• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ನಿರುದ್ಯೋಗ ದರ ಜೂನ್‌ನಲ್ಲಿ ಶೇಕಡಾ 10.99ಕ್ಕೆ ಇಳಿಕೆ

|
Google Oneindia Kannada News

ನವದೆಹಲಿ, ಜುಲೈ 01: ಕೊರೊನಾವೈರಸ್ ಲಾಕ್‌ಡೌನ್‌ದಿಂದಾಗಿ ಕೋಟ್ಯಾಂತರ ಸಂಖ್ಯೆಯಲ್ಲಿ ಜನರು ಉದ್ಯೋಗ ಕಳೆದುಕೊಂಡಿದ್ದರು. ಆದರ್ ಅನ್‌ಲಾಕ್‌ ಆದ ನಂತರದ ದಿನಗಳಲ್ಲಿ ನಿರುದ್ಯೋಗ ದರ ಕಡಿತವಾಗಿದ್ದು, ಮೇ ತಿಂಗಳಿನ ಶೇಕಡಾ 23.48ಕ್ಕೆ ಹೋಲಿಸಿದರೆ ಜೂನ್ ತಿಂಗಳಿನಲ್ಲಿ ಶೇಕಡಾ 10.99ಕ್ಕೆ ಇಳಿದಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ) ಹೇಳಿದೆ.

   Patanjali,ಕೊರೊನಾಗೆ ಪತಂಜಲಿಯ ಆಯುರ್ವೇದ ಮದ್ದು , ಕೈ ಎತ್ತಿದ ಬಾಬಾ ರಾಮ್‌ದೇವ್ | Oneindia Kannada

   ಲಾಕ್‌ಡೌನ್ ಸಡಿಲಿಕೆ ಬಳಿಕ ನಿರುದ್ಯೋಗ ಪ್ರಮಾಣ ದರ ಇಳಿಕೆಯಾಗುತ್ತಿದೆ ಎಂದು ಹೇಳಿರುವ ಸಿಎಮ್‌ಐಇ, ನಗರ ಪ್ರದೇಶಗಳಲ್ಲಿ ಶೇಕಡಾ 12.02ರಷ್ಟು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 10.52ರಷ್ಟಿದೆ ಎಂದು ಹೇಳಿದೆ.

   2018-19ರ ಅವಧಿಯಲ್ಲಿ ನಿರುದ್ಯೋಗ ದರ 5.8% ಇಳಿಕೆ: ಲಾಕ್‌ಡೌನ್ ಬಳಿಕ ಏರಿಕೆ2018-19ರ ಅವಧಿಯಲ್ಲಿ ನಿರುದ್ಯೋಗ ದರ 5.8% ಇಳಿಕೆ: ಲಾಕ್‌ಡೌನ್ ಬಳಿಕ ಏರಿಕೆ

   ಹರಿಯಾಣದಲ್ಲಿ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ

   ಹರಿಯಾಣದಲ್ಲಿ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ

   ಹರಿಯಾಣದಲ್ಲಿ ಅತಿ ಹೆಚ್ಚು ನಿರುದ್ಯೋಗ ದರ ಶೇ. 33.6 ರಷ್ಟಿದ್ದರೆ, ತ್ರಿಪುರ 21.3 ಮತ್ತು ಜಾರ್ಖಂಡ್‌ನಲ್ಲಿ ಶೇ. 21 ರಷ್ಟಿದೆ.

   ಜೂನ್‌ನಲ್ಲಿ ದೇಶದ ಉದ್ಯೋಗಿಗಳ ಸಂಖ್ಯೆ 37.3 ಕೋಟಿ

   ಜೂನ್‌ನಲ್ಲಿ ದೇಶದ ಉದ್ಯೋಗಿಗಳ ಸಂಖ್ಯೆ 37.3 ಕೋಟಿ

   ಸಿಎಮ್‌ಐಇ ಅಂಕಿಅಂಶಗಳ ಪ್ರಕಾರ ಜೂನ್‌ನಲ್ಲಿ ದೇಶದಲ್ಲಿ ಉದ್ಯೋಗಿಗಳ ಸಂಖ್ಯೆ 37.3 ಕೋಟಿ ಆಗಿದ್ದರೆ, ಉದ್ಯೋಗವನ್ನು ಹುಡುಕುವವರು 46.1 ಕೋಟಿಯಷ್ಟಿದ್ದರು ಎಂದಿದೆ. ಅಲ್ಲದೆ ಜೂನ್‌ನಲ್ಲಿ ದೇಶದ ಉದ್ಯೋಗ ದರ ಶೇ. 35.9 ರಷ್ಟಿದೆ.

   ಕೊರೊನಾ ಪರಿಣಾಮ: ಹಲವು ರಾಜ್ಯಗಳಲ್ಲಿ ನಿರುದ್ಯೋಗ ಪ್ರಮಾಣ ಏರಿಕೆಕೊರೊನಾ ಪರಿಣಾಮ: ಹಲವು ರಾಜ್ಯಗಳಲ್ಲಿ ನಿರುದ್ಯೋಗ ಪ್ರಮಾಣ ಏರಿಕೆ

   ಲಾಕ್‌ಡೌನ್‌ ಬಳಿಕೆ ಭಾರೀ ಏರಿಕೆ ಕಂಡಿದ್ದ ನಿರುದ್ಯೋಗ ಪ್ರಮಾಣ

   ಲಾಕ್‌ಡೌನ್‌ ಬಳಿಕೆ ಭಾರೀ ಏರಿಕೆ ಕಂಡಿದ್ದ ನಿರುದ್ಯೋಗ ಪ್ರಮಾಣ

   ಮಾರ್ಚ್ 25 ರಂದು ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದ ನಂತರ ಭಾರತದ ನಿರುದ್ಯೋಗ ದರವು ಜನವರಿಯಿಂದ ಶೇಕಡಾ 25.52 ರಷ್ಟಿದೆ ಎಂದು ದಾಖಲಿಸಲಾಗಿದೆ. ಮುಂದುವರಿದ ತಿಂಗಳಲ್ಲಿ ನಿರುದ್ಯೋಗ ದರವು ಶೇಕಡಾ 23.48 ರಷ್ಟಿತ್ತು. ಸಿಎಂಐಇ ಅಂಕಿಅಂಶಗಳ ಪ್ರಕಾರ, ಏಪ್ರಿಲ್‌ನಲ್ಲಿ ಸುಮಾರು 12.2 ಕೋಟಿ ಉದ್ಯೋಗಗಳು ನಷ್ಟವಾಗಿದೆ.

   ಮಾರ್ಚ್‌ನಲ್ಲಿ ಉದ್ಯೋಗ ದರವು ಶೇಕಡಾ 8.75 ರಷ್ಟಿದ್ದರೆ, ಅದು ಜನವರಿ ಮತ್ತು ಫೆಬ್ರವರಿಯಲ್ಲಿ ಶೇಕಡಾ 7.22 ಮತ್ತು ಶೇಕಡಾ 7.76 ರಷ್ಟಿದೆ.

   ಮನ್ರೇಗಾ ಯೋಜನೆಯಿಂದ ನಿರುದ್ಯೋಗ ದರ ಇಳಿಕೆ..?

   ಮನ್ರೇಗಾ ಯೋಜನೆಯಿಂದ ನಿರುದ್ಯೋಗ ದರ ಇಳಿಕೆ..?

   ಸಿಎಮ್ಐಇ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹೇಶ್ ವ್ಯಾಸ್ ಪ್ರಕಾರ "ನಿರುದ್ಯೋಗ ದರವು ಕುಸಿದಿದೆ ಮತ್ತು ಏಕಕಾಲದಲ್ಲಿ, ಭಾಗವಹಿಸುವಿಕೆಯ ಪ್ರಮಾಣವು ಪೂರ್ವ-ಲಾಕ್‌ಡೌನ್ ಅವಧಿಗೆ ಚೇತರಿಸಿಕೊಂಡಿದೆ" ಎಂದು ಹೇಳಿದ್ದಾರೆ.

   ಗ್ರಾಮೀಣ ಭಾರತದಾದ್ಯಂತ ನಿರುದ್ಯೋಗ ದರದಲ್ಲಿ ಸುಧಾರಣೆಯ ಹಿಂದಿನ ಕಾರಣವನ್ನು ಸರ್ಕಾರವು ಮನ್ರೇಗಾ(MGNREGA) ಖರ್ಚು ಹೆಚ್ಚಳ ಮತ್ತು ಖಾರಿಫ್ ಬಿತ್ತನೆಯ ಹೆಚ್ಚಳದಿಂದ ವಿವರಿಸಬಹುದು ಎಂದು ಅವರು ಹೇಳಿದರು.

   ಮನ್ರೇಗಾ ಯೋಜನೆಯ ಖರ್ಚು ಹೆಚ್ಚಳದಿಂದಾಗಿ ಗ್ರಾಮೀಣ ಭಾಗದಲ್ಲಿ ಉದ್ಯೋಗದ ಪ್ರಮಾಣ ಉಲ್ಬಣಗೊಂಡಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

   English summary
   Unemployment rate fell significantly to 10.99 per cent compared to 23.48 per cent in May, showing signs of improvement in the job scenario in the country :CMIE
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X