ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಸರ್ವ್ ಬ್ಯಾಂಕ್‌ಗೆ ಹೊಸ ಸಾರಥಿ ಉರ್ಜಿತ್ ಪಟೇಲ್

By Madhusoodhan
|
Google Oneindia Kannada News

ನವದೆಹಲಿ, ಸೆಪ್ಟೆಂಬರ್, 05: ಭಾರತೀಯ ರಿಸರ್ವ್ ಬ್ಯಾಂಕ್ ನ ನೂತನ ಗವರ್ನರ್ ಆಗಿ ಉರ್ಜಿತ್ ಪಟೇಲ್ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ರಿಸರ್ವ್ ಬ್ಯಾಂಕಿನ 24ನೇ ಗವರ್ನರ್ ಎಂಬ ಶ್ರೇಯವನ್ನು ಪಡೆದುಕೊಂಡಿದ್ದಾರೆ.

ರಘುರಾಂ ರಾಜನ್ ಅವರಿಂದ ತೆರವಾದ ಸ್ಥಾನವನ್ನು ಉರ್ಜಿತ್ ಪಟೇಲ್ ಅಲಂಕರಿಸಿದ್ದಾರೆ. 2013ರಿಂದ ಇಲ್ಲಿಯವರೆಗೆ ಉಪ ಗವರ್ನರ್ ಆಗಿ ಪಟೇಲ್ ಸೇವೆ ಸಲ್ಲಿಸುತ್ತಾ ಬಂದಿದ್ದರು. 1998ರಿಂದ 2001ರವರೆಗೆ ಹಣಕಾಸು ಸಚಿವಾಲಯದಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.[RBIನಲ್ಲಿ ರಾಕ್ ಸ್ಟಾರ್ ರಘುರಾಂ ರಾಜನ್ ಶಕೆ ಮುಕ್ತಾಯ: ಟಾಪ್ 10ಹೇಳಿಕೆಗಳು]

rbi

52 ವರ್ಷ ವಯಸ್ಸಿನ ಪಟೇಲ್ ಅವರು ಆರ್ ಬಿಐ ಡೆಪ್ಯುಟಿ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಈಗ ಬಡ್ತಿ ಸಿಕ್ಕಿದೆ. ಆರ್ ಬಿಐ ಗವರ್ನರ್ ಅವಧಿ ಮೂರು ವರ್ಷದ್ದಾಗಿದೆ.

ಕೇಲ್ಕರ್ ಸಮಿತಿಯ ನೇರ ತೆರಿಗೆಗಳ ಕಾರ್ಯಪಡೆ, ನಾಗರಿಕ ಮತ್ತು ರಕ್ಷಣಾ ಸೇವೆ ಪಿಂಚಣಿ ವ್ಯವಸ್ಥೆಯ ಪರಾಮರ್ಶೆಯ ಉನ್ನತ ಮಟ್ಟದ ತಜ್ಞರ ಸಮಿತಿ, ಪ್ರಧಾನ ಮಂತ್ರಿಗಳ ಮೂಲಭೂತ ಸೌಕರ್ಯಗಳ ಕಾರ್ಯಪಡೆ, ಟೆಲಿಕಾಂ ಮ್ಯಾಟರ್ಸ್ ನ ಸಚಿವರ ಗುಂಪು, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿಯೂ ಪಟೇಲ್ ಕೆಲಸ ಮಾಡಿದ್ದಾರೆ.[ಊರ್ಜಿತ್ ಪಟೇಲ್ ಯಾರು?]

ಖಾಸಗಿ ಮತ್ತ ಸಾರ್ವಜನಿಕ ಹಣಕಾಸು ವಲಯದಲ್ಲಿ ಅಪಾರ ಅನುಭವ ಮತ್ತು ಜ್ಞಾನ ಹೊಂದಿರುವ ಪಟೇಲ್ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹಣದುಬ್ಬರ, ವಿದೇಶಿ ಬಂಡವಾಳ ಹೂಡಿಕೆ ಮತ್ತು ಪರಿಣಾಮ, ಅರ್ಥ ವ್ಯವಸ್ಥೆ ಸುಧಾರಣೆ ಸೇರಿದಂತೆ ಹಲವಾರು ಸವಾಲುಗಳು ಪಟೇಲ್ ಮುಂದಿವೆ.

English summary
Urjit Patel has assumed charge as the 24th Governor of Reserve Bank, succeeding Raghuram Rajan whose three-year controversy-ridden tenure ended yesterday.Patel has assumed charge effective September 4, 2016, after serving as deputy governor since January 2013, RBI said in a statement today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X