ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#Twitterdown ಡೌನ್ ಡೌನ್ ಡೌನ್ !

By Mahesh
|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೋ, ಜ. 19: ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮಂಗಳವಾರ ಡೌನ್ ಡೌನ್ ಫುಲ್ ಡೌನ್. ನೋಟಿಫಿಕೇಷನ್ ನೂ ಇಲ್ಲ, ರೀಟ್ವೀಟ್ ಮಾಡೋಕೆ ಆಗಲ್ಲ, ಬ್ರೇಕಿಂಗ್ ನ್ಯೂಸ್ ಕಳಿಸೋಕೆ ಮೊದ್ಲೇ ಆಗದಂಥ ಪರಿಸ್ಥಿತಿ ಉಂಟಾಗಿತ್ತು. ಕೆಲಕಾಲ ನಂತರ ಸರಿ ಹೋದರೂ ಈ ಸಾಲು ಬರೆಯುವ ಸಮಯಕ್ಕೆ

ಲಿನಾಕ್ಸ್ ಓಸ್ ನಲ್ಲಿ ಕ್ರೋಮ್ ಬ್ಸೌಸರ್ ನಲ್ಲಿ ಟ್ವಿಟ್ಟರ್ ನೋಟಿಫಿಕೇಷನ್ ನೋಡಲು ಮೌಸ್ ಒತ್ತಿದರೆ ಕೆಳಗಿನ ಕಾಣುವಂಥ ಚಿತ್ರ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿತು. ಈ ಎರರ್ ಪುಟ ನೋಡಿ ಅನೇಕ ಮಂದಿ ಮುಖ ಸಣ್ಣಗೆ ಮಾಡಿಕೊಂಡಿರಬಹುದು. ಸರಿ ಸುಮಾರು 300 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ಬಿಬಿಸಿ ವರದಿ ಮಾಡಿದೆ.[ಟ್ವಿಟ್ಟರ್ನಿಂದ ಡೈವೋರ್ಸ್ ತಗೊಳೋದು ಹೇಗೆ?]

#Twitterdown: Twitter goes offline on Tuesday
"Some users are currently experiencing problems accessing Twitter. We are aware of the issue and are working towards a resolution." ಎಂದು @support ಐಡಿಯಿಂದ ಸಂದೇಶ ಬಂದಿದೆ. ಸೋಮವಾರ ಸಂಜೆ 7.53ರಿಂದ 8.03ರವರೆಗೆ ಮೊಬೈಲ್, ವೆಬ್​ಗಳಲ್ಲಿ ಟ್ವಿಟರ್ ಖಾತೆಯನ್ನು ತೆರೆಯಲಾಗುತ್ತಿರಲಿಲ್ಲ. ಹೆಚ್ಚಿನ ಮಾಹಿತಿಗೆ ಟ್ವಿಟ್ಟರ್ ನಲ್ಲಿ ಸರ್ವೀಸ್ ಪುಟ ನೋಡಬಹುದು ಲಿಂಕ್ ಇಲ್ಲಿದೆ

ಇನ್ನೊಂದು ಸಮಸ್ಯೆ ಇದೆ: ಸರಿ ಸುಮಾರು 24 ಮಿಲಿಯನ್ ಖಾತೆದಾರರು ಟ್ವೀಟ್ ಮಾಡುವುದೇ ಇಲ್ಲ ಎಂದು ಯುಎಸ್ ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಕಮಿಷನ್(ಎಸ್ ಇಸಿ) ವರದಿ ಇಲ್ಲಿ ಸ್ಮರಿಸಬಹುದು. ಟ್ವಿಟ್ಟರ್ ಖಾತೆದಾರರ ಪೈಕಿ ಶೇ 8.5ರಷ್ಟು ಖಾತೆಗಳು ರಾಬೋಟ್ ಬಳಕೆ ಮಾಡುತ್ತಿರುವ ಸಾಧ್ಯತೆ ಕಂಡು ಬಂದಿದೆ.

ಶೇ 11ರಷ್ಟು ಬಳಕೆದಾರರು ಥರ್ಡ್ ಪಾರ್ಟಿ ತಂತ್ರಾಂಶ(Tweedeck ಅಥವಾ Hootsuite ಇರಬಹುದು)ಗಳನ್ನು ಬಳಕೆ ಮಾಡಿಕೊಂಡು ಟ್ವೀಟ್ ಮಾಡುತ್ತಿದ್ದರೂ ಸಕ್ರಿಯರಾಗಿದ್ದಾರೆ. ಅದರೆ, ಶೇ 8.5ರಷ್ಟು ಖಾತೆಗಳು ಮಲಗಿವೆ.

(ಐಎಎನ್ಎಸ್)

English summary
Micro blogging site Twitter on Tuesday went offline for users, with web visitors being greeted by an error page.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X