• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಜೆಟ್ ಬಗ್ಗೆ ಗೊತ್ತಿರಬೇಕಾದ ಕನಿಷ್ಠ ಮಾಹಿತಿಯ ಸರಳ ವಿವರಣೆ

By ಅನಿಲ್ ಆಚಾರ್
|

ಜುಲೈ 5ನೇ ತಾರೀಕು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಅಂದರೆ ಭಾರತ ಸರಕಾರದ ವಾರ್ಷಿಕ ಆರ್ಥಿಕ ವಿವರ. ಅದರಲ್ಲಿ ಆಯಾ ಆರ್ಥಿಕ ವರ್ಷದಲ್ಲಿ ಸರಕಾರ ನಿರೀಕ್ಷೆ ಮಾಡುವ ಆದಾಯ ಹಾಗೂ ವೆಚ್ಚದ ಮಾಹಿತಿ ಇರುತ್ತದೆ.

ಬಹಳ ಸರಳವಾಗಿ ಹೇಳಬೇಕು ಅಂದರೆ, ಸರಕಾರಕ್ಕೆ ಬರಬಹುದಾದ ಅಂದಾಜು ಆದಾಯ ಹಾಗೂ ವೆಚ್ಚವನ್ನು ದೇಶದ ಮುಂದೆ ಇಡುವ ವಿವರವೇ ಬಜೆಟ್. ಈ ರೀತಿ ಬಜೆಟ್ ಮಂಡಿಸುವ ವೇಳೆ ಪದೇ ಪದೇ ಬಳಸುವ ಪದಪುಂಜಗಳು ಕೆಲವನ್ನು ನಿಮ್ಮ ಮುಂದಿಡಬೇಕು ಎಂಬುದು ನಮ್ಮ ಪ್ರಯತ್ನ. ಆದಷ್ಟೂ ಸರಳವಾದ ವಿವರಣೆ ಇಲ್ಲಿದೆ.

ದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್-ಮನಮೋಹನ್ ಸಿಂಗ್ ಭೇಟಿಗೆ ಕಾರಣವೇನು?

ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ (ಜಿಡಿಪಿ)

ಎಲ್ಲ ಉತ್ಪಾದನಾ ವಲಯದಿಂದ ಆರ್ಥಿಕತೆಗೆ ಸೇರ್ಪಡೆ ಆಗುವ ಉತ್ಪನ್ನಗಳ ಒಟ್ಟು ಮೌಲ್ಯ. ಇದನ್ನು ಕೇಂದ್ರ ಸಾಂಖ್ಯಿಕ ಕಚೇರಿಯಿಂದ ಮೌಲ್ಯಮಾಪನ ಮಾಡಲಾಗುತ್ತದೆ.

ವಿತ್ತೀಯ ಕೊರತೆ

ಸರಕಾರವು ತನ್ನ ಆದಾಯ ಹಾಗೂ ಖರ್ಚಿನ ಮಧ್ಯದ ವ್ಯತ್ಯಾಸವನ್ನು ಸರಿದೂಗಿಸುವ ಸಲುವಾಗಿ ಪಡೆಯುವ ಹೆಚ್ಚುವರಿ ಸಾಲ.

ಬಂಡವಾಳ ವೆಚ್ಚ ಹಾಗೂ ಆದಾಯ ವೆಚ್ಚ

ಯಾವ ಖರ್ಚು ಯಾವುದೇ ಆಸ್ತಿಯನ್ನು ಸೃಷ್ಟಿಸುವುದಿಲ್ಲವೋ, ಉದಾಹರಣೆಗೆ ಪ್ರೋತ್ಸಾಹ ಧನ ಹಾಗೂ ಬಡ್ಡಿ ಪಾವತಿ ಇವುಗಳನ್ನು ಆದಾಯ ವೆಚ್ಚ ಎಂದು ಕರೆಯಲಾಗುತ್ತದೆ. ಯಾವ ವೆಚ್ಚವು ಆಸ್ತಿಯನ್ನು ಸೃಷ್ಟಿ ಮಾಡುವುದೋ, ಉದಾಹರಣೆಗೆ ಹೆದ್ದಾರಿ ನಿರ್ಮಾಣ, ಕಟ್ಟಡ ಹಾಗೂ ಅಣೆಕಟ್ಟು ನಿರ್ಮಾಣ ಮತ್ತು ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ನೀಡುವ ಸಾಲವು ಬಂಡವಾಳ ವೆಚ್ಚದ ಅಡಿಯಲ್ಲಿ ಬರುತ್ತದೆ.

ನೇರ ಹಾಗೂ ಪರೋಕ್ಷ ತೆರಿಗೆ

ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ನೇರವಾಗಿ ಪಾವತಿಸುವ ತೆರಿಗೆಗೆ ನೇರ ತೆರಿಗೆ ಎನ್ನುತ್ತಾರೆ. ಉದಾಹರಣೆಗೆ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಮುಂತಾದವು. ಪರೋಕ್ಷ ತೆರಿಗೆಯನ್ನು ಸರಕು ಹಾಗೂ ಸೇವೆಯ ಮೇಲೆ ವಿಧಿಸಲಾಗುತ್ತದೆ. ಸರಕು ಖರೀದಿಸಿದಾಗ ಅಥವಾ ಸೇವೆಯನ್ನು ಪಡೆದಾಗ ಮಾತ್ರ ವಿಧಿಸುವ ತೆರಿಗೆ ಇದು. ಉದಾಹರಣೆಗೆ ಅಬಕಾರಿ ಸುಂಕ ಸೀಮಾ ಸುಂಕ ಮುಂತಾದವು.

ಪಿಂಚಣಿದಾರರಿಗೆ ಶುಭ ಸುದ್ದಿ ನೀಡುವ ಸುಳಿವು ಕೊಟ್ಟ ನಿರ್ಮಲಾ

ಆದಾಯ ಕೊರತೆ

ಆದಾಯ ವೆಚ್ಚ ಹಾಗೂ ಆದಾಯ ರಶೀದಿಯ ಮಧ್ಯದ ವ್ಯತ್ಯಾಸವನ್ನು ಆದಾಯ ಕೊರತೆ ಎನ್ನಲಾಗುತ್ತದೆ. ಸರಕಾರದ ವಿತ್ತೀಯ ಆದಾಯ ಮತ್ತು ವಿತ್ತೀಯ ವೆಚ್ಚದ ಮಧ್ಯದ ವ್ಯತ್ಯಾಸವನ್ನು ಇದು ತೋರಿಸುತ್ತದೆ.

ತೆರಿಗೆ ಆದಾಯ

ಸರಕಾರಕ್ಕೆ ಆದಾಯದ ಪ್ರಾಥಮಿಕ ಮೂಲ ತೆರಿಗೆ. ಸರಕಾರವು ತನ್ನ ಖರ್ಚನ್ನು ಪಾವತಿಸುವುದು ಒಂದೋ ಯಾವುದೇ ವ್ಯಕ್ತಿ ಹಾಗೂ ಸಂಸ್ಥೆಯಿಂದ ಸಂಗ್ರಹಿಸುವ ತೆರಿಗೆಯಿಂದ ಅಥವಾ ಜನರು ಬಳಸುವ ಸರಕು ಹಾಗೂ ಸೇವೆ ಮೇಲೆ ಹಾಕುವ ತೆರಿಗೆಯಿಂದ (ಪರೋಕ್ಷ ತೆರಿಗೆ). ಇದನ್ನು ತೆರಿಗೆ ಆದಾಯ ಎನ್ನಲಾಗುತ್ತದೆ.

ತೆರಿಗೆಯೇತರ ಆದಾಯ

ತೆರಿಗೆಯನ್ನು ಹೊರತುಪಡಿಸಿ ಸರಕಾರಕ್ಕೆ ಬರುವ ಆದಾಯ ಇದು. ಬಡ್ಡಿ ಮೂಲಕ ಪಡೆಯುವ ಆದಾಯ, ತರಂಗಾಂತರ ಹರಾಜು ಹಾಗೂ ಬಂಡವಾಳ ಹಿಂತೆಗೆತದಿಂದ ಬರುವ ಆದಾಯ ಇದರಲ್ಲಿ ಒಳಗೊಂಡಿದೆ.

ಆರ್ಥಿಕ ನೀತಿ

ಆದಾಯ ಹಾಗೂ ವೆಚ್ಚವನ್ನು ಸರಿದೂಗಿಸುವ ಸಲುವಾಗಿ ಸರಕಾರ ತೆಗೆದುಕೊಳ್ಳುವ ಕ್ರಮಗಳಿವು. ಬಜೆಟ್ ಮಂಡನೆ ಮಾಡಿದರೂ ಆರ್ಥಿಕತೆ ಮೇಲೆ ಪ್ರಭಾವ ಬೀರಲು ಆರ್ಥಿಕ ನೀತಿ ಬಹಳ ಮುಖ್ಯ.

ಬಂಡವಾಳ ಬಜೆಟ್

ಬಂಡವಾಳ ಬಜೆಟ್ ನಲ್ಲಿ ಬಂಡವಾಳ ರಶೀದಿ ಹಾಗೂ ಪಾವತಿ ಒಳಗೊಂಡಿರುತ್ತದೆ. ಷೇರುಗಳಲ್ಲಿ ಹೂಡಿಕೆ, ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ, ಸರಕಾರಿ ಸಂಸ್ಥೆಗಳಿಗೆ, ಕಾರ್ಪೊರೇಷನ್ ಮತ್ತು ಇತರ ಸಂಸ್ಥೆ- ವ್ಯಕ್ತಿಗಳಿಗೆ ನೀಡುವ ಮುಂಗಡ, ಸಾಲ ಒಳಗೊಂಡಿರುತ್ತದೆ.

ಆದಾಯ ಬಜೆಟ್

ಸರಕಾರದ ಆದಾಯ ಹಾಗೂ ವೆಚ್ಚ ಇದರಲ್ಲಿ ಒಳಗೊಂಡಿರುತ್ತದೆ. ಆದಾಯವನ್ನು ಎರಡು ವಿಧದಲ್ಲಿ ವಿಭಾಗ ಮಾಡಲಾಗಿದೆ: ತೆರಿಗೆ ಹಾಗೂ ತೆರಿಗೆಯೇತರ ಆದಾಯ. ತೆರಿಗೆ ಆದಾಯದಲ್ಲಿ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಅಬಕಾರಿ, ಸೀಮಾ, ಸೇವಾ ಹಾಗೂ ಇತರ ಸುಂಕಗಳು ಒಳಗೊಂಡಿರುತ್ತವೆ. ತೆರಿಗೆಯೇತರ ಆದಾಯದಲ್ಲಿ ಸಾಲದ ಮೇಲಿನ ಬಡ್ಡಿ, ಹೂಡಿಕೆ ಮೇಲಿನ ಲಾಭಾಂಶ ಒಳಗೊಂಡಿರುತ್ತದೆ.

ಕೇಂದ್ರ ಬಜೆಟ್ ಮಂಡನೆಗೂ ಮುನ್ನ ನೌಕರ ವರ್ಗಕ್ಕೆ ನೆಮ್ಮದಿಯ ಸುದ್ದಿ

ಫೈನಾನ್ಸ್ ಬಿಲ್

ಕೇಂದ್ರ ಬಜೆಟ್ ನಂತರ ಹೊಸದಾಗಿ ತರಲಾದ, ತೆಗೆದು ಹಾಕಲಾದ, ಬದಲಾವಣೆ ಮಾಡಲಾದ ಹಾಗೂ ಪ್ರಸ್ತಾವಿಸಿದ ತೆರಿಗೆ ಬದಲಾವಣೆಯನ್ನು ಮಂಡನೆ ಮಾಡಲಾಗುತ್ತದೆ.

ವೋಟ್ ಆನ್ ಅಕೌಂಟ್

ವೋಟ್ ಆನ್ ಅಕೌಂಟ್ ಅಂದರೆ ಸಂಸತ್ ನಿಂದ ಮುಂಚಿತವಾದ ನೀಡಲಾಗುವ ಅನುದಾನ. ಹೊಸ ಆರ್ಥಿಕ ವರ್ಷದ ಅಂದಾಜು ವೆಚ್ಚದ ಭಾಗವಾಗಿ, ಅನುದಾನಕ್ಕೆ ಸಂಬಂಧಿಸಿದಂತೆ ವೋಟ್ ಆನ್ ಡಿಮ್ಯಾಂಡ್ ನ ಪ್ರಕ್ರಿಯೆ ಪೂರ್ಣಗೊಳಿಸುವ ಸಲುವಾಗಿ ಹಾಗೂ ಅಗತ್ಯ ಕಾಯ್ದೆಯನ್ನು ಅನುಮೋದನೆ ನೀಡಲಾಗುತ್ತದೆ.

ಬಜೆಟ್ ಅಂದಾಜು

ಮುಂಬರುವ ಆರ್ಥಿಕ ವರ್ಷದಲ್ಲಿ ಯಾವುದೇ ಸಚಿವಾಲಯ ಅಥವಾ ಯೋಜನೆಗೆ ಹಂಚಿಕೆ ಆಗುವ ಹಣ.

ಪರಿಷ್ಕೃತ ಅಂದಾಜು

ಸಂಭವನೀಯ ವೆಚ್ಚಗಳನ್ನು ವರ್ಷದ ಮಧ್ಯ ಭಾಗದಲ್ಲಿ ಪರಿಶೀಲನೆ ಮಾಡಲಾಗುತ್ತದೆ. ಬಾಕಿ ಇರುವ ವೆಚ್ಚಗಳನ್ನು, ಹೊಸ ಸೇವೆ ಹಾಗೂ ಸೇವೆ ಪರಿಕರಗಳು ಮುಂತಾದವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಪರಿಷ್ಕೃತ ಅಂದಾಜನ್ನು ಸಂಸತ್ ನಲ್ಲಿ ಮತಕ್ಕೆ ಹಾಕಿರುವುದಿಲ್ಲ. ಆದ್ದರಿಂದ ಇದೊಂದೇ ವೆಚ್ಚಕ್ಕೆ ಅಧಿಕಾರ ನೀಡುವುದಿಲ್ಲ. ಯಾವುದೇ ಹೆಚ್ಚುವರಿ ವೆಚ್ಚವನ್ನು ಪರಿಷ್ಕೃತ ಅಂದಾಜಿನಲ್ಲಿ ಮಾಡಿದರೆ ಅದನ್ನು ಸಂಸತ್ ನಲ್ಲಿ ಇಟ್ಟು ಒಪ್ಪಿಗೆ ಪಡೆಯಬೇಕು ಅಥವಾ ಪುನರ್ ಹೊಂದಾಣಿಕೆ ಆದೇಶ ಪಡೆಯಬೇಕು.

ಹೆಚ್ಚುವರಿ ಅನುದಾನ

ಒಂದು ವೇಳೆ ಒಟ್ಟಾರೆ ವೆಚ್ಚವು ಮೀಸಲಿಟ್ಟ ಮೊತ್ತಕ್ಕಿಂತ ಮೀರಿದಲ್ಲಿ ಸಂವಿಧಾನದ ಪ್ರಕಾರ ಆಗ ಹೆಚ್ಚುವರಿ ಮೊತ್ತಕ್ಕೆ ಸಂಸತ್ ನಿಂದ ಅನುಮೋದನೆ ಪಡೆಯಬೇಕು. ಹೇಗೆ ವಾರ್ಷಿಕ ಬಜೆಟ್ ಗೆ ಅನುಮೋದನೆ ಪಡೆಯಲು ನಿಯಮಾವಳಿ ಇದೆಯೋ ಅದನ್ನು ಪಾಲಿಸಬೇಕು. ಅಗತ್ಯ ಮಸೂದೆಗೆ ಒಪ್ಪಿಗೆ ಪಡೆಯಬೇಕು.

ಮಿನಿಮಮ್ ಆಲ್ಟರ್ ನೇಟಿವ್ ಟ್ಯಾಕ್ಸ್ (ಎಂಎಟಿ)

ಯಾವುದೇ ಕಂಪೆನಿಯ ತೆರಿಗೆ ಮಿತಿಯು ಶೂನ್ಯವಾಗಿದ್ದರೂ ಕನಿಷ್ಠ ಇಂತಿಷ್ಟು ತೆರಿಗೆ ಪಾವತಿಸಬೇಕು. ಅದಕ್ಕೆ ಮಿನಿಮಮ್ ಆಲ್ಟರ್ ನೇಟಿವ್ ಟ್ಯಾಕ್ಸ್ (ಎಂಎಟಿ) ಎನ್ನಲಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union budget 2019 after Lok sabha elections on July 5th. Here is the Important terminology with simple explanation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more