ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking news: ಟ್ವಿಟ್ಟರ್ ಸಿಇಒ ಹುದ್ದೆ ತೊರೆದ ಜಾಕ್ ಡೋರ್ಸಿ

|
Google Oneindia Kannada News

ಫ್ಲೋರಿಡಾ, ನವೆಂಬರ್ 29: ಜನಪ್ರಿಯ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ ಸಂಸ್ಥೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ) ಜಾಕ್ ಡೋರ್ಸಿ(Jack Dorsey) ಅವರು ತಮ್ಮ ಹುದ್ದೆಯನ್ನು ತೊರೆದಿದ್ದಾರೆ ಎಂದು ವರದಿ ಬಂದಿದೆ. ಈ ಬಗ್ಗೆ ಸಿಎನ್‌ಬಿಸಿ ಸೋಮವಾರ ಸಂಜೆ ವರದಿ ಮಾಡಿದೆ. ಜಾಕ್ ಡೋರ್ಸಿ ಪ್ರಸ್ತುತ ಟ್ವಿಟ್ಟರ್ ಮತ್ತು ಸ್ಕ್ವೇರ್‌ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾಕ್ ಅವರು ಸಂಸ್ಥೆ ತೊರೆದರೆ, ಅವರ ಸ್ಥಾನಕ್ಕೆ ಯಾರು ಬರಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಸದ್ಯಕ್ಕೆ ಸಿಇಒ ಸಂಭಾವ್ಯ ಅಭ್ಯರ್ಥಿ ಘೋಷಣೆ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣವಿಲ್ಲ ಎಂದು ವರದಿ ಹೇಳಿದೆ.

ಈ ಬಗ್ಗೆ ಖುದ್ದು ಜಾಕ್ ಟ್ವೀಟ್ ಮಾಡಿದ್ದಾರೆ. ಸಂಸ್ಥೆ ತೊರೆದಿದ್ದೇಕೆ ಎಂಬುದನ್ನು ಪತ್ರದ ಮೂಲಕ ವಿವರಿಸಿದ್ದಾರೆ. ಹಾಗೆ ಪರಾಗ್ ಅವರು ಮುಂದಿನ ಸಿಇಒ ಆಗಿರಲಿದ್ದಾರೆ. ಟ್ವಿಟ್ಟರ್ ಸಂಸ್ಥೆ ಪಾರದರ್ಶಕ ವ್ಯವಹಾರ ಹೊಂದಿದೆ ಎಂದಿದ್ದಾರೆ. ಟ್ವಿಟ್ಟರ್ ಸಂಸ್ಥೆಯಲ್ಲಿನ ತಮ್ಮ 16 ವರ್ಷಗಳ ಅನುಭವ ಹಂಚಿಕೊಂಡಿದ್ದಾರೆ.

ಈ ನಡುವೆ ಜಾಕ್ ಅವರು ತಮ್ಮ ಹುದ್ದೆಯನ್ನು ತೊರೆಯಲು ಏನು ಕಾರಣ ಎಂಬುದು ಇನ್ನೂ ತಿಳಿದು ಬಂದಿಲ್ಲ. ಅಮೆರಿಕ ಮೂಲದ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನ ಸಿಇಒ ಜಾಕ್ ಡೋರ್ಸಿ ಅವರ ಮೊಟ್ಟ ಮೊದಲ ಟ್ವೀಟ್ ಕೊನೆಗೂ ಭಾರಿ ಮೊತ್ತಕ್ಕೆ ಮಾರಾಟವಾಗಿತ್ತು.

Twitter CEO Jack Dorsey Likely to Step Down: Reports

ಕ್ರಿಪ್ಟೋಕರೆನ್ಸಿ ಎಥರ್ ಬಳಸಿ 1630.5825601 ETH ನೀಡಿ ಟ್ವೀಟ್ ಖರೀದಿಸಲಾಗಿದೆ. ಇದರ ಮೌಲ್ಯ $2,915,835.47 ಎಂದು NFT ಹರಾಜು ಹಾಕುವ ಯುಎಸ್ ಮೂಲದ ಕಂಪನಿ ಸೆಂಟ್ ಸಿಇಒ, ಸಹ ಸ್ಥಾಪಕ ಕೆಮರೂನ್ ಹೆಜಾಜಿ ಹೇಳಿದ್ದಾರೆ. ಈ ದಾಖಲೆ ಮೊತ್ತದ ಶೇ 95ರಷ್ಟು ಭಾಗ ಜಾಕ್ ಪಡೆಯಲಿದ್ದು, ಶೇ 5ರಷ್ಟು ಸೆಂಟ್ ಸಂಸ್ಥೆಗೆ ಸಲ್ಲಲಿದೆ. ಈ ಮೊತ್ತವನ್ನು ಆಫ್ರಿಕಾದಲ್ಲಿ ಕೊರೊನಾ ಪೀಡಿತ ಕುಟುಂಬಗಳಿಗೆ ನೀಡಲು ಬಯಸಿರುವುದಾಗಿ ಜಾಕ್ ಈಗಾಗಲೇ ಘೋಷಿಸಿದ್ದರು.

ಒಂದು ಬಿಲಿಯನ್ ಡಾಲರ್‌ ಅನ್ನು ಕೊರೊನಾ ನಿಯಂತ್ರಣಕ್ಕೆ ಜಾನ್ ಡೋರ್ಸಿ ನೀಡಿದ್ದಾರೆ. ಅಂದರೆ, ತಮ್ಮ ಆಸ್ತಿಯ 28 ಭಾಗವನ್ನು ಅವರು ದೇಣಿಗೆ ನೀಡಿದ್ದರು.


2022 ರ ಬೋರ್ಡ್ ಸದಸ್ಯರ ಸಭೆ ಮುಗಿಯುವ ತನಕ ಡಾಸಿ ಅವರು ಮಂಡಳಿಯ ಸದಸ್ಯರಾಗಿ ಉಳಿಯುತ್ತಾರೆ ಎಂದು ಕಂಪನಿ ಹೇಳಿದೆ. ನೂತನ ಸಿಇಒ ಪರಾಗ್ ಅಗರವಾಲ್ ಅವರು ಅನೇಕ ಗುರಿಗಳನ್ನು ಎದುರಿಸಲು ಸಜ್ಜಾಗಬೇಕಿದೆ. ಕಂಪನಿಯು 2023 ರ ಅಂತ್ಯದ ವೇಳೆಗೆ 315 ಮಿಲಿಯನ್ ಹಣಗಳಿಸಬಹುದಾದ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದುವ ಗುರಿಯನ್ನು ಹೊಂದಿದೆ ಮತ್ತು ಆ ವರ್ಷದಲ್ಲಿ ವಾರ್ಷಿಕ ಆದಾಯವನ್ನು ಕನಿಷ್ಠ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.

ಕಳೆದ ವರ್ಷ ಟ್ವಿಟ್ಟರ್ ಮಧ್ಯಸ್ಥಗಾರ ಎಲಿಯಟ್ ಮ್ಯಾನೇಜ್‌ಮೆಂಟ್ ಅವರನ್ನು ಬದಲಿಸಲು ಪ್ರಯತ್ನಿಸಿದಾಗ ಡೋರ್ಸಿ ಪದಚ್ಯುತಿಯ ಬಗ್ಗೆ ಸುದ್ದಿ ಹಬ್ಬಿತ್ತು. ಎಲಿಯಟ್ ಮ್ಯಾನೇಜ್‌ಮೆಂಟ್ ಸಂಸ್ಥಾಪಕ ಮತ್ತು ಬಿಲಿಯನೇರ್ ಹೂಡಿಕೆದಾರ ಪಾಲ್ ಸಿಂಗರ್ ಅವರು ಎರಡೂ ಸಾರ್ವಜನಿಕ ಕಂಪನಿಗಳನ್ನು ನಡೆಸಬೇಕೆ ಎಂದು ಪ್ರಶ್ನಿಸಿದ್ದರು. ಹೂಡಿಕೆ ಸಂಸ್ಥೆಯು ಕಂಪನಿಯ ನಿರ್ವಹಣೆಯೊಂದಿಗೆ ಒಪ್ಪಂದಕ್ಕೆ ಬರುವ ಮೊದಲು, ಒಂದು ಸಂಸ್ಥೆಯ ಸಿಇಒ ಸ್ಥಾನದಿಂದ ಕೆಳಗಿಳಿಯುವಂತೆ ಕರೆ ನೀಡಿದ್ದರು.

2006ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸುವಂಥ ಬ್ಲಾಗಿಂಗ್ ತಾಣವನ್ನು ಡಾರ್ಸಿ ಸ್ಥಾಪಿಸಿದರು. 2008 ರವರೆಗೆ ಸಿಇಒ ಆಗಿದ್ದರು. ನಂತರ ಮಾಜಿ ಸಿಇಒ ಡಿಕ್ ಕಾಸ್ಟೊಲೊ ಕೆಳಗಿಳಿದ ನಂತರ ಮತ್ತೊಮ್ಮೆ 2015 ರಲ್ಲಿ ಟ್ವಿಟರ್ ಬಾಸ್ ಆಗಿ ಡಾಸಿ ಮರಳಿದರು.

ಅಕ್ಟೋಬರ್ 5. 2015 ರಂದು ಡಾಸಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ ಷೇರುಗಳು 85% ರಷ್ಟು ಜಿಗಿದಿವೆ. ಈ ಮಧ್ಯೆ, ನವೆಂಬರ್ 19, 2015 ರ ಐಪಿಒ ಘೋಷಣೆ ಬಳಿಕ ಸ್ಕ್ವೇರ್ ಷೇರುಗಳು 1,566% ರಷ್ಟು ಏರಿಕೆ ಕಂಡಿವೆ.

English summary
Twitter CEO Jack Dorsey steps down from his post, as reported by CNBC on Monday, citing sources. Dorsey currently serves as both the CEO of Twitter and Square, his digital payments company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X