• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರಂಭದಲ್ಲಿಯೇ ಮೋದಿ ಸರ್ಕಾರಕ್ಕೆ ಎದುರಾಯಿತು ಬೃಹತ್ ಸವಾಲು

|

ನವದೆಹಲಿ, ಜೂನ್ 1: ಚುನಾವಣೆಯ ಸಂದರ್ಭದಲ್ಲಿ ಎದುರಾಗಿದ್ದ ಆರ್ಥಿಕತೆಯ ಏರಿಳಿತ, ನಿರುದ್ಯೋಗದ ಸವಾಲುಗಳ ನಡುವೆಯೇ ಎರಡನೆಯ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಹೊಸ ಇನ್ನಿಂಗ್ಸ್‌ನ ಆರಂಭ ಅಷ್ಟೇನೂ ಸುಲಭವಾಗಿಲ್ಲ. ಅಧಿಕಾರಕ್ಕೆ ಬಂದ ಶುರುವಿನಲ್ಲಿಯೇ ದೊಡ್ಡ ಸವಾಲು ಅದರ ಮುಂದಿದೆ.

ಹಣಕಾಸು ಸಚಿವೆಯಾಗಿ ಅಧಿಕಾರ ಸ್ವೀಕರಿಸಿರುವ ನಿರ್ಮಲಾ ಸೀತಾರಾಮನ್ ಅವರ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ಇಂದಿರಾಗಾಂಧಿ ಅವರ ಬಳಿಕ 48 ವರ್ಷಗಳಲ್ಲಿ ಈ ಉನ್ನತ ಸಚಿವಾಲಯದ ಸ್ಥಾನವನ್ನು ಪಡೆದಿರುವ ನಿರ್ಮಲಾ ಸೀತಾರಾಮನ್ ಅವರು ವಿವಿಧ ಆರ್ಥಿಕ ಸವಾಲುಗಳನ್ನು ನಿಭಾಯಿಸಬೇಕಿದೆ.

2017-2018ನೇ ಹಣಕಾಸು ವರ್ಷದಲ್ಲಿ ಭಾರತದ ನಿರುದ್ಯೋಗದ ಪ್ರಮಾಣ 45 ವರ್ಷಗಳ ಇತಿಹಾಸದಲ್ಲಿಯೇ ಗರಿಷ್ಠ ಮಟ್ಟಕ್ಕೆ, ಅಂದರೆ ಶೇ 6.1ಕ್ಕೆ ತಲುಪಿದೆ. ಕೇಂದ್ರ ಸರ್ಕಾರ ಶುಕ್ರವಾರ ಈ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.

ಮೊದಲ ಸಂಪುಟ ಸಭೆಯಲ್ಲಿಯೇ ರೈತರಿಗೆ ಗಿಫ್ಟ್ ಕೊಟ್ಟ ಕೇಂದ್ರ ಸರ್ಕಾರ

ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ನಗರ ಪ್ರದೇಶಗಳಲ್ಲಿ ಕೆಲಸ ಮಾಡಲು ಅರ್ಹರಾಗಿರುವ ಶೇ 7.8ರಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಶೇ 5.3ರಷ್ಟು ಗ್ರಾಮೀಣ ಯುವಜನರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಭಾರತದಾದ್ಯಂತ ಶೇ 6.2ರಷ್ಟು ಪುರುಷರು ನಿರುದ್ಯೋಗದಿಂದ ತತ್ತರಿಸಿದ್ದರೆ, ಶೇ 5.7 ಮಹಿಳೆಯರು ನೌಕರಿಗಾಗಿ ಅರಸುತ್ತಿದ್ದಾರೆ.

2018ರ ಜುಲೈ-ಸೆಪ್ಟೆಂಬರ್‌ನಲ್ಲಿ ನಿರುದ್ಯೋಗದ ಪ್ರಮಾಣ ಶೇ 9.6ರಷ್ಟಿತ್ತು. ಕಳೆದ ಸಾಲಿನ ವರದಿಯೊಂದಿಗೆ ಪ್ರಸ್ತುತದ ಶೇ 6.1ರ ನಿರುದ್ಯೋಗದ ಪ್ರಮಾಣವನ್ನು ಹೋಲಿಕೆ ಮಾಡುವುದು ಸೂಕ್ತವಲ್ಲ ಎಂದು ಸರ್ಕಾರ ಹೇಳಿದೆ.

ಪಿಎಸ್ ಮತ್ತು ಎಸ್‌ಎಸ್‌ ಮಾಹಿತಿ

ಪಿಎಸ್ ಮತ್ತು ಎಸ್‌ಎಸ್‌ ಮಾಹಿತಿ

ಪ್ರಿನ್ಸಿಪಲ್ ಸ್ಟೇಟಸ್ ಮತ್ತು ಸಬ್ಸಿಡಿಯರಿ ಸ್ಟೇಟಸ್ (ಪಿಎಸ್‌ ಮತ್ತು ಎಸ್‌ಎಸ್‌) ಅನ್ವಯ ಗ್ರಾಮೀಣ ಪ್ರದೇಶಗಳಲ್ಲಿನ ಪುರುಷರಲ್ಲಿ ಶೇ 5.8 ಮತ್ತು ಮಹಿಳೆಯರಲ್ಲಿ ಶೇ 3.8ರಷ್ಟು ನಿರುದ್ಯೋಗವಿದೆ. ಅದೇ ರೀತಿ ನಗರ ಪ್ರದೇಶಗಳಲ್ಲಿ ಈ ಪ್ರಮಾಣ ಕ್ರಮವಾಗಿ ಶೇ 7.1 ಮತ್ತು ಶೇ 10.8 ರಷ್ಟಿದೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ.

ಸುಳ್ಳಾದ ನಿರೀಕ್ಷೆ! ಭಾರತದ ಜಿಡಿಪಿ ದರ ವರ್ಷದಿಂದ ವರ್ಷಕ್ಕೆ ಕುಸಿತ

ನಗರದಲ್ಲಿ ನಿರುದ್ಯೋಗ ಹೆಚ್ಚು

ನಗರದಲ್ಲಿ ನಿರುದ್ಯೋಗ ಹೆಚ್ಚು

ಪ್ರಸ್ತುತ ಸಾಪ್ತಾಹಿಕ ಸ್ಥಿತಿಗತಿ ಪ್ರಕಾರ (ಸಿಡಬ್ಲ್ಯೂಎಸ್) ಗ್ರಾಮೀಣ ಪ್ರದೇಶದಲ್ಲಿ ಶೇ 8.8ರಷ್ಟು ಪುರುಷರು ಮತ್ತು ಶೇ 7.7ರಷ್ಟು ಮಹಿಳೆಯರು ನಿರುದ್ಯೋಗಿಗಳಾಗಿದ್ದಾರೆ. ಅದೇ ರೀತಿ ನಗರ ಭಾಗಗಳಲ್ಲಿ ಶೇ 8.8 ಪುರುಷರು ಹಾಗೂ ಶೇ 12.8 ಮಹಿಳೆಯರಿಗೆ ನೌಕರಿ ದೊರೆತಿಲ್ಲ.

ಮೊದಲ ಬಾರಿಗೆ ಚೀನಾ ಎದುರು ಹಿನ್ನಡೆ

ಮೊದಲ ಬಾರಿಗೆ ಚೀನಾ ಎದುರು ಹಿನ್ನಡೆ

ಗುರುವಾರ ಬಿಡುಗಡೆಯಾಗಿರುವ ಜಿಡಿಪಿ ಬೆಳವಣಿಗೆ ಮಾಹಿತಿ ಪ್ರಕಾರ 2018-19ನೇ ಸಾಲಿನಲ್ಲಿ ಬೆಳವಣಿಗೆ ದರ ಶೇ 5.8ರಷ್ಟಿದೆ. ಇದು ಕಳೆದ 20 ತ್ರೈಮಾಸಿಕ ಅವಧಿಗಳಲ್ಲಿಯೇ ಅತ್ಯಂತ ಕಡಿಮೆ. ಜಿಡಿಪಿ ದರದಲ್ಲಿನ ಕುಸಿತದಿಂದಾಗಿ ಅತ್ಯಂತ ವೇಗದ ಆರ್ಥಿಕ ಬೆಳವಣಿಗೆ ದೇಶಗಳಲ್ಲಿ ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತವು ಚೀನಾ ಎದುರು ಹಿನ್ನಡೆ ಅನುಭವಿಸಿದೆ.

ಪ್ರಧಾನಿಯಾದ ಬಳಿಕ ಮೊದಲ ಮಹತ್ವದ ನಿರ್ಧಾರ ಪ್ರಕಟಿಸಿದ ಮೋದಿ

ಐದು ವರ್ಷದಲ್ಲಿಯೇ ದರ ಕುಸಿತ

ಐದು ವರ್ಷದಲ್ಲಿಯೇ ದರ ಕುಸಿತ

ಅಲ್ಲದೆ, ಕಳೆದ ಐದು ವರ್ಷಗಳಲ್ಲಿಯೇ ಜಿಡಿಪಿ ಬೆಳವಣಿಗೆ 6.8ರಷ್ಟು ಕುಸಿತ ಕಂಡಿದೆ. ಒಂದು ವರ್ಷದ ಹಿಂದಷ್ಟೇ ಬೆಳವಣಿಗೆ ದರ ಶೇ 8ಕ್ಕೆ ಮುಟ್ಟಿ ದಾಖಲೆ ನಿರ್ಮಿಸಿತ್ತು. ಕಳೆದ ಹಣಕಾಸು ವರ್ಷದಿಂದ ಜಿಡಿಪಿ ಬೆಳವಣಿಗೆಯು ಎರಡನೆಯ ತ್ರೈಮಾಸಿಕ ಅವಧಿಗೆ ಶೇ 8 ರಿಂದ ಶೇ 7ರಷ್ಟು ಕುಸಿದಿದೆ. ಮೂರನೇ ತ್ರೈಮಾಸಿಕ ಅವಧಿಗೆ ಶೇ 6.6ಕ್ಕೆ ಕುಸಿತ ಕಂಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The new government of Narendra Modi has two major challenges as India's unemployment rate has rached to 45 years high at 6.1% and GDP growth hits 5 year low.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more