ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ಈಗ ಮಸ್ಕ್ ಪಾಲು, ಸಿಇಒ ಪರಾಗ್ ಅಗರವಾಲ್ ಪರಿಪಾಟಲು

|
Google Oneindia Kannada News

ಬೆಂಗಳೂರು, ಏ. 26: ಒಲ್ಲೆ ಒಲ್ಲೆ ಎಂದು ಹೇಳುತ್ತಲೇ ಟ್ವಿಟ್ಟರ್ ಕೊನೆಗೂ ಎಲಾನ್ ಮಸ್ಕ್ ಸುಪರ್ದಿಗೆ ಬಿದ್ದಿದೆ. 44 ಬಿಲಿಯನ್ ಡಾಲರ್, ಅಂದರೆ ಸುಮಾರು 3.37 ಲಕ್ಷಕೋಟಿ ರೂಪಾಯಿ ಹಣಕ್ಕೆ ಟ್ವಿಟ್ಟರ್ ಅನ್ನು ಎಲಾನ್ ಮಸ್ಕ್ ಖರೀದಿಸಿದ್ದಾರೆ. ಆದರೆ, ಟ್ವಿಟ್ಟರ್‌ನ ಸಿಬ್ಬಂದಿ ಮಾತ್ರ ಖುಷಿಯಾದಂತಿಲ್ಲ. ಟ್ವಿಟ್ಟರ್‌ನ ಸಿಇಒ ಅವರಿಂದ ಹಿಡಿದು ಸಿಬ್ಬಂದಿ ವರ್ಗದ ಹಲವು ಮಂದಿ ಎಲಾನ್ ಮಸ್ಕ್ ಅವರಿಗೆ ಕಂಪನಿಯ ಮಾರಾಟಕ್ಕೆ ಬಲವಾಗಿ ವಿರೋಧ ಮಾಡಿದ್ದರು.

ಈ ಹಿಂದೆ ನಡೆದ ಹಲವು ಟೀಮ್ ಮೀಟಿಂಗ್ ವೇಳೆ ಈ ಬಗ್ಗೆ ಚರ್ಚೆಗಳಾಗುತ್ತಿದ್ದವು. ಮಸ್ಕ್ ಅವರಿಗೆ ಟ್ವಿಟ್ಟರ್ ಕೊಟ್ಟರೆ ಉಳಿಗಾಲ ಇಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾರತೀಯ ಮೂಲದ ಸಿಇಒ ಪರಾಗ್ ಅಗರ್ವಾಲ್ ಅವರದ್ದೂ ಇದೇ ಅನಿಸಿಕೆ ಆಗಿತ್ತು.

ಟ್ವಿಟ್ಟರ್ ಸ್ವಾಧೀನ ಬಿಡ್‌ಗೆ ಸಮ್ಮತಿ, ಮಸ್ಕ್ ಸಂತಸಗಿಲ್ಲ ಮಿತಿಟ್ವಿಟ್ಟರ್ ಸ್ವಾಧೀನ ಬಿಡ್‌ಗೆ ಸಮ್ಮತಿ, ಮಸ್ಕ್ ಸಂತಸಗಿಲ್ಲ ಮಿತಿ

ತಾವು ಕಂಪನಿಯ ಉದ್ಯೋಗಿಗಳಾದ್ದರಿಂದ ನಮ್ಮ ಮಾತನ್ನು ಕಂಪನಿಯ ಆಡಳಿತ ಮಂಡಳಿ ಆಲಿಸುತ್ತದೆ. ಮಸ್ಕ್ ಅವರ ಖರೀದಿ ಯತ್ನ ತಡೆಯಲು ಏನಾದರೂ ಮಾಡೋಣ ಎಂದು ಒಮ್ಮೆ ಅವರು ಹೇಳಿದ್ದರು. ಆದರೆ, ದಿನಗಳೆದಂತೆ ಅವರೂ ಹತಾಶರಾಗಿದ್ದರು. ಟ್ವಿಟ್ಟರ್‌ನ ಷೇರುದಾರರ ಹಿತಾಸಕ್ತಿ ಪರಿಗಣಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಇತ್ತೀಚೆಗೆ ಅವರು ತಮ್ಮ ಸಹೋದ್ಯೋಗಿಗಳ ಬಳಿ ಹೇಳಿಕೊಂಡಿದ್ದರು.

Twitter CEO Parag Agarwal

ನಿನ್ನೆ ಇಲಾನ್ ಮಸ್ಕ್ ಅವರಿಗೆ ಟ್ವಿಟ್ಟರ್ ಮಾರಾಟವಾಗುವುದು ಖಚಿತವಾಗುತ್ತಿದ್ದಂತೆಯೇ ಸಿಇಒ ಪರಾಗ್ ಅಗರ್ವಾಲ್ ತಲೆ ಮೇಲೆ ಕೈಹೊತ್ತುಕೊಳ್ಳುವುದೊಂದೇ ಬಾಕಿ.

"ಈ ಮಾರಾಟ ಅಂತಿಮಗೊಂಡರೆ ಟ್ವಿಟ್ಟರ್ ಯಾವ ದಿಕ್ಕಿಗೆ ಸಾಗುತ್ತದೆ ಎಂದು ಗೊತ್ತಿಲ್ಲ" ಎಂದು ಸಿಇಒ ಅವರು ಟೀಮ್ ಮೀಟಿಂಗ್ ವೇಳೆ ಹೇಳಿದರೆಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹಾಗೆಯೇ, ನಿನ್ನೆ ರಾತ್ರಿ (ಭಾರತೀಯ ಕಾಲಮಾನದಂತೆ) ಅವರು ಟ್ವಿಟ್ಟರ್ ಕಂಪನಿಯ ಘನ ಉದ್ದೇಶವನ್ನು ಹೊಗಳಿ ಟ್ವೀಟ್ ಮಾಡಿದ್ದರು. ಅದರಲ್ಲಿ ಅವರು ತಮ್ಮ ತಂಡದ ಸದಸ್ಯರ ಕಾರ್ಯಗಳನ್ನ ಶ್ಲಾಘಿಸಿದ್ದರು. ಇದು ಅವರು ಕಂಪನಿಗೆ ವಿದಾಯ ಹೇಳುವ ಮುನ್ಸೂಚನೆಯಾ ಗೊತ್ತಿಲ್ಲ.

Check out: Twitter CEO Parag Agarwal reaction after take over by Elon Musk

ಇದೇನೇ ಇದ್ದರೂ ಎಲಾನ್ ಮಸ್ಕ್ ಸುಪರ್ದಿಗೆ ಬಂದ ನಂತರ ಟ್ವಿಟ್ಟರ್‌ನಲ್ಲಿ ಬಹಳಷ್ಟು ಬದಲಾವಣೆ ಆಗುವುದಂತೂ ಹೌದು. ಆದರೆ ಎಂಥ ಬದಲಾವಣೆ ಎಂಬುದು ಮುಂದಿನ ದಿನಗಳಲ್ಲಷ್ಟೇ ಗೊತ್ತಾಗುತ್ತದೆ.

ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟ್ಟರ್ ಇತಿಹಾಸ ತಿಳಿಯಿರಿಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟ್ಟರ್ ಇತಿಹಾಸ ತಿಳಿಯಿರಿ

ಇಲಾನ್ ಮಸ್ಕ್ ಕೊಟ್ಟ ಹೇಳಿಕೆ:

ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಎಲಾನ್ ಮಸ್ಕ್ ಅವರು ಟ್ವಿಟ್ಟರ್‌ನಲ್ಲೇ ಒಂದು ಪೋಸ್ಟ್ ಮೂಲಕ ಹೇಳಿಕೆ ಕೊಟ್ಟಿದ್ದಾರೆ.

"ಪ್ರಜಾತಂತ್ರದ ಕಾರ್ಯನಿರ್ವಹಣೆಗೆ ಫ್ರೀ ಸ್ಪೀಚ್ ಬಹಳ ಮುಖ್ಯ. ಮಾನವಕುಲದ ಭವಿಷ್ಯಕ್ಕೆ ಮುಖ್ಯವಾಗಿರುವ ವಿಚಾರಗಳನ್ನ ಚರ್ಚಿಸಲು ಟ್ವಿಟ್ಟರ್ ಒಂದು ಡಿಜಿಟಲ್ ಸ್ಥಳವಾಗಿದೆ.

Recommended Video

ರೋಹಿತ್ ಶರ್ಮಾ ಅವರ 8 ಸೋಲಿನ ನೋವು ಅಭಿಮಾನಿಗಳ ಜೊತೆ ವ್ಯಕ್ತವಾಗಿದ್ದು ಹೀಗೆ | Oneindia Kannada

"ಟ್ವಿಟ್ಟರ್‌ನಲ್ಲಿ ಹೊಸ ಫೀಚರ್‌ಗಳನ್ನ ಸೇರಿಸಿ ಉತ್ತಮಪಡಿಸಬಯಸುತ್ತೇನೆ. ಅದರ ಮೇಲಿನ ವಿಶ್ವಾಸ ಹೆಚ್ಚಿಸಲು ಅದರ ಅಲ್ಗಾರಿದಮ್‌ಗಳು ಓಪನ್ ಸೋರ್ಸ್ ಆಗಿಸುತ್ತೇನೆ. ಸ್ಪ್ಯಾಮ್ ಬೋಟ್‌ಗಳನ್ನ ಸೋಲಿಸುತ್ತೇನೆ. ಎಲ್ಲಾ ವ್ಯಕ್ತಿಗಳಿಗೂ ಅಧಿಕೃತತೆ ಕೊಡುತ್ತೇನೆ. ಟ್ವಿಟ್ಟರ್‌ಗೆ ಅಗಾಧ ಸಾಮರ್ಥ್ಯ ಇದೆ. ಈ ಸಾಮರ್ಥ್ಯವನ್ನು ಹೊರತರಲು ನಾನು ಈ ಕಂಪನಿ ಮತ್ತು ಇದನ್ನ ಬಳಸುವ ಜನರೊಂದಿಗೆ ಕೆಲಸ ಮಾಡಲು ಎದುರುನೋಡುತ್ತಿದ್ದೇನೆ," ಎಂದು ಇಲಾನ್ ಮಸ್ಕ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.(ಒನ್ಇಂಡಿಯಾ ಸುದ್ದಿ)

English summary
Twitter Chief Executive Parag Agrawal told employees on Monday that the future of the social media firm is uncertain after the deal to be taken private under billionaire Elon Musk closes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X