ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಯೋಗಿಸಿದ ಕಾರು ಮಾರಾಟ ನಿಲ್ಲಿಸಿದ ಓಲಾ!

|
Google Oneindia Kannada News

ನವದಹೆಲಿ, ಜೂ. 25: ಬಾಡಿಗೆ ಕಾರು ಇ -ಕಾಮರ್ಸ್‌ ಸಂಸ್ಥೆ ಓಲಾ ತನ್ನ ಎಲೆಕ್ಟ್ರಿಕ್ ವೆಹಿಕಲ್ ಮತ್ತು ಮೊಬಿಲಿಟಿ ವ್ಯವಹಾರದ ಮೇಲೆ ತನ್ನ ಗಮನವನ್ನು ಕೇಂದ್ರಿಕರಿಸಿದ ಕಾರಣದಿಂದಾಗಿ ಪ್ರಾರಂಭವಾದ ಎಂಟು ತಿಂಗಳ ಅವಧಿಯಲ್ಲೇ ಅದರ ಉಪಯೋಗಿಸಿದ ಕಾರು ಮಾರಾಟ ಮಾಡುವ ವಿಭಾಗ ಓಲಾ ಕಾರ್‌ಗಳನ್ನು ಮುಚ್ಚಿದೆ.

ಓಲಾ ಕಂಪನಿಯು ತನ್ನ ತ್ವರಿತ ವಾಣಿಜ್ಯ ವಿಭಾಗವಾದ ಓಲಾ ಡ್ಯಾಶ್ ಅನ್ನು ಸಹ ಮುಚ್ಚಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕಂಪನಿಯ ವಕ್ತಾರರು ಅಧಿಕೃತ ಪ್ರತಿಕ್ರಿಯೆಯಲ್ಲಿ ಸದ್ಯದ ಬೆಳವಣಿಗೆಯನ್ನು ಖಚಿತಪಡಿದ್ದಾರೆ.

ಓಲಾ ತನ್ನ ಆದ್ಯತೆಗಳನ್ನು ಮರು ಮೌಲ್ಯಮಾಪನ ಮಾಡಿದ್ದು, ತ್ವರಿತ ವಾಣಿಜ್ಯ ವ್ಯವಹಾರವನ್ನು ಮುಚ್ಚಲು ನಿರ್ಧರಿಸಿದೆ ಎಂದು ಹೇಳಿದರು. ಓಲಾ ಕಾರ್‌ಗಳ ಮೂಲಸೌಕರ್ಯ, ತಂತ್ರಜ್ಞಾನ ಮತ್ತು ಸಾಮರ್ಥ್ಯಗಳನ್ನು ಈಗ ನಮ್ಮ ಓಲಾ ಎಲೆಕ್ಟ್ರಿಕ್ ವಾಹನಗಳ ಮಾರಾಟ ಮತ್ತು ಸೇವಾ ನೆಟ್‌ವರ್ಕ್ ಅನ್ನು ಬೆಳೆಸಲು ಮರುರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕಂಪನಿಯು ತನ್ನ ಬಾಡಿಗೆ ವಾಹನ ವ್ಯಾಪಾರವು ಅತ್ಯಧಿಕ ಒಟ್ಟು ವ್ಯಾಪಾರದ ಮೌಲ್ಯವನ್ನು ತಿಂಗಳಿಗೆ ಅತ್ಯಂತ ಬಲವಾದ ಲಾಭದಾಯಕತೆಯ ಜೊತೆಗೆ ನೀಡುತ್ತಿದೆ ಎಂದು ಹೇಳಿಕೊಂಡಿದೆ. ಓಲಾ ಅದರ ಯುವ ಎಲೆಕ್ಟ್ರಿಕ್‌ ವಾಹನ ವ್ಯಾಪಾರವು ಈಗಾಗಲೇ ಪ್ರಾರಂಭವಾದ ತಿಂಗಳೊಳಗೆ ಭಾರತದ ಅತಿದೊಡ್ಡ ಎಲೆಕ್ಟ್ರಿಕ್‌ ವಾಹನ ಕಂಪನಿಯಾಗಿದೆ.

ಭಾರತದಲ್ಲಿ ವಿದ್ಯುತ್ ಕ್ರಾಂತಿಯನ್ನು ವೇಗಗೊಳಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಭಾರತೀಯರಿಗೆ ಸೇವೆ ಸಲ್ಲಿಸಲು ನಮ್ಮ ಚಲನಶೀಲತೆಯ ಸೇವೆಗಳನ್ನು ಅಳೆಯುವ ನಮ್ಮ ಧ್ಯೇಯದ ಮೇಲೆ ಕೇಂದ್ರೀಕರಿಸಿದ್ದೇವೆ. ನಮ್ಮ ಬಲವಾದ ಬ್ಯಾಲೆನ್ಸ್ ಶೀಟ್‌ನೊಂದಿಗೆ ನಾವು ನಮ್ಮ ಹೂಡಿಕೆಗಳ ವೇಗವನ್ನು ಹೆಚ್ಚಿಸುತ್ತಿದ್ದೇವೆ. ಎಲೆಕ್ಟ್ರಿಕ್ ಕಾರುಗಳ ಮಾರಾಟ, ಉತ್ಪಾದನೆ ಮತ್ತು ಹಣಕಾಸು ಸೇವೆಗಳಂತಹ ಹೊಸ ಕ್ಷೇತ್ರಗಳಲ್ಲಿ ಬೆಳವಣಿಗೆ ಕಾಣಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ವಕ್ತಾರರು ಹೇಳಿದರು.

ಕರ್ನಾಟಕಕ್ಕೆ ಬರುತ್ತಾ ಓಲಾ ಎಲೆಕ್ಟ್ರಿಕ್ ಕಾರು ತಯಾರಿಕಾ ಘಟಕ?ಕರ್ನಾಟಕಕ್ಕೆ ಬರುತ್ತಾ ಓಲಾ ಎಲೆಕ್ಟ್ರಿಕ್ ಕಾರು ತಯಾರಿಕಾ ಘಟಕ?

ಒಎಲ್‌ಎಕ್ಸ್‌ ವಿರುದ್ಧ ಪ್ರತಿಸ್ಪರ್ಧೆ

ಒಎಲ್‌ಎಕ್ಸ್‌ ವಿರುದ್ಧ ಪ್ರತಿಸ್ಪರ್ಧೆ

ಓಲಾ ಕಳೆದ ಅಕ್ಟೋಬರ್‌ನಲ್ಲಿ ತನ್ನ ಉಪಯೋಗಿಸಿದ ಕಾರುಗಳ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿತು. ಅರುಣ್ ಸರ್‌ದೇಶಮುಖ್‌ ಅವರನ್ನು ಅದರ ಮುಖ್ಯ ಕಾರ್ಯನಿರ್ವಾಹಕರನ್ನಾಗಿ ನೇಮಿಸಿತು. ಇದು ಸ್ಪಿನ್ನಿ, ಡ್ರೂಮ್, ಕಾರ್ಸ್ 24 ಮತ್ತು ಒಎಲ್‌ಎಕ್ಸ್‌ ವಿರುದ್ಧ ಪ್ರತಿಸ್ಪರ್ಧಿಯಾಗಿತ್ತು. ಕಳೆದ ತಿಂಗಳು ಸರ್‌ದೇಶಮುಖ್‌ ಕಂಪನಿಯನ್ನು ತೊರೆದರು. ಅದೇ ತಿಂಗಳು ಕಂಪನಿಯು ಐದು ನಗರಗಳಲ್ಲಿ ಕಾರ್ಯಾಚರಣೆಯನ್ನು ಮುಚ್ಚಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಬಿಸಿನೆಸ್‌ಲೈನ್ ವರದಿ ಮಾಡಿದೆ.

1,441 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹಿಂಪಡೆದ ಓಲಾ ಎಲೆಕ್ಟ್ರಿಕ್ ಕಂಪನಿ1,441 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹಿಂಪಡೆದ ಓಲಾ ಎಲೆಕ್ಟ್ರಿಕ್ ಕಂಪನಿ

10,000ಕ್ಕೂ ಹೆಚ್ಚು ಜನರ ನೇಮಕ

10,000ಕ್ಕೂ ಹೆಚ್ಚು ಜನರ ನೇಮಕ

ಓಲಾ ಕಾರ್ಸ್ 300 ಕೇಂದ್ರಗಳೊಂದಿಗೆ 100 ನಗರಗಳಿಗೆ ವಿಸ್ತರಿಸುವ ಯೋಜನೆಯನ್ನು ಹೊಂದಿತ್ತು. ವಾಹನದ ನಿರ್ಣಯ, ಸೇವೆ, ಬೆಂಬಲ ಮತ್ತು ಮಾರಾಟದಂತಹ ಕ್ಷೇತ್ರಗಳಲ್ಲಿ 10,000ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಳ್ಳುವ ಯೋಜನೆಯನ್ನು ಸಹ ಹೊಂದಿದೆ. ಓಲಾ ಕಾರ್‌ಗಳಲ್ಲಿರುವ ಹೆಚ್ಚಿನ ಜನರು ಈಗ ಓಲಾ ಎಲೆಕ್ಟ್ರಿಕ್ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ. ಬಳಸಿದ ಕಾರುಗಳ ಮಾರಾಟ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದು ಭಾರತದಲ್ಲಿ ಉಪಯೋಗಿಸಿದ ಕಾರು ಮಾರಾಟ ಮಾರುಕಟ್ಟೆಯು ಹೆಚ್ಚುತ್ತಿರುವ ಮತ್ತು ಹೊಸ ಮೈಲುಗಲ್ಲು ದಾಟುತ್ತಿರುವ ಸಮಯದಲ್ಲೇ ಓಲಾ ಈ ನಿರ್ಧಾರ ತೆಗೆದುಕೊಂಡಿದೆ.

ವಿಸ್ತರಣೆಯ ಯೋಜನೆಗಳಿಗೆ ತಡೆ

ವಿಸ್ತರಣೆಯ ಯೋಜನೆಗಳಿಗೆ ತಡೆ

ಏಪ್ರಿಲ್‌ನಲ್ಲಿ ಓಲಾ ಕಂಪನಿಯು ಓಲಾ ಡ್ಯಾಶ್‌ಗಾಗಿ ತನ್ನ ಸೆಂಟರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ 2,100 ಉದ್ಯೋಗಿಗಳನ್ನು ಕೈಬಿಟ್ಟಿದೆ ಎಂದು ವರದಿಯಾಗಿತ್ತು. ಇದು ಡಾರ್ಕ್ ಸ್ಟೋರ್‌ಗಳನ್ನು ಕಡಿಮೆ ಮಾಡಲು ಪ್ರಾರಂಭಿಸಿದೆ ಹಾಗೂ ಅದರ ವಿಸ್ತರಣೆಯ ಯೋಜನೆಗಳನ್ನು ತಡೆಹಿಡಿದಿದೆ ಎಂದು ಇಟಿ ಪ್ರೈಮ್ ಇತ್ತೀಚೆಗೆ ವರದಿ ಮಾಡಿದೆ.

2017 ರಲ್ಲಿ ಇದು ಫುಡ್‌ಫಾಂಡಾ ವಶ

2017 ರಲ್ಲಿ ಇದು ಫುಡ್‌ಫಾಂಡಾ ವಶ

ನಂತರ ಆಹಾರ ವಿತರಣೆ ಆರಂಭಿಸಿದ ಓಲಾ 2015 ರಲ್ಲಿ ಓಲಾ ಓಲಾ ಕೆಫೆಗಳನ್ನು ಪ್ರಾರಂಭಿಸಿತು. ಆದರೆ ಒಂದು ವರ್ಷದ ನಂತರ ಅದನ್ನು ಮುಚ್ಚಲಾಯಿತು. 2017 ರಲ್ಲಿ ಇದು ಫುಡ್‌ಫಾಂಡಾವನ್ನು ಸ್ವಾಧೀನಪಡಿಸಿಕೊಂಡಿತು. ಆದರೆ 2019ರಲ್ಲಿ ವ್ಯವಹಾರವನ್ನು ಸ್ಥಗಿತಗೊಳಿಸಿ, ಉದ್ಯೋಗಿಗಳನ್ನು ವಜಾಗೊಳಿಸಿತು. ನಂತರ ಓಲಾ ಫುಡ್ಸ್‌ನೊಂದಿಗೆ ಕ್ಲೌಡ್ ಕಿಚನ್ ವ್ಯವಹಾರದ ಮೇಲೆ ಕೇಂದ್ರೀಕರಿಸಿತು. ಆದರೆ ಬ್ರ್ಯಾಂಡ್‌ಗಳು ಎಂದಿಗೂ ಬೇಡಿಕೆಯನ್ನು ಸೆಳೆಯಲಿಲ್ಲ.

English summary
Rental car e-commerce firm Ola has closed its used car sales division, Ola, within eight months of launching as it focuses on its electric vehicle and mobility business,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X