ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯರಾತ್ರಿ 1 ರಿಂದ 3 ಗಂಟೆವರೆಗೆ UPI ಪಾವತಿ ಸಮಸ್ಯೆ ಎದುರಾಗಲಿದೆ: ಕಾರಣ ಏನು?

|
Google Oneindia Kannada News

ನವದೆಹಲಿ, ಜನವರಿ 22: ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಭಾರೀ ಬದಲಾವಣೆ ಕಂಡುಬಂದಿದೆ. ದೇಶದ ಮೂಲೆ ಮೂಲೆಗಳಲ್ಲಿ ಜನರು ಹೆಚ್ಚಾಗಿ ಡಿಜಿಟಲ್ ಪಾವತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಕಳೆದ ತಿಂಗಳು ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಯುಪಿಐ ಪಾವತಿ ವಹಿವಾಟು ಒಂದು ತಿಂಗಳಲ್ಲಿ 4 ಲಕ್ಷ ಕೋಟಿ ರೂಪಾಯಿ ರೂ. ದಾಟಿದೆ.

UPI ಪಾವತಿ: ಡಿಸೆಂಬರ್‌ನಲ್ಲಿ ದಾಖಲೆಯ 4 ಲಕ್ಷ ಕೋಟಿ ರೂ. ವಹಿವಾಟುUPI ಪಾವತಿ: ಡಿಸೆಂಬರ್‌ನಲ್ಲಿ ದಾಖಲೆಯ 4 ಲಕ್ಷ ಕೋಟಿ ರೂ. ವಹಿವಾಟು

ಹೀಗೆ ನೀವು ಹೆಚ್ಚು ಅವಲಂಬಿತರಾಗಿರುವ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಮಧ್ಯರಾತ್ರಿ ನಂತರ ಸಮಸ್ಯೆಗಳು ಎದುರಾಗಬಹುದು. ಈ ಕುರಿತು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ಮಾಹಿತಿ ನೀಡಿದ್ದು, ಮಧ್ಯರಾತ್ರಿ 1 ರಿಂದ 3 ಗಂಟೆವರೆಗೆ ಪಾವತಿ ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ಎದುರಾಗಬಹುದು ಎಂದು ಹೇಳಿದೆ.

UPY Payments: You Might Face Issues While Making UPI Payments After Midnight

''ಮುಂದಿನ ಕೆಲವು ದಿನಗಳವರೆಗೆ ಯುಪಿಐ ಪ್ಲಾಟ್‌ಫಾರ್ಮ್ ನವೀಕರಣ(ಅಪ್‌ಡೇಟ್) ಪ್ರಕ್ರಿಯೆಯ ಅಡಿಯಲ್ಲಿ ಸಾಗಲಿದೆ '' ಎಂದು ಎನ್‌ಪಿಸಿಐ ತನ್ನ ಟ್ವಿಟ್ಟರ್ ಅಕೌಂಟ್‌ನಲ್ಲಿ ತಿಳಿಸಿದೆ. ಹೀಗಾಗಿ ಬಳಕೆದಾರರು ಪೂರ್ವ ಯೋಜಿಸಿ ತಮ್ಮ ಯುಪಿಐ ಪಾವತಿಗಳನ್ನು ಮಾಡಿಕೊಳ್ಳುವುದು ಉತ್ತಮ.

ಈ ನವೀಕರಣ ಪ್ರಕ್ರಿಯೆಯು ಮುಂಜಾನೆ 1 ರಿಂದ ಮುಂಜಾನೆ 3 ರವರೆಗೆ ನಡೆಯಲಿದೆ ಮತ್ತು ಬಳಕೆದಾರರು ಅನಾನುಕೂಲತೆಯನ್ನು ಎದುರಿಸಬೇಕಾಗುತ್ತದೆ ಎಂದು ಎನ್‌ಪಿಸಿಐ ಉಲ್ಲೇಖಿಸಿದೆ. ಆದಾಗ್ಯೂ, ನವೀಕರಣ ಪ್ರಕ್ರಿಯೆಯು ನಡೆಯುವ ದಿನಗಳನ್ನು ಅದು ಸ್ಪಷ್ಟಪಡಿಸಿಲ್ಲ.

English summary
NPCI on its Twitter handle informed that UPI platform will go under the upgradation process for the next few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X