ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ 2 ಸಾವಿರ ಕೋಟಿ ಹೂಡಲಿರುವ ಯು ಫ್ಲೆಕ್ಸ್‌: ಶೆಟ್ಟರ್

|
Google Oneindia Kannada News

ಬೆಂಗಳೂರು ಆಗಸ್ಟ್‌ 19: ದೇಶದ ಅತಿದೊಡ್ಡ ಫ್ಲೆಕ್ಸಿಬಲ್‌ ಪ್ಯಾಕೇಜಿಂಗ್‌ ಮೆಟೀರಿಯಲ್‌ ಅಂಡ್‌ ಫಿಲ್ಮ್ಸ್‌ನ ಉತ್ಪಾದಕರಾದ ಯು ಫ್ಲೆಕ್ಸ್‌ ಗ್ರೂಪ್‌ ರಾಜ್ಯದಲ್ಲಿ 2 ಹಂತಗಳಲ್ಲಿ 2 ಸಾವಿರ ಕೋಟಿ ರೂಪಾಯಿಗಳ ಹೂಡಿಕೆಯನ್ನು ಮಾಡಲು ಒಲವು ತೋರಿಸಿದೆ. ಇದರಿಂದಾಗಿ 2 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದರು.

Recommended Video

Gold ತೆಗೆದುಕೊಳ್ಳೋದು ಇನ್ನು ಬಹಳ ಕಷ್ಟ | Oneindia Kannada

ವಿಧಾನಸೌಧದಲ್ಲಿಂದು ಸಚಿವರನ್ನು ಭೇಟಿಯಾದ ಯು ಫ್ಲೆಕ್ಸ್‌ ಗ್ರೂಪ್‌ ನ ಸಂಸ್ಥಾಪಕ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶೋಕ್‌ ಚತುರ್ವೇದಿ ಭೇಟಿಯಾಗಿ ಚರ್ಚೆ ನಡೆಸಿದರು. ಬಯೋಡಿಗ್ರೇಡಬಲ್‌ ಪ್ಯಾಸ್ಟಿಕ್‌ ಉತ್ಪನ್ನಗಳನ್ನು ತಯಾರಿಸುವ ಕಂಪನಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಅಲ್ಲದೆ, ರಾಜ್ಯದಲ್ಲಿ ಘಟಕವನ್ನು ಸ್ಥಾಪಿಸಲು ಅಗತ್ಯವಿರುವ ಜಾಗ ಹಾಗೂ ಇನ್ನಿತರೆ ಬೇಡಿಕೆಗಳ ಬಗ್ಗೆ ಕಂಪನಿಯ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.

ಚೀನಾದಿಂದ ಹೊರಬರುವ ಕಂಪನಿಗಳನ್ನು ಸೆಳೆಯೋದು ಹೇಗೆ?ಚೀನಾದಿಂದ ಹೊರಬರುವ ಕಂಪನಿಗಳನ್ನು ಸೆಳೆಯೋದು ಹೇಗೆ?

ನಂತರ ಮಾತನಾಡಿದ ಸಚಿವರು, ರಾಜ್ಯದಲ್ಲಿ ಹೊಸದಾಗಿ ಜಾರಿಯಾಗಿರುವ ಕೈಗಾರಿಕಾ ನೀತಿ 2020-25 ರ ಪ್ರಮುಖ ಅಂಶಗಳ ಬಗ್ಗೆ ಮಾಹಿತಿಯನ್ನು ಕಂಪನಿಯ ಪ್ರತಿನಿಧಿಗಳಿಗೆ ನೀಡಿದರು. ಇದೇ ವೇಳೆ ಕರ್ನಾಟಕ ರಾಜ್ಯ ಕೈಗಾರಿಕಾ ಸೌಲಭ್ಯ ಅಧಿನಿಯಮದಲ್ಲಿನ ತಿದ್ದುಪಡಿಯಿಂದಾಗಿ ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು ಬಹಳ ಸುಲಭವಾಗಿದೆ. ಏಕಗವಾಕ್ಷಿಯ ಮೂಲಕ ಅನುಮತಿಯನ್ನು ಪಡೆದುಕೊಂಡು ಕೈಗಾರಿಕೆಯನ್ನು ಸ್ಥಾಪಿಸುವ ಕಾರ್ಯಕ್ಕೆ ಚಾಲನೆ ನೀಡಬಹುದು ಎಂದು ಹೇಳಿದರು.

UFlex Group to invest Rs 2,000 Crore in Karnataka: Shettar

ಕೈಗಾರಿಕಾ ಘಟಕದ ಸ್ಥಾಪನೆಗೆ ಒಟ್ಟಾರೆಯಾಗಿ 55 ಎಕರೆ ಭೂಮಿಯ ಅವಶ್ಯಕತೆ ಇದೆ. ಇನ್ನು 4 ಏಕರೆಗಳನ್ನು ಹೆಚ್ಚಾಗಿ ಮಂಜೂರು ಮಾಡಿದಲ್ಲಿ ಕಾರ್ಮಿಕರಿಗೆ ಬೇಕಾದ ವಸತಿಯ ವ್ಯವಸ್ಥೆ ಯನ್ನು ಮಾಡಲಿದ್ದೇವೆ. ಶೂನ್ಯ ತ್ಯಾಜ್ಯ ಹಾಗೂ ಪರಿಸರ ಸ್ನೇಹೀ ಉತ್ಪನ್ನಗಳನ್ನು ತಯಾರಿಸುವ ಘಟಕವನ್ನು ಇಲ್ಲಿ ನಿರ್ಮಿಸಲಿದ್ದೇವೆ. ಈ ಘಟಕದ ಮೂಲಕ ದೇಶದ ಎಲ್ಲಾ ಭಾಗಗಳಿಗೂ ಉತ್ಪನ್ನಗಳನ್ನು ತಲುಪಿಸಲಿದ್ದೇವೆ ಎಂದು ಯು ಫ್ಲೆಕ್ಸ್‌ ಗ್ರೂಪ್‌ ನ ಸಂಸ್ಥಾಪಕ ಅಧ್ಯಕ್ಷರು ತಿಳಿಸಿದರು.

UFlex Group to invest Rs 2,000 Crore in Karnataka: Shettar

ರಾಜ್ಯ ಕೈಗಾರಿಕಾ ನೀತಿಗೆ ಅಸ್ತು, ಲಕ್ಷಾಂತರ ಉದ್ಯೋಗ ಸೃಷ್ಟಿ ರಾಜ್ಯ ಕೈಗಾರಿಕಾ ನೀತಿಗೆ ಅಸ್ತು, ಲಕ್ಷಾಂತರ ಉದ್ಯೋಗ ಸೃಷ್ಟಿ

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಘಟಕ ಸ್ಥಾಪನೆಯ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀ ಗೌರವ್‌ ಗುಪ್ತ, ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್‌ ಕೃಷ್ಣ ಹಾಗೂ ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಉಪಸ್ಥಿತರಿದ್ದರು.

English summary
UFlex Group interested to invest Rs 2,000 Crore in Karnataka said Industry minister Jagdish Shettar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X