ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಸ್ತಿದಾರ ಮಲ್ಯರನ್ನು ಕಳ್ಳ ಎನ್ನುವುದು ಸರಿಯಲ್ಲ : ಗಡ್ಕರಿ

|
Google Oneindia Kannada News

Recommended Video

ಮಲ್ಯರನ್ನು ಕಳ್ಳ ಎನ್ನುವುದು ಸರಿಯಲ್ಲ..! | Oneindia Kannada

ಮುಂಬೈ, ಡಿಸೆಂಬರ್ 14: ಭಾರತದ ಹತ್ತಾರು ಬ್ಯಾಂಕುಗಳಿಂದ ಸಾವಿರಾರು ಕೋಟಿ ಸಾಲ ಮಾಡಿಕೊಂಡು ದೇಶ ತೊರೆದಿರುವ ವಿಜಯ್ ಮಲ್ಯ ಅವರ ಪರ ಕೇಂದ್ರ ಸಚಿವ ನಿತಿನ್ ಗಡ್ಕರಿ ಬ್ಯಾಟಿಂಗ್ ಮಾಡಿದ್ದಾರೆ. ಉದ್ದೇಶಪೂರ್ವಕ ಸುಸ್ತಿದಾರ ಮಲ್ಯರನ್ನು ಕಳ್ಳ ಎಂದು ಕರೆಯುವುದು ಸರಿಯಲ್ಲ ಎಂದಿದ್ದಾರೆ.

ಗಡಿಪಾರು ಆದೇಶ ಬಂದರೂ ಮಲ್ಯ ಭಾರತಕ್ಕೆ ಸದ್ಯಕ್ಕಂತೂ ಬರಲ್ಲ! ಗಡಿಪಾರು ಆದೇಶ ಬಂದರೂ ಮಲ್ಯ ಭಾರತಕ್ಕೆ ಸದ್ಯಕ್ಕಂತೂ ಬರಲ್ಲ!

ನಾಲ್ಕು ದಶಕಗಳಿಂದ ಕಾಲಕಾಲಕ್ಕೆ ಸಾಲ ಹಿಂತಿರುಗಿಸುತ್ತಿದ್ದ ವ್ಯಕ್ತಿಯನ್ನು ಈಗ ಒಂದು ಸಾಲದಿಂದ ಸುಸ್ತಿದಾರ ಕೂಡಲೇ ಕಳ್ಳ ಎಂಬಂತೆ ಬಿಂಬಿಸುವುದು ಸರಿಯಲ್ಲ. ನಾನೇನು ವಿಜಯ್ ಮಲ್ಯ ಅವರ ಪರ ಮಾತನಾಡುತ್ತಿಲ್ಲ, ನಾನು ಅವರೊಂದಿಗೆ ಯಾವುದೇ ವ್ಯವಹಾರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಉದ್ಯಮಿ ವಿಜಯ್ ಮಲ್ಯ ಗಡಿಪಾರಿಗೆ ಯುಕೆ ಜಡ್ಜ್ ಆದೇಶ ಉದ್ಯಮಿ ವಿಜಯ್ ಮಲ್ಯ ಗಡಿಪಾರಿಗೆ ಯುಕೆ ಜಡ್ಜ್ ಆದೇಶ

Unfair To Call Vijay Mallya Thief For One Loan Default: Nitin Gadkari

'40 ವರ್ಷಗಳ ಕಾಲ ಮಲ್ಯ ಅವರು ಸಾಲಕ್ಕೆ ಬಡ್ಡಿ, ಅಸಲು ತೀರಿಸುತ್ತಾ ಬಂದಿದ್ದಾರೆ. ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ವ್ಯಾಪಾರ, ವ್ಯವಹಾರದಲ್ಲಿ ನಷ್ಟ ಸಾಮಾನ್ಯ, ಇದಕ್ಕಾಗಿ ಅವರನ್ನು ಕಳ್ಳ ಎಂದು ಕರೆಯುವುದು ಸರಿಯಲ್ಲ. 50 ವರ್ಷಗಳ ಬಳಿಕ ಸಾಲದ ಅಸಲನ್ನು ವಾಪಸ್ ಮಾಡಿದರೆ ಆಗ ಏನೆಂದು ಕರೆಯುತ್ತೀರಿ, ಸಾಲಗಾರರನ್ನು ನೋಡುವ ಮನಸ್ಥಿತಿ ಬದಲಾಗಬೇಕು ಎಂದುಟೈಮ್ಸ್ ಗ್ರೂಪ್ ನ ಆರ್ಥಿಕ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ನೀರವ್ ಮೋದಿ ಅಥವಾ ವಿಜಯ್ ಮಲ್ಯಜಿ ಅವರು ಆರ್ಥಿಕ ಅಪರಾಧ ಮಾಡಿದ್ದರೆ ಅವರನ್ನು ಜೈಲಿಗೆ ಕಳಿಸಿ, ಸಾಲಗಾರರನ್ನು ವಂಚಕರಂತೆ ಬಿಂಬಿಸಿದರೆ ನಮ್ಮ ಆರ್ಥಿಕ ಪ್ರಗತಿ ಕಾಣಲು ಸಾಧ್ಯವಿಲ್ಲ ಎಂದಿದ್ದಾರೆ.

ಯಾರಾದರೂ ಹುಷಾರಿಲ್ಲದೆ ಸೀರಿಯಸ್ ಆಗಿದ್ದರೆ, ಅವರನ್ನು ಐಸಿಯುನಲ್ಲಿ ದಾಖಲು ಮಾಡುತ್ತೇವೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇಂಥ ಕಂಪನಿಯನ್ನು ಐಸಿಯುನಲ್ಲಿಟ್ಟು ನಂತರ ಅವನತಿಯನ್ನು ಕಾಣಲು ಬಿಡುತ್ತೇವೆ ಎಂದರು.

ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಆರ್ಥಿಕ ಅಪರಾಧಿಯಾಗಿರುವ ಮಲ್ಯರನ್ನು ಯುಕೆಯಿಂದ ಭಾರತಕ್ಕೆ ಹಸ್ತಾಂತರಿಸುವಂತೆ ಯುಕೆ ಕೋರ್ಟ್ ನಿರ್ದೇಶಿಸಿದೆ.

English summary
Union Minister Nitin Gadkari on Thursday suggested that it is unfair to tag a "one-time loan defaulter Vijay Mallyaji" as a "chor" (thief), adding that the embattled businessman has a four-decade-long track record of timely debt servicing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X