ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ ಎನ್ ಎಲ್- ಎಂಟಿಎನ್ ಎಲ್ ವಿಲೀನಗೊಳಿಸಲು ಸರ್ಕಾರ ನಿರ್ಧಾರ

|
Google Oneindia Kannada News

ನವದೆಹಲಿ, ಅಕ್ಟೋಬರ್ 23: ಈಗಾಗಲೇ ನಷ್ಟದಲ್ಲಿ ಇರುವ ಟೆಲಿಕಾಮ್ ಸಂಸ್ಥೆಗಳಾದ ಎಂಟಿಎನ್ ಎಲ್ ಹಾಗೂ ಬಿಎಸ್ ಎನ್ ಎಲ್ ವಿಲೀನಗೊಳಿಸಲು ಬುಧವಾರ ಸರ್ಕಾರ ನಿರ್ಧಾರ ಮಾಡಿದೆ. ಇವೆರಡು ಸಂಸ್ಥೆಗಳ ಪುನಶ್ಚೇತನದ ಭಾಗವಾಗಿ ಸವರನ್ ಬಾಂಡ್ ಗಳ ಸಂಗ್ರಹ, ಆಸ್ತಿ ಮಾರಾಟ ಹಾಗೂ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ ತರಲು ತೀರ್ಮಾನ ಕೈಗೊಳ್ಳಲಾಗಿದೆ.

ರಾಜೀನಾಮೆ ಕೊಡುವಂತೆ 80,000 ನೌಕರರಿಗೆ BSNL ಸೂಚನೆ ನೀಡುವುದು ನಿಜವೇ?ರಾಜೀನಾಮೆ ಕೊಡುವಂತೆ 80,000 ನೌಕರರಿಗೆ BSNL ಸೂಚನೆ ನೀಡುವುದು ನಿಜವೇ?

ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ತೀರ್ಮಾನಗಳ ಬಗ್ಗೆ ತಿಳಿಸಿದರು. ಈ ಎರಡೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪುನಶ್ಚೇತನಕ್ಕಾಗಿ 29,937 ಕೋಟಿ ರುಪಾಯಿಯನ್ನು ಸರ್ಕಾರ ಹಾಕಲಿದೆ ಎಂದು ರವಿಶಂಕರ್ ಪ್ರಸಾದ್ ಮಾಹಿತಿ ನೀಡಿದರು.

Union Government Decided To Merge MTNL And BSNL

ಮುಂದಿನ ನಾಲ್ಕು ವರ್ಷಗಳಲ್ಲಿ ಆಸ್ತಿ ಮಾರಾಟದ ಮೂಲಕ ಮೂವತ್ತೆಂಟು ಸಾವಿರ ಕೋಟಿ, ಸವರನ್ ಬಾಂಡ್ ಮೂಲಕ ಹದಿನೈದು ಸಾವಿರ ಕೋಟಿ ರುಪಾಯಿ ಸಂಗ್ರಹಿಸುವುದು ಪುನಶ್ಚೇತನದ ಪ್ಯಾಕೇಜ್ ನಲ್ಲಿ ಒಳಗೊಂಡಿದೆ. ವೆಚ್ಚ ಕಡಿತ ಮಾಡುವ ಸಲುವಾಗಿ ಸ್ವಯಂ ನಿವೃತ್ತಿ ಪರಿಚಯಿಸಲಾಗುವುದು. ಬಿಎಸ್ ಎನ್ ಎಲ್- ಎಂಟಿಎನ್ ಎಲ್ ವಿಲೀನಗೊಳಿಸಲಾಗುವುದು. ಬಿಎಸ್ ಎನ್ ಎಲ್ ಗೆ ಸಹವರ್ತಿಯಂತೆ ಎಂಟಿಎನ್ ಎಲ್ ಕಾರ್ಯ ನಿರ್ವಹಿಸಲಿದೆ.

English summary
Union minister Ravishankar Prasad said, central government decided to merge telecom company MTNL and BSNL.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X