ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೆಂಡ್ 300 ವರ್ಷಗಳಲ್ಲೇ ಕಾಣದ ಭೀಕರ ಆರ್ಥಿಕ ಹಿಂಜರಿತ ಎದುರಿಸಲಿದೆ!

|
Google Oneindia Kannada News

ಲಂಡನ್, ನವೆಂಬರ್ 27: ಈ ವರ್ಷ ಕೋವಿಡ್-19 ಬಿಕ್ಕಟ್ಟಿನ ಪರಿಣಾಮದಿಂದಾಗಿ ಇಂಗ್ಲೆಂಡ್ ಆರ್ಥಿಕತೆಯು ಶೇಕಡಾ 11.3ರಷ್ಟು ಕುಗ್ಗುವ ಮುನ್ಸೂಚನೆ ಸಿಕ್ಕಿದ್ದು, ದೇಶದಲ್ಲಿ 300ಕ್ಕೂ ಹೆಚ್ಚು ವರ್ಷಗಳಲ್ಲಿ ಉಂಟಾದ ಭೀಕರ ಆರ್ಥಿಕ ಹಿಂಜರಿತವಾಗಿದೆ ಎಂದು ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಬುಧವಾರ ಹೇಳಿದ್ದಾರೆ.

2022 ರ ಅಂತ್ಯದವರೆಗೆ ಆರ್ಥಿಕತೆಯು ತನ್ನ ಪೂರ್ವ ಕೊರೊನಾವೈರಸ್ ಮಟ್ಟಕ್ಕೆ ಮರಳುತ್ತದೆ ಎಂದು ಆಫೀಸ್ ಆಫ್ ರೆಸ್ಪಾನ್ಸಿಬಿಲಿಟಿ (ಒಬಿಆರ್) ನಿರೀಕ್ಷಿಸಿರಲಿಲ್ಲ ಎಂದು ಸಚಿವರು, ಬ್ರಿಟನ್ ಶಾಸಕರಿಗೆ ತಿಳಿಸಿದರು.

 ಭಾರತೀಯ ಆರ್ಥಿಕತೆಯ ಚೇತರಿಕೆ ನಿರೀಕ್ಷೆಗಿಂತ ಉತ್ತಮವಾಗಿದೆ: ಆರ್‌ಬಿಐ ಗವರ್ನರ್ ಭಾರತೀಯ ಆರ್ಥಿಕತೆಯ ಚೇತರಿಕೆ ನಿರೀಕ್ಷೆಗಿಂತ ಉತ್ತಮವಾಗಿದೆ: ಆರ್‌ಬಿಐ ಗವರ್ನರ್

ಇದರ ಜೊತೆಗೆ ಸಾಂಕ್ರಾಮಿಕ ರೋಗದಿಂದಾಗಿರುವ ಹಣಕಾಸಿನ ಹಾನಿ 'ಶಾಶ್ವತವಾಗಬಹುದು' ಎಂದು ಸುನಕ್ ಹೇಳಿದ್ದಾರೆ. 2021 ರ ಎರಡನೇ ತ್ರೈಮಾಸಿಕದಲ್ಲಿ ನಿರುದ್ಯೋಗವು ಶೇ. 7.5 ರಷ್ಟು ಅಥವಾ 2.6 ಮಿಲಿಯನ್ ಜನರಿಗೆ ಏರಿಕೆಯಾಗಲಿದೆ ಎಂದು ಒಬಿಆರ್ ಅಂಕಿಅಂಶಗಳನ್ನು ಉಲ್ಲೇಖಿಸಿದ್ದಾರೆ.

UK Expected To See Worst Recession In Over 300 Years: Rishi Sunak

ಕೊರೊನಾವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಮೊದಲ ಆರ್ಥಿಕ ಖರ್ಚಿನ ವಿಮರ್ಶೆಯನ್ನು ಪ್ರಕಟಿಸಿದ ಸುನಕ್, 'ಆರ್ಥಿಕ ತುರ್ತುಸ್ಥಿತಿ ಈಗಷ್ಟೇ ಪ್ರಾರಂಭವಾಗಿದೆ' ಎಂದು ಎಚ್ಚರಿಸಿದ್ದಾರೆ.

Recommended Video

ಕಾನೂನು ಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆ | UP | Oneindia Kannada

ಕೋವಿಡ್ ಬಿಕ್ಕಟ್ಟಿನ ಪರಿಹಾರಕ್ಕಾಗಿ ಬ್ರಿಟನ್ ಸರ್ಕಾರ 280 ಬಿಲಿಯನ್ ಪೌಂಡ್‌ಗಳನ್ನು (ಸುಮಾರು 374.1 ಬಿಲಿಯನ್ ಯುಎಸ್ ಡಾಲರ್) ಖರ್ಚು ಮಾಡಿದೆ ಮತ್ತು ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಮುಂದಿನ ವರ್ಷ ಇನ್ನೂ 55 ಬಿಲಿಯನ್ ಪೌಂಡ್‌ಗಳನ್ನು (ಸುಮಾರು 73.5 ಬಿಲಿಯನ್ ಡಾಲರ್) ಖರ್ಚು ಮಾಡಲು ಉದ್ದೇಶಿಸಿದೆ ಎಂದು ತಿಳಿಸಿದರು.

English summary
The worst recession in more than 300 years in the country as a result of the coronavirus crisis, British Chancellor of the Exchequer Rishi Sunak said Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X