ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Unforgettable 2020: ಭಾರತದಲ್ಲಿ ನಿಷೇಧಗೊಂಡ ಟಾಪ್ 5 Apps

|
Google Oneindia Kannada News

ಜನಪ್ರಿಯ ವಿಡಿಯೋ ಹಂಚಿಕೆ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ ಮೊಬೈಲ್ ಅಪ್ಲಿಕೇಷನ್ ಗಳ ಬಳಕೆ ನಿಷೇಧಿಸಿ 2020ರ ಜುಲೈನಲ್ಲಿ ಭಾರತ ಸರ್ಕಾರ ಅಧಿಕೃತ ಆದೇಶ ಹೊರಡಿಸಿತು. 2020ರಲ್ಲಿ ನಿಷೇಧಕ್ಕೊಳಗಾದ ಟಾಪ್ 5 ಅಪ್ಲಿಕೇಷನ್ ವಿವರ ಇಲ್ಲಿದೆ

ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷದ ಪರಿಣಾಮದಿಂದ ಚೀನಾ ದೇಶ ಮೂಲದ ಅನೇಕ ಸ್ಮಾರ್ಟ್ ಫೋನ್ ಹಾಗೂ ಮೊಬೈಲ್ ಅಪ್ಲಿಕೇಷನ್ ಗಳನ್ನು ನಿಷೇಧಿಸುವ ಪ್ರಕ್ರಿಯೆ ಮುಂದುವರೆಸಲಾಯಿತು.

ಜೂನ್ 15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆಗಳ ನಡುವೆ ತಾರಕಕ್ಕೇರಿ ಮಾರಕವಾಗಿ ಪರಿಣಮಿಸಿತ್ತು. ಈ ಸಂಘರ್ಷದಲ್ಲಿ 20ಕ್ಕೂ ಅಧಿಕ ಭಾರತೀಯ ಯೋಧರು, 35 ಮಂದಿ ಚೀನಾ ಯೋಧರು ಮೃತಪಟ್ಟಿದ್ದರು. ಚೀನಿ ಆಪ್ ಬಳಸಿದರೆ ನಿಮ್ಮ ಖಾಸಗಿ ಮಾಹಿತಿ, ಸುರಕ್ಷತೆ, ಭದ್ರತೆಗೆ ಖಂಡಿತ ಒಂದಲ್ಲ ಒಂದು ರೀತಿಯಲ್ಲಿ ಅಪಾಯ ಒದಗುತ್ತದೆ ಎಂದು ಭಾರತೀಯ ಇಂಟೆಲಿಜೆನ್ಸ್ ಏಜೆನ್ಸಿ ಎಚ್ಚರಿಸಿತ್ತು.

ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ 2000 ಪ್ಯಾರಾ 1, 2 ಅನ್ವಯ ಈ ಕೆಳಕಂಡ ಆಪ್ ಗಳನ್ನು ಗೂಗಲ್ ಪ್ಲೇಸ್ಟೋರ್ ಹಾಗೂ ಆಪಲ್ ವೇದಿಕೆಯಲ್ಲಿ ನಿರ್ಬಂಧಿಸಲು ಸರ್ಕಾರ ಸೂಚಿಸಿತ್ತು.

ಆಪ್ ಮೇಲೆ ಕ್ರಮ ಏಕೆ?

ಆಪ್ ಮೇಲೆ ಕ್ರಮ ಏಕೆ?

'ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ದೇಶದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಹಾನಿ ಮಾಡುವಂತಹ ಚಟುವಟಿಕೆಗಳಲ್ಲಿ ಈ ಆಪ್‌ಗಳು ತೊಡಗಿಕೊಂಡಿದ್ದವು ಎಂಬ ಮಾಹಿತಿಗಳ ಆಧಾರದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ' ಎಂದು ಕೇಂದ್ರ ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿ 43 ಚೀನಿ ಆಪ್‌ಗಳನ್ನು ಭಾರತೀಯ ಬಳಕೆದಾರರು ಬಳಸದಂತೆ ನಿರ್ಬಂಧಿಸಿ ಕೇಂದ್ರ ಸರ್ಕಾರ ಆದೇಶಿಸಿತ್ತು. ನಂತರ ಸೆಪ್ಟೆಂಬರ್ ನಲ್ಲಿ 59, ನವೆಂಬರ್ ನಲ್ಲಿ 118 ಆಪ್ ಮೇಲೆ ನಿಷೇಧ ಹೇರಲಾಯಿತು.

ಭಾರತ ಮೂಲದ ಬಳಕೆದಾರರು ಈ ಆಪ್‌ಗಳನ್ನು ಬಳಕೆ ಮಾಡಲು ಸಾಧ್ಯವಾಗದಂತೆ ಬ್ಲಾಕ್ ಮಾಡಿ ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಸಚಿವಾಲಯ ಆದೇಶ ಹೊರಡಿಸಿತ್ತು.

ಟಿಕ್ ಟಾಕ್

ಟಿಕ್ ಟಾಕ್

ಚೀನಾ ಮೂಲದ ಬೈಟ್ ಡ್ಯಾನ್ಸ್ ಸಂಸ್ಥೆ ಹೊರ ತಂಡ ಟಿಕ್ ಟಾಕ್ ಎಂಬ ಕಡಿಮೆ ಅವಧಿ ವಿಡಿಯೋ ಹಂಚಿಕೆ ವೇದಿಕೆ ಅತ್ಯಂತ ಜನಪ್ರಿಯಗೊಂಡಿತ್ತು. ಕೇವಲ 10-15 ಸೆಕೆಂಡುಗಳಾ ವಿಡಿಯೋ ಹಲವರಿಗೆ ಸೆಲೆಬ್ರಿಟಿ ಪಟ್ಟ ತಂದುಕೊಟ್ಟಿತ್ತು. ಏಪ್ರಿಲ್ 2020ರಲ್ಲಿ ಸುಮಾರು 120 ಮಿಲಿಯನ್ ಬಳಕೆದಾರರನ್ನು ಹೊಂದಿದ್ದಾಗಿ ಬೈಟ್ ಡ್ಯಾನ್ಸ್ ಘೋಷಿಸಿತ್ತು. ಆದರೆ, ನಿಷೇಧದ ಬಳಿಕ ಕೋಟ್ಯಂತರ ರುಪಾಯಿ ನಷ್ಟ ಅನುಭವಿಸಿದೆ.

ಪಬ್ಜಿ PUBG

ಪಬ್ಜಿ PUBG

ಚೀನಾದ ಮೊಬೈಲ್ ಗೇಮ್ ಅಪ್ಲಿಕೇಷನ್ ಎಂಬ ಸುದ್ದಿ ಜೊತೆಗೆ ಭಾರತದಲ್ಲಿ ಅತ್ಯಂತ ಜನಪ್ರಿಯವಾದ PlayerUnknown's Battlegrounds (PUBG). ಭಾರತದಲ್ಲಿಈ ಅಪ್ಲಿಕೇಶನ್ 175 ದಶಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿತ್ತು. ದಕ್ಷಿಣ ಕೊರಿಯಾದ ವಿಡಿಯೋ ಗೇಮ್ ಕಂಪನಿಯು ಬ್ಲೂಹೋಲ್ ಅಭಿವೃದ್ದಿ ಪಡಿಸಿದ ಪಬ್‌ಜಿ ಎಂಬ ಜನಪ್ರಿಯ ಆಟದ ಮೇಲೆ ಟೆನ್ಸೆಂಟ್ ಸಂಸ್ಥೆ ಸಾಕಷ್ಟು ಪಾಲನ್ನು ಹೊಂದಿದೆ. ಭದ್ರತಾ ನಿಯಮ ಪಾಲಿಸಿ ಹೊಸ ಆವೃತ್ತಿ ಪಬ್ಜಿ ಬಿಡುಗಡೆ ಬಗ್ಗೆ ಸುದ್ದಿ ಬಂದಿದೆ.

ವೀಚಾಟ್

ವೀಚಾಟ್

ಚೀನಾ ತಂತ್ರಜ್ಞಾನ ದಿಗ್ಗಜ ಟೆನ್ ಸೆಂಟ್ ಸಂಸ್ಥೆಯ ಮತ್ತೊಂದು ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವೀ ಚಾಟ್ ಕೂಡಾ ನಿಷೇಧಕ್ಕೊಳಗಾಗಿದೆ. ಫೇಸ್ಬುಕ್ ಒಡೆತನದ ವಾಟ್ಸಾಪ್ ಅಪ್ಲಿಕೇಷನ್ ಗೆ ಪ್ರತಿಸ್ಪರ್ಧೆ ನೀಡಲು ಬಂದ ವೀಚಾಟ್ ಜನಪ್ರಿಯತೆ ನಿಧಾನಗತಿಯಲ್ಲಿ ಏರಿಕೆ ಕಂಡರೂ ವಾಟ್ಸಾಪ್ ಮೀರಸಲು ಸಾಧ್ಯವಾಗಿರಲಿಲ್ಲ. ಆದರೆ, ನಗರವಾಸಿಗಳಲ್ಲಿ ಅನೇಕರು ಹೊಸ ಚಾಟಿಂಗ್ ಆಪ್ ಹೆಚ್ಚಾಗಿ ಬಳಸುತ್ತಿದ್ದರು.

ಹಲೋ ಆಪ್

ಹಲೋ ಆಪ್

ಅತ್ಯಂತ ವೇಗವಾಗಿ ಜನಪ್ರಿಯತೆ ಗಳಿಸಿಕೊಂಡ ಹಲೋ(Helo) ಅಪ್ ಭಾರತದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿತ್ತು. 2018ರಲ್ಲಿ ಮಾರುಕಟ್ಟೆಗೆ ಚೀನಾದ ಬೈಟ್ ಡ್ಯಾನ್ಸ್ ಈ ಅಪ್ಲಿಕೇಷನ್ ನನ್ನು ಪರಿಚಯಿಸಿತ್ತು. ಭಾರತದಲ್ಲಿ ಸುಮಾರು 50 ಮಿಲಿಯನ್ ಬಳಕೆದಾರರನ್ನು ಪಡೆದುಕೊಂಡಿತ್ತು. ಗೂಗಲ್ ಪ್ಲೇ ಸ್ಟೋರಿನಲ್ಲಿ 100 ಮಿಲಿಯನ್ ಗೂ ಅಧಿಕ ಡೌನ ಲೋಡ್ ಪಡೆದುಕೊಂಡಿತ್ತು.

ಷೇರ್ ಚಾಟ್ ಸೇರಿದಂತೆ ಹಲವು ಅಪ್ಲಿಕೇಷನ್ ಜೊತೆ ಪ್ರತಿಸ್ಪರ್ಧೆಯಲ್ಲಿ ಗೆದ್ದುಕೊಂಡಿತ್ತು. ಮುಖ್ಯವಾಗಿ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ಮಾಹಿತಿ ಹಾಗೂ ಮನರಂಜನೆ ಪೋಸ್ಟ್ ಗಳ ಮೂಲಕ ಬಳಕೆದಾರರನ್ನು ಸೆಳೆದಿತ್ತು.

ಯುಸಿ ಬ್ರೌಸರ್

ಯುಸಿ ಬ್ರೌಸರ್

ಆಲಿಬಾಬಾ ಡಿಜಿಟಲ್ ಮೀಡಿಯಾ ಹಾಗೂ ಎಂಟರ್ ಟೈನ್ಮೆಂಟ್ ಸಮೂಹ ಸಂಸ್ಥೆ ಹೊರತಂದ ಯುಸಿ ಬ್ರೌಸರ್ ಅತ್ಯಂತ ಜನಪ್ರಿಯ ಮೊಬೈಲ್ ಬ್ರೌಸರ್ ಎನಿಸಿಕೊಂಡಿತ್ತು. ಯುಸಿ ವೆಬ್ ಸಂಸ್ಥೆ ಕಾರ್ಯ ನಿರ್ವಹಣೆಯ ಈ ಬ್ರೌಸರ್ ಮೂಲಕ ಅಲಿಬಾಬಾ ಸಂಸ್ಥೆಯ ಮೊಬಲ್ ಆಪ್, ವರ್ಕ್ ಬೆಂಚ್, ಅಲಿ ಎಕ್ಸ್ ಪ್ರೆಸ್ ಮುಂತಾದ ಅನೇಕ ಸೌಲಭ್ಯಗಳು ಲಭ್ಯವಾಗುತ್ತಿತ್ತು.

English summary
Unforgettable 2020: Government of India banned which which are prejudicial to sovereignty and integrity of India, defence of India. Here the list of Top 5 apps banned in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X