ಜೇಟ್ಲಿ ಬಜೆಟ್ ನಂತರ ತೆರಿಗೆ ಲೆಕ್ಕಾಚಾರ ಮಾಡುವುದು ಹೇಗೆ?
ನವದೆಹಲಿ, ಫೆಬ್ರವರಿ 01: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ 2018-19ನೇ ಸಾಲಿನ ಬಜೆಟ್ ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಂಬಳದಾರರಿಗೆ ಏನು ನೀಡಿದರು? ಸ್ಟಾಂಡರ್ಡ್ ಡಿಡಕ್ಷನ್ ಮತ್ತೆ ಪರಿಚಯಿಸುವ ಮೂಲಕ ಏನೆಲ್ಲ ಗೊಂದಲ ಮೂಡಿದೆ? ಈ ಬಗ್ಗೆ ವಿವರಣೆ ಇಲ್ಲಿದೆ.
ಈ ಬಾರಿ ಬಜೆಟ್ ನಲ್ಲಿ ತೆರಿಗೆ ಪಾವತಿ ಮಿತಿ ಬದಲಾಯಿಸಿಲ್ಲ. ಆದರೆ, ಸ್ಟಾಂಡರ್ಡ್ ಡಿಡಕ್ಷನ್ ಮತ್ತೆ ಪರಿಚಯಿಸಲಾಗಿದೆ. 2005ರ ಬಜೆಟ್ ನಂತರ standard deduction ತೆಗೆದು ಹಾಕಲಾಗಿತ್ತು.
ಸ್ಟಾಂಡರ್ಡ್ ಡಿಡಕ್ಷನ್ ಮಿತಿಯನ್ನು 30 ಸಾವಿರ ರುಪಾಯಿ ಅಥವಾ (ಸಂಬಳದ ಶೇ40 ರಷ್ಟು- 5 ಲಕ್ಷ ರು ಸಂಬಳ ಮಿತಿ ತನಕ)ಯಿಂದ 40 ಸಾವಿರ ರುಪಾಯಿಗೆ ಏರಿಸಲಾಗಿದೆ.
ನಿರಾಶೆ! ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ ಇಲ್ಲ
ಆದರೆ, ಇದರಲ್ಲಿ ಸಾರಿಗೆ ಭತ್ಯೆ 19,200 ಹಾಗೂ ವೈದ್ಯಕೀಯ ಮರುಪಾವತಿ ಭತ್ಯೆ(medical reimbursement) 15,000 ರು ಸೇರಿಸಲಾಗಿಲ್ಲ.
standard deduction ಜಾರಿಗೆ ತಂದ ಬಳಿಕ 5 ಲಕ್ಷ ರು(ತೆರಿಗೆಗೆ ಒಳಪಡುವ) ಹಾಗೂ 15 ಲಕ್ಷ ರು ಆದಾಯಯುಳ್ಳವರಿಗೆ ಎಷ್ಟು ತೆರಿಗೆ ಹೊರೆ ಬೀಳಲಿದೆ. ಎಂಬುದಕ್ಕೆ ಕೆಳಗೆ ಉದಾಹರಣೆ ಇದೆ ನೋಡಿ...
5 ಲಕ್ಷ ತೆರಿಗೆಗೆ ಒಳಪಡುವ ಸಂಬಳವುಳ್ಳವರಿಗೆ (ವಾರ್ಷಿಕ ಲೆಕ್ಕ ಎಲ್ಲವೂ ರುಪಾಯಿಯಂತೆ) | ||
---|---|---|
ಅಂಶಗಳು | ಹಾಲಿ ಲೆಕ್ಕಾಚಾರ | ಬಜೆಟ್ 2018 ನಂತರ |
ಮೂಲ ವೇತನ + ತುಟ್ಟಿಭತ್ಯೆ (ಡಿಎ) | 3,10,533 | 3,10,533 |
Conveyance Allownace (non -taxable) | 19,200 | - |
Medical Reimbursement (non -taxable) | 15,000 | - |
ಇತರೆ ತೆರಿಗೆ ಭತ್ಯೆ | 1,89,467 | 2,23,667 |
ಒಟ್ಟಾರೆ ಸಂಬಳ(Gross Salary) | 5,00,000 | 5,34,200 |
________________________________
Standard
Deduction-
40,000 | ||
---|---|---|
ಮುಖ್ಯ
ಸಂಬಳದಿಂದ
ಆದಾಯ | 5,00,00 | 4,94,200 |
ಆದಾಯ ತೆರಿಗೆ | 12,500 | 12,210 |
87ಎ ಅಡಿಯಲ್ಲಿ ರಿಬೇಟ್ | - | - |
ರಿಬೇಟ್ ನಂತರ ಪಾವತಿಸಬೇಕಾದ ಒಟ್ಟಾರೆ ತೆರಿಗೆ | 12,500 | 12,210 |
ಸರ್
ಚಾರ್ಜ್
10%/15% | - | - |
ಶಿಕ್ಷಣ
ಸೆಸ್
3%/4% | 375 | 488 |
ಸೆಸ್, ಸರ್ ಚಾರ್ಜ್ ಸೇರಿ ಒಟ್ಟಾರೆ ತೆರಿಗೆ | 12,875 | 12,698 |
ತೆರಿಗೆ ಉಳಿತಾಯ | - | 177 |
ತೆರಿಗೆ ಪಾವತಿದಾರರಿಗೆ ಇದು ಅತಿ ಕಡಿಮೆ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿದೆ. |