• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಗ ಖರೀದಿಸಿ, 6 ತಿಂಗಳ ಬಳಿಕ ಪಾವತಿಸಿ ಟಿವಿಎಸ್ ಯೋಜನೆ

|

ಬೆಂಗಳೂರು, ಜೂನ್ 4: ಭಾರತದ ಪ್ರಮುಖ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಉತ್ಪಾದಕ ಟಿವಿಎಸ್ ಮೋಟರ್ ಕಂಪನಿ ಮೊಟ್ಟಮೊದಲ ಬಾರಿಗೆ ಭಾರತೀಯ ದ್ವಿಚಕ್ರ ವಾಹನ ಉದ್ಯಮದಲ್ಲಿ ಟಿವಿಎಸ್ ಎಕ್ಸ್ಎಲ್ 100ಗಾಗಿ "ಈಗ ಖರೀದಿಸಿ, ಆರು ತಿಂಗಳ ಬಳಿಕ ಪಾವತಿಸಿ' ಎಂಬ ಇಎಂಐ ಯೋಜನೆಯನ್ನು ಆರಂಭಿಸಿದೆ.

ಟಿವಿಎಸ್ ಎಕ್ಸ್ಎಲ್ 100 ಖರೀದಿಸಿದ ಬಳಿಕ ಈ ಯೋಜನೆ ಅನ್ವಯಿಸುವ ಗ್ರಾಹಕರಿಗೆ ಇಎಂಐ ಪಾವತಿ ಆರಂಭವಾಗುವ ದಿನಾಂಕದಿಂದ ಆರು ತಿಂಗಳ ಮುಂದೂಡಿಕೆ ಸೌಲಭ್ಯ ನೀಡಲಾಗುತ್ತದೆ. ಇದರ ಪರಿಣಾಮವಾಗಿ ಗ್ರಾಹಕರು ಆರು ತಿಂಗಳ ಇಎಂಐ ರಜೆ ಸೌಲಭ್ಯ ಪಡೆಯಲಿದ್ದಾರೆ. ಈ ಯೋಜನೆಯಡಿ ಒಟ್ಟು ಮೌಲ್ಯಕ್ಕೆ ನೀಡುವ ಸಾಲದ ಮೊತ್ತ ಶೇಕಡ 75ರಷ್ಟಾಗಿರುತ್ತದೆ.

ಟಿವಿಎಸ್ ಮೋಟಾರ್ ಉದ್ಯೋಗಿಗಳಿಗೆ ಸಂಬಳ ಕಡಿತ

ವಿನೂತನ ಹಾಗೂ ಕೈಗೆಟುಕುವ ದರದ ಸಂಚಾರ ಪರಿಹಾರವನ್ನು ಸೃಷ್ಟಿಸುವ ಕಂಪನಿಯ ಧ್ಯೇಯೋದ್ದೇಶಕ್ಕೆ ಅನುಗುಣವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಗ್ರಾಹಕರಿಗೆ ತಮ್ಮ ತಕ್ಷಣದ ಅಗತ್ಯತೆಗಾಗಿ ವಾಹನ ಖರೀದಿಸಲು ಅನುವು ಮಾಡಿಕೊಡುತ್ತದೆ. ಈ ಯೋಜನೆಯು 2020ರ ಜುಲೈ 31ರವರೆಗೆ ಜಾರಿಯಲ್ಲಿರುತ್ತದೆ.

ಕರ್ನಾಟಕಕ್ಕೆ 3 ಸಾವಿರ ಪಿಪಿಇ ಕಿಟ್ ನೀಡಿದ ಟಿವಿಎಸ್ ಮೋಟರ್ಸ್

ಟಿವಿಎಸ್ ಎಕ್ಸ್ಎಲ್100 ವಾಹನವು ಹೈಸ್ಪಾರ್ಕ್ ಎನರ್ಜಿ ಎಂಜಿನ್‍ನಿಂದ ಚಾಲಿತವಾಗಿದ್ದು, ಉತ್ಕೃಷ್ಠ ಪಿಕ್ ಅಪ್ ಜತೆಗೆ ಅದ್ಭುತ ಕ್ಷಮತೆಯನ್ನು ನೀಡುತ್ತದೆ. 99.7 ಸಿಸಿ ನಾಲ್ಕು ಸ್ಟ್ರೋಕ್ ಎಂಜಿನ್‍ನ ಗರಿಷ್ಠ ಶಕ್ತಿ 3.20kW (4.3 bhp) @ 600rpm ಆಗಿದ್ದು, ಗರಿಷ್ಠ ಟಾರ್ಕ್ 6.5 Nm @ 3500rpm ಆಗಿರತ್ತದೆ.

English summary
TVS Motor Company a reputed manufacturer of two-wheelers and three-wheelers has rolled out a first-of-a-kind ‘Buy now Pay after six months’ EMI scheme in the Indian two-wheeler industry for TVS XL100.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X