ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲಾನ್ ಮಸ್ಕ್ ಆಫರ್‌ಗೆ ತಲೆಕೆಡಿಸಿಕೊಳ್ಳದಿರಿ: ಟ್ವಿಟ್ಟರ್ ಉದ್ಯೋಗಿಗಳಿಗೆ ಸಿಇಒ ಕರೆ

|
Google Oneindia Kannada News

ನವದೆಹಲಿ, ಏ. 15: ವಿಶ್ವದ ಅತಿ ಶ್ರೀಮಂತರಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್ ಅವರ ಒಂದೊಂದು ನಡೆ ಮತ್ತು ಹೇಳಿಕೆ ವಿಶ್ವಾದ್ಯಂತ ಸಂಚಲನ ಮೂಡಿಸಬಲ್ಲುವು. ವಿಶ್ವದ ಪ್ರಮುಖ ಮೈಕ್ರೋ ಸೋಷಿಯಲ್ ನೆಟ್ವರ್ಕಿಂಗ್ ಸೈಟ್ ಎನಿಸಿರುವ ಟ್ವಿಟ್ಟರ್ ಅನ್ನು ಖರೀದಿಸುವುದಾಗಿ ಇಲಾನ್ ಮಸ್ಕ್ ಹೇಳಿದ್ದು ಆ ಕಂಪನಿಯೊಳಗೇ ದೊಡ್ಡ ಸಂಚಲನ ಸೃಷ್ಟಿಸಿದೆ. ಟ್ವಿಟ್ಟರ್ ಸಂಸ್ಥೆಯನ್ನ ಎಲಾನ್ ಮಸ್ಕ್ ಖರೀದಿಸಿಬಿಡಬಹುದಾ ಎಂದು ಅನೇಕ ಸಿಬ್ಬಂದಿ ವ್ಯಾಕುಲಗೊಂಡಿರುವುದು ತಿಳಿದುಬಂದಿದೆ. ಆದರೆ, ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಅವರು ಈ ಬಗ್ಗೆ ಸಿಬ್ಬಂದಿ ವರ್ಗದೊಂದಿಗೆ ಮಾತನಾಡಿದ್ದು, ಮಸ್ಕ್ ಆಫರ್ ವಿಚಾರದಲ್ಲಿ ಯಾರೂ ತಲೆ ಕೆಡಿಸಿಕೊಳ್ಳದೇ ತಂತಮ್ಮ ಕೆಲಸದತ್ತ ಗಮನ ಕೊಡುವಂತೆ ಸಲಹೆ ಕೊಟ್ಟಿದ್ದಾರೆ.

ನಿನ್ನೆ ಏಪ್ರಿಲ್ 14ರಂದು ಸರ್ವ ಸಿಬ್ಬಂದಿವರ್ಗದ ಮೀಟಿಂಗ್ ವೇಳೆ ಎಲ್ಲರನ್ನ ಉದ್ದೇಶಿಸಿ ಮಾತನಾಡಿದ ಪರಾಗ್ ಅಗರವಾಲ್, ಏನು ನಡೆಯುತ್ತದೆ ಅದನ್ನ ನಾವು ಉದ್ಯೋಗಿಗಳಾಗಿ ನಿಯಂತ್ರಿಸಬಹುದು ಎಂದು ಹೇಳಿದ್ದಾರೆ. ಹಾಗೆಯೇ, ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿಗೆ ಆಫರ್ ಕೊಟ್ಟ ಸುದ್ದಿಯಿಂದ ತಮ್ಮ ಕಂಪನಿಯೇನೂ ಒತ್ತಡಕ್ಕೆ ಸಿಲುಕಿಲ್ಲ ಎಂದು ಪರಾಗ್ ಅಗರವಾಲ್ ಹೇಳಿದರೆಂದು ಮೂಲವೊಂದನ್ನ ಉಲ್ಲೇಖಿಸಿ ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಎಲಾನ್ ಮಸ್ಕ್ ಆಫರ್‌ಗೆ ಟ್ವಿಟ್ಟರ್ ಹೇಳಿದ್ದೇನು? ಎಲಾನ್ ಮಸ್ಕ್ ಆಫರ್‌ಗೆ ಟ್ವಿಟ್ಟರ್ ಹೇಳಿದ್ದೇನು?

ಟ್ವಿಟ್ಟರ್ ಕಂಪನಿಯ ಉದ್ಯೋಗಿಗಳ ಸಂವಹನಕ್ಕೆಂದು ಬಳಸಲಾಗುವ ಸ್ಲ್ಯಾಕ್ ಮೆಸೆಂಜರ್‌ನಲ್ಲಿ ವಿವಿಧ ಉದ್ಯೋಗಿಗಳು ಕೇಳಿದ್ದ ಪ್ರಶ್ನೆಗಳಿಗೆ ಸಿಇಒ ಪರಾಗ್ ಅಗ್ರವಾಲ್ ಅವರು ಉತ್ತರಿಸುವ ಪ್ರಯತ್ನ ಮಾಡಿದರು. ಈ ವೇಳೆ ಅವರು, "ಏನಾಗುತ್ತದೆ ಎಂಬುದನ್ನು ನಾವು ಉದ್ಯೋಗಿಗಳಾಗಿ ನಿಯಂತ್ರಣ ಹೊಂದಿದ್ದೇವೆ" ಎಂದು ಈ ಬೆಳವಣಿಗೆಗಳಲ್ಲಿ ಭಾಗಿಯಾಗಿದ್ದ ಜನರು ತಿಳಿಸಿದ್ದಾರೆ.

Twitter company not held hostage by Elon Musk offer says CEO

ಇಲಾನ್ ಮಸ್ಕ್ ಆಫರ್:
ಟೆಸ್ಲಾ, ಸ್ಪೇಸ್ ಎಕ್ಸ್, ನ್ಯೂರಾಲಿಂಕ್ ಇತ್ಯಾದಿ ಹಲವು ಕಂಪನಿಗಳ ಒಡೆಯನಾದ ಇಲಾನ್ ಮಸ್ಕ್ ನಿನ್ನೆ ತಾನು ಟ್ವಿಟ್ಟರ್ ಅನ್ನು ಖರೀದಿಸಲು ಬಯಸುವುದಾಗಿ ಹೇಳಿದ್ದರು. ಮಸ್ಕ್ ಅವರು ಟ್ವಿಟ್ಟರ್ ಬಳಕೆದಾರನಾಗಿ ಸಕ್ರಿಯರಾಗಿದ್ದಾರೆ. ಅಷ್ಟೇ ಅಲ್ಲ ಟ್ವಿಟ್ಟರ್ ಕಂಪನಿಯ ಬೋರ್ಡ್ ಮೆಂಬರ್ ಕೂಡ ಆಗಿದ್ದಾರೆ. ಅಚ್ಚರಿ ಎಂದರೆ ಅವರು ಟ್ವಿಟ್ಟರ್‌ನ ಈಗಿನ ನೀತಿಯ ಬಗ್ಗೆ ಕಟುಟೀಕಾಕಾರರೂ ಆಗಿದ್ದಾರೆ.

Elon Musk : ಟ್ವಿಟರ್ ಮಂಡಳಿಗೆ ಸೇರುವುದಿಲ್ಲ ಟೆಸ್ಲಾ ಸಿಇಓ ಎಲೋನ್ ಮಸ್ಕ್ Elon Musk : ಟ್ವಿಟರ್ ಮಂಡಳಿಗೆ ಸೇರುವುದಿಲ್ಲ ಟೆಸ್ಲಾ ಸಿಇಓ ಎಲೋನ್ ಮಸ್ಕ್

ಟ್ವಿಟ್ಟರ್ ಇನ್ನಷ್ಟು ಮುಕ್ತವಾಗಬೇಕು. ಎಲ್ಲರ ಅಭಿಪ್ರಾಯಗಳಿಗೆ ಸಮಾನವಾಗಿ ವೇದಿಕೆ ಕಲ್ಪಿಸಬೇಕು. ಅದರ ನೀತಿ ನಿಯಮಗಳು ಸ್ವತಂತ್ರವಾಗಿರಬೇಕು ಎಂದು ಎಲಾನ್ ಮಸ್ಕ್ ಸಾಕಷ್ಟು ಬಾರಿ ಹೇಳಿದ್ದಾರೆ. ಇದೀಗ ಟ್ವಿಟ್ಟರ್ ಕಂಪನಿಯನ್ನ ತಾನು ಖರೀದಿಸಿ ಅದಕ್ಕೊಂದು ಹೊಸ ದಿಕ್ಕು ಕಲ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಅಂದಹಾಗೆ ಅವರು ಟ್ವಿಟ್ಟರ್ ಖರೀದಿಸಲು ಕೊಟ್ಟಿರುವ ಹಣದ ಆಫರ್ 43 ಬಿಲಿಯನ್ ಡಾಲರ್, ಅಂದರೆ 3.28 ಲಕ್ಷ ಕೋಟಿ ರೂಪಾಯಿ.

Twitter company not held hostage by Elon Musk offer says CEO

ಸಿಬ್ಬಂದಿ ಸೋಜಿಗ:
ಟ್ವಿಟ್ಟರ್‌ನ ಕಡುವಿರೋಧಿಯಾಗಿರುವ ಎಲಾನ್ ಮಸ್ಕ್ ಅವರು ಆ ಕಂಪನಿಯನ್ನೇ ಖರೀದಿಸಲು ಮುಂದಾಗಿರುವ ಬೆಳವಣಿಗೆ ಉದ್ಯೋಗಿಗಳಿಗೆ ಸೋಜಿಗವೆನಿಸಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆದಿರುವುದು ತಿಳಿದುಬಂದಿದೆ. ಟ್ವಿಟ್ಟರ್‌ನ ಬೋರ್ಡ್ ಸದಸ್ಯತ್ವವನ್ನು ಎಲಾನ್ ಮಸ್ಕ್ ಅವರಿಗೆ ಕೊಟ್ಟಿದ್ದಾದರೂ ಹೇಗೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಕಂಪನಿಯ ಆಡಳಿತ ಮಂಡಳಿಗೆ ಎಲ್ಲಾ ಕೋಟ್ಯಾಧಿಪತಿಗಳನ್ನೂ ಆಹ್ವಾನಿಸಲಾಗುತ್ತದಾ ಎಂದು ಇನ್ನೂ ಕೆಲವರು ಚಕಾರ ಎತ್ತಿದ್ದಾರೆ.

ಷೇರುದಾರರ ಹಿತಾಸಕ್ತಿ ಮುಖ್ಯ ಎಂದ ಸಿಇಒ:
ಉದ್ಯೋಗಿಗಳೊಂದಿಗಿನ ಮೀಟಿಂಗ್‌ನಲ್ಲಿ ಇದಕ್ಕೆಲ್ಲಾ ಉತ್ತರಿಸಿದ ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್, ಷೇರುದಾರರ ಹಿತಾಸಕ್ತಿಯನ್ನ ಪರಿಗಣಿಸಿ ಮುಂದಿನ ನಡೆ ಇಡಲಾಗುತ್ತದೆ ಎಂದು ಹೇಳಿದ್ದಾರೆ.

Twitter company not held hostage by Elon Musk offer says CEO

ನಮ್ಮ ಸೇವೆಯನ್ನ ಟೀಕಿಸುವ ಜನರ ಅಭಿಪ್ರಾಯಗಳಿಗೂ ನಾವು ಬೆಲೆ ಕೊಟ್ಟು ಅವರಿಂದಲೂ ಕಲಿತು ಇನ್ನಷ್ಟು ಉತ್ತಮಗೊಳ್ಳಬೇಕೆಂಬುದು ನನ್ನ ಚಿಂತನೆ ಎಂದು ಪರಾಗ್ ಅಗ್ರವಾಲ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು, ಎಲಾನ್ ಮಸ್ಕ್ ಮಾಡಿರುವ ಆಫರ್ ಬಗ್ಗೆ ಕಂಪನಿಯ ಮಂಡಳಿ ಪರಿಶೀಲಿಸುತ್ತಿದೆ. ಆದರೆ, ಅಲ್ಲೇನು ಮಾತುಕತೆ ಆಗುತ್ತಿದೆ ಎಂಬ ವಿಚಾರವೆಲ್ಲವನ್ನೂ ಸಿಬ್ಬಂದಿವರ್ಗಕ್ಕೆ ತಿಳಿಸಲು ಆಗುವುದಿಲ್ಲ ಎಂದು ಪರಾಗ್ ಸ್ಪಷ್ಟಪಡಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

Recommended Video

Riyan Parag ಅವರನ್ನು troll ಮಾಡಿದ RR ಅಭಿಮಾನಿಗಳು | Oneindia Kannada

English summary
Twitter Chief Executive Officer Parag Agrawal encouraged employees to remain focused and told them “we as employees control what happens”. And also clarified that Company is not held hostage by Elon Musk's offer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X