• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

UPI ಪಾವತಿ: ಡಿಸೆಂಬರ್‌ನಲ್ಲಿ ದಾಖಲೆಯ 4 ಲಕ್ಷ ಕೋಟಿ ರೂ. ವಹಿವಾಟು

|
Google Oneindia Kannada News

ನವದೆಹಲಿ, ಜನವರಿ 01: ಯುಪಿಐ ಪಾವತಿ ವ್ಯವಸ್ಥೆ ಭಾರತದಲ್ಲಿ ಪ್ರಾರಂಭವಾದ ನಂತರ ಮೊದಲ ಬಾರಿಗೆ ಯುಪಿಐ ಪಾವತಿ ವಹಿವಾಟು ಒಂದು ತಿಂಗಳಲ್ಲಿ 4 ಲಕ್ಷ ಕೋಟಿ ರೂಪಾಯಿ ರೂ. ದಾಟಿದೆ.

ಎನ್‌ಪಿಸಿಐ ಪ್ರಕಾರ, ಡಿಜಿಟಲ್ ಪಾವತಿ ವ್ಯವಸ್ಥೆಯು 2020ರ ಡಿಸೆಂಬರ್‌ನಲ್ಲಿ 2.23 ಬಿಲಿಯನ್ ವಹಿವಾಟುಗಳಿಂದ 4,16,176.21 ಕೋಟಿ ರೂ. ಅಥವಾ 4.16 ಟ್ರಿಲಿಯನ್ ರೂ. ತಲುಪಿದೆ. ಇದು ನವೆಂಬರ್‌ನಿಂದ ಒಟ್ಟಾರೆ ಪ್ರಮಾಣದಲ್ಲಿ ಶೇಕಡಾ 1ರಷ್ಟು ಹೆಚ್ಚಳವಾಗಿದ್ದು, ನವೆಂಬರ್ ತಿಂಗಳಿಗಿಂತ ಶೇಕಡಾ 6.4ರಷ್ಟು ಏರಿಕೆಯಾಗಿದೆ.

ಯುಪಿಐ ಪಾವತಿಯಲ್ಲಿ ಏರಿಕೆ: ನವೆಂಬರ್‌ನಲ್ಲಿ 2.21 ಬಿಲಿಯನ್ ವಹಿವಾಟುಯುಪಿಐ ಪಾವತಿಯಲ್ಲಿ ಏರಿಕೆ: ನವೆಂಬರ್‌ನಲ್ಲಿ 2.21 ಬಿಲಿಯನ್ ವಹಿವಾಟು

ಯುಪಿಐ ಪಾವತಿಯಲ್ಲಿ ಗೂಗಲ್ ಪೇ ಮತ್ತು ಫೋನ್ ಪೇ ಮಾರುಕಟ್ಟೆಯ ಶೇಕಡಾ 80ರಷ್ಟು ಪಾಲನ್ನು ಹೊಂದಿದೆ. ನವೆಂಬರ್ ತಿಂಗಳಿನಲ್ಲಿ ಗೂಗಲ್ ಪೇ 960.02 ಮಿಲಿಯನ್ ವಹಿವಾಟುಗಳೊಂದಿಗೆ ಅತಿದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಿದೆ.

ಗೂಗಲ್ ಪೇ ನಂತರದ ಸ್ಥಾನದಲ್ಲಿ ಫೋನ್ ಪೇ ಇದ್ದು, 868.40 ಮಿಲಿಯನ್‌ ವಹಿವಾಟು ಕಂಡಿದೆ. ವಹಿವಾಟು ಆಧಾರದಲ್ಲಿ ಗೂಗಲ್‌ಪೇಗಿಂತ ಹೆಚ್ಚಿನ ಪ್ರಮಾಣವನ್ನು ವಹಿವಾಟು ಫೋನ್‌ಪೇನಲ್ಲಿ ಆಗಿದೆ.

ಎನ್‌ಪಿಸಿಐ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ ಫೋನ್‌ಪೇ 1,75,453.85 ಕೋಟಿ ಮೌಲ್ಯದ ವಹಿವಾಟುಗಳನ್ನು ದಾಖಲಿಸಿದೆ ಮತ್ತು ಗೂಗಲ್ ಪೇ ನವೆಂಬರ್‌ನಲ್ಲಿ ನಡೆದ ವಹಿವಾಟಿನ ಮೌಲ್ಯದ ಪ್ರಕಾರ 1,61,418.19 ಕೋಟಿ ರೂ. ಆಗಿದೆ.

English summary
For the first time since its inception, Unified Payments Interface or UPI has crossed Rs 4 trillion worth transactions in a month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X