ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

RBIನಿಂದ 30,000 ಕೋಟಿ ರುಪಾಯಿ ಕೇಳಬಹುದು ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 29: ಕೇಂದ್ರ ಸರ್ಕಾರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (ಆರ್ ಬಿಐ) 30,000 ಕೋಟಿ ರುಪಾಯಿಯಷ್ಟು ಮಧ್ಯಂತರ ಲಾಭಾಂಶವನ್ನು ಕೇಳಬಹುದು. ಪ್ರಸಕ್ತ ಆರ್ಥಿಕ ವರ್ಷದ ಕೊನೆಗೆ 2019- 20ನೇ ಸಾಲಿನ ಜಿಡಿಪಿಯ ವಿತ್ತೀಯ ಕೊರತೆ 3.3% ಗುರಿಯನ್ನು ತಲುಪಲು ಈ ಲಾಭಾಂಶ ಬಳಸಬಹುದು ಎಂದು ಮೂಲಗಳು ತಿಳಿಸಿವೆ.

ಆರು ವರ್ಷಗಳಲ್ಲೇ ಕನಿಷ್ಠ ಮಟ್ಟದ ಜಿಡಿಪಿ 5%ಗೆ ತಲುಪಿದ ಮೇಲೆ ಕೇಂದ್ರ ಸರ್ಕಾರವು ಹಲವು ಉತ್ತೇಜನಾ ಕ್ರಮಗಳನ್ನು ಘೋಷಿಸಿದೆ. ಇದರಿಂದ ಆದಾಯ ಸಂಗ್ರಹದಲ್ಲಿ ಕಡಿಮೆ ಆಗಲಿದ್ದು, ಸರ್ಕಾರವು ಆರ್ಥಿಕ ಸ್ಥಿತಿಯ ವಿಚಾರದಲ್ಲಿ ಒತ್ತಡಕ್ಕೆ ಸಿಲುಕಿಕೊಂಡಿದೆ.

ಊಹಿಸಿದ್ದಕ್ಕಿಂತಲೂ ಹೆಚ್ಚು ಕುಸಿದಿದೆ ಜಿಡಿಪಿ: ಆರ್‌ಬಿಐ ಗೌರ್ನರ್ಊಹಿಸಿದ್ದಕ್ಕಿಂತಲೂ ಹೆಚ್ಚು ಕುಸಿದಿದೆ ಜಿಡಿಪಿ: ಆರ್‌ಬಿಐ ಗೌರ್ನರ್

"ಅಗತ್ಯ ಬಿದ್ದರೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರ್ಕಾರವು ಮಧ್ಯಂತರ ಲಾಭಾಂಶವಾಗಿ 25,000 ರಿಂದ 30,000 ಕೋಟಿ ರುಪಾಯಿಯನ್ನು ಕೇಳಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಜನವರಿ ಆರಂಭದಲ್ಲಿ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

RBI

ಆರ್ ಬಿಐನ ಲಾಭಾಂಶ ಹೊರತುಪಡಿಸಿ ಕೊರತೆ ನೀಗಿಸಲು ಬೇರೆ ಮಾರ್ಗಗಳ ಮೂಲಕ ಹಣ ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ. ಬಂಡವಾಳ ಹಿಂತೆಗೆತ, ನ್ಯಾಷನಲ್ ಸ್ಮಾಲ್ ಸೇವಿಂಗ್ ಫಂಡ್ (ಎನ್ ಎಸ್ ಎಸ್ ಎಫ್)ನಿಂದಲೂ ಹೆಚ್ಚು ಬಳಸಿಕೊಳ್ಳಲು ಚಿಂತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಆರ್ಥಿಕ ವರ್ಷದಲ್ಲಿ ಆರ್ ಬಿಐನಿಂದ ಇಪ್ಪತ್ತೆಂಟು ಸಾವಿರ ಕೋಟಿ ರುಪಾಯಿ ಪಾವತಿಸಿತ್ತು. 2017-18ರಲ್ಲಿ 10,000 ಕೋಟಿ ಮಧ್ಯಂತರ ಲಾಭಾಂಶ ನೀಡಿತ್ತು. ಇನ್ನು ಕಳೆದ ತಿಂಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೆಚ್ಚುವರಿ 1,23,414 ಕೋಟಿ ಹಾಗೂ 2018- 19ರ ಸಾಲಿನ ಹೆಚ್ಚುವರಿ ಮೀಸಲು 52,637 ಕೋಟಿ ಸೇರಿ 1,76,051 ಕೋಟಿ ಸರ್ಕಾರಕ್ಕೆ ವರ್ಗಾವಣೆ ಮಾಡಿತ್ತು.

English summary
Due to finance pressure BJP led union government may seek 30,000 crore interim dividend from RBI, according to sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X