ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರುದ್ಯೋಗ ದರ ಡಿಸೆಂಬರ್‌ನಲ್ಲಿ ಇನ್ನಷ್ಟು ಹೆಚ್ಚಳ: ಶೇ.7.9ಕ್ಕೆ ಏರಿಕೆ

|
Google Oneindia Kannada News

ನವದೆಹಲಿ, ಜನವರಿ 03: ಸೆಂಟ್ರಲ್‌ ಫಾರ್‌ ಮೊನಿಟರಿಂಗ್‌ ಇಂಡಿಯಾ ಇಕಾನಮಿ (ಸಿಎಂಐಇ) ನೂತನ ಡೇಟಾವು ದೇಶದಲ್ಲಿ ನಿರುದ್ಯೋಗ ಪ್ರಮಾಣದ ಹೆಚ್ಚಳವನ್ನು ತೋರಿಸುತ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ ನೋಡಿದಾಗ ಡಿಸೆಂಬರ್‌ನಲ್ಲಿ ನಿರುದ್ಯೋಗ ದರವು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಂದರೆ ಡಿಸೆಂಬರ್‌ನಲ್ಲಿ ದೇಶದಲ್ಲಿ ನಿರುದ್ಯೋಗ ದರವು 7.9ಕ್ಕೆ ಏರಿಕೆ ಕಂಡಿದೆ.

ಇನ್ನು ನಗರದ ಉದ್ಯೋಗ ದರವು ನವೆಂಬರ್‌ 2021ರಲ್ಲಿ ಶೇಕಡ 8.21 ಇತ್ತು. ಆದರೆ ಡಿಸೆಂಬರ್‌ 2021ರಲ್ಲಿ ನಗರ ಭಾಗದಲ್ಲಿ ನಿರುದ್ಯೋಗ ದರವು ಶೇಕಡ 9.3ಕ್ಕೆ ಏರಿಕೆ ಕಂಡಿದೆ. ಇನ್ನು ಗ್ರಾಮೀಣ ಭಾಗದಲ್ಲಿನ ನಿರುದ್ಯೋಗ ದರವು ಕೂಡಾ ಏರಿಕೆ ಕಂಡಿದೆ. ನವೆಂಬರ್‌ 2021ರಲ್ಲಿ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ದರವು ಶೇಕಡ 8.21 ಇತ್ತು. ಆದರೆ ಡಿಸೆಂಬರ್‌ 2021ರಲ್ಲಿ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ದರವು ಶೇಕಡ 7.28ಕ್ಕೆ ಏರಿಕೆ ಕಂಡಿದೆ. ಇನ್ನು ದೇಶದಲ್ಲಿ ನಿರುದ್ಯೋಗ ಪ್ರಮಾಣವು ನವೆಂಬರ್‌ 2021ರಲ್ಲಿ ಶೇಕಡ 7 ಆಗಿತ್ತು. ಆದರೆ ಡಿಸೆಂಬರ್‌ ವೇಳೆಗೆ ಶೇ.7.9ಕ್ಕೆ ಏರಿಕೆ ಆಗಿದೆ ಎಂದು ಸಿಎಂಐಇ ವೆಬ್‌ಸೈಟ್‌ ಉಲ್ಲೇಖ ಮಾಡಿದೆ.

ದೇಶದಲ್ಲಿ ನಿರುದ್ಯೋಗ ಹೀಗಿದೆ: ಸರ್ಕಾರದ 15 ಉದ್ಯೋಗಕ್ಕಾಗಿ 11,000 ಅರ್ಜಿದಾರರ ಸಾಲು!ದೇಶದಲ್ಲಿ ನಿರುದ್ಯೋಗ ಹೀಗಿದೆ: ಸರ್ಕಾರದ 15 ಉದ್ಯೋಗಕ್ಕಾಗಿ 11,000 ಅರ್ಜಿದಾರರ ಸಾಲು!

ಭಾರತದಲ್ಲಿ 2021 ಮೇ ತಿಂಗಳಿನಲ್ಲಿ ನಿರುದ್ಯೋಗ ದರವು ತೀವ್ರ ಪ್ರಮಾಣದಲ್ಲಿ ಹೆಚ್ಚಳ ಕಂಡಿತ್ತು. ಮೇ ತಿಂಗಳಿನಲ್ಲಿ ದೇಶದಲ್ಲಿ ನಿರುದ್ಯೋಗ ದರವು ಶೇಕಡ 11.84 ಕ್ಕೆ ಏರಿಕೆ ಕಂಡಿತ್ತು. ಈ ಸಂದರ್ಭದಲ್ಲಿ ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆಯು ಅಪ್ಪಳಿಸಿತ್ತು. ಕೋವಿಡ್‌ನ ಮೊದಲ ಅಲೆಯ ಸಂದರ್ಭದಂತೆ ಈ ವೇಳೆಯು ಹಲವಾರು ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದರು.

Unemployment Rate Touches Four-Month High Of 7.9 Per Cent In December 2021

ಚೇತರಿಸುತ್ತಿರುವ ಆರ್ಥಿಕತೆಗೆ ಓಮಿಕ್ರಾನ್‌ ಪೆಟ್ಟು

ಪ್ರಸ್ತುತ ಕೊಂಚ ಚೇತರಿಕೆ ಕಾಣುತ್ತಿರುವ ದೇಶದ ಆರ್ಥಿಕತೆಗೆ ಓಮಿಕ್ರಾನ್‌ ಪ್ರಕರಣವು ಪೆಟ್ಟು ನೀಡಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್‌ ರೂಪಾಂತರ ಓಮಿಕ್ರಾನ್‌ ದೇಶದಲ್ಲಿ ಮಾತ್ರವಲ್ಲದೇ ವಿಶ್ವದ ಹಲವಾರು ದೇಶದ ಆರ್ಥಿಕತೆಗೆ ಪೆಟ್ಟು ನೀಡಿದೆ. ಹಲವಾರು ದೇಶಗಳು ಓಮಿಕ್ರಾನ್‌ ರೂಪಾಂತರ ಹೆಚ್ಚಳ ಹಿನ್ನೆಲೆ ನಿರ್ಬಂಧವನ್ನು ಹೇರಿದೆ. ಮಾರ್ಗಸೂಚಿಯನ್ನು ಬಿಗಿಗೊಳಿಸಿದೆ. ಹಾಗೆಯೇ ಸರಬರಾಜು ವ್ಯವಸ್ಥೆಯಗೆ ಈ ನಿರ್ಬಂಧಗಳು ತೊಡಕನ್ನು ಉಂಟು ಮಾಡಿದೆ. ಇನ್ನು ಮೂವತ್ತು ದಿನಗಳ ಅವಧಿಯಲ್ಲಿ ಲೆಕ್ಕ ಹಾಕುವುದಾದರೆ ಜನವರಿ 2, 2022 ಕ್ಕೆ ದೇಶದಲ್ಲಿ ನಿರುದ್ಯೋಗ ಪ್ರಮಾಣವು ಶೇಕಡ 7.8 ಆಗಿದೆ. ಇನ್ನು ನಗರಮಟ್ಟದಲ್ಲಿ ನಿರುದ್ಯೋಗ ಪ್ರಮಾಣವು ಶೇಕಡ 9.2ಕ್ಕೆ ಏರಿಕೆ ಕಂಡಿದೆ.

ಪ್ರಧಾನಿ ಮೋದಿ ಜನ್ಮದಿನದಂದೇ 'ರಾಷ್ಟ್ರೀಯ ನಿರುದ್ಯೋಗ ದಿನಾಚರಣೆ'ಪ್ರಧಾನಿ ಮೋದಿ ಜನ್ಮದಿನದಂದೇ 'ರಾಷ್ಟ್ರೀಯ ನಿರುದ್ಯೋಗ ದಿನಾಚರಣೆ'

ರಾಜ್ಯವಾರು ನಿರುದ್ಯೋಗ ಪ್ರಮಾಣ ಹೀಗಿದೆ

ಇನ್ನು ಹರಿಯಾಣದಲ್ಲಿ ನಿರುದ್ಯೋಗ ಪ್ರಮಾಣವು ಶೇಕಡ 34.1 ರಷ್ಟು ಇದೆ. ರಾಜಸ್ಥಾನದಲ್ಲಿ ಶೇಕಡ 27.1 ರಷ್ಟು ನಿರುದ್ಯೋಗ ಪ್ರಮಾಣ ಇದೆ. ಇನ್ನು ಜಾರ್ಖಂಡ್‌ನಲ್ಲಿ ಶೇಕಡ 17.3 ನಿರುದ್ಯೋಗ ಪ್ರಮಾಣವಿದೆ. ಬಿಹಾರದಲ್ಲಿ 16.0 ನಿರುದ್ಯೋಗ ಪ್ರಮಾಣ ಇದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶೇಕಡ 15.0 ನಿರುದ್ಯೋಗ ಪ್ರಮಾಣ ಇದೆ. ತ್ರಿಪುರಾದಲ್ಲಿ ಶೇಕಡ 14.7 ನಿರುದ್ಯೋಗ ದರವಿದೆ. ಆಂಧ್ರ ಪ್ರದೇಶದಲ್ಲಿ ಶೇಕಡ 5.6, ಅಸ್ಸಾಂನಲ್ಲಿ ಶೇಕಡ 5.8, ಛತ್ತೀಸ್‌ಗಢದಲ್ಲಿ ಶೇಕಡ 2.1, ದೆಹಲಿಯಲ್ಲಿ ಶೇಕಡ 9.8, ಗೋವಾದಲ್ಲಿ ಶೇಕಡ 12.0, ಗುಜರಾತ್‌ನಲ್ಲಿ ಶೇಕಡ 1.6, ಹಿಮಾಚಲ ಪ್ರದೇಶದಲ್ಲಿ ಶೇಕಡ 9.4, ಕರ್ನಾಟಕದಲ್ಲಿ ಶೇಕಡ 1.4, ಕೇರಳದಲ್ಲಿ ಶೇಕಡ 6.7, ಮಧ್ಯ ಪ್ರದೇಶದಲ್ಲಿ ಶೇಕಡ 3.4, ಮಹಾರಾಷ್ಟ್ರದಲ್ಲಿ ಶೇಕಡ 3.8, ಮೇಘಾಲಯದಲ್ಲಿ ಶೇಕಡ 3.0, ಒಡಿಶಾದಲ್ಲಿ ಶೇಕಡ 1.6, ಪಾಂಡಿಚೇರಿಯಲ್ಲಿ ಶೇಕಡ 6.2, ಪಂಜಾಬ್‌ನಲ್ಲಿ ಶೇಕಡ 6.8, ತಮಿಳುನಾಡಿನಲ್ಲಿ ಶೇಕಡ 6.9, ತೆಲಂಗಾಣದಲ್ಲಿ ಶೇಕಡ 2.2, ಉತ್ತರ ಪ್ರದೇಶದಲ್ಲಿ ಶೇಕಡ 4.9, ಉತ್ತರಾಖಂಡದಲ್ಲಿ ಶೇಕಡ 5.0, ಪಶ್ಚಿಮ ಬಂಗಾಳದಲ್ಲಿ ಶೇಕಡ 7.3 ರಷ್ಟು ನಿರುದ್ಯೋಗ ದರವಿದೆ. (ಒನ್‌ಇಂಡಿಯಾ ಸುದ್ದಿ)

English summary
Unemployment Rate Touches Four-Month High Of 7.9 Per Cent In December 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X