ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರವ್ ಮೋದಿ ವಿರುದ್ಧ ಹಾಂಗ್ ಕಾಂಗ್ ನಲ್ಲಿ ವಂಚನೆ ಕೇಸ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 28: ಬಹುಕೊಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಆಭರಣ ಉದ್ಯಮಿ ನೀರವ್ ಮೋದಿ ವಿರುದ್ಧ ಹಾಂಕಾಂಗ್ ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಮೋದಿ ಅವರಿಗೆ ಸೇರಿರುವ ಎರಡು ಕಂಪೆನಿಗಳು ಬ್ಯಾಂಕಿಗೆ ಸುಮಾರು 5.49 ಮಿಲಿಯನ್ ಡಾಲರ್(ಸುಮಾರು 40 ಕೋಟಿ.ರೂ.)ಸಾಲವನ್ನು ಮರು ಪಾವತಿಸಿಲ್ಲ ಎಂದು ಆರೋಪಿಸಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ಹಾಂಕಾಂಗ್ ನಲ್ಲಿ ದಾವೆ ಹೂಡಿದೆ.

ಮೋದಿ ಸಹೋದರಿ ಪೂರ್ವಿಗೆ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟೀಸ್ಮೋದಿ ಸಹೋದರಿ ಪೂರ್ವಿಗೆ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟೀಸ್

ಮುಂಬೈ ಮೂಲದ ಉದ್ಯಮಿ ನೀರವ್ ಮೋದಿ ಅವರು ಭಾರತದ ಅತಿದೊಡ್ಡ ಹಣಕಾಸು ಅವ್ಯವಹಾರದ ಪ್ರಮುಖ ಆರೋಪಿಯಾಗಿದ್ದಾರೆ. 2011ರ ಅಕ್ಟೋಬರ್‌ 21ರಂದು ಫೈರ್‌ಸ್ಟೋನ್ ಟ್ರೇಡಿಂಗ್ ಪ್ರೈವೇಟ್ ಹಾಗೂ 2011ರ ನವೆಂಬರ್‌ನಲ್ಲಿ ಫೈರ್‌ಸ್ಟಾರ್ ಡೈಮಂಡ್ ಕಂಪೆನಿಗಳು ಪಡೆದಿರುವ ಸಾಲಗಳಿಗೆ ಗ್ಯಾರಂಟಿ ನೀಡಿದ್ದರು ಎಂದು ಬುಧವಾರದಂದು ಹೈಕೋರ್ಟಿಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಬ್ಯಾಂಕ್ ತಿಳಿಸಿದೆ. ಈ ಬಗ್ಗೆ 'ಸೌತ್ ಚೀನಾ ಮಾರ್ನಿಂಗ್ ಪೋಸ್ಟ್'ವರದಿ ಮಾಡಿದೆ

Union Bank sues Nirav Modi in Hong Kong court over fraud: Report

ಹಾಂಕಾಂಗ್‌ನಿಂದ ನ್ಯೂಯಾರ್ಕ್ ತನಕ ಹಲವು ಆಭರಣದ ಮಳಿಗೆ ಜಾಲವನ್ನು ಹೊಂದಿರುವ ನೀರವ್ ಅವರು, ಯೂನಿಯನ್ ಬ್ಯಾಂಕಿಗೆ ಬಡ್ಡಿ ಸಹಿತ 5.49 ಮಿಲಿಯನ್ ಡಾಲರ್‌ಗೂ ಅಧಿಕ ಬಾಕಿ ಮೊತ್ತ ಪಾವತಿಸಬೇಕಿದೆ.

ನೀರವ್ ಮೋದಿ ಜತೆ ಭೇಟಿ: ರಾಹುಲ್ ಗಾಂಧಿ ವಿರುದ್ಧ ಹೊಸ ಬಾಂಬ್ನೀರವ್ ಮೋದಿ ಜತೆ ಭೇಟಿ: ರಾಹುಲ್ ಗಾಂಧಿ ವಿರುದ್ಧ ಹೊಸ ಬಾಂಬ್

ಸರಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ)ನಲ್ಲಿ 13,400 ಕೋಟಿ ರೂಪಾಯಿ. ಸಾಲ ಬಾಕಿ ಹೊತ್ತುಕೊಕಂಡು ವಿದೇಶಕ್ಕೆ ಪರಾರಿಯಾಗಿರುವ ಮೋದಿ ವಿರುದ್ಧ ಭಾರತದ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.(ಪಿಟಿಐ)

English summary
Union Bank of India has taken fugitive billionaire jeweller Nirav Modi to a court in Hong Kong after two of his companies defaulted on more than USD 5.49 million in credit facilities, according to a media report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X