ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್ ಕಾರ್ಟ್ ಜತೆಗಿನ ವಿಲೀನ ವಿಳಂಬ : ವಾಲ್ ಮಾರ್ಟ್

By Mahesh
|
Google Oneindia Kannada News

ಬೆಂಗಳೂರು, ಜುಲೈ 02: ಯುಎಸ್ ನ ರೀಟೈಲ್ ಕ್ಷೇತ್ರ ದಿಗ್ಗಜ ವಾಲ್ ಮಾರ್ಟ್ ಹಾಗೂ ಭಾರತದ ಆನ್ ಲೈನ್ ರೀಟೈಲ್ ಕಂಪನಿ ಫ್ಲೀಫ್ ಕಾರ್ಟ್ ನಡುವಿನ ವಿಲೀನ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗಲಿದೆ. ಫ್ಲಿಫ್ ಕಾರ್ಟ್ ನಲ್ಲಿ ಶೇ77ರಷ್ಟು ಹೂಡಿಕೆ ಮಾಡಲು ಮುಂದಾಗಿದ್ದ ವಾಲ್ ಮಾರ್ಟ್ ಈ ಡೀಲ್ ಮುಗಿಸಲು ಜೂನ್ 07, 2019ರ ತನಕ ಸಮಯ ನಿಗದಿ ಪಡಿಸಿದೆ.

ಒಂದು ವೇಳೆ ಮಾರ್ಚ್ 09, 2019ರೊಳಗೆ ವಿಲೀನ ಪ್ರಕ್ರಿಯೆ ಸಾಧ್ಯವಾಗದಿದ್ದರೆ ಮುಂದೇನು? ಕಾದು ನೋಡಬೇಕಿದೆ. ಕಾಂಪಿಟೀಷನ್ ಕಮಿಷನ್ ಆಫ್ ಇಂಡಿಯಾ (ಸಿಸಿಐ) ಸದ್ಯ ಈ 16 ಬಿಲಿಯನ್ ಡಾಲರ್ ಮೌಲ್ಯ ಒಪ್ಪಂದದ ಪರಿಶೀಲನೆ ನಡೆಸುತ್ತಿದೆ. ವಿಲೀನ ಪ್ರಕ್ರಿಯೆ ಬಗ್ಗೆ ಕಂಪನಿಯ ವಕ್ತಾರರು ನೀಡಿರುವ ಹೇಳಿಕೆ ಇಲ್ಲಿದೆ...

ಫ್ಲಿಪ್ ಕಾರ್ಟಿನಲ್ಲಿ 10 ಲಕ್ಷ ಹೂಡಿ, ಕೋಟಿಗಟ್ಟಲೆ ಬಾಚಿದ ಗುಪ್ತ ಫ್ಲಿಪ್ ಕಾರ್ಟಿನಲ್ಲಿ 10 ಲಕ್ಷ ಹೂಡಿ, ಕೋಟಿಗಟ್ಟಲೆ ಬಾಚಿದ ಗುಪ್ತ

ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ವಾಲ್‍ಮಾರ್ಟ್ ಭಾರತದ ಆರ್ಥಿಕತೆಗೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ನಮ್ಮ ಬಿ2ಬಿ ಉದ್ದಿಮೆ(ಹೋಲ್‍ಸೇಲ್ ಕ್ಯಾಷ್-ಆಂಡ್ ಕ್ಯಾರಿ)ಯ ಮೂಲಕ ನಾವು ಭಾರತದಲ್ಲಿರುವ ಲಕ್ಷಾಂತರ ಸಣ್ಣ ಕಿರಾಣಿ ಅಂಗಡಿಗಳಿಗೆ ಬೆಂಬಲ ನೀಡುತ್ತಿರುವುದು ಮಾತ್ರವಲ್ಲ, ಅವರು ಆಧುನೀಕರಣಕ್ಕೆ ಒಗ್ಗಿಕೊಳ್ಳುವಂತೆ ನೆರವನ್ನೂ ನೀಡುತ್ತಿದ್ದೇವೆ.

US retail giant Walmart -Indias retailer Flipkart acquisition delay

ಸಣ್ಣ ಮತ್ತು ಮಧ್ಯಮ ಉದ್ದಿಮೆ(ಎಸ್‍ಎಂಇ)ಗಳು, ಸಣ್ಣ ಹಿಡುವಳಿದಾರರು ಮತ್ತು ಮಹಿಳಾ ಮಾಲೀಕತ್ವದ ಉದ್ದಿಮೆಗಳು ಇತ್ಯಾದಿ ಸ್ಥಳೀಯ ಮೂಲಗಳಿಂದ ಉತ್ಪನ್ನಗಳನ್ನು ಪಡೆಯುವ ಮೂಲಕ ನಾವು ಭಾರತದಲ್ಲಿ ದೇಶೀಯ ಉತ್ಪಾದನೆಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತಾ ಬಂದಿದ್ದೇವೆ.

ವಾಲ್‍ಮಾರ್ಟ್‍ನ ಇತರೆ ಮಾರುಕಟ್ಟೆಗಳಿಗೂ ಬೃಹತ್ ಪ್ರಮಾಣದ ಉತ್ಪನ್ನಗಳನ್ನು ಖರೀದಿಸುವಂಥ ದೇಶಗಳಲ್ಲಿ ಭಾರತವೂ ಪ್ರಮುಖವಾದದ್ದು. ಈ ಉತ್ಪನ್ನಗಳಲ್ಲಿ ಕರಕುಶಲ, ಜವಳಿ, ಉಡುಪುಗಳು, ಫಾರ್ಮಾಸ್ಯುಟಿಕಲ್ಸ್ ಇತ್ಯಾದಿಗಳು ಸೇರಿದ್ದು, ಈ ಮೂಲಕ ಸ್ಥಳೀಯ ಉತ್ಪಾದನೆ ಮತ್ತು ರಫ್ತಿಗೆ ವಾಲ್ ಮಾರ್ಟ್ ಉತ್ತೇಜನ ನೀಡುತ್ತಿದೆ.

ದೊಡ್ಡ ಡೀಲ್ : ವಾಲ್ಮಾರ್ಟ್ ಪಾಲಾದ ಬೆಂಗಳೂರಿನ ಫ್ಲಿಪ್ ಕಾರ್ಟ್ದೊಡ್ಡ ಡೀಲ್ : ವಾಲ್ಮಾರ್ಟ್ ಪಾಲಾದ ಬೆಂಗಳೂರಿನ ಫ್ಲಿಪ್ ಕಾರ್ಟ್

ಸರ್ಕಾರದ ಎಫ್‍ಡಿಐ ನೀತಿಯಂತೆ, ಇ-ಕಾಮರ್ಸ್ ವಲಯದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳಕ್ಕೆ ಆಟೋಮ್ಯಾಟಿಕ್ ಹಾದಿಯಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ, ನಾವೀಗ ಫ್ಲಿಪ್‍ಕಾರ್ಟ್ ಜೊತೆಗೆ ನಡೆಸುತ್ತಿರುವ ಪಾಲುದಾರಿಕೆಯಿಂದಾಗಿ ಸಾವಿರಾರು ಸ್ಥಳೀಯ ಪೂರೈಕೆದಾರರು ಮತ್ತು ಉತ್ಪಾದಕರಿಗೆ ನಮ್ಮ ಮಾರ್ಕೆಟ್ ಪ್ಲೇಸ್ ಮಾಡೆಲ್ ಮೂಲಕ ಗ್ರಾಹಕರನ್ನು ಸಂಪರ್ಕಿಸುವ ಅವಕಾಶ ನೀಡಲಿದೆ. ಈ ಪಾಲುದಾರಿಕೆಯು ಎಸ್‍ಎಂಇ ಪೂರೈಕೆದಾರರು ಹಾಗೂ ದೇಶದಲ್ಲಿರುವ ರೈತರಿಗೆ ಸಂಪೂರ್ಣ ಬೆಂಬಲ ನೀಡಲಿದೆ. ಹೀಗಾಗಿ, ದೇಶದ ರೈತರಿಗೆ ನಮ್ಮ ವೇದಿಕೆಯ ಮೂಲಕ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುತ್ತಿದ್ದೇವೆ ಮತ್ತು ಭಾರತದಲ್ಲಿ ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುತ್ತಿದ್ದೇವೆ.

ಫ್ಲಿಪ್‍ಕಾರ್ಟ್ ಮತ್ತು ವಾಲ್‍ಮಾರ್ಟ್‍ನ ಸಂಯೋಜಿತ ಸಾಮರ್ಥ್ಯವು ಭಾರತದಲ್ಲಿ ಉತ್ತಮ ಇ-ಕಾಮರ್ಸ್ ವೇದಿಕೆಯನ್ನು ಸೃಷ್ಟಿಸಲಿದೆ ಎಂಬ ನಂಬಿಕೆ ನಮಗಿದೆ. ಗ್ರಾಹಕರಿಗೆ ಗುಣಮಟ್ಟದ ಮತ್ತು ಅಗ್ಗದ ಸರಕುಗಳನ್ನು ಒದಗಿಸುವ ಮೂಲಕ, ಹೊಸ ಕೌಶಲಭರಿತ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಹಾಗೂ ಸಣ್ಣ ಪೂರೈಕೆದಾರರು, ರೈತರು ಮತ್ತು ಮಹಿಳಾ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಇದು ಭಾರತಕ್ಕೆ ಅನುಕೂಲ ಕಲ್ಪಿಸಲಿದೆ.

English summary
US retail giant Walmart is giving itself more leeway to close the acquisition of a 77%-stake in India’s largest online retailer Flipkart, according to documents filed for a mega bond issue to finance the transaction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X