ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ವಿಮಾನ ನಿಲ್ದಾಣದ ಹೊಣೆ ಅದಾನಿ ಕೈಗಿತ್ತ ಕೇಂದ್ರ ಸಂಪುಟ

|
Google Oneindia Kannada News

ನವದೆಹಲಿ/ಮಂಗಳೂರು, ಜುಲೈ 04: ದೇಶದ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಅದಾನಿ ಸಂಸ್ಥೆಗೆ ಮಂಗಳೂರು ಸೇರಿದಂತೆ ಮೂರು ವಿಮಾನ ನಿಲ್ದಾಣಗಳ ನಿರ್ವಹಣೆ ಹೊಣೆಯನ್ನು ನೀಡಲು ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದೆ.

ಮುಂದಿನ 50 ವರ್ಷಗಳ ಕಾಲ ಮಂಗಳೂರು, ಅಹಮದಾಬಾದ್ ಹಾಗೂ ಲಕ್ನೋ ವಿಮಾನ ನಿಲ್ದಾಣಗಳನ್ನು ವಿಶ್ವದರ್ಜೆಗೇರಿಸುವುದು ಖಾಸಗಿ ಸಂಸ್ಥೆ ಜವಾಬ್ದಾರಿಯಾಗಿರುತ್ತದೆ. ಈ ಎಲ್ಲಾ ವಿಮಾನ ನಿಲ್ದಾಣಗಳು ಸೇರಿ 20.6 ಮಿಲಿಯನ್ ದೇಶಿ ಹಾಗೂ 5.1 ಮಿಲಿಯನ್ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಏಪ್ರಿಲ್ -ಡಿಸೆಂಬರ್ ಅವಧಿಯಲ್ಲಿ ಕಂಡಿವೆ.

ದೇಶದ ವಿವಿಧ ನಿಲ್ದಾಣಗಳ ನಿರ್ವಹಣೆಗಾಗಿ ಟೆಂಡರ್ ಕರೆಯಲಾಗಿತ್ತು. 6 ವಿಮಾನ ನಿಲ್ದಾಣಗಳ ಪೈಕಿ 6 ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಸಂಸ್ಥೆ ಪಾಲಾಗಿತ್ತು. ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದಲ್ಲಿ ನಿರ್ವಹಣೆ ನಡೆಯಲಿದೆ ಎಂದು ಭಾರತೀಯ ವಿಮಾನ ಪ್ರಾಧಿಕಾರ (ಎಎಐ) ಹೇಳಿದೆ.

6 ವಿಮಾನ ನಿಲ್ದಾಣ ನಿರ್ವಹಣೆ ಗೆದ್ದಿದ್ದ ಅದಾನಿ

6 ವಿಮಾನ ನಿಲ್ದಾಣ ನಿರ್ವಹಣೆ ಗೆದ್ದಿದ್ದ ಅದಾನಿ

ಅಹಮದಾಬಾದ್, ತಿರುವನಂತಪುರಂ, ಲಕ್ನೋ, ಮಂಗಳೂರು ಹಾಗೂ ಜೈಪುರದ ವಿಮಾನ ನಿಲ್ದಾಣಗಳ ನಿರ್ವಹಣೆಗಾಗಿ ಖಾಸಗಿ ಸಂಸ್ಥೆಗಳಿಂದ ಬಿಡ್ ಮಾಡಲಾಗಿತ್ತು. ಅತಿ ಹೆಚ್ಚು ಮೌಲ್ಯದ ಬಿಡ್ಡಿಂಗ್ ಮಾಡಿದ ಅದಾನಿ ಸಂಸ್ಥೆ ಈ ಐದು ವಿಮಾನ ನಿಲ್ದಾಣಗಳ ನಿರ್ವಹಣೆ ಗುತ್ತಿಗೆಯನ್ನು ಸೋಮವಾರ(ಫೆ.25, 2019) ಪಡೆದುಕೊಂಡಿತ್ತು. ನಂತರ ಮರುದಿನ ಗುವಾಹತಿ ವಿಮಾನ ನಿಲ್ದಾಣದ ಟೆಂಡರ್ ಕೂಡಾ ಗೆದ್ದುಕೊಂಡಿತ್ತು.

6 ಎಎಐ ಅಧೀನ ವಿಮಾನನಿಲ್ದಾಣ

6 ಎಎಐ ಅಧೀನ ವಿಮಾನನಿಲ್ದಾಣ

ಪ್ರತಿ ತಿಂಗಳ ಪ್ರಯಾಣಿಕರ ಶುಲ್ಕ ಆಧಾರದ ಮೇಲೆ ಬಿಡ್ಡಿಂಗ್ ವಿಜೇತರನ್ನು ಎಎಐ ಆಯ್ಕೆ ಮಾಡಲಾಗಿತ್ತು.. ಒಟ್ಟಾರೆ, 6 ವಿಮಾನ ನಿಲ್ದಾಣ ನಿರ್ವಹಣೆಗಾಗಿ 10 ಕಂಪನಿಗಳಿಂದ 32 ತಾಂತ್ರಿಕ ಬಿಡ್ಡಿಂಗ್ ಗಳನ್ನು ಸ್ವೀಕರಿಸಲಾಗಿತ್ತು ಎಂದು ಎಎಐ ಅಧಿಕಾರಿಗಳು ಹೇಳಿದ್ದಾರೆ
ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ 6 ಎಎಐ ಅಧೀನ ವಿಮಾನನಿಲ್ದಾಣಗಳನ್ನು ನಿರ್ವಹಣೆಗೆ ವಹಿಸಲು ಕಳೆದ ನವೆಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಕ್ಕಿತ್ತು.

ವಿಶ್ವದರ್ಜೆಯ ಮೂಲ ಸೌಕರ್ಯ ಒದಗಿಸುವುದು

ವಿಶ್ವದರ್ಜೆಯ ಮೂಲ ಸೌಕರ್ಯ ಒದಗಿಸುವುದು

ಅಹಮದಾಬಾದ್ ಹಾಗೂ ಜೈಪುರ ವಿಮಾನ ನಿಲ್ದಾಣಗಳಿಗೆ ತಲಾ 7 ಬಿಡ್, ಲಕ್ನೋ ಹಾಗೂ ಗುವಾಹಟಿ ನಿಲ್ದಾಣಕ್ಕಾಗಿ ತಲಾ 6 ಬಿಡ್ ಗಳು, ಮಂಗಳೂರು ಹಾಗೂ ತಿರುವನಂತಪುಂಗಾಗಿ ತಲಾ ಮೂರು ಬಿಡ್ ಗಳು ಬಂದಿತ್ತು. ವಿಶ್ವದರ್ಜೆಯ ಮೂಲ ಸೌಕರ್ಯ ಒದಗಿಸುವುದು ಹಾಗೂ ದೈನಂದಿನ ನಿರ್ವಹಣೆಯನ್ನು ಈ ಸಂಸ್ಥೆಗಳು ನಡೆಸಲಿವೆ.

ಉಳಿದ ಮೂರು ಏರ್‌ಪೋರ್ಟ್‌ಗಳ ಕಥೆ

ಉಳಿದ ಮೂರು ಏರ್‌ಪೋರ್ಟ್‌ಗಳ ಕಥೆ

ಆರು ವಿಮಾನ ನಿಲ್ದಾಣಗಳನ್ನು ಲೀಸ್ ಆಗಿ ಖಾಸಗಿಯವರಿಗೆ ಒಪ್ಪಿಸಲು ಮುಂದಾಗಿದ್ದ ಕೇಂದ್ರ ಸರ್ಕಾರ ಅದರಲ್ಲಿ ಮಂಗಳೂರು ಸೇರಿ ಮೂರರನ್ನು ಮಾತ್ರವೇ ಅದಾನಿ ಗ್ರೂಪ್‌ಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಅಂತಿಮ ನಿರ್ಧಾರವನ್ನು ಕೈಗೊಂಡಿದೆ.

ಉಳಿದ ಮೂರು ಏರ್‌ಪೋರ್ಟ್‌ಗಳ ಖಾಸಗೀಕರಣಕ್ಕೆ ಆ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಜೈಪುರ, ತಿರುವನಂತಪುರಂ, ಗುವಾಹಟಿ ಈ ಮೂರು ಏರ್‌ಪೋರ್ಟ್‌ಗಳ ಬಗ್ಗೆ ಸದ್ಯಕ್ಕಂತೂ ಕೇಂದ್ರ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಖಾಸಗೀಕರಣ ವಿರೋಧಿಸಿ ಮಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರೂ ಬೆಲೆ ಸಿಕ್ಕಿಲ್ಲ ಎಂಬ ಸುದ್ದಿಯಿದೆ.

English summary
The Union Cabinet on Wednesday gave its approval to the proposals for leasing out three major airports — Ahmedabad, Lucknow and Mangaluru — of Airports Authority of India (AAI) through public-private partnership (PPP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X