ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ವೆಲ್ ಅವೆಂಜರ್ಸ್‍ ಆವೃತ್ತಿ ಟಿವಿಎಸ್ NTORQ 125

|
Google Oneindia Kannada News

ಹೊಸೂರು, ಅಕ್ಟೋಬರ್ 20, 2020: ವಿಶ್ವದಾದ್ಯಂತ ಹೆಸರಾಂತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಉತ್ಪಾದಕ ಸಂಸ್ಥೆಯಾಗಿರುವ ಟಿ.ವಿ.ಎಸ್. ಮೋಟರ್ ಕಂಪನಿ, ಇಂದು ಮಾರ್ವೆಲ್ ಅವರ ಅವೆಂಜರ್ಸ್‍ನಿಂದ ಪ್ರೇರೇಪಣೆ ಗೊಂಡಿರುವ TVS NTORQ 125 ಸೂಪರ್ ಸ್ಕ್ವಾಡ್ ಎಡಿಷನ್ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಕಂಪನಿಯು ಡಿಸ್ನಿ ಇಂಡಿಯಾದ ಗೃಹಬಳಕೆ ಉತ್ಪನ್ನಗಳ ವಹಿವಾಟಿನ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಮೂಲಕ ವಿಶೇಷ ಸೂಪರ್ ಸ್ಕ್ವಾಡ್ ಆವೃತ್ತಿಯಾಗಿರುವ TVS NTORQ 125 ಅನ್ನು ಬಿಡುಗಡೆ ಮಾಡಲಿದೆ. ಇದು, ಭಾರತದ ಮೊದಲ ಬ್ಲೂಟೂತ್ ಸಂಪರ್ಕವಿರುವ ಮತ್ತು ಆರ್‍ಟಿ-ಫೈ ತಂತ್ರಜ್ಞಾನವನ್ನು ಹೊಂದಿರುವ ಸ್ಕೂಟರ್ ಆಗಿದ್ದು, ಮಾರ್ವೆಲ್ ಅವರ ಹೆಸರಾಂತ ಸೂಪರ್ ಹೀರೋಗಳಿಂದ ಪ್ರೇರೇಪಣೆಯನ್ನು ಪಡೆದುದಾಗಿದೆ.

ಈಗ ಖರೀದಿಸಿ, 6 ತಿಂಗಳ ಬಳಿಕ ಪಾವತಿಸಿ ಟಿವಿಎಸ್ ಯೋಜನೆ ಈಗ ಖರೀದಿಸಿ, 6 ತಿಂಗಳ ಬಳಿಕ ಪಾವತಿಸಿ ಟಿವಿಎಸ್ ಯೋಜನೆ

ಸೂಪರ್ ಸ್ಕ್ವಾಡ್ ಆವೃತ್ತಿಯು ಮೂರು ಹೊಸ ಮಾದರಿಗಳಲ್ಲಿ ಲಭ್ಯವಿದೆ. ಅವುಗಳೆಂದರೆ, ಇನ್‍ವಿಸಿಬಲ್ ರೆಡ್, ಸ್ಟೀಲ್ತ್ ಬ್ಲ್ಯಾಕ್, ಕಾಂಬ್ಯಾಟ್ ಬ್ಲೂ ಇನ್‍ಸ್ಪೈರ್ಡ್ ಬೈ ಐರನ್ ಮ್ಯಾನ್ ಬ್ಲ್ಯಾಕ್ ಪ್ಯಾಂಥರ್ ಮತ್ತು ಕ್ಯಾಫ್ಟನ್ ಅಮೆರಿಕ ಇವುಗಳು. ನೂತನ ಆವೃತ್ತಿಯು ಮಾರ್ವೆಲ್‍ರ ಪ್ರತಿ ಸೂಪರ್ ಹೀರೊ ಜೊತೆಗೆ ಗುರುತಿಸಿಕೊಂಡಿದ್ದು, ತನ್ನದೇ ಆದ ವಿನ್ಯಾಸವನ್ನು ಒಳಗೊಂಡಿದೆ. ಮುಂದುವರಿದು, ಉತ್ಸಾಹ ಮೂಡಿಸುವ Play Smart. Play Epic' ಘೋಷಣೆಯನ್ನು ಒಳಗೊಂಡಿದೆ. ಸೂಪರ್ ಸ್ಕ್ವಾಡ್ ಲೊಗೊ ಮತ್ತು ಹೆಸರಾಂತ ಅವೆಂಜರ್ಸ್ ನ 'ಎ' ಅನ್ನು ಎದ್ದು ಕಾಣುವಂತೆ ಮುಂದಿನ ಪ್ಯಾನಲ್, ಲೆಗ್ ಶೀಲ್ಡ್ ಮತ್ತು ಸ್ಪೀಡೊಮೀಟರ್ ಕೆಳಗೆ ಬಿಂಬಿಸಲಾಗಿದೆ. TVS NTORQ 125 ಸೂಪರ್ ಸ್ಕ್ವಾಡ್ ಆವೃತ್ತಿಯ ದರ 83,815 ಆಗಿದೆ (ಎಕ್ಸ್ ಶೋರೂಂ ದರ, ದೆಹಲಿ).

ಮೊದಲ ಬ್ಲೂಟೂತ್ ಸಂಪರ್ಕ ಹೊಂದಿದ ವಾಹನ

ಮೊದಲ ಬ್ಲೂಟೂತ್ ಸಂಪರ್ಕ ಹೊಂದಿದ ವಾಹನ

2018ರಲ್ಲಿ TVS NTORQ 125 ಸ್ಕೂಟರ್ ಅನ್ನು ಭಾರತದ ಮೊದಲ ಬ್ಲೂಟೂತ್ ಸಂಪರ್ಕವನ್ನು ಹೊಂದಿದ್ದ ವಾಹನವಾಗಿ ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಸರಿಸಾಟಿಯಿಲ್ಲದ ನೋಟ, ಉನ್ನತ ಗುಣಮಟ್ಟದ ರೇಸಿಂಗ್ ಶೈಲಿಯ ಸಾಮಥ್ರ್ಯ, ಅತ್ಯಾಧುನಿಕವಾದ ಟೆಕ್ನಾಲಜಿಯಿಂದಾಗಿ ಗಮನಸೆಳೆದಿತ್ತು. ಬ್ರಾಂಡ್ ಈಗ ಹೊಸ ಅನ್ವೇಷಣೆಗಳಿಗಾಗಿ ಗಮನಸೆಳೆಯುತ್ತಿದೆ. ಕಳೆದ ವರ್ಷ ಮಾರ್ವೆಲ್ ಅವೆಂಜರ್ಸ್‍ ಆವೃತ್ತಿ ಟಿವಿಎಸ್ NTORQ 125 ಹೆಸರಿನ ರೇಸ್ ಟ್ಯೂನ್ಡ್ ಫ್ಯೂಯೆಲ್ ಇಂಜೆಕ್ಷನ್ ತಂತ್ರಜ್ಞಾನವನ್ನು ಪರಿಚಯಿಸಿತ್ತು. ಹೊಸ ಪೀಳಿಗೆಯ ಗ್ರಾಹಕರನ್ನು ಸಂತುಷ್ಟಗೊಳಿಸಲು ಇನ್ನಷ್ಟು ಹೊಸತನ ನೀಡಲು ಕಂಪನಿ ಒತ್ತು ನೀಡುತ್ತಿದೆ. ಜನರೇಷನ್ ಜಡ್ ಎಂದೇ ಗುರುತಿಸುವ ನವಪೀಳಿಗೆಗಾಗಿ ಮಾರ್ವೆಲ್ ಯೂನಿವರ್ಸ್ ಚೆನ್ನಾಗಿ ಬೆಸೆದು ಕೊಂಡಿದೆ. TVS NTORQ 125 ಸೂಪರ್ ಸ್ಕ್ವಾಡ್ ಆವೃತ್ತಿ ಮೂಲಕ ಹೊಸ ಅಡಿಪಾಯವನ್ನು ಹಾಕುತ್ತಿದೆ.

ಅನಿರುದ್ಧ ಹಲ್ದಾರ್ ಮಾತನಾಡಿ

ಅನಿರುದ್ಧ ಹಲ್ದಾರ್ ಮಾತನಾಡಿ

ಈ ಸಂದರ್ಭದಲ್ಲಿ ಮಾತನಾಡಿದ ಟಿ.ವಿ.ಎಸ್. ಮೋಟರ್ ಕಂಪನಿಯ ಕಮ್ಯುಟರ್ ಮೋಟರ್ ಸೈಕಲ್ಸ್, ಸ್ಕೂಟರ್ & ಕಾರ್ಪೊರೇಟ್ ಬ್ರಾಂಡ್ ವಿಭಾಗದ ಉಪಾಧ್ಯಕ್ಷ (ಮಾರ್ಕೆಟಿಂಗ್) ಅನಿರುದ್ಧ ಹಲ್ದಾರ್ ಅವರು, ಮಾರ್ವೆಲ್ ಅವೆಂಜರ್ಸ್‍ನಿಂದ ಪ್ರೇರೇಪಿತವಾದ ಟಿವಿಎಸ್, TVS NTORQ 125 ಅನ್ನು ಬಿಡುಗಡೆ ಮಾಡಲು ಖುಷಿಯಾಗಿದೆ. ಈ ಸಹಯೋಗದೊಂದಿಗೆ ನವಪೀಳಿಗೆಯು ಪ್ಲೇ ಸ್ಮಾರ್ಟ್, ಪ್ಲೇ ಎಪಿಕ್' ಜೊತೆಗೆ ಗುರುತಿಸಿಕೊಳ್ಳಬಹುದಾಗಿದೆ. ನಾವು ಎಲ್ಲರೂ ನಮ್ಮ ನೆಚ್ಚಿನ ಹೀರೋಗಳನ್ನು ಹೊಂದಿದ್ದೇವೆ, ಅವರ ಜೊತೆಗೆ ಭಾವನಾತ್ಮಕವಾಗಿ ಸಹಯೋಗ ಹೊಂದಿರುತ್ತೇವೆ. ಅದನ್ನು ಆನಂದಿಸಲು ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ. ಟಿ.ವಿ.ಎಸ್. NTORQ 125 ಸೂಪರ್ ಸ್ಕ್ವಾಡ್ ಆವೃತ್ತಿಯು ಏಜ್‍ಲೆಸ್ ಫಾಸ್ಸಿನೇಷನ್‍ಗೆ (ವಯೋರಹಿತ ಮೋಹಕ್ಕೆ) ತಮ್ಮದೇ ಸಂಭ್ರಮವನ್ನು ನೀಡಲಿದೆ. ಆರಂಭಿಕ ಪ್ರತಿಕ್ರಿಯೆಯೂ ಉತ್ಸಾಹಭರಿತವಾಗಿದೆ. ಇದೊಂದು ಬ್ಲಾಕ್ ಬಸ್ಟರ್ ಆಗುವ ಎಲ್ಲ ವಿಶ್ವಾಸವೂ ಇದೆ' ಎಂದು ತಿಳಿಸುತ್ತಾರೆ.

ಹೊಸ ಮೈಲಿಗಲ್ಲು: ಟಿವಿಎಸ್ ಸಂಸ್ಥೆಯ ಅಪಾಚೆ 40 ಲಕ್ಷ ಮಾರಾಟಹೊಸ ಮೈಲಿಗಲ್ಲು: ಟಿವಿಎಸ್ ಸಂಸ್ಥೆಯ ಅಪಾಚೆ 40 ಲಕ್ಷ ಮಾರಾಟ

ಬ್ಲ್ಯಾಕ್ ಪ್ಯಾಂಥರ್ ನಿಂದ ಪ್ರೇರೇಪಿತ

ಬ್ಲ್ಯಾಕ್ ಪ್ಯಾಂಥರ್ ನಿಂದ ಪ್ರೇರೇಪಿತ

ಸ್ಟೀಲ್ತ್ ಬ್ಲ್ಯಾಕ್: ಬ್ಲ್ಯಾಕ್ ಪ್ಯಾಂಥರ್ ನಿಂದ ಪ್ರೇರೇಪಿತವಾದ ಈ ಆವೃತ್ತಿಯು ಜೆಟ್ ಬ್ಲ್ಯಾಕ್ ವರ್ಣ ಹಾಗೂ ಪರ್ಪಲ್ ವರ್ಣವನ್ನು ಒಳಗೊಂಡಿದೆ. ಸ್ಕೂಟರ್ ಬ್ಲ್ಯಾಕ್ ಪ್ಯಾಂಥರ್ ಅನ್ನು ಬಿಂಬಿಸಲಿದೆ. ಉತ್ಸಾಹಿಗಳಿಗಾಗಿ ವಾಕಾಂಡಾ ಫಾರ್‍ಎವರ್ ಸಿಗ್ನೇಚರ್ ಸಲ್ಯೂಟ್ ಕೂಡಾ ಇದ್ದು, 66 ಸಂಖ್ಯೆಯೂ (1966) ಮಾರ್ವೆಲ್ ಯೂನಿವರ್ಸ್‍ನಲ್ಲಿ ಈ ಪಾತ್ರವನ್ನು ಪರಿಚಯಿಸಿದ ವರ್ಷವನ್ನು ಉಲ್ಲೇಖಿಸಲಿದೆ.

ಐರನ್ ಮ್ಯಾನ್‍ನಿಂದ ಪ್ರೇರೇಪಿತ

ಐರನ್ ಮ್ಯಾನ್‍ನಿಂದ ಪ್ರೇರೇಪಿತ

ಇನ್‍ವಿಸಿಬಲ್ ರೆಡ್: ಐರನ್ ಮ್ಯಾನ್‍ನಿಂದ ಪ್ರೇರೇಪಿತವಾದ ಈ ಸ್ಕೂಟರ್ ಕೆಂಪು ಮತ್ತು ಚಿನ್ನದ ವರ್ಣವನ್ನು ಬಿಂಬಿಸಲಿದ್ದು, ಆಕರ್ಷಕ ನೋಟವನ್ನು ಒಳಗೊಂಡಿದೆ. ಐರನ್ ಮ್ಯಾನ್ ಹೆಲ್ಮೆಟ್ ಚಿತ್ರವನ್ನು ಲೆಗ್‍ಶೀಲ್ಡ್ ಮೇಲೆ ಬಿಂಬಿಸಲಾಗಿದೆ. ಎರಡೂ ಬದಿಯ ಪ್ಯಾನಲ್ ಮೇಲೆ ಆರ್ಕ್ ರಿಯಾಕ್ಟರ್ ಚಿತ್ರವಿದೆ. ಮಾರ್ಕ್ XXIX ಚಿತ್ರವು ಎರಡೂ ಪ್ಯಾನಲ್ ಮೇಲಿದ್ದು, ಅಭಿಮಾನಿಗಳಿಗೆ ಸಂತಸ ಮೂಡಿಸಲಿದೆ. ಐರನ್ ಮ್ಯಾನ್‍ನ 29ನೇ ಸ್ಯೂಟ್ ಹಾಗೂ 63 (1963) ಸಂಖ್ಯೆಯೂ ಮಾರ್ವೆಲ್ ಯೂನಿವರ್ಸ್‍ನಲ್ಲಿ ಈ ಪಾತ್ರವನ್ನು ಪರಿಚಯಿಸಿದ ವರ್ಷವನ್ನು ಬಿಂಬಿಸಲಿದೆ.

ಕ್ಯಾಪ್ಟನ್ ಅಮೆರಿಕದಿಂದ ಪ್ರೇರೇಪಿತ

ಕ್ಯಾಪ್ಟನ್ ಅಮೆರಿಕದಿಂದ ಪ್ರೇರೇಪಿತ

ಕಾಂಬ್ಯಾಟ್ ಬ್ಲೂ: ಕ್ಯಾಪ್ಟನ್ ಅಮೆರಿಕದಿಂದ ಪ್ರೇರೇಪಿತವಾದ ಈ ಸ್ಕೂಟರ್ ನೀಲಿ, ಬಿಳಿ ಮತ್ತು ಕೆಂಪು ವರ್ಣವನ್ನು ಒಳಗೊಂಡಿದೆ. ಪಾತ್ರವನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಕ್ರಮವಾಗಿ ಇದು 41 (1941) ಸಂಖ್ಯೆಯನ್ನು ಬಿಂಬಿಸಿದ್ದು, ಇದು ಮಾರ್ವೆಲ್ ಯೂನಿವರ್ಸ್‍ನಲ್ಲಿ ಕ್ಯಾಫ್ಟನ್ ಅಮೆರಿಕ ಅನ್ನು ಪರಿಚಯಿಸಿದ ವರ್ಷವಾಗಿದೆ. ಸ್ಕೂಟರ್ ಮುಂಭಾಗದ ಶೀಲ್ಡ್, ಎರಡೂ ಬದಿಯ ಪ್ಯಾನಲ್ ಮೇಲೆ ಸೂಪರ್ ಸೋಲ್ಜರ್‍ಚಿತ್ರ ಬಿಂಬಿಸಲಾಗಿದೆ.

ಸೂಪರ್ ಸ್ಕ್ವಾಡ್ ಆವೃತ್ತಿಯ ಟಿ.ವಿ.ಎಸ್. ಕನೆಕ್ಟ್ ಆ್ಯಪ್ ಅನ್ನು ಸ್ಮಾರ್ಟ್ ಕನೆಕ್ಟ್ SmartXonnect(patent pending) ಸೌಲಭ್ಯ ಹೊಂದಿದ್ದು, ಬಳಕೆದಾರ ಸ್ನೇಹಿ ಕ್ರಮವನ್ನು ಹೊಂದಿದೆ. ಆ್ಯಪ್ ಆಯಾ ಪಾತ್ರಗಳ ಗಮನಸೆಳೆಯುವ ಲಕ್ಷಣಗಳೊಂದಿಗೆ ತೆರೆದುಕೊಳ್ಳಲಿದೆ.

English summary
TVS Motor Company, a reputed two-wheeler and three-wheeler manufacturer globally, today launched the TVS NTORQ 125 SuperSquad Edition inspired by Marvel’s Avengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X