದ ಟ್ವಿಟ್ಟರ್, ಇನ್ ಸ್ಟಾಗ್ರಾಮ್, ಫೇಸ್ಬುಕ್ ಗಳಲ್ಲಿ ಹಂಚಿಕೊಂಡು ಖುಷಿ ಪಡುತ್ತಿದ್ದಾರೆ.

ಈ ಮೂವರನ್ನ ಬಿಟ್ಟು ಉಳಿದವರಿಗೆಲ್ಲಾ Faceappನಲ್ಲಿ ವಯಸ್ಸಾಗಿದೆ.!

ಆದರೆ, 'ಫೇಸ್ ಆ್ಯಪ್' (FaceApp) ಬಳಸುವ ಮುನ್ನ ಈ ಅಪ್ಲಿಕೇಷನ್ ಬಳಕೆದಾರರಿಗೆ ವಿಧಿಸಿರುವ ಷರತ್ತು ಹಾಗೂ ನಿಬಂಧನೆಗಳನ್ನು ಓದದೆ ಇದ್ದರೆ ಅಪಾಯ ಖಚಿತ. ಫೇಸ್ ಆ್ಯಪ್ ತನ್ನ ಬಳಕೆದಾರರ ಫೋಟೊಗಳನ್ನು, ಎಡಿಟೆಡ್ ಫೋಟೊಗಳನ್ನು ಸಂಸ್ಥೆ ಬಳಸಬಹುದು ಹಾಗೂ ಇದು ವಾಣಿಜ್ಯ ಉದ್ದೇಶವಾಗಿರಬಹುದು. ಇದಕ್ಕೆ ಯಾವುದೇ ಜಾಗತಿಕ ಗಡಿ ಮಿತಿಯಿಲ್ಲ ಎಂಬ ಅಂಶ ಆತಂಕಕಾರಿಯಾಗಿದೆ.

Using FaceApp? Intel’s indicates massive security breach

ನೀವು ಎಡಿಟ್ ಮಾಡಿ, ಸೇವ್ ಮಾಡಿದ ಚಿತ್ರವನ್ನು ನಿಮ್ಮ ಅನುಮತಿಯಿಲ್ಲದೆ FaceApp ತನ್ನ ಪ್ರಚಾರಕ್ಕಾಗಿ ಬಳಸಬಹುದು, ಫೋಟೊ ಅಲ್ಲದೆ, ನೀವು ಸೇವ್ ಮಾಡಿದ ದನಿ, ಹೆಸರು ಎಲ್ಲವನ್ನು ಇದು ಒಳಗೊಂಡಿರುತ್ತದೆ. ಯೂಸರ್ ನೇಮ್, ಲೊಕೇಶನ್ ಅಥವಾ ಪ್ರೊಫೈಲ್ ಫೋಟೊಗಳನ್ನು ಬಳಸಿಕೊಳ್ಳಲು ನಾನು ಒಪ್ಪಿದ್ದೇನೆ ಎಂದು ನಿಬಂಧನೆಗೆ ಒಪ್ಪಿದ್ದರೆ ಅಲ್ಲಿಗೆ ನಿಮ್ಮ ಗೌಪ್ಯತೆಯನ್ನು ಬಿಚ್ಚಿಟ್ಟು ಆ ಸಂಸ್ಥೆ ಕೈಗೆ ಇಟ್ಟಂತೆ ಆಗುತ್ತದೆ.

Using FaceApp? Intel’s indicates massive security breach

Face App ಅಲ್ಲ ಸಿನಿಮಾದ ಪಾತ್ರಕ್ಕಾಗಿ ಬದಲಾಗಿದ್ದಾರೆ ತಾಪ್ಸಿ

ಸಾಮಾನ್ಯವಾಗಿ ಇಂಥ ಅಪ್ಲಿಕೇಷನ್ ಗಳು ಕ್ಲೌಡ್ ಸರ್ವರ್ ಬಳಸಿಕೊಂಡು, ಬಳಕೆದಾರರ ದತ್ತಾಂಶವನ್ನು ಕೆಲ ಕಾಲ ಸೇವ್ ಮಾಡಿರುತ್ತದೆ. ನಂತರ ಅದನ್ನು ಡಿಲೀಟ್ ಮಾಡುವ ಭರವಸೆ ಇರುತ್ತದೆ, ಆದರೆ, ಡಿಲೀಟ್ ಆಗದಿದ್ದರೆ, ಮೂರನೇ ಪಾರ್ಟಿ ಬಳಕೆದಾರರ ಮಾಹಿತಿ ಹಂಚುವ ಅಪಾಯವೂ ಇದೆ.

English summary
There is a storm on every social media site. Most of the people are trying to slow the aging process, dozens of celebrities have been posting what they'll look like in a few decades with FaceApp. Some are also posting pictures of male or female version of them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X