ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಐ ಪಾವತಿಯಲ್ಲಿ ಏರಿಕೆ: ನವೆಂಬರ್‌ನಲ್ಲಿ 2.21 ಬಿಲಿಯನ್ ವಹಿವಾಟು

|
Google Oneindia Kannada News

ನವದೆಹಲಿ, ಡಿಸೆಂಬರ್ 02: ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಪ್ರವೇಶಿಸಿದ ಮೇಲಂತೂ ಯುಪಿಐ ಪಾವತಿ ಆ್ಯಪ್‌ಗಳ ಬಳಕೆದಾರರ ಪ್ರಮಾಣವೂ ಮತ್ತಷ್ಟು ಹೆಚ್ಚಾಗಿದೆ. ಜನರು ಗೂಗಲ್ ಪೇ, ಫೋನ್ ಪೇ, ಪೇಟಿಎಂ, ಭೀಮ್ ಸೇರಿದಂತೆ ನಾನಾ ಆ್ಯಪ್‌ಗಳ ಮೂಲಕ ವಹಿವಾಟು ನಡೆಸುವುದನ್ನು ಹೆಚ್ಚಿಸಿದ್ದಾರೆ. ನವೆಂಬರ್‌ನಲ್ಲಿ ಯುಪಿಐ ವಹಿವಾಟು ಶೇಕಡಾ 6.7ರಷ್ಟು ಏರಿಕೆಯಾಗಿದ್ದು, 2.21 ಬಿಲಿಯನ್‌ಗೆ ತಲುಪಿದೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪ್ ಆಫ್ ಇಂಡಿಯಾ (ಎನ್‌ಪಿಸಿಐ) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 2019 ರ ನವೆಂಬರ್‌ನಲ್ಲಿ ಸುಮಾರು 1.21 ಬಿಲಿಯನ್ ವಹಿವಾಟುಗಳು ದಾಖಲಾಗಿತ್ತು. ಆದರೆ ಸರಿಯಾಗಿ ಒಂದು ವರ್ಷಕ್ಕೆ 2020ರ ನವೆಂಬರ್‌ನಲ್ಲಿ 2.21 ಬಿಲಿಯನ್‌ ಯುಪಿಐ ವಹಿವಾಟು ನಡೆದಿದೆ.

LIC ಒಂದು ಬಾರಿ ಪಾವತಿ: ಪ್ರತಿ ತಿಂಗಳು 36,000 ರೂ. ಪಿಂಚಣಿLIC ಒಂದು ಬಾರಿ ಪಾವತಿ: ಪ್ರತಿ ತಿಂಗಳು 36,000 ರೂ. ಪಿಂಚಣಿ

ನವೆಂಬರ್ ತಿಂಗಳಿನಲ್ಲಿ ಯುಪಿಐ ಆಧಾರಿತ ಪಾವತಿಗಳ ಮೌಲ್ಯವು 3.90 ಲಕ್ಷ ಕೋಟಿ ರೂಪಾಯಿ ಆಗಿದ್ದು, ಅಕ್ಟೋಬರ್‌ನಲ್ಲಿ 3.86 ಲಕ್ಷ ಕೋಟಿಯಷ್ಟಿತ್ತು. ಒಂದು ತಿಂಗಳ ಹಿಂದೆ 189 ಬ್ಯಾಂಕ್‌ಗಳಿಂದ 200 ಬ್ಯಾಂಕುಗಳು ಯುಪಿಐ ನೇರ ವಹಿವಾಟು ಹೊಂದಿವೆ.

 UPI Transactions Grow 7% To 2.21 Bn In November 2020

ಯುಪಿಐ ವಹಿವಾಟು ಮೊದಲ ಬಾರಿಗೆ ಅಕ್ಟೋಬರ್ ತಿಂಗಳಲ್ಲಿ ಎರಡು ಬಿಲಿಯನ್ ದಾಟಿತ್ತು. ಹಬ್ಬದ ಸೀಸನ್ ಇದ್ದ ಕಾರಣ ಜನರು ಸಂಪರ್ಕರಹಿತ ವಹಿವಾಟು ಕಡೆಗೆ ಹೆಚ್ಚು ಆದ್ಯತೆ ನೀಡಿದ್ದರ ಪರಿಣಾಮ ಯುಪಿಐ ವಹಿವಾಟು ಏರಿಕೆಗೊಂಡಿದೆ.

Recommended Video

ಬ್ಯಾಂಕ್ ಗ್ರಾಹಕರಿಗೆ ಸಿಹಿಸುದ್ದಿ ಕೊಟ್ಟ RBI | Oneindia Kannada

ಯುಪಿಐ ವಹಿವಾಟು ಮಾಡುವವರ ಸಂಖ್ಯೆಯಲ್ಲಿ ಸುಮಾರು 10 ಪಟ್ಟು ಏರಿಕೆ ಕಂಡುಬಂದಿದ್ದು, ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ಬಾರೀ ವಹಿವಾಟು ನಿರೀಕ್ಷಿಸಲಾಗಿದೆ.

English summary
unified payment Interface (UPI) transaction grew 6.7% In november to 2.2 Billion
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X