ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್19: ಉಬರ್ ಸಂಸ್ಥೆಯಿಂದ 3,700 ಮಂದಿ ಉದ್ಯೋಗ ಕಡಿತ

|
Google Oneindia Kannada News

ಬೆಂಗಳೂರು, ಮೇ 7: ಆಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಉಬರ್ ಸಂಸ್ಥೆಗೆ ಕೊರೊನಾವೈರಸ್ ಭಾರಿ ಆರ್ಥಿಕ ಹೊಡೆತ ನೀಡಿದೆ. ಹಲವು ದೇಶಗಳಲ್ಲಿ ಲಾಕ್ಡೌನ್ ನಿಂದಾಗಿ ಕ್ಯಾಬ್ ಸೇವೆ ಸ್ಥಗಿತಗೊಂಡಿದೆ. ಜಾಗತಿಕವಾಗಿ 3,700 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಲು ಉಬರ್ ನಿರ್ಧರಿಸಿದೆ. ಒಟ್ಟಾರೆ ಉದ್ಯೋಗಿಗಳ ಪ್ರಮಾಣದಲ್ಲಿ ಶೇ14ರಷ್ಟು ಕಡಿತಗೊಳ್ಳುವ ಸಾಧ್ಯತೆಯಿದೆ ಎಂಬ ಸುದ್ದಿ ಬಂದಿದೆ.

ಉಬರ್ ಸಂಸ್ಥೆಯ ಸಿಇಒ ದಾರಾ ಖೋಸ್ರೊವ್ಸ್ ಹಾಹಿ ಅವರು ಡಿಸೆಂಬರ್ 31, 2020 ತನಕ ತಮ್ಮ ಮೂಲ ವೇತನವನ್ನು ಪಡೆದಿರಲು ನಿರ್ಧರಿಸಿದ್ದಾರೆ. ಕೊವಿಡ್19 ಸಾಂಕ್ರಾಮಿಕ ನೀಡಿರುವ ಆರ್ಥಿಕ ಹೊಡೆತದಿಂದಾಗಿ ಸಂಸ್ಥೆ ನಿರ್ವಹಣಾ ವೆಚ್ಚ ಅಧಿಕವಾಗಿದ್ದು, ಈ ನಿರ್ಧಾರ ಅನಿವಾರ್ಯವಾಗಿದೆ. ಸಂಸ್ಥೆ ಸಮಸ್ಥಿತಿಗೆ ಬಂದ ಕೂಡಲೇ ಎಲ್ಲವನ್ನು ಮತ್ತೊಮ್ಮೆ ಪುನರ್ ಸ್ಥಾಪಿಸಲಾಗುವುದು ಎಂದು ಸಂಸ್ಥೆಯ ಉದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ ಸಿಇಒ ದಾರಾ ಹೇಳಿದ್ದಾರೆ.

Uber to lay off 3,700 employees globally

ಮೇ 4 ರಿಂದ ಎಲ್ಲೆಲ್ಲಿ 'ಊಬರ್' ಸೇವೆ ಲಭ್ಯ? ಸಂಪೂರ್ಣ ಮಾಹಿತಿ ಇಲ್ಲಿದೆಮೇ 4 ರಿಂದ ಎಲ್ಲೆಲ್ಲಿ 'ಊಬರ್' ಸೇವೆ ಲಭ್ಯ? ಸಂಪೂರ್ಣ ಮಾಹಿತಿ ಇಲ್ಲಿದೆ

ಭಾರತದಲ್ಲಿ ಎಷ್ಟು ಪ್ರಮಾಣದಲ್ಲಿ ಉದ್ಯೋಗ ಕಡಿತವಾಗಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಉಬರ್ ಸಂಸ್ಥೆ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಎನ್ ಟ್ರ್ಯಾಕರ್ ವರದಿಯಂತೆ ಸುಮಾರು 30% ಅಥವಾ 700 ಮಂದಿ ಉದ್ಯೋಗ ಕಳೆದುಕೊಳ್ಳಬಹುದು. ಮಾರ್ಚ್ 24 ರಿಂದ ಉಬರ್ ಕ್ಯಾಬ್ ಸ್ಥಗಿತಗೊಂಡಿವೆ. ಕೆಲವೆಡೆ ಅಗತ್ಯ ವಸ್ತು ಪೂರೈಕೆಗಾಗಿ ಕೈಜೋಡಿಸಿವೆ. ಸದ್ಯ ಕಿತ್ತಳೆ ಹಾಗೂ ಹಸಿರುವಲಯಗಳಲ್ಲಿ ಷರತ್ತುಬದ್ಧವಾಗಿ ಉಬರ್ ಕ್ಯಾಬ್ ಚಾಲನೆಗೆ ಅನುಮತಿ ಇದೆ.

English summary
Uber has announced that it will be laying off approximately 3,700 full-time employees as the company plans to reduce its operating expenses amid of Covid19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X