ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ರ ಅಂತ್ಯಕ್ಕೆ ಕರ್ನಾಟಕದಲ್ಲಿ 25 ಸೇವಾ ಸೌಲಭ್ಯ: ಎಂಜಿ ಮೋಟಾರ್ ಇಂಡಿಯಾ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 2021: ದೇಶಾದ್ಯಂತ ಕಾರು ಕೊಳ್ಳುವ ಅನುಭವವನ್ನು ಮರು ವ್ಯಾಖ್ಯಾನಿಸುವ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಪುನರುಚ್ಛರಿಸುತ್ತಾ ಎಂಜಿ ಮೋಟಾರ್ ಇಂಡಿಯಾ ಬೆಂಗಳೂರಿನ ಮಹದೇವಪುರದಲ್ಲಿ ಹೊಸ ಸರ್ವೀಸ್ ಸೌಲಭ್ಯವನ್ನು ಅದ್ಧೂರಿಯಾಗಿ ಪ್ರಾರಂಭಿಸಿದೆ. ಜುಬಿಲೆಂಟ್ ಮೋಟಾರ್ ವರ್ಕ್ಸ್‌ನ ಸಿಇಒ ಅಮಿತ್ ಜೈನ್ ಮತ್ತು ಎಂಜಿ ಮೋಟಾರ್ ಇಂಡಿಯಾದ ನ್ಯಾಷನಲ್ ಆಫ್ಟರ್ ಸೇಲ್ಸ್ ಹೆಡ್ ರಾಜೇಶ್ ಮೆಹ್ರೋತ್ರಾ ಈ ವರ್ಕ್‍ಶಾಪ್ ಅನ್ನು ಉದ್ಘಾಟಿಸಿದರು.

ಈ ವರ್ಕ್‍ಶಾಪ್ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸರ್ವೀಸ್ ಬೇಡಿಕೆಯನ್ನು ಪೂರೈಸಲಿದೆ. ನಗರದಲ್ಲಿ ಪ್ರೀಮಿಯಂ ಎಸ್‍ಯುವಿಗಳಿಗೆ ಇರುವ ಬೇಡಿಕೆಯನ್ನು ಗುರುತಿಸಿರುವ ಎಂಜಿ ಮೋಟಾರ್ಸ್ ತನ್ನ ಹೊಸ ಶೋರೂಂನಲ್ಲಿ ಬ್ರಿಟಿಷ್ ಪರಂಪರೆಯನ್ನು ಅಳವಡಿಸಿಕೊಂಡಿದ್ದಲ್ಲದೆ ಕಾರು ತಯಾರಕರ ಭವಿಷ್ಯದ ಗ್ರಾಹಕ ವಿಧಾನದ ಒಟ್ಟಾರೆ ನೋಟ ಮತ್ತು ಭಾವನೆಯನ್ನು ಪ್ರತಿಬಿಂಬಿಸುವಂತಿದೆ.

ಐಒಟಿ: ಎಂಜಿ ಮೋಟಾರ್ ಇಂಡಿಯಾ ಮತ್ತು ಜಿಯೋ ಸಹಯೋಗಐಒಟಿ: ಎಂಜಿ ಮೋಟಾರ್ ಇಂಡಿಯಾ ಮತ್ತು ಜಿಯೋ ಸಹಯೋಗ

ಈ ಹೊಸ ಸೌಲಭ್ಯದೊಂದಿಗೆ ಎಂಜಿ ಮೋಟಾರ್ ಇಂಡಿಯಾ ಕರ್ನಾಟಕದಲ್ಲಿ ಒಟ್ಟು 21 ಟಚ್ ಪಾಯಿಂಟ್‍ಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಮತ್ತು 2021ರ ಅಂತ್ಯಕ್ಕೆ ರಾಜ್ಯದಲ್ಲಿ 25 ಟಚ್ ಪಾಯಿಂಟ್‍ಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ. ಭಾರತದಾದ್ಯಂತ 292 ಕೇಂದ್ರಗಳಲ್ಲಿ ರೀಟೇಲ್ ಶೋರೂಂಗಳ ಸದೃಢ ವ್ಯಾಪ್ತಿ ಹೊಂದಿರುವ ಕಂಪನಿಯು 2021ರ ವೇಳೆಗೆ 300 ಕೇಂದ್ರಗಳಿಗೆ ಹೆಚ್ಚಿಸಲಿದೆ.

Title: MG Motor India expands retail presence in Bengaluru; New service facility in Mahadevpura

ಈ ಉದ್ಘಾಟನೆ ಕುರಿತು ಮಾತನಾಡಿದ ಎಂಜಿ ಮೋಟಾರ್ ಇಂಡಿಯಾದ ಡೀಲರ್ ಡೆವಲಪ್‍ಮೆಂಟ್ ನಿರ್ದೇಶಕ ಪಂಕಜ್ ಪಾರ್ಕರ್, "ಎಂಜಿ ಮಹದೇವಪುರ ಉದ್ಘಾಟನೆಯು ಬೆಂಗಳೂರಿನ ಸಂಭವನೀಯ ಗ್ರಾಹಕರಿಗೆ ತಲುಪಲು ನಮ್ಮ ಯೋಜನೆಗಳನ್ನು ವಿಸ್ತರಿಸುವ ಉದ್ದೇಶಕ್ಕೆ ಪೂರಕವಾಗಿದೆ. ಈ ಕೇಂದ್ರವು ಮಾರಾಟ, ಸೇವೆ, ಬಿಡಿಭಾಗಗಳು ಮತ್ತು ಅಕ್ಸೆಸರೀಸ್ ಒಳಗೊಂಡು ಎಲ್ಲ ಅಗತ್ಯಗಳನ್ನೂ ಪೂರೈಸಲಿದೆ" ಎಂದರು.

Title: MG Motor India expands retail presence in Bengaluru; New service facility in Mahadevpura

ಹೊಸ ಸರ್ವೀಸ್ ಸೆಂಟರ್ ಕುರಿತು ಎಂಜಿ ಬೆಂಗಳೂರಿನ ಡೀಲರ್ ಪ್ರಿನ್ಸಿಪಲ್ ಶಮಿತ್ ಭಾರ್ತಿಯಾ, "ಮುಂಚೂಣಿಯ ಮತ್ತು ಭವಿಷ್ಯ ಸನ್ನದ್ಧ ಬ್ರಾಂಡ್ ಆಗಿ ಎಂಜಿ ಈಗಾಗಲೇ ತನ್ನ ಹೊಸ ಆವಿಷ್ಕಾರ ಮತ್ತು ತಂತ್ರಜ್ಞಾನ ಪ್ರೇರಿತ ವಿಧಾನದಿಂದ ಭಾರತದ ವಾಹನೋದ್ಯಮದಲ್ಲಿ ಹೊಸ ಅಲೆಗಳನ್ನು ಎಬ್ಬಿಸಿದೆ. ನಾವು ಈ ಬ್ರಾಂಡ್‍ನೊಂದಿಗೆ ಸಹಯೋಗಕ್ಕೆ ಮತ್ತು ಎಂಜಿಯ ಬಲವಾದ ಬ್ರಿಟಿಷ್ ಪರಂಪರೆಯಯನ್ನು ಒದಗಿಸಲು ಮತ್ತು ಬೆಂಗಳೂರಿನ ಗ್ರಾಹಕರಿಗೆ ಹೊಸ ಹಾಗೂ ವಿಶಿಷ್ಟ ವಾಹನದ ರೀಟೇಲ್ ಅನುಭವವನ್ನು ನೀಡಲು ಬಹಳ ಸಂತೋಷ ಹೊಂದಿದ್ದೇವೆ" ಎಂದರು.

ಇಂಟರ್ನೆಟ್ ಆಫ್ ಥಿಂಗ್ಸ್ -ಎಂಜಿ ಇಂಡಿಯಾ:
ಅತ್ಯುತ್ತಮ ದರ್ಜೆಯ ಸಂಪರ್ಕಿತ ಕಾರ್ ತಂತ್ರಜ್ಞಾನವನ್ನು ಒದಗಿಸಲು ಬದ್ಧರಾಗಿರುವ ಎಂಜಿ ಮೋಟಾರ್ ಇಂಡಿಯಾ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಜಾಗದಲ್ಲಿ ಪಾಲುದಾರಿಕೆಯನ್ನು ಘೋಷಿಸಿದೆ. ಮುಂಬರುವ ಮಧ್ಯಮ ಗಾತ್ರದ ಎಸ್‌ಯುವಿಯಲ್ಲಿ ಜಿಯೋನ ಐಒಟಿ ಪರಿಹಾರದಿಂದ ಸಕ್ರಿಯಗೊಳಿಸಲಾದ ಐಟಿ ವ್ಯವಸ್ಥೆಗಳ ತಡೆ ರಹಿತ ಏಕೀಕರಣವನ್ನು ಒದಗಿಸುತ್ತದೆ.

ಆಟೋಮೊಬೈಲ್ ಉದ್ಯಮದಲ್ಲಿ ನಾವೀನ್ಯತೆ ರೇಖೆಯನ್ನು ಮುಂದಿಟ್ಟುಕೊಂಡು, ಎಂಜಿ ಮೋಟಾರ್ ಭಾರತದಲ್ಲಿ ತನ್ನ ಕಾರ್ಯಾಚರಣೆಯ ಆರಂಭದಿಂದಲೂ ಆಟೋ-ಟೆಕ್ ನಾವೀನ್ಯತೆಯತ್ತ ಗಮನ ಹರಿಸಿದೆ. ಕಾರು ತಯಾರಕ ಭಾರತೀಯ ಆಟೋಮೊಬೈಲ್ ಉದ್ಯಮಕ್ಕೆ ಹಲವು ಪ್ರಥಮಗಳನ್ನು ಪರಿಚಯಿಸಿದೆ ಮತ್ತು ಇಂಟರ್ನೆಟ್/ಸಂಪರ್ಕಿತ ಕಾರುಗಳು, ಸ್ವಾಯತ್ತ ಮಟ್ಟದ ಒಂದು ADAS ತಂತ್ರಜ್ಞಾನಗಳು ಮತ್ತು ವಿದ್ಯುತ್ ಕಾರುಗಳಿಗೆ ಗ್ರಾಹಕರ ಬೇಡಿಕೆಯನ್ನು ಹೆಚ್ಚಿಸಿದೆ. ಎಮ್‌ಜಿ ಮೋಟಾರ್ ಇಂಡಿಯಾ ದೇಶದ ಮೊದಲ ಅಂತರ್ಜಾಲ ಸಂಪರ್ಕಿತ ಕಾರನ್ನು ಬಿಡುಗಡೆ ಮಾಡುವ ಮೂಲಕ ಭಾರತದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿತು-ಎಂಜಿ ಹೆಕ್ಟರ್, ನಂತರ ಶುದ್ಧ ವಿದ್ಯುತ್ ಇಂಟರ್ನೆಟ್ ಎಸ್‌ಯುವಿ-ಎಂಜಿ Zಡ್‌ಎಸ್. ಇದು ಗ್ಲೋಸ್ಟರ್ ಅನ್ನು ಲೆವೆಲ್ 1 ಸ್ವಾಯತ್ತ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಿದೆ, ಇದರಲ್ಲಿ ಆಟೋನಮಸ್ ಎಮರ್ಜೆನ್ಸಿ ಬ್ರೇಕಿಂಗ್ (ಎಇಬಿ), ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ಎಸಿಸಿ) ಮತ್ತು ಇತರ ಸುಧಾರಿತ ಫೀಚರ್‌ಗಳು.

English summary
Underlining its commitment to completely redefine the car buying experience across the country, MG Motor India has today announced the grand opening of a new service facility in Mahadevpura, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X