ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊರ್ಜಿತ್ ನಿರ್ಗಮನ ಪರಿಣಾಮ: ಡಾಲರ್ ಎದುರು ರೂಪಾಯಿ ಮೌಲ್ಯ ಭಾರಿ ಕುಸಿತ

|
Google Oneindia Kannada News

ಮುಂಬೈ, ಡಿಸೆಂಬರ್ 11: ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ನಿರ್ಗಮನ ಷೇರು ಮಾರುಕಟ್ಟೆ ಮತ್ತು ರೂಪಾಯಿ ಮೌಲ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ.

ಊರ್ಜಿತ್ ಪಟೇಲ್ ರಾಜೀನಾಮೆ : ರೂಪಾಯಿ ಮೌಲ್ಯ ಕುಸಿತಊರ್ಜಿತ್ ಪಟೇಲ್ ರಾಜೀನಾಮೆ : ರೂಪಾಯಿ ಮೌಲ್ಯ ಕುಸಿತ

ಐದು ರಾಜ್ಯಗಳ ಚುನಾವಣಾ ಸಮೀಕ್ಷೆಗಳು ಪ್ರಕಟವಾದ ಪರಿಣಾಮ ಸೋಮವಾರ ಮಾರುಕಟ್ಟೆ ಆರಂಭದಲ್ಲಿಯೇ ಕುಸಿತ ಕಂಡಿತ್ತು. ಬಳಿಕ ಸಂಜೆ ಊರ್ಜಿತ್ ಪಟೇಲ್ ದಿಢೀರ್ ರಾಜೀನಾಮೆ ಷೇರು ಪೇಟೆಯನ್ನು ಕಂಗಾಲಾಗಿಸಿದೆ. ರಾಜೀನಾಮೆ ಹೊಡೆತಕ್ಕೆ ರೂಪಾಯಿ ಮೌಲ್ಯ ಕೂಡ ತತ್ತರಿಸಿದ್ದು, ಏಕಾಏಕಿ 92 ಪೈಸೆ ಕುಸಿತ ಕಂಡಿದೆ.

ಮೋದಿಯಿಂದ ಆರ್ ಬಿಐ ಮುಚ್ಚಲಿದೆ: ರಾಹುಲ್, ಸಿದ್ದರಾಮಯ್ಯ ವಾಗ್ದಾಳಿಮೋದಿಯಿಂದ ಆರ್ ಬಿಐ ಮುಚ್ಚಲಿದೆ: ರಾಹುಲ್, ಸಿದ್ದರಾಮಯ್ಯ ವಾಗ್ದಾಳಿ

ಸೋಮವಾರ ಮಾರುಕಟ್ಟೆ ಅಂತ್ಯದ ವೇಳೆಗೆ ಡಾಲರ್ ಎದುರು 71.32 ಇದ್ದ ರೂಪಾಯಿ ಮೌಲ್ಯ, ಮಂಗಳವಾರ ಬೆಳಿಗ್ಗೆಯೇ 1.5%ರಷ್ಟು ಕುಸಿತ ಕಂಡು 72.46 ರೂ.ಗೆ ತಲುಪಿದೆ.

Urjit Patel resignation rupee falls 92 paise against US dollar

ಸರ್ಕಾರ ಮತ್ತು ಆರ್ ಬಿಐ ತಿಕ್ಕಾಟದ ಬಳಿಕ ಊರ್ಜಿತ್ ಪಟೇಲ್ ರಾಜೀನಾಮೆ ಸಲ್ಲಿಸಿರುವುದು ವಿದೇಶಿ ಹೂಡಿಕೆದಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಐಎಫ್‌ಎ ಗ್ಲೋಬಲ್ ಫಾರೆಕ್ಸ್ ಸಲಹಾ ಸಂಸ್ಥೆ ತಿಳಿಸಿದೆ.

2018-19ನೇ ಸಾಲಿನ ನೇರ ತೆರಿಗೆ ಸಂಗ್ರಹದಲ್ಲಿ ಗಣನೀಯ ಹೆಚ್ಚಳ2018-19ನೇ ಸಾಲಿನ ನೇರ ತೆರಿಗೆ ಸಂಗ್ರಹದಲ್ಲಿ ಗಣನೀಯ ಹೆಚ್ಚಳ

ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿಯೇ ರೂಪಾಯಿ ಮೌಲ್ಯ ಡಾಲರ್ ಎದುರು ಭಾರಿ ಕುಸಿತ ಕಂಡಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಆಗಿರುವುದು ರೂಪಾಯಿಗೆ ತುಸು ನಿರಾಳ ತಂದುಕೊಟ್ಟಿತ್ತು. ಆರಂಭದ 9 ತಿಂಗಳಲ್ಲಿ ರೂಪಾಯಿ ಶೇ 14ರಷ್ಟು ಕುಸಿದಿತ್ತು. ಈ ಮೂಲಕ ಡಾಲರ್ ಎದುರು 74.48ಕ್ಕೆ ತಲುಪಿತ್ತು.

English summary
Rupee has fallen 92 Paise against US Dollar after the resignation of RBI Governor Urjit Patel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X