ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಬ್ರವರಿ 28ರಂದು ದೇಶವ್ಯಾಪ್ತಿ ಬ್ಯಾಂಕ್ ಮುಷ್ಕರ

ಮಹಾ ಶಿವರಾತ್ರಿಯ ದೆಸೆಯಿಂದ ಫೆಬ್ರವರಿ 24ರಿಂದ ಮೂರು ದಿನಗಳ ಕಾಲ ರಜೆ ಪಡೆದುಕೊಂಡಿದ್ದ ಬ್ಯಾಂಕ್ ಸಿಬ್ಬಂದಿಗಳು ಫೆಬ್ರವರಿ 28ರಂದು ದೇಶವ್ಯಾಪ್ತಿ ಮುಷ್ಕರಕ್ಕೆ ಸಜ್ಜಾಗುತ್ತಿದ್ದಾರೆ.

By Mahesh
|
Google Oneindia Kannada News

ನವದೆಹಲಿ, ಫೆಬ್ರವರಿ 24: ಮಹಾ ಶಿವರಾತ್ರಿಯ ದೆಸೆಯಿವಮ್ ಸಾಲು ರಜೆಗಳು ಬ್ಯಾಂಕ್ ಸಿಬ್ಬಂದಿಗೂ ಈ ತಿಂಗಳು ಸಿಗುತ್ತಿದೆ. ಶಿವರಾತ್ರಿ(ಫೆ.24) ನಂತರ ಮೂರು ದಿನ ಬ್ಯಾಂಕ್ ಬಂದ್ ಆಗಲಿದೆ. ಇನ್ನು ಕೆಲವು ಕಡೆ ಐದು ದಿನ ಬ್ಯಾಂಕ್ ಕೆಲಸ ಮಾಡೋದಿಲ್ಲ. ಇದರ ಜತೆಗೆ ಈಗ ಫೆಬ್ರವರಿ 28ರಂದು ಮುಷ್ಕರಕ್ಕೆ ಕರೆ ನೀಡಲಾಗಿದೆ.

ಫೆಬ್ರವರಿ 24ರ ಶುಕ್ರವಾರದಂದು ಮಹಾ ಶಿವರಾತ್ರಿ ಪ್ರಯುಕ್ತ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ರಜೆ ಇರುತ್ತದೆ. ಬ್ಯಾಂಕ್ ಗಳ ರಜೆ ಪಟ್ಟಿಯಲ್ಲೂ ಘೋಷಿತ ರಜೆಯಾಗಿದೆ. [ಶಿವರಾತ್ರಿ ದೆಸೆ : ಮೂರು ದಿನ ಬ್ಯಾಂಕುಗಳಿಗೆ ರಜೆ]

United Forum of Bank Unions to go ahead with strike on February 28

25ನೇ ತಾರೀಕು ತಿಂಗಳ ಕೊನೆಯ ಶನಿವಾರವಾದ್ದರಿಂದ ರಜೆ ಇದೆ. ಇನ್ನು ಭಾನುವಾರ 26ರಂದು ಮಾಮೂಲಿ ರಜೆ ಇದೆ. ಉತ್ತರಪ್ರದೇಶದಲ್ಲಿ ಫೆಬ್ರವರಿ 22 ರಿಂದ 26ರ ತನಕ ಚುನಾವಣೆ ಬಿಸಿಯಲ್ಲಿ ಬ್ಯಾಂಕ್ ಅಘೋಷಿತ್ ಬಂದ್ ಆಚರಿಸುತ್ತಿವೆ. ಆದರೆ, 27ರಂದು ಸೋಮವಾರ ಎಂದಿನಂತೆ ಬ್ಯಾಂಕ್‌ ಸೇವೆ ಲಭ್ಯವಿರುತ್ತದೆ.

ಇದರ ಜತೆಗೆ ಬ್ಯಾಂಕ್ ನೌಕರರ ಒಕ್ಕೂಟ ಫೆಬ್ರವರಿ 28ರಂದು ದೇಶವ್ಯಾಪ್ತಿ ಮುಷ್ಕರಕ್ಕೆ ಮುಂದಾಗಿದೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾ ಒಕ್ಕೂಟದಿಂದ ಫೆ.28ರಂದು ಬಂದ್‌ಗೆ ಕರೆ ನೀಡಲಾಗಿದ್ದು, ಇದರಲ್ಲಿ ಯುಎಫ್‌ಬಿಯು, ಗೋವಾ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕ್‌ ಭಾಗಿಯಾಗಲಿವೆ.

ಐದು ದಿನಗಳ ಕೆಲಸ, ಗ್ರಾಚ್ಯುಟಿ ಲೆಕ್ಕಾಚಾರ, ಪಿಂಚಣಿ, OT ಮೊತ್ತ ಹೆಚ್ಚಳ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿಗಳ ಒಕ್ಕೂಟ ಆಗ್ರಹಿಸಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಮ್ ಹೇಳಿದ್ದಾರೆ.

English summary
The all-India bank strike called for February 28 stands as the conciliatory talks between bank unions and the Indian Banks’ Association (IBA) yielded no result. Many banks having Shivaratri holiday today(Feb 24) and holiday extended for two more days with Saturday and Sunday holiday for many banks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X