ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೂಮ್‌ ಬದಲಿಗೆ ಜಿಯೋಮೀಟ್ ಬಳಸಿದರೆ ಎಷ್ಟು ಉಳಿತಾಯ?

|
Google Oneindia Kannada News

ನವದೆಹಲಿ, ಜುಲೈ 5: ವೀಡಿಯೊ ಕಾನ್ಫರೆನ್ಸಿಂಗ್ ಆಪ್ ಝೂಮ್‌ನ ಬೇಸಿಕ್ ಅಥವಾ ಉಚಿತ ಪ್ಲಾನ್‌ನಲ್ಲಿ ಗ್ರೂಪ್ ಮೀಟಿಂಗ್‌ಗಳಿಗೆ 40 ನಿಮಿಷದ ಮಿತಿಯಿದ್ದರೆ, ಗೂಗಲ್ ಪ್ಲೇಸ್ಟೋರ್ ಹಾಗೂ ಐಒಎಸ್‌ನಲ್ಲಿ ಕಳೆದ ಗುರುವಾರ ಬಿಡುಗಡೆಯಾದ ಜಿಯೋಮೀಟ್‌ನಲ್ಲಿ 24-ಗಂಟೆಗಳವರೆಗಿನ ಗ್ರೂಪ್ ಮೀಟಿಂಗ್ಸ್ ನಡೆಸಬಹುದಾಗಿದೆ, ಅಲ್ಲದೆ, ಆಪ್ ಸಂಪೂರ್ಣ ಉಚಿತವೂ ಆಗಿದೆ ಎಂದು ರಿಲಯನ್ಸ್ ಜಿಯೋ ಸಂಸ್ಥೆ ಹೇಳಿದೆ.

ಝೂಮ್‌ನ ಸದ್ಯದ ದರಗಳ ಆಧಾರದ ಮೇಲೆ, 40 ನಿಮಿಷಗಳಿಗಿಂತ ಹೆಚ್ಚು ಅವಧಿಯ ಮೀಟಿಂಗ್‌ಗಳಿಗೆ ಆಯೋಜಕರು ತಿಂಗಳಿಗೆ 15 ಡಾಲರುಗಳ ಶುಲ್ಕ (ವಾರ್ಷಿಕ 180 ಡಾಲರು) ತೆರಬೇಕಾಗುತ್ತದೆ. ತುಲನಾತ್ಮಕವಾಗಿ, ಜಿಯೋಮೀಟ್ ಇದು ಮತ್ತು ಇನ್ನೂ ಹಲವಾರು ಸೌಲಭ್ಯಗಳನ್ನು ಯಾವುದೇ ಶುಲ್ಕವಿಲ್ಲದೆ ನೀಡುತ್ತಿದೆ. ಪ್ರತಿ ಆಯೋಜಕರಿಗೂ ಇದು ವಾರ್ಷಿಕ 13,500 ರೂ.ಗಳ ಉಳಿತಾಯಕ್ಕೆ ಸಮಾನವಾಗಿರಲಿದೆ.

JioMeet: ಉಚಿತ ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್ ಬಿಡುಗಡೆ ಮಾಡಿದ ಜಿಯೋJioMeet: ಉಚಿತ ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್ ಬಿಡುಗಡೆ ಮಾಡಿದ ಜಿಯೋ

ಸಮಯ ಮಿತಿಯ ನಿರ್ಬಂಧ ಇಲ್ಲದಿರುವುದು ಜ಼ೂಮ್ ಡಿಜಿಟಲ್ ಅನುಭವಕ್ಕೆ ಅಡ್ಡಿಯುಂಟುಮಾಡಲಿದೆ. ಉದಾಹರಣೆಗೆ, ಶಿಕ್ಷಣ ಕ್ಷೇತ್ರದಲ್ಲಿ 24-ಗಂಟೆಗಳ ಉಚಿತ ಜಿಯೋಮೀಟ್ ಸೆಷನ್‌ಗಳೊಂದಿಗೆ, ಶಿಕ್ಷಕರು ಜ಼ೂಮ್‌ನಲ್ಲಿ ಮಾಡಿದಂತೆ ತಮ್ಮ ತರಗತಿಗಳ ಅವಧಿಯನ್ನು ಕಡಿತಗೊಳಿಸುವ ಅಗತ್ಯವಿರುವುದಿಲ್ಲ. ಅದೇ ರೀತಿ ವಿದ್ಯಾರ್ಥಿಗಳಿಗೂ ತಮ್ಮ ಪ್ರಶ್ನೆಗಳನ್ನು ಮಿತಿಗೊಳಿಸುವ ನಿರ್ಬಂಧ ಇಲ್ಲದಿರುವುದರಿಂದ ಇದು ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣಗಳೆರಡರಲ್ಲೂ ಕಲಿಕೆಯ ಅನುಭವವನ್ನು ಉತ್ತಮಗೊಳಿಸುತ್ತದೆ.

ನಿರ್ದಿಷ್ಟ ಸಂಸ್ಥೆಯ ಬಳಕೆದಾರರು ಮಾತ್ರ ಸಭೆಗೆ

ನಿರ್ದಿಷ್ಟ ಸಂಸ್ಥೆಯ ಬಳಕೆದಾರರು ಮಾತ್ರ ಸಭೆಗೆ

ಶೂನ್ಯ ಬೆಲೆಯ ಜೊತೆಗೆ, ವೈಶಿಷ್ಟ್ಯಗಳು ಮತ್ತು ಕ್ರಿಯಾತ್ಮಕತೆಯ ದೃಷ್ಟಿಯಿಂದಲೂ ಜಿಯೋಮೀಟ್‌ನಲ್ಲಿ ಹಲವು ಅನುಕೂಲಗಳಿವೆ. ಝೂಮ್‌ ಸಭೆಯಲ್ಲಿ, ಭಾಗವಹಿಸುವವರ ವೀಡಿಯೊವನ್ನು ಬಳಕೆದಾರರು ವಿಸ್ತರಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಜಿಯೋಮೀಟ್ ಸಭೆಗಳಲ್ಲಿ ಬಳಕೆದಾರರು ಭಾಗವಹಿಸುವವರ ಅಥವಾ ಅವರು ಹಂಚಿಕೊಂಡಿರುವ ವೀಡಿಯೊವನ್ನು ಡಬಲ್ ಟ್ಯಾಪ್ ಮೂಲಕ ವಿಸ್ತರಿಸಿಕೊಳ್ಳಬಹುದು.

ಝೂಮ್‌ನಲ್ಲಿರುವ ಆಯ್ಕೆಗಳಿಗಿಂತ ಜಿಯೋಮೀಟ್‌ನಲ್ಲಿ 2 ಸುಧಾರಿತ ಮೀಟಿಂಗ್ ಸೆಟ್ಟಿಂಗ್‌ಗಳೂ ಇವೆ. ಇಲ್ಲಿ ನಿರ್ದಿಷ್ಟ ಸಂಸ್ಥೆಯ ಬಳಕೆದಾರರು ಮಾತ್ರ ಸಭೆಗೆ ಸೇರಲು ಅನುಮತಿಸಬಹುದಾಗಿದ್ದು ಆ ಮೂಲಕ ನಮ್ಮ ಸಭೆಗಳಲ್ಲಿ ಇತರರು ಮೂಗು ತೂರಿಸುವ ಸಂಭವನೀಯತೆಯನ್ನು ಇಲ್ಲವಾಗಿಸಬಹುದು.

9 ಜನರನ್ನು ಒಂದೇ ಪರದೆಯಲ್ಲಿ ನೋಡಬಹುದು

9 ಜನರನ್ನು ಒಂದೇ ಪರದೆಯಲ್ಲಿ ನೋಡಬಹುದು

ಕರೆಯ ಒಳಗೆ, ಝೂಮ್‌ ಏಕಕಾಲಕ್ಕೆ 4 ಜನರನ್ನು ಮಾತ್ರ ಮೊಬೈಲ್ ಪರದೆಯಲ್ಲಿ ತೋರಿಸುತ್ತದೆ (ಇತರರನ್ನು ನೋಡಲು, ಬಳಕೆದಾರರು ಹಲವು ಪುಟಗಳ ಮೂಲಕ ಸ್ಕ್ರಾಲ್ ಮಾಡಬೇಕಾಗುತ್ತದೆ). ಆದರೆ ಜಿಯೋಮೀಟ್‌ನಲ್ಲಿ ಕರೆಯಲ್ಲಿ ಸಕ್ರಿಯರಾಗಿರುವ 9 ಜನರನ್ನು ಒಂದೇ ಪರದೆಯಲ್ಲಿ ನೋಡಬಹುದು. ಅಲ್ಲದೆ, ಇದು ಅತಿಥಿ ಬಳಕೆದಾರರನ್ನು ಅನುಮತಿಸುವುದಿಲ್ಲ.

ಜಿಯೋ ಫೈಬರ್ ಬಳಕೆದಾರರಿಗೆ ZEE5 ಪ್ರೀಮಿಯಂ ಉಚಿತಜಿಯೋ ಫೈಬರ್ ಬಳಕೆದಾರರಿಗೆ ZEE5 ಪ್ರೀಮಿಯಂ ಉಚಿತ

ಮೊಬೈಲ್ ಸಂಖ್ಯೆ ಬಳಸಿ ಸೈನ್ ಅಪ್ ಆಗಿ

ಮೊಬೈಲ್ ಸಂಖ್ಯೆ ಬಳಸಿ ಸೈನ್ ಅಪ್ ಆಗಿ

ಈ ಆಯ್ಕೆಯನ್ನು ಸಕ್ರಿಯಗೊಳಿಸಿದಲ್ಲಿ ಪ್ರತಿಯೊಬ್ಬ ಬಳಕೆದಾರರು ಸಭೆಗೆ ಸೇರುವ ಮೊದಲು ಸೈನ್ ಅಪ್ ಮಾಡಬೇಕಾಗುತ್ತದೆ ಹಾಗೂ ಆ ಮೂಲಕ ಅನಾಮಧೇಯ ಬಳಕೆದಾರರು ಕರೆಗೆ ಸೇರುವುದನ್ನು ನಿರ್ಬಂಧಿಸುವುದು ಸಾಧ್ಯವಾಗುತ್ತದೆ.

ಝೂಮ್‌ನಂತಲ್ಲದೆ, ಜಿಯೋಮೀಟ್ ಬಳಕೆದಾರರು ಕರೆಯಿಂದ ಹೊರಹೋಗುವ ಅಗತ್ಯವಿಲ್ಲದೆ ಒಂದು ಸಾಧನದಿಂದ ಇನ್ನೊಂದಕ್ಕೆ ಬದಲಾಯಿಸಿಕೊಳ್ಳಬಹುದು. ಇಮೇಲ್ ವಿಳಾಸದೊಂದಿಗೆ ಮಾತ್ರ ಸೈನ್ ಅಪ್ ಮಾಡಲು ಝೂಮ್‌ ಅನುಮತಿಸುತ್ತದೆ. ಆದರೆ ಜಿಯೋಮೀಟ್‌ನಲ್ಲಿ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಗಳೆರಡನ್ನೂ ಬಳಸಿ ಸೈನ್ ಅಪ್ ಮಾಡಬಹುದಾಗಿದೆ.

ಅಂತರರಾಷ್ಟ್ರೀಯ ಸೆಮಿನಾರ್‌ ನಡೆಸಿ

ಅಂತರರಾಷ್ಟ್ರೀಯ ಸೆಮಿನಾರ್‌ ನಡೆಸಿ

ಝೂಮ್‌ ಅನುಮತಿಸುವ ಉಚಿತ ಸಮಯವು ಮುಗಿಯುವ ಯೋಚನೆ ಇಲ್ಲದ್ದರಿಂದ ಸ್ನೇಹಿತರು, ಹಳೆಯ ವಿದ್ಯಾರ್ಥಿಗಳ ಗುಂಪುಗಳು ಮತ್ತು ಸಂಬಂಧಿಕರು ಈಗ "40 ನಿಮಿಷಗಳ ದಬ್ಬಾಳಿಕೆಯಲ್ಲಿ" ಸಿಕ್ಕಿಹಾಕಿಕೊಳ್ಳುವ ಅಗತ್ಯವಿಲ್ಲ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಪೂರ್ಣ ಸಾಲ ಮುಕ್ತವಾಗಿದ್ದು ಹೇಗೆ ?ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಪೂರ್ಣ ಸಾಲ ಮುಕ್ತವಾಗಿದ್ದು ಹೇಗೆ ?

ಇದೇ ರೀತಿಯ ಮಿತಿಯನ್ನು ಅನುಭವಿಸುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸೆಮಿನಾರ್‌ಗಳು ಯಾವುದೇ ಪ್ರವೇಶ ಶುಲ್ಕವಿಲ್ಲದೆ ತಮ್ಮ ಸಂಶೋಧನೆಯನ್ನು ಆಯೋಜಿಸಬಹುದಾದ್ದರಿಂದ, ಮತ್ತು 40 ನಿಮಿಷಗಳ ಮಿತಿಯ ನಂತರವೂ ಸಂಭಾಷಣೆ ನಡೆಸಬಹುದಾದ್ದರಿಂದ, ಈ ಹೊಸ ಸೌಲಭ್ಯದತ್ತ ಸಂಪೂರ್ಣ ವಲಸೆಯನ್ನು ನಿರೀಕ್ಷಿಸಬಹುದಾಗಿದೆ.

ಇ-ಕಾಮರ್ಸ್ ಕ್ಷೇತ್ರದ ಚರ್ಚೆ, ಸಭೆ ಸುಲಭ

ಇ-ಕಾಮರ್ಸ್ ಕ್ಷೇತ್ರದ ಚರ್ಚೆ, ಸಭೆ ಸುಲಭ

ಮಾರಾಟ ಪ್ರದರ್ಶನಗಳು, ಅದರಲ್ಲೂ ವಿಶೇಷವಾಗಿ, ಎಸ್‌ಎಂಇ ಹಾಗೂ ಕಿರಾಣಿ ಅಂಗಡಿಗಳ ಪ್ರದರ್ಶನಗಳಲ್ಲಿ ಪರಿವರ್ತನೆ ಕಂಡುಬರಲಿದ್ದು, ಇದು ಇ-ಕಾಮರ್ಸ್ ಅನ್ನು ಸಕ್ರಿಯಗೊಳಿಸುತ್ತದೆ. ನಿರಂತರ ಮತ್ತು ದೀರ್ಘಕಾಲದ ಗುಂಪು ವೀಡಿಯೊ ಸಂಪರ್ಕದ ಅಗತ್ಯವಿರುವ ಬ್ರೋಕರ್‌ಗಳು ಮತ್ತು ಇತರರಿಗೂ ಇದು ನೆರವಾಗಲಿದೆ.

ಪ್ರದರ್ಶಕರ ಜೀವನೋಪಾಯದ ಮೂಲವಾಗಿರುವ ಸಹಕಾರಿ ಸಾಂಸ್ಕೃತಿಕ, ಸಾಮಾಜಿಕ, ಸಂಗೀತ, ಆಧ್ಯಾತ್ಮಿಕ ಮತ್ತಿತರ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಬಹುದಾಗಿದ್ದು ಸಾಮಾಜಿಕ ರಚನೆ ಹಾಗೂ ಚೌಕಟ್ಟನ್ನು ಜೀವಂತವಾಗಿರಿಸಿಕೊಳ್ಳಬಹುದು. ಪ್ರಜಾಪ್ರಭುತ್ವದ ಕಾರ್ಯಕ್ರಮಗಳನ್ನೂ ಕೂಡ.

English summary
JioMeet vs Zoom - Jio killer app serves Rs 13,500 p.a. spoiler on Zoom party says Jio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X