ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UPI Payments:ಜೂನ್‌ನಲ್ಲಿ ಸಾರ್ವಕಾಲಿಕ ದಾಖಲೆ, 2.62 ಲಕ್ಷ ಕೋಟಿ ವಹಿವಾಟು

|
Google Oneindia Kannada News

ನವದೆಹಲಿ, ಜೂನ್ 2: ದೇಶದಲ್ಲಿ ಕೊರೊನಾ ಹಾವಳಿ ಎಂಟ್ರಿಯಾದ ಮೇಲಂತೂ ಯುಪಿಐ ಪಾವತಿ ಆ್ಯಪ್‌ಗಳ ಬಳಕೆದಾರರ ಪ್ರಮಾಣವೂ ಹೆಚ್ಚಾಗಿದ್ದು, ಜನರು ಗೂಗಲ್ ಪೇ, ಫೋನ್ ಪೇ, ಪೇಟಿಎಂ, ಭೀಮ್ ಸೇರಿದಂತೆ ನಾನಾ ಆ್ಯಪ್‌ಗಳ ಮೂಲಕ ವಹಿವಾಟು ನಡೆಸುವುದನ್ನು ಹೆಚ್ಚಿಸಿದ್ದಾರೆ. ಜೂನ್‌ನಲ್ಲಿ ಹೀಗೆ ಮಾಡಲಾದ ಯುಪಿಐ ಪಾವತಿಗಳು ಸಾರ್ವಕಾಲಿಕ ಗರಿಷ್ಠ ದಾಖಲೆಯನ್ನೇ ಸೃಷ್ಟಿಸಿದ್ದು, 1.34 ಬಿಲಿಯನ್ ವಹಿವಾಟು ನಡೆದಿದೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಂಕಿಅಂಶಗಳ ಪ್ರಕಾರ ಜೂನ್‌ನಲ್ಲಿ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಮೇಲಿನ ಪಾವತಿಗಳು ಸಾರ್ವಕಾಲಿಕ ಗರಿಷ್ಠ 1.34 ಬಿಲಿಯನ್, ಮೊತ್ತದಲ್ಲಿ 2.62 ಲಕ್ಷ ಕೋಟಿ ರುಪಾಯಿ ವಹಿವಾಟು ನಡೆದಿದೆ.

ಈ ವರ್ಷ 550 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಫೋನ್‌ಪೇಈ ವರ್ಷ 550 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಫೋನ್‌ಪೇ

ಒಂದು ತಿಂಗಳ ಆಧಾರದ ಮೇಲೆ ಅದು ಮೇ ತಿಂಗಳಲ್ಲಿ 1.23 ಬಿಲಿಯನ್‌ನಿಂದ ಶೇ .8.94 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

UPI Payments:Rs 2.62 Lakh Crore Transactions In June

ಕೊರೊನಾವೈರಸ್ ಲಾಕ್‌ಡೌನ್ ನಂತರ, ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿದ ನಂತರ ಯುಪಿಐ ಪಾವತಿಗಳು ಏಪ್ರಿಲ್‌ನಲ್ಲಿ 1.51 ಲಕ್ಷ ಕೋಟಿ ರುಪಾಯಿಗಳಗಳ ವಹಿವಾಟಿನೊಂದಿಗೆ 999.57 ದಶಲಕ್ಷಕ್ಕೆ ಇಳಿದವು.

ಐಸಿಐಸಿಐ ಸಹಭಾಗಿತ್ವದಲ್ಲಿ 'ಸ್ವಿಗ್ಗಿ ಮನಿ' ಡಿಜಿಟಲ್ ವಾಲೆಟ್ಐಸಿಐಸಿಐ ಸಹಭಾಗಿತ್ವದಲ್ಲಿ 'ಸ್ವಿಗ್ಗಿ ಮನಿ' ಡಿಜಿಟಲ್ ವಾಲೆಟ್

ಆನ್‌ಲೈನ್ ಪಾವತಿಗಳು ಮೇ ತಿಂಗಳಿನಿಂದ ನಿಧಾನವಾಗಿ ವೇಗವನ್ನು ಸಂಗ್ರಹಿಸಿದವು, ಆರ್ಥಿಕತೆಯ ಚೇತರಿಸಿಕೊಳ್ಳುತ್ತಿದೆ. ಮೇ ತಿಂಗಳಲ್ಲಿ ಯುಪಿಐ ವಹಿವಾಟಿನ ಸಂಖ್ಯೆ 2.18 ಲಕ್ಷ ಕೋಟಿ ರುಪಾಯಿಗಳ 1.23 ಬಿಲಿಯನ್ ಆಗಿದ್ದು, ಎನ್‌ಪಿಸಿಐ ಅಂಕಿಅಂಶಗಳನ್ನು ತೋರಿಸಿದೆ. ಜೂನ್‌ನಲ್ಲಿ, ವಹಿವಾಟಿನ ಪ್ರಮಾಣವು ಇಲ್ಲಿಯವರೆಗಿನ ಅತ್ಯುನ್ನತ ಮಟ್ಟವನ್ನು ಮುಟ್ಟಿದೆ.

English summary
Payments on UPI in June hit an all-time high of 1.34 billion in terms of volume with transactions worth nearly Rs 2.62 lakh crore as per NPCI Data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X