• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ನಿಜೆಂಟ್ ನಲ್ಲಿ ಭಾರಿ ಉದ್ಯೋಗ ಕಡಿತದ ಮುನ್ಸೂಚನೆ

|
Google Oneindia Kannada News

ಬೆಂಗಳೂರು, ಮೇ 05: ಯುಎಸ್ ಮೂಲದ ಪ್ರಮುಖ ಐಟಿ ಕಂಪನಿ ಕಾಂಗ್ನಿಜೆಂಟ್ ತನ್ನ ಕಳೆದ ತ್ರೈಮಾಸಿಕ ವರದಿಯಲ್ಲಿ ಉತ್ತಮ ಫಲಿತಾಂಶ ನೀಡುವಲ್ಲಿ ವಿಫಲವಾಗಿದೆ. ಇದರ ಪರಿಣಾಮ ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತ ಸಾಧ್ಯತೆ ಕಂಡು ಬಂದಿದೆ.

ಕಾಂಗ್ನಿಜೆಂಟ್ ನ ವಾರ್ಷಿಕ ಪ್ರಗತಿ ಮುನ್ನೋಟ ಅತ್ಯಂತ ಕಳಪೆಯಾಗಿದ್ದರಿಂದ ಸಂಸ್ಥೆಯ ಡಿಜಿಟಲ್ ಬಿಸಿನೆಸ್ ಮುಖ್ಯಸ್ಥ ಗಜೇನ್ ಕಂಡಿಯ್ಯ ಅವರು ತಮ್ಮ ಹುದ್ದೆ ತೊರೆದಿದ್ದಾರೆ. 2019ರ ಅರ್ಥಿಕ ಪ್ರಗತಿ 3.9 ರಿಂದ 4.9% ಮಾತ್ರ ಎನ್ನಲಾಗಿದೆ. ಕಳೆದ ವರ್ಷ 7.0 ದಿಂದ 9.0% ನಷ್ಟಿತ್ತು.

ಕಾಂಗ್ನಿಜೆಂಟ್ ನಿಂದ 6 ಸಾವಿರ ಮಂದಿ ಉದ್ಯೋಗಳಿಗೆ ಕೊಕ್ ?ಕಾಂಗ್ನಿಜೆಂಟ್ ನಿಂದ 6 ಸಾವಿರ ಮಂದಿ ಉದ್ಯೋಗಳಿಗೆ ಕೊಕ್ ?

ಕಳೆದ ಎರಡು ವರ್ಷಗಳಿಂದ ಉದ್ಯೋಗ ಕಡಿತ ಜಾರಿಯಲ್ಲಿದೆ. ಯುವ ಇಂಜಿನಿಯರ್ ಗಳಿಗೆ ಅವಕಾಶ ನೀಡಲು ಕಾಂಗ್ನಿಜೆಂಟ್ ಮುಂದಾಗಿದ್ದು, ಕಳೆದ ಆಗಸ್ಟ್ ನಲ್ಲಿ 200ಕ್ಕೂ ಅಧಿಕ ಉನ್ನತ ಹುದ್ದೆಯ ಅಧಿಕಾರಿಗಳನ್ನು ಸಂಸ್ಥೆ ತೊರೆಯುವಂತೆ ಸೂಚಿಸಲಾಗಿತ್ತು.

ಗಜೇನ್ ಅವರ ಸ್ಥಾನಕ್ಕೆ ಮಾಲ್ಕಂ ಫ್ರಾಂಕ್ ಅವರನ್ನು ನೇಮಿಸಲಾಗಿದೆ ಎಂದು ಸಿಇಒ ಬ್ರಿಯಾನ್ ಹಂಫ್ರೀಸ್ ಅವರು ಸಂಸ್ಥೆಯ ಉದ್ಯೋಗಿಗಳಿಗೆ ಇಮೇಲ್ ಹಾಕಿದ್ದಾರೆ. ಭಾರತದ ಷೇರು ಮಾರುಕಟ್ಟೆಯಲ್ಲಿ ಟಾಪ್ 5 ಐಟಿ ಕಂಪನಿಗಳು 38,900 ಕೋಟಿ ರು ನಷ್ಟು ಮಾರುಕಟ್ಟೆ ಮೌಲ್ಯ ಕಳೆದುಕೊಂಡಿವೆ. ಹೀಗಾಗಿ, ಕಾಂಗ್ನಿಜೆಂಟ್ ಕೂಡಾ ಈ ಸಾಲಿನಲ್ಲಿದೆ.

English summary
US listed IT company Cognizant is considering job cuts to slash costs after forecasted the worst annual growth in its history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X