ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Union Budget 2021: ಇತಿಹಾಸದಲ್ಲೇ ಮೊದಲ ಬಾರಿ "ಕಾಗದರಹಿತ ಬಜೆಟ್"

|
Google Oneindia Kannada News

2021ರ ಕೇಂದ್ರ ಬಜೆಟ್ ಹಲವು ಕಾರಣಗಳಿಂದಾಗಿ ಈ ಬಾರಿ ಪ್ರಾಮುಖ್ಯ ಪಡೆದುಕೊಂಡಿದೆ. ಸತತ ಒಂದು ವರ್ಷದಿಂದ ಕೊರೊನಾ ಸೋಂಕಿನ ಜೊತೆಗೇ ನಲುಗಿದ, ಈ ಅವಧಿಯಲ್ಲಿ ಆರ್ಥಿಕತೆಯ ಹಲವು ಯೋಜನೆಗಳನ್ನು ತಲೆಕೆಳಗಾಗಿಸಿದ, ಸವಾಲುಗಳನ್ನೇ ಎದುರಿಗಿಟ್ಟ ಸಂದರ್ಭಗಳು ಒದಗಿಬಂದಿವೆ. ಈ ಕಾರಣಗಳಿಗಾಗಿ ಈ ಬಾರಿ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆಗಳೂ ವ್ಯಕ್ತವಾಗಿವೆ.

ಈ ನಿರೀಕ್ಷೆಗಳೊಂದಿಗೆ, ಬಜೆಟ್ ಮಂಡನೆಯ ರೀತಿ ರಿವಾಜುಗಳು ಕೂಡ ಈ ಬಾರಿ ಕೊಂಚ ಭಿನ್ನವಾಗಿರಲಿದೆ. ಇದೇ ಫೆಬ್ರುವರಿ 1ರಂದು ಮಂಡನೆಯಾಗಲಿರುವ ಬಜೆಟ್ ಸಂಪೂರ್ಣ ಕಾಗದರಹಿತವಾಗಿರುವುದಾಗಿ ತಿಳಿದುಬಂದಿದೆ. ಇತಿಹಾಸದಲ್ಲಿಯೇ ಮೊದಲ ಬಾರಿ ಪೇಪರ್ ಇಲ್ಲದೇ ಬಜೆಟ್ ಮಂಡನೆಯಾಗಲಿದ್ದು, ಕೊರೊನಾ ಸೋಂಕು ಈ ಬದಲಾವಣೆಗೆ ಬಹು ಮುಖ್ಯ ಕಾರಣ ಎನ್ನಲಾಗಿದೆ. ಮುಂದೆ ಓದಿ...

Union Budget 2021: 'ಸ್ವಾವಲಂಬಿ' ರಕ್ಷಣಾ ವಲಯದ ನಿರೀಕ್ಷೆಗಳೇನು?Union Budget 2021: 'ಸ್ವಾವಲಂಬಿ' ರಕ್ಷಣಾ ವಲಯದ ನಿರೀಕ್ಷೆಗಳೇನು?

 ಬ್ರೀಫ್ ಕೇಸ್ ಸಂಪ್ರದಾಯ ಮುರಿದಿದ್ದ ನಿರ್ಮಲಾ ಸೀತಾರಾಮನ್

ಬ್ರೀಫ್ ಕೇಸ್ ಸಂಪ್ರದಾಯ ಮುರಿದಿದ್ದ ನಿರ್ಮಲಾ ಸೀತಾರಾಮನ್

2019ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಬ್ರಿಟಿಷರ ಕಾಲದಿಂದ ಅನುಸರಿಸಿಕೊಂಡು ಬಂದಿದ್ದ ಬ್ರೀಫ್ ಕೇಸ್ ಸಂಪ್ರದಾಯ ಮುರಿಯುವ ಮೂಲಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೂತನ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಮೊಟ್ಟ ಮೊದಲ ಬಾರಿಗೆ ಬಜೆಟ್ ದಾಖಲೆಗಳನ್ನು ಬ್ರೀಫ್ ಕೇಸ್ ಬದಲು ಕೆಂಪು ವಸ್ತ್ರದಲ್ಲಿ ತಂದಿದ್ದರು. ಬ್ರಿಟಿಷ್ ಸಂಪ್ರದಾಯವನ್ನು ಮುರಿದು ಭಾರತೀಯ ಪ್ರಾಚೀನ ಶೈಲಿಯಲ್ಲಿ ಕೆಂಪು ವಸ್ತ್ರದಲ್ಲಿ, ಭಾರತದ ಲಾಂಛನದೊಂದಿಗೆ ಬಜೆಟ್​ ಪ್ರತಿಗಳನ್ನು ತಂದಿದ್ದರು. ಈ ನಡೆಗೆ ಎಲ್ಲೆಡೆ ಪ್ರಶಂಸೆಯೂ ವ್ಯಕ್ತವಾಗಿತ್ತು.

"ಪೇಪರ್ ಲೆಸ್ ಬಜೆಟ್"ಗೆ ನಾಂದಿ

ಈ ಬಾರಿ ಬಜೆಟ್ ಅನ್ನು ಸಂಪೂರ್ಣ ಕಾಗದರಹಿತವನ್ನಾಗಿಸಲು ತೀರ್ಮಾನಿಸಿದ್ದು, ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿ ಬಜೆಟ್ ನ ಪ್ರತಿಗಳು ಮುದ್ರಣ ರೂಪದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಇದಕ್ಕಾಗಿ ಕೇಂದ್ರವು ಲೋಕಸಭೆ ಹಾಗೂ ರಾಜ್ಯಸಭೆಗಳಿಂದ ಅನುಮತಿ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ. ಈ ಮೂಲಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೊಂದು ಹೊಸ ಬದಲಾವಣೆಗೆ ಮುನ್ನುಡಿ ಬರೆಯಲಿದ್ದಾರೆ.

 ಈ ತೀರ್ಮಾನದ ಹಿಂದಿನ ಕಾರಣವೇನು?

ಈ ತೀರ್ಮಾನದ ಹಿಂದಿನ ಕಾರಣವೇನು?

ಬಜೆಟ್ ನ ಪ್ರತಿಗಳನ್ನು ಮುದ್ರಣ ರೂಪದಲ್ಲಿ ಪಡೆಯಲು ಹಲವು ಮಂದಿ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ನಿರ್ವಹಿಸಬೇಕಾದ ಅವಶ್ಯಕತೆಯಿದೆ. ಬಜೆಟ್ ಮಂಡನೆಯ ಹದಿನೈದು ದಿನಗಳಿಗೂ ಮುನ್ನವೇ ಮುದ್ರಣ ಕಾರ್ಯ ಆರಂಭಗೊಳ್ಳುತ್ತದೆ. ಬಜೆಟ್ ದಾಖಲೆಗಳನ್ನು ಮುದ್ರಣ ಮಾಡಿ, ಸೀಲ್ ಮಾಡಿ, ಬಜೆಟ್ ದಿನ ಅವುಗಳನ್ನು ಕಳುಹಿಸುವವರೆಗೂ ಸುಮಾರು ನೂರು ಮಂದಿಯನ್ನು ಈ ಮುದ್ರಣಾ ಪ್ರಕ್ರಿಯೆ ಒಳಗೊಳ್ಳುತ್ತದೆ. ಈ ಬಾರಿ ಕೊರೊನಾ ಸೋಂಕಿನ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಬಜೆಟ್ ಪ್ರತಿಗಳನ್ನು ಮುದ್ರಣ ಮಾಡುವ ಬದಲು "ಸಾಫ್ಟ್ ಪ್ರತಿ" ವಿದ್ಯುನ್ಮಾನ ಕಾಗದಗಳನ್ನು ನೀಡಲು ತೀರ್ಮಾನಿಸಲಾಗಿದೆ. ಜೊತೆಗೆ ಕಾಗದದ ಮೂಲಕವೂ ಸೋಂಕು ಹರಡುವ ಸಾಧ್ಯತೆಯಿದ್ದು, ಅದನ್ನು ತಡೆಗಟ್ಟಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

 ಅಧಿವೇಶನದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಈ ಬಾರಿ

ಅಧಿವೇಶನದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಈ ಬಾರಿ "ಸಾಫ್ಟ್ ಪ್ರತಿ"

ಬಜೆಟ್ ನಲ್ಲಿ ಪಾಲ್ಗೊಳ್ಳುವ ಸದಸ್ಯರೆಲ್ಲರಿಗೂ ಈ ಬಾರಿ ಸಚಿವೆ ನಿರ್ಮಲಾ ಬಜೆಟ್ ನ ಸಾಫ್ಟ್‌ ಪ್ರತಿಗಳನ್ನು ನೀಡಲು ತೀರ್ಮಾನಿಸಿದ್ದಾರೆ. ಈ ಮುನ್ನ ಬಜೆಟ್ ಪ್ರತಿಗಳನ್ನು ಹಣಕಾಸು ಸಚಿವಾಲಯದ ಪ್ರಿಂಟಿಂಗ್ ಪ್ರೆಸ್ ನಲ್ಲಿಯೇ ಮುದ್ರಿಸಲಾಗುತ್ತಿತ್ತು. ಇದೀಗ ಕೇಂದ್ರ ಬಜೆಟ್, ಆರ್ಥಿಕ ಸಮೀಕ್ಷೆಯ ಬಜೆಟ್ ಪ್ರತಿಗಳ ಸಾಫ್ಟ್‌ ಪ್ರತಿಗಳನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಜನವರಿ 29ರಿಂದ ಅಧಿವೇಶನ ಆರಂಭ

ಜನವರಿ 29ರಿಂದ ಅಧಿವೇಶನ ಆರಂಭ

ಬಜೆಟ್ ಆರಂಭಕ್ಕೂ ಮುನ್ನ ಸಾಂಪ್ರದಾಯಿಕವಾಗಿ ನಡೆದುಕೊಂಡುಬರುತ್ತಿದ್ದ ಹಲ್ವಾ ಕಾರ್ಯಕ್ರಮವೂ ಈ ಬಾರಿ ನಡೆಯುವುದು ಅನುಮಾನವಿದೆ. ನಡೆದರೂ ಕಡಿಮೆ ಜನರೊಂದಿಗೆ ನಡೆಯಬಹುದು ಎನ್ನಲಾಗಿದೆ. ಈ ಬಾರಿ ಬಜೆಟ್ ಅಧಿವೇಶನವು ಜನವರಿ 29ರಿಂದ ಆರಂಭಗೊಂಡು ಏಪ್ರಿಲ್ 8ರವರೆಗೂ ನಡೆಯಲಿದೆ. ಎರಡು ಭಾಗಗಳಲ್ಲಿ ಅಧಿವೇಶನ ನಡೆಯಲಿದ್ದು, ಮೊದಲು ಜನವರಿ 29ರಿಂದ ಫೆಬ್ರುವರಿ 15ರವರೆಗೆ ಹಾಗೂ ಮಾರ್ಚ್ 8ರಿಂದ ಏಪ್ರಿಲ್ 8ರವರೆಗೂ ಎರಡನೇ ಅಧಿವೇಶನ ನಡೆಯಲಿದೆ. ಫೆಬ್ರುವರಿ 16ರಿಂದ ಮಾರ್ಚ್ 7ರವರೆಗೂ ವಿರಾಮ ಇರಲಿದೆ.

English summary
Union Budget 2021 about to be presented on February 1, is going to be completely paperless for the first time since independence that the budget papers will not be printed,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X