ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಯುಎಸ್ ಕ್ರಿಪ್ಟೋಕರೆನ್ಸಿ ಕಾಯಿನ್‌ಬೇಸ್ ಕಚೇರಿ

|
Google Oneindia Kannada News

ಹೈದರಾಬಾದ್, ಮಾರ್ಚ್ 28: ಯುಎಸ್ ಕ್ರಿಪ್ಟೋಕರೆನ್ಸಿ ವಿನಿಯಮ ಸಂಸ್ಥೆ, ಜನಪ್ರಿಯ ಕರೆನ್ಸಿ ಬಿಟ್ ಕಾಯಿನ್ ಮುಂತಾದವುಗಳಿಗೆ ವ್ಯಾಲೆಟ್ ಒದಗಿಸುವ ಕಾಯಿನ್‌ಬೇಸ್ ಭಾರತಕ್ಕೆ ಅಧಿಕೃತವಾಗಿ ಕಾಲಿರಿಸುತ್ತಿದೆ.

ಹೈದರಾಬಾದಿನಲ್ಲಿ ಕಚೇರಿ ಹೊಂದಲಿರುವ ಕಾಯಿನ್‌ಬೇಸ್, ನೇಮಕಾತಿ ಆರಂಭಿಸಿದೆ. ಇತ್ತೀಚಿಗೆ, ಯುಎಸ್, ಯುಕೆ, ಐರ್ಲೆಂಡ್, ಜಪಾನ್, ಸಿಂಗಪುರ ಹಾಗೂ ಕೆನಡಾದಲ್ಲಿ ನೇಮಕಾತಿ ಕುರಿತಂತೆ ಪ್ರಕಟಿಸಿದ್ದ ಕಾಯಿನ್‌ಬೇಸ್ ಈಗ ಭಾರತದಲ್ಲಿ ಕಚೇರಿ ಹೊಂದುವ ಬಗ್ಗೆ ಅಧಿಕೃತ ಬ್ಲಾಗಿನಲ್ಲಿ ಬರೆದುಕೊಂಡಿದೆ. ಇಂಜಿನಿಯರಿಂಗ್, ಸಾಫ್ಟ್ ವೇರ್ ಅಭಿವೃದ್ಧಿ, ಗ್ರಾಹಕ ಸ್ನೇಹಿ ಸೇವೆ ಒದಗಿಸಲು ಕಚೇರಿ ಹೊಂದುವುದು ಅಗತ್ಯವಾಗಿದೆ. ಭಾರತದಲ್ಲಿನ ಕೊವಿಡ್ 19 ನಿಯಮಗಳ ಅನುಸಾರ ನೇಮಕಾತಿ, ಕಚೇರಿ ಸ್ಥಾಪನೆ ಬಗ್ಗೆ ನಂತರ ಪ್ರಕಟಿಸಲಾಗುವುದು ಎಂದು ಹೇಳಿದೆ.

ಈ ನಡುವೆ ಜನಪ್ರಿಯ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಕೆಲದಿನಗಳ ಕಾಲ ಮೌಲ್ಯ ಕುಸಿತದ ನಡುವೆಯೂ ಸ್ಥಿರತೆ ಕಾಪಾಡಿಕೊಂಡಿದೆ. ಭಾನುವಾರದಂದು ಸ್ವಲ್ಪ ಮಟ್ಟಿಗೆ ಮೌಲ್ಯ ವೃದ್ಧಿಸಿಕೊಂಡಿದೆ.

US Cryptocurrency exchange Coinbase is now hiring in India

ಮಾರ್ಚ್ 28ರಂದು ಈ ಸಮಯಕ್ಕೆ ಬಿಟ್ ಕಾಯಿನ್ ಮೌಲ್ಯ:
ಬಿಟ್ ಕಾಯಿನ್ ಬೆಲೆ: $56,056.18
ಒಟ್ಟಾರೆ ಮಾರುಕಟ್ಟೆ ಮೌಲ್ಯ: $1,054,085,667,156
ಒಂದು ಬಿಟ್ ಕಾಯಿನ್ ಬೆಲೆ = 40,54,931.69ರು
(1 USD=72.45 ರುಪಾಯಿ)

US Cryptocurrency exchange Coinbase is now hiring in India

ಕಳೆದ 24 ಗಂಟೆಗಳಲ್ಲಿ ಶೇ 1.22ರಷ್ಟು ಏರಿಕೆ ಕಂಡಿದೆ. ಈ ವಾರ ಶೇ 1.88ರಷ್ಟು ಇಳಿಕೆಯಾಗಿದೆ. ಈ ನಡುವೆ ಮತ್ತೊಂದು ಡಿಜಿಟಲ್ ಕರೆನ್ಸಿ ಎಥೆರೆಯಂ (Ethereum) ಕಳೆದ 24 ಗಂಟೆಗಳಲ್ಲಿ ಶೇ 0.61ರಷ್ಟು ಏರಿಕೆ ಕಂಡು 1,716.70 ಡಾಲರ್ ಮೌಲ್ಯ ಪಡೆದಿದೆ. ಒಟ್ಟಾರೆ $198,651,564,919 ಮೌಲ್ಯ ಹೊಂದಿದೆ. ಮತ್ತೊಂದು ಕರೆನ್ಸಿ ಕಾರ್ಡಾನೋ ಕಳೆದ 24 ಗಂಟೆಗಳಲ್ಲಿ ಶೇ 1.21ರಷ್ಟು ಕುಸಿತ ಕಂಡಿದ್ದು, 1.18 ಡಾಲರ್ ಮೌಲ್ಯಹೊಂದಿದ್ದು, ಒಟ್ಟಾರೆ, $38,003,103,895ಮಾರುಕಟ್ಟೆ ಮೌಲ್ಯ ಹೊಂದಿದೆ.

English summary
US Cryptocurrency exchange Coinbase is now hiring in India to set up office in Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X