ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಮಿತಿ ಹೆಚ್ಚಳವಿಲ್ಲ, ನಿರ್ಮಲಾ ಹೇಳಿದ ತೆರಿಗೆ ಲೆಕ್ಕವೇನು?

|
Google Oneindia Kannada News

Recommended Video

Union Budget 2020 TAX : ಆದಾಯ ತೆರಿಗೆ ಮಿತಿ ಹೆಚ್ಚಳ ಇಲ್ಲ | Tax | Nirmala Sitharam | Oneindia kannada

ನವದೆಹಲಿ, ಫೆಬ್ರವರಿ 01: ಮೋದಿ ಸರ್ಕಾರ್ 2.0 ಪೂರ್ಣ ಪ್ರಮಾಣದ ಬಜೆಟ್ ಮಂಡನೆ ವೇಳೆ ಮುಂದಿನ ಆರ್ಥಿಕ ವರ್ಷಕ್ಕೆ ಅನುಗುಣವಾಗಿ ಮೂಲ ಆದಾಯ ತೆರಿಗೆ ಮಿತಿಯನ್ನು ಬದಲಾಯಿಸಲು ಮುಂದಾಗುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಆದಾಯ ತೆರಿಗೆ ಪಾವತಿ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 5 ಲಕ್ಷ ರು ತನಕ ವಾರ್ಷಿಕ ಆದಾಯವಿರುವ ಸಂಬಳದಾರರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ.

ಮಧ್ಯಮ ವರ್ಗದ ಕೈಲಿಗೆ ಹೆಚ್ಚಿನ ನಗದು ಸೇರಲಿದ್ದು, ಇದರಿಂದ ವ್ಯಾಪಾರ, ವಹಿವಾಟು, ಖರೀದಿ ಪ್ರಕ್ರಿಯೆಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂಬ ಎಣಿಕೆಯೂ ಸುಳ್ಳಾಗಿದೆ. ಆದಾಯ ತೆರಿಗೆ ಸ್ಲ್ಯಾಬ್ ಪುನರ್ ರಚನೆ ಮಾಡಲಾಗಿದೆ.

Budget 2020 Live: ಆದಾಯ ತೆರಿಗೆ ಪಾವತಿದಾರರಿಗೆ ಭರ್ಜರಿ ಸಿಹಿ ಸುದ್ದಿ

ವೇತನದಾರ ವರ್ಗಗಳ ಬೇಡಿಕೆಯನ್ನು ಪರಿಗಣಿಸಿರುವ ಮೋದಿ ಸರ್ಕಾರ ಹಾಲಿ 5 ಲಕ್ಷ ರುಗಳ ಮಿತಿ ಬದಲಾಗಿ 7 ಲಕ್ಷ ರು ಗಳ ತನಕ ಆದಾಯ ತೆರಿಗೆ ಅಗತ್ಯವಿಲ್ಲ ಎಂಬ ಹೊಸ ಸ್ಲ್ಯಾಬ್ ತರುವ ಸಾಧ್ಯತೆ ಹೆಚ್ಚಿತ್ತು. ಆದರೆ, ತೆರಿಗೆ ಪಾವತಿ ಮೂಲ ಮಿತಿಯಾದ 2.5 ಲಕ್ಷ ರುಗಳನ್ನು ನಿರೀಕ್ಷೆಯಂತೆ ಬದಲಾಯಿಸಿಲ್ಲ.

ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ನಿರೀಕ್ಷೆ ಈಗಾಗಲೇ ಈಡೇರಿದೆ. ವೃತ್ತಿಪರರ ತೆರಿಗೆದಾರ, ಸಣ್ಣ ತೆರಿಗೆದಾರರಿಗೆ ಅನುಕೂಲವಾಗಲು ಆದಾಯ ತೆರಿಗೆ ಇಲಾಖೆಯಿಂದ ಇ -ಸಹಯೋಗ ಯೋಜನೆ ಜಾರಿಗೊಳಿಸಲಿದೆ. ಕಳೆದ ಬಾರಿ ಬಜೆಟ್ ನಲ್ಲಿ ತೆರಿಗೆ ಪಾವತಿ ಮಿತಿ ಏರಿಕೆಯಾಗಿದೆ. ತೆರಿಗೆ ಪಾವತಿ, ಪಾವತಿ ವಿಧಾನ ಮಾತ್ರ ಬದಲಾವಣೆ ಘೋಷಣೆಯಾಗಿದೆ. ಕಾರ್ಪೊರೇಟ್ ತೆರಿಗೆ ಕಡಿತದಿಂದಾಗಿ ಕೇಂದ್ರಕ್ಕೆ 1.45 ಲಕ್ಷ ಕೋಟಿ ರು ಹೊರೆ ಬೀಳಲಿದೆ. ಆರ್ಥಿಕ ಬಿಕ್ಕಟ್ಟು, ಹಿಂಜರಿತ, ಕುಸಿತವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಬಜೆಟ್ 2020: ಗುಣಮಟ್ಟದ ಶಿಕ್ಷಣಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆಬಜೆಟ್ 2020: ಗುಣಮಟ್ಟದ ಶಿಕ್ಷಣಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ

ಕಾರ್ಪೊರೇಟ್ ತೆರಿಗೆಯನ್ನು ಶೇ 15ಕ್ಕೆ ಇಳಿಕೆ ಮಾಡಲಾಗಿದೆ. ಜೊತೆಗೆ ಹಳೆ ಉತ್ಪಾದನಾ ಕಂಪನಿಗಳಿಗೆ ಶೇ 22 ರಷ್ಟು ತೆರಿಗೆ ವಿಧಿಸಲಾಗಿದೆ. ಗೃಹಸಾಲದ ಲಾಭಾಂಶದ ಮೇಲೆ ತೆರಿಗೆ ವಿನಾಯಿತಿ ಮುಂದುವರಿಕೆ, ಒಂದು ವರ್ಷದ ತನಕ ಲಾಭಾಂಶ ತೆರಿಗೆ ಕಟ್ಟುವಂತಿಲ್ಲ.

ಆದಾಯ ತೆರಿಗೆ ಪಾವತಿ ಬಗ್ಗೆ ನೋಟ್ ಮಾಡ್ಕೊಳ್ಳಿ

ಆದಾಯ ತೆರಿಗೆ ಪಾವತಿ ಬಗ್ಗೆ ನೋಟ್ ಮಾಡ್ಕೊಳ್ಳಿ

ಮೂಲ ಆದಾಯ ತೆರಿಗೆ ಮಿತಿ 2.5 ಲಕ್ಷ ರು
5 ಲಕ್ಷ ರು ತನಕ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ.
5 ಲಕ್ಷ ರು ನಿಂದ 7.5 ಲಕ್ಷ ರು ತನಕ ಆದಾಯ ಉಳ್ಳವರಿಗೆ 10% ತೆರಿಗೆ
7.5 ಲಕ್ಷ ರು ನಿಂದ1 0 ಲಕ್ಷ ರು ತನಕ ಆದಾಯ ಉಳ್ಳವರಿಗೆ 15% ತೆರಿಗೆ
10 ಲಕ್ಷ ರು ನಿಂದ 12.5 ಲಕ್ಷ ರು ತನಕ ಆದಾಯ ಉಳ್ಳವರಿಗೆ 20% ತೆರಿಗೆ
12.5 ಲಕ್ಷ ರು ನಿಂದ 15 ಲಕ್ಷ ರು ತನಕ ಆದಾಯ ಉಳ್ಳವರಿಗೆ 25% ತೆರಿಗೆ
15 ಲಕ್ಷ ರು ಮೇಲ್ಪಟ್ಟ ಆದಾಯ ಉಳ್ಳವರಿಗೆ ಶೇ 30 ರಷ್ಟು ತೆರಿಗೆ

ಐಟಿ ರಿಟರ್ನ್ಸ್ ಸರಳ, ಸುಲಭ ವ್ಯವಸ್ಥೆ

ಐಟಿ ರಿಟರ್ನ್ಸ್ ಸರಳ, ಸುಲಭ ವ್ಯವಸ್ಥೆ

* ಆದಾಯ ತೆರಿಗೆ ಪಾವತಿ ಮಾಡಲಿ ಆಧಾರ್, ಪ್ಯಾನ್ ಕಾರ್ಡ್ ಎರಡರಲ್ಲಿ ಒಂದು ಹೊಂದಿದ್ದರೆ ಸಾಕು, ಎರಡು ಕಡ್ಡಾಯ ಎಂಬ ಸಡಿಲಗೊಳಿಸಲಾಗಿದೆ.
* ಐಟಿ ರಿಟರ್ನ್ಸ್ ಎಲ್ಲಾ ವಿಧಾನಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ಕೃತಕ ಬುದ್ಧಿಮತ್ತೆ(AI)ಬಳಸಿಕೊಂಡು ತೆರಿಗೆ ಪಾವತಿ ವ್ಯವಸ್ಥೆಯನ್ನು ಅಧಿಕಾರಿಗಳು ರಹಿತ, ಆನ್ ಲೈನ್ ವ್ಯವಸ್ಥೆಯಾಗಿ ಬದಲಾಯಿಸಲಾಗುತ್ತದೆ.
* ಒಂದು ಬ್ಯಾಂಕಿನ ಒಂದು ಖಾತೆಯಿಂದ ವಾರ್ಷಿಕ 1 ಕೋಟಿ ರು ವಿಥ್ ಡ್ರಾ ಮಾಡಿದರೆ ಶೇ 2ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ.
* ಭವಿಷ್ಯ ನಿಧಿ ಹಾಗೂ ವಿಮೆ ಯಲ್ಲಿ ಹೂಡಿಕೆ ಮಾಡಿದರೆ 6.25 ಲಕ್ಷ ರು ತನಕ ತೆರಿಗೆ ವಿನಾಯಿತಿ ಇರುತ್ತದೆ.
* TDS ಅಡಿಯಲ್ಲಿ ಗೃಹಸಾಲದ ಮಿತಿ 1.5 ಲಕ್ಷರು ನಿಂದ 2 ಲಕ್ಷ ರುಗೆ ಏರಿಕೆ.
* ಸ್ಟಾಡರ್ಡ್ ಡಿಡಕ್ಷನ್ 40 ಸಾವಿರ ರು ನಿಂದ 50 ಸಾವಿರ ರು ಗೆ ಏರಿಕೆ. 2019-20ನೇ ಸಾಲಿನ ಬಜೆಟ್ ನಲ್ಲೂ ಈ ಎಲ್ಲಾ ಅಂಶಗಳನ್ನು ಮುಂದುವರೆಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಭಾರತಕ್ಕೆ 100ಕ್ಕೂ ಅಧಿಕ ಹೊಸ ವಿಮಾನ ನಿಲ್ದಾಣ, ತೇಜಸ್ ರೈಲುಭಾರತಕ್ಕೆ 100ಕ್ಕೂ ಅಧಿಕ ಹೊಸ ವಿಮಾನ ನಿಲ್ದಾಣ, ತೇಜಸ್ ರೈಲು

ಮೂಲ ತೆರಿಗೆ ಪಾವತಿ ಮಿತಿ

ಮೂಲ ತೆರಿಗೆ ಪಾವತಿ ಮಿತಿ

ಮೂಲ ತೆರಿಗೆ ಪಾವತಿ ಮಿತಿ : 5 ಲಕ್ಷ ರು ತನಕ ತೆರಿಗೆ ಪಾವತಿಸುವಂತಿಲ್ಲ, ಇನ್ನೊಂದಿಷ್ಟು ಉಳಿತಾಯ ತೋರಿಸಿದರೆ 9 ಲಕ್ಷ ರು ತನಕ ತೆರಿಗೆ ಕಟ್ಟದೆ ಇರಬಹುದು ಎಂದು ಸಂಬಳದಾರರಿಗೆ ಮೋದಿ ಸರ್ಕಾರ ಸಿಹಿ ಸುದ್ದಿಯನ್ನು ನೀಡಿತ್ತು. ಆದರೆ, ತೆರಿಗೆ ಪಾವತಿ ಮೂಲ ಮಿತಿಯಾದ 2.5 ಲಕ್ಷ ರುಗಳನ್ನು 2014ರಿಂದ ಇಲ್ಲಿ ತನಕ ಬದಲಾಯಿಸಿಲ್ಲ. ಪ್ರಸ್ತುತ ಬಜೆಟ್ ನಲ್ಲಿ ಈ ಮಿತಿಯನ್ನು 3 ಲಕ್ಷ ರುಗಳಿಗೆ ಏರಿಸಲು ಬೇಡಿಕೆ ಬಂದಿತ್ತು. ಆದರೆ, ಈಗಾಗಲೇ ವೈಯಕ್ತಿಕ ಆದಾಯ 5 ಲಕ್ಷರು ತನಕ ಹೊಂದಿರುವವರು ಸೆಕ್ಷನ್ 87ಎ ಅಡಿಯಲ್ಲಿ ಪೂರ್ತಿ ತೆರಿಗೆ ರಿಬೇಟ್ ಪಡೆಯಬಹುದಾಗಿದೆ. ಹೀಗಾಗಿ, ಮೂಲ ಮಿತಿಯನ್ನು ಬದಲಾಯಿಸಿಲ್ಲ.

ಹೆಚ್ಚು ಆದಾಯಯುಳ್ಳವರ ಗಮನಕ್ಕೆ

ಹೆಚ್ಚು ಆದಾಯಯುಳ್ಳವರ ಗಮನಕ್ಕೆ

* ವಾರ್ಷಿಕ 2 ಕೋಟಿ ರು ನಿಂದ 5 ಕೋಟಿ ರು ಆದಾಯ ಹೊಂದಿದವರಿಗೆ ತೆರಿಗೆ ಶೇ 3ರಷ್ಟು ಹೆಚ್ಚಳ.
* ವಾರ್ಷಿಕ 5 ಕೋಟಿ ರುಗೂ ಅಧಿಕ ಆದಾಯ ಹೊಂದಿದವರಿಗೆ ಶೇ 7ರಷ್ಟು ತೆರಿಗೆ

ಪ್ರಧಾನಮಂತ್ರಿ ಕುಸುಮ್ ಯೋಜನೆ ವಿಸ್ತರಣೆ: ರೈತರಿಗೆ ಏನು ಲಾಭ?ಪ್ರಧಾನಮಂತ್ರಿ ಕುಸುಮ್ ಯೋಜನೆ ವಿಸ್ತರಣೆ: ರೈತರಿಗೆ ಏನು ಲಾಭ?

ಎರಡರಿಂದ ಐದು ಕೋಟಿ ಮಧ್ಯೆ ಆದಾಯ ಇರುವವರಿಗೆ ತೆರಿಗೆ ಪ್ರಮಾಣವು 39 ಪರ್ಸೆಂಟ್ ಆಗುತ್ತದೆ. ಇನ್ನು ಆದಾಯವು 5 ಕೋಟಿ ಮೀರಿದರೆ ಸರ್ ಚಾರ್ಜ್ ಏರಿಕೆ ನಂತರ 42.74 ಪರ್ಸೆಂಟ್ ತೆರಿಗೆ ಬೀಳುತ್ತದೆ. ಇನ್ನು ವಾರ್ಷಿಕವಾಗಿ ಬ್ಯಾಂಕ್ ಖಾತೆಯಿಂದ ಎರಡು ಕೋಟಿ ನಗದು ವಿಥ್ ಡ್ರಾ ಮಾಡಿದರೆ ಎರಡು ಪರ್ಸೆಂಟ್ ತೆರಿಗೆ ಬೀಳುತ್ತದೆ.

English summary
Finance Minister Nirmala Sitharaman in her budget proposed no change in Income tax slabs. People with income of Rs 5 lakhs to Rs 7.5 lakhs will have to pay 10% tax instead of existing 20 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X