ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿವಿಎಸ್ ಮೋಟಾರ್ ಉದ್ಯೋಗಿಗಳಿಗೆ ಸಂಬಳ ಕಡಿತ

|
Google Oneindia Kannada News

ಬೆಂಗಳೂರು, ಮೇ 26: ಭಾರತದ ಮೂರನೇ ಅತಿದೊಡ್ಡ ದ್ವಿಚಕ್ರ ತಯಾರಕ ಕಂಪನಿ ಟಿವಿಎಸ್ ಮೋಟಾರ್ ಕಂಪನಿಯು ತನ್ನ ಉದ್ಯೋಗಿಗಳಿಗೆ ತಾತ್ಕಾಲಿಕ ಸಂಬಳ ಕಡಿತವನ್ನು ಘೋಷಿಸಿದೆ.

ಕೊರನಾವೈರಸ್ ದೆಸೆಯಿಂದ ಲಾಕ್ಡೌನ್ ಆಗಿ ಉತ್ಪಾದನೆ ಸ್ಥಗಿತಗೊಳಿಸಿದ್ದರಿಂದ ಸಂಸ್ಥೆಗೆ ತಕ್ಕಮಟ್ಟಿನ ನಷ್ಟ ಉಂಟಾಗಿದೆ. ಈ ವರ್ಷಾರಂಭದಲ್ಲೇ ಬಜಾಜ್ ಆಟೋ ಲಿಮಿಟೆಡ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ 'ಚೇತಕ್' ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ ಬೆನ್ನಲ್ಲೇ, ಟಿವಿಎಸ್ 1.5 ಲಕ್ಷ ಬೆಲೆಯನ್ನು ಹೊಂದಿರುವ 'ಐಕ್ಯೂಬ್' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿತ್ತು. ಈ ಮೂಲಕ ಇ ವಾಹನ ಲೋಕಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿತ್ತು.

ರಾಜ್ಯ ಸರ್ಕಾರಕ್ಕೆ 3 ಸಾವಿರ ಪಿಪಿಇ ಕಿಟ್ ನೀಡಿದ ಟಿವಿಎಸ್ ಮೋಟರ್ಸ್ ರಾಜ್ಯ ಸರ್ಕಾರಕ್ಕೆ 3 ಸಾವಿರ ಪಿಪಿಇ ಕಿಟ್ ನೀಡಿದ ಟಿವಿಎಸ್ ಮೋಟರ್ಸ್

ಈಗ ವೇಣು ಶ್ರೀನಿವಾಸನ್ ನೇತೃತ್ವದ ಕಂಪನಿಯು ತನ್ನ ಎಕ್ಸಿಕ್ಯೂಟಿವ್ ಸ್ತರದ ಉದ್ಯೋಗಿಗಳ ಸಂಬಳವನ್ನು ಮಾತ್ರ ಕಡಿತಗೊಳಿಸುತ್ತಿರುವುದಾಗಿ ಘೋಷಿಸಿದೆ. ಅಕ್ಟೋಬರ್ ತಿಂಗಳ ತನಕ ಸಂಬಳ ಕಡಿತ ಜಾರಿಯಲ್ಲಿರುತ್ತದೆ. ಮೇ ತಿಂಗಳಿನಿಂದ ಅಕ್ಟೋಬರ್ 2020ರ ತನಕ ಇದು ಜಾರಿಯಲ್ಲಿರಲಿದೆ. ವರ್ಕ್ ಮನ್ , ಡ್ರೈವರ್, ಮೆಕ್ಯಾನಿಕ್ ಸೇರಿದಂತೆ ಎಂಟ್ರಿ ಲೆವಲ್ ಉದ್ಯೋಗಿಗಳ ಸಂಬಳ ಕಡಿತಗೊಳಿಸದಿರಲು ಸಂಸ್ಥೆ ನಿರ್ಧರಿಸಿದೆ ಎಂದು ಟಿವಿಎಸ್ ಮೋಟರ್ ಕಂಪನಿಯ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.

ಹೀರೋ ಎಲೆಕ್ಟ್ರಿಕ್ ನಿಂದ ಎರಡು ಹೊಸ ಇ ಸ್ಕೂಟರ್ ಬಿಡುಗಡೆ ಹೀರೋ ಎಲೆಕ್ಟ್ರಿಕ್ ನಿಂದ ಎರಡು ಹೊಸ ಇ ಸ್ಕೂಟರ್ ಬಿಡುಗಡೆ

TVS Motor implements temporary pay cuts for employees

ಜ್ಯೂನಿಯರ್ ಎಕ್ಸಿಕ್ಯೂಟಿವ್ ಶೇ 5ರಷ್ಟು ಹಿರಿಯ ಕಾರ್ಯಕಾರಿ ಸಿಬ್ಬಂದಿಗೆ ಶೇ 15 ರಿಂದ 20ರಷ್ಟು ಸಂಬಳ ಕಡಿತಗೊಳ್ಳಲಿದೆ. ಮೇ 6ರಿಂದಲೇ ಟಿವಿಎಸ್ ವಾಹನ ಉತ್ಪಾದನಾ ಘಟಕಗಳು ಕಾರ್ಯಾರಂಭ ಮಾಡಿವೆ.

English summary
TVS Motor Company has cut staff salaries by up to 20 per cent for a period of six months, beginning May, amid coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X