ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

9 ಟ್ರಿಲಿಯನ್‌ ಡಾಲರ್ ಮೌಲ್ಯ ದಾಟಿದ ಅಮೆರಿಕಾದ ಟೆಕ್ ಷೇರುಗಳು

|
Google Oneindia Kannada News

ಬೆಂಗಳೂರು, ಆಗಸ್ಟ್‌ 08: ಅಮೆರಿಕಾದ ಟೆಕ್ ಷೇರುಗಳು ಷೇರು ಮಾರುಕಟ್ಟೆಯನ್ನು ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪುತ್ತಿವೆ. ಇನ್ನೊಂದು ವಿಚಾರ ಏನಪ್ಪಾ ಅಂದ್ರೆ ಈ ವಲಯವು ಇಡೀ ಯುರೋಪಿಯನ್ ಷೇರು ಮಾರುಕಟ್ಟೆಗಿಂತ ಇತಿಹಾಸದಲ್ಲಿ ಮೊದಲ ಬಾರಿಗೆ ಹೆಚ್ಚು ಮೌಲ್ಯಯುತವಾಗಿದೆ ಎಂದು ಬ್ಯಾಂಕ್ ಆಫ್ ಅಮೆರಿಕಾದ ಇತ್ತೀಚಿನ ಸಂಶೋಧನೆ ಹೇಳಿದೆ.

ಅಮೆರಿಕಾದ ಟೆಕ್‌ ಷೇರುಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣವು 9.1 ಟ್ರಿಲಿಯನ್ ತಲುಪಿದೆ ಎಂದು ಬ್ಯಾಂಕ್ ವರದಿಯಲ್ಲಿ ತಿಳಿಸಿದೆ. ಇದು ಇಂಗ್ಲೆಂಡ್ ಮತ್ತು ಸ್ವಿಟ್ಜರ್ಲೆಂಡ್ ಸೇರಿದಂತೆ ಇಡೀ ಇಡೀ ಯುರೋಪಿಯನ್ ಮಾರುಕಟ್ಟೆಯನ್ನು ಮೀರಿಸುತ್ತದೆ, ಈಗ ಇದರ ಮೌಲ್ಯ 8.9 ಟ್ರಿಲಿಯನ್ ಡಾಲರ್ ಆಗಿದೆ.

 ಆರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದ ಭಾರತದ ಷೇರುಪೇಟೆ: ಬ್ಯಾಂಕಿಂಗ್ ಷೇರುಗಳಿಗೆ ಬಲ ಆರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದ ಭಾರತದ ಷೇರುಪೇಟೆ: ಬ್ಯಾಂಕಿಂಗ್ ಷೇರುಗಳಿಗೆ ಬಲ

ಅದೇ 2007ಕ್ಕೆ ಹೋಲಿಸಿದರೆ, ಯುರೋಪಿಯನ್ ಮಾರುಕಟ್ಟೆ ಅಮೆರಿಕಾ ಟೆಕ್ ವಲಯಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಸಂಸ್ಥೆ ಹೇಳಿದೆ.

US Tech Stocks Now Worth More Than 9 Trillion Dollar

ಎಸ್ & ಪಿ 500 ಮಾರ್ಚ್‌ನಲ್ಲಿನ ಕುಸಿತದ ಹಂತದಿಂದ ಶೇಕಡಾ 55 ಕ್ಕಿಂತ ಹೆಚ್ಚಾಗಿದೆ. ಆದರೆ ಈ ಬೆಳವಣಿಗೆಯು ಅಮೆರಿಕಾದ ಷೇರು ಮಾರುಕಟ್ಟೆಯ ಬೆರಳೆಣಿಕೆಯಷ್ಟು ಮೆಗಾಕ್ಯಾಪ್ ಟೆಕ್ ಷೇರುಗಳಲ್ಲಿ ಹೆಚ್ಚು ಕೇಂದ್ರೀಕೃತವಾಗುತ್ತಿರುವ ಬಗ್ಗೆ ಕಳವಳಕ್ಕೆ ಕಾರಣವಾಗಿದೆ. ಅಂದರೆ ಕೆಲವೇ ಟೆಕ್ ಷೇರುಗಳಲ್ಲೇ ಮೌಲ್ಯ ಹೆಚ್ಚಾಗುತ್ತಿದೆ.

ಎಸ್ & ಪಿ ಡೌ ಜೋನ್ಸ್ ಸೂಚ್ಯಂಕಗಳ ಹಿರಿಯ ಸೂಚ್ಯಂಕ ವಿಶ್ಲೇಷಕ ಹೊವಾರ್ಡ್ ಸಿಲ್ವರ್‌ಬ್ಲಾಟ್ ಪ್ರಕಾರ, ಐದು ದೊಡ್ಡ ಕಂಪನಿಗಳಾದ ಆಪಲ್, ಮೈಕ್ರೋಸಾಫ್ಟ್, ಅಮೆಜಾನ್, ಗೂಗಲ್ ಮಾತೃಸಂಸ್ಥೆ ಆಲ್ಫಾಬೆಟ್ ಮತ್ತು ಫೇಸ್‌ಬುಕ್ ಎಸ್ ಎಸ್ & ಪಿ 500 ರ ಶೇಕಡಾ 23.8 ರಷ್ಟು ಮೌಲ್ಯವನ್ನು ಹೊಂದಿವೆ.

English summary
U.S. tech stocks have been pushing the stock market to record highs, and now the sector has now become more valuable than the entire European stock market for the first time in history
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X