ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 01ರಿಂದ ಯಾವೆಲ್ಲ ಸಾಮಗ್ರಿಗಳ ಬೆಲೆ ಇಳಿಕೆ, ಪಟ್ಟಿ ನೋಡಿ

|
Google Oneindia Kannada News

ನವದೆಹಲಿ, ಜನವರಿ 01 : ಈ ಮುಂಚೆ ಘೋಷಿಸಿದಂತೆ ಜನವರಿ 01ರಿಂದ ಅನೇಕ ಸಾಮಗ್ರಿಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ದರ ಇಳಿಕೆಯಾಗಲಿದೆ. ಟಿವಿ, ಸಿನಿಮಾ ಟಿಕೆಟ್ ದರ ಸೇರಿದಂತೆ ಸುಮಾರು 23 ಸಾಮಗ್ರಿಗಳ ದರ ಇಳಿಕೆಯಾಗಿದೆ.

ನೂರು ರೂಪಾಯಿವರೆಗಿನ ಸಿನಿಮಾ ಟಿಕೆಟ್ ಮೇಲಿನ ಜಿಎಸ್ಟಿಯನ್ನು ಶೇ.18ರಿಂದ ಶೇ. 12ಕ್ಕೆ ಇಳಿಸಲಾಗಿದೆ. ನೂರು ರೂಪಾಯಿ ಮೇಲಿನ ತೆರಿಗೆಯನ್ನು ಶೇ. 28 ರಿಂದ ಶೇ.18ಕ್ಕೆ ಇಳಿಸಲಾಗಿದೆ. ಮಾನಿಟರ್, ಟಿವಿ ಸ್ಕ್ರೀನ್, ಟೈರ್, ಬ್ಯಾಟರಿಯ ಪವರ್ ಬ್ಯಾಂಕ್ ಮೇಲಿನ ತೆರಿಗೆಯನ್ನು ಶೇ. 28 ರಿಂದ ಶೇ.18ಕ್ಕೆ ಇಳಿಸಲಾಗಿದೆ.

ಜನವರಿ ನಂತರ ಅಪಾರ್ಟ್ಮೆಂಟ್ ಖರೀದಿಸಿ, ಜಿಎಸ್ಟಿ ತಗ್ಗಲಿದೆ!ಜನವರಿ ನಂತರ ಅಪಾರ್ಟ್ಮೆಂಟ್ ಖರೀದಿಸಿ, ಜಿಎಸ್ಟಿ ತಗ್ಗಲಿದೆ!

ಪಾದರಕ್ಷೆಯ ಮೇಲಿನ ತೆರಿಗೆಯನ್ನು ಶೇ. 18ರಿಂದ ಶೇ. 12, ಹೆಪ್ಪುಗಟ್ಟಿದ ತರಕಾರಿಗಳ ಮೇಲಿನ ತೆರಿಗೆಯನ್ನು ಜಿಎಸ್ಟಿಯಿಂದ ವಿನಾಯತಿ ನೀಡಲಾಗಿದೆ. ವ್ಹೀಲ್ ಚೇರ್ ಮೇಲಿನ ದರವನ್ನು ಶೇ. 28 ರಿಂದ ಶೇ. 5ಕ್ಕೆ ಇಳಿಸಲಾಗಿದೆ.

ಜಿಎಸ್ಟಿ ತೆರಿಗೆ ದರದಲ್ಲಿ ಭಾರೀ ಇಳಿಕೆ: ಜನಸಾಮಾನ್ಯ ಫುಲ್ ಖುಷ್ಜಿಎಸ್ಟಿ ತೆರಿಗೆ ದರದಲ್ಲಿ ಭಾರೀ ಇಳಿಕೆ: ಜನಸಾಮಾನ್ಯ ಫುಲ್ ಖುಷ್

ತೆರಿಗೆ ದರ ಇಳಿಕೆಯಿಂದ ಕೇಂದ್ರ ಸರಕಾರಕ್ಕೆ 5,500 ಕೋಟಿ ರೂಪಾಯಿ ನಷ್ಟವಾಗಲಿದೆ. ಶೇ. 28ರ ಸ್ಲ್ಯಾಬ್ ಅನ್ನು ಹಿಂದಕ್ಕೆ ಪಡೆದುಕೊಂಡರೆ, ಸರಕಾರಕ್ಕೆ ತೀವ್ರ ನಷ್ಟವಾಗಲಿದೆ ಎನ್ನುವ ಕಾರಣಕ್ಕಾಗಿ ಮುಂದುವರಿಸಲಾಗಿದೆ ಎಂದು ವಿತ್ತ ಸಚಿವ ಜೇಟ್ಲಿ ಹೇಳಿದ್ದಾರೆ.

ಡಿಸೆಂಬರ್ 22 ರ ಜಿಎಸ್ಟಿ ಸಭೆ ಪರಿಣಾಮ

ಡಿಸೆಂಬರ್ 22 ರ ಜಿಎಸ್ಟಿ ಸಭೆ ಪರಿಣಾಮ

ಏಪ್ರಿಲ್-ಮೇ 2019ರಲ್ಲಿ ನಡೆಯಲಿರುವ ಚುನಾವಣೆ ದೃಷ್ಟಿಯಿಂದ ತೆರಿಗೆ ಇಳಿಕೆಯಲ್ಲಿ ಭಾರಿ ಬದಲಾವಣೆ ಸಾಧ್ಯತೆಯಿದೆ.ಇಲ್ಲಿ ತನಕ(ನವೆಂಬರ್ ಅಂತ್ಯಕ್ಕೆ) ಸರ್ಕಾರಕ್ಕೆ 7.76 ಲಕ್ಷ ಕೋಟಿ ಆದಾಯವನ್ನು ಜಿಎಸ್ಟಿ ತಂದು ಕೊಟ್ಟಿದೆ.

ಶೇಕಡಾ 28 ರಷ್ಟಿದ್ದ ಜಿ.ಎಸ್.ಟಿ. ದರವನ್ನು ಶೇಕಡಾ 18ಕ್ಕೆ ಇಳಿಕೆ ಮಾಡಲಾಗಿದೆ. ಶೇಕಡಾ 18 ರಷ್ಟಿದ್ದ ಕೆಲ ವಸ್ತುಗಳ ಜಿ.ಎಸ್.ಟಿ. ದರವನ್ನು ಶೇಕಡಾ 12 ಮತ್ತು ಶೇಕಡಾ 5ಕ್ಕೆ ಇಳಿಕೆ ಮಾಡಲಾಗಿದೆ.

ದೆಹಲಿಯಲ್ಲಿ ಶನಿವಾರ(ಡಿಸೆಂಬರ್ 22) ನಡೆದ ಜಿ.ಎಸ್.ಟಿ. 31ನೇ ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಶೇ 18 ಸ್ಲ್ಯಾಬಿನಲ್ಲಿ ಬರುವ ಸಾಮಾಗ್ರಿಗಳು

ಶೇ 18 ಸ್ಲ್ಯಾಬಿನಲ್ಲಿ ಬರುವ ಸಾಮಾಗ್ರಿಗಳು

100 ರು ಗೂ ಅಧಿಕ ಮೊತ್ತದ ಸಿನಿಮಾ ಟಿಕೆಟ್, ಟಿವಿ ಸ್ಕ್ರೀನ್, ಮಾನಿಟರ್, ಗೇರ್ ಬಾಕ್ಸ್, ಪುಲ್ಲಿಗಳು, ಶಾಫ್ಟ್, ಕ್ರಾಂಕ್ಸ್, ಬಳಸಿದ ಟೈಯರ್, ಪವರ್ ಬ್ಯಾಂಕ್ಸ್( ಲಿಥಿಯಂ ಅಯಾನ್ ಬ್ಯಾಟರಿಯುಳ್ಳ), ಡಿಜಿಟಲ್ ಕ್ಯಾಮೆರಾ, ವಿಡಿಯೋ ಕ್ಯಾಮೆರಾ ರೆಕಾರ್ಡರ್ ಹಾಗೂ ವಿಡಿಯೋ ಗೇಮ್ಸ್ ಕನ್ಸೌಲ್ ಇನ್ನಿತರ ವಸ್ತುಗಳು

ಶೇ 12 ಸ್ಲ್ಯಾಬಿನ ವಸ್ತುಗಳು

ಶೇ 12 ಸ್ಲ್ಯಾಬಿನ ವಸ್ತುಗಳು

100 ರು ಒಳಗಿನ ಸಿನಿಮಾ ಟಿಕೆಟ್ ಗಳು, ಸರಕು ಸಾಗಣೆ ವಾಹನಗಳ ಮೇಲಿನ ಥರ್ಡ್ ಪಾರ್ಟಿ ವಿಮೆ ಪ್ರೀಮಿಯಂ ಮೊತ್ತ.

ಶೇ 5 ರ ಸ್ಲ್ಯಾಬಿನ ವಸ್ತುಗಳು

ಶೇ 5 ರ ಸ್ಲ್ಯಾಬಿನ ವಸ್ತುಗಳು

ವಾಕಿಂಗ್ ಸ್ಟಿಕ್, ಹಾರು ಬೂದಿ ಬ್ಲಾಕುಗಳು, ನೈಸರ್ಗಿಕ ಕಾರ್ಕ್, ಕಪ್ಪು ಶಿಲೆ ಗೋಲಿ, ಯಾತ್ರಾಸ್ಥಳಕ್ಕೆ ತೆರಳುವ ವಿಮಾನಯಾನ,

ತೆರಿಗೆ ರಹಿತ ವಸ್ತುಗಳು

ತೆರಿಗೆ ರಹಿತ ವಸ್ತುಗಳು

ಸಂಗೀತದ ಪುಸ್ತಕಗಳು, ತರಕಾರಿ,ಶಿಥಲೀಕರಣಗೊಂಡ ತರಕಾರಿ, ಬ್ಯಾಂಕ್ ಸೇವೆ, ಜನ ಧನ್ ಯೋಜನೆ,ಹೆಪ್ಪುಗಟ್ಟಿದ ತರಕಾರಿಗಳ ಮೇಲಿನ ತೆರಿಗೆಯನ್ನು ಜಿಎಸ್ಟಿಯಿಂದ ವಿನಾಯತಿ ನೀಡಲಾಗಿದೆ

English summary
In a new year gift to the common man, the government has notified reduction in GST rates on 23 goods and services, including movie tickets, TV and monitor screen. The consumers will pay less for these items of common consumption as the incidence of Goods and Services Tax (GST) on them will come down from Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X