ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿವಿಎಸ್ ಮೋಟರ್ ಅಪಾಚೆ RTR 200 4V ಬಿಡುಗಡೆ

|
Google Oneindia Kannada News

ಹೊಸೂರು, ನ. 5: ದೇಶದ ಪ್ರಮುಖ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಉತ್ಪಾದಕ ಸಂಸ್ಥೆಯಾಗಿರುವ ಟಿವಿಎಸ್ ಮೋಟರ್ ಕಂಪನಿ ಹೊಸ ಟಿವಿಎಸ್ ಅಪಾಚೆ ಆರ್‍ಟಿಆರ್ 200 V(ಡ್ಯುಯೆಲ್ ಚಾನೆಲ್ ಎಬಿಎಸ್) ಮೋಟರ್ ಸೈಕಲ್ ಅನ್ನು ಪರಿಚಯಿಸಿದೆ. ಅನೇಕ ನೂತನ ಸೌಲಭ್ಯಗಳನ್ನು ಈ ವಾಹನ ಒಳಗೊಂಡಿದೆ. ಅತ್ಯುತ್ತಮ ತಂತ್ರಜ್ಞಾನದ ಸೌಲಭ್ಯಗಳ ಭರವಸೆಯನ್ನು ಈ ವಾಹನ ನೀಡಲಿದ್ದು, ಬ್ರಾಂಡ್‍ನ ಜಾಗತಿಕವಾಗಿ 4 ಮಿಲಿಯನ್ ವಾಹನಗಳ ಮಾರಾಟದ ಮೈಲಿಗಲ್ಲು ಸಾಧನೆಯನ್ನು ಈ ಮೂಲಕ ಸಂಭ್ರಮಿಸುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಟಿವಿಎಸ್ ಮೋಟರ್ ಕಂಪನಿಯ ಮುಖ್ಯಸ್ಥ (ಮಾರ್ಕೆಟಿಂಗ್, ಪ್ರೀಮಿಯಂ ಮೋಟರ್ ಸೈಕಲ್ಸ್) ಮೇಘಶ್ಯಾಂ ದಿಘೋಲೆ ಅವರು, "ಅಪಾಚೆ ಸರಣಿಯ ವಾಹನಗಳು ನಮ್ಮ ನಿರೀಕ್ಷಿತ ಗ್ರಾಹಕರು ಹಾಗೂ ರೇಸಿಂಗ್ ಉತ್ಸಾಹಿಗಳಿಗೆ 2005ರಿಂದಲೂ ಸಲ್ಲಿಸುತ್ತಿರುವ ತಾಂತ್ರಿಕ ಸೇವೆ ಸೌಲಭ್ಯಗಳಿಗೆ ದೊರೆತ ಬದ್ಧತೆಯಾಗಿದೆ. ಅದೇ ನಿಟ್ಟಿನಲ್ಲಿ ಈಗ ಟಿವಿಎಸ್ ಅಪಾಚೆ 200 4ವಿ ಮೋಟರ್ ಸೈಕಲ್ ಅನ್ನು ಬಿಡುಗಡೆ ಮಾಡಲು, ಈ ವರ್ಗದ ವಾಹನಗಳಲ್ಲಿಯೇ ಹೊಸ ಸೇವೆಗಳು ಹಾಗೂ ತಂತ್ರಜ್ಞಾನವನ್ನು ಪರಿಚಯಿಸುವ ಮೂಲಕ ಗ್ರಾಹಕರೆಡೆಗೆ ನಮಗಿರುವ ಬದ್ಧತೆಯನ್ನು ಮತ್ತೊಮ್ಮೆ ಬಿಂಬಿಸುತ್ತಿದ್ದೇವೆ" ಎಂದು ಹೇಳಿದರು.

ಹೊಸ ಮೈಲಿಗಲ್ಲು: ಟಿವಿಎಸ್ ಸಂಸ್ಥೆಯ ಅಪಾಚೆ 40 ಲಕ್ಷ ಮಾರಾಟಹೊಸ ಮೈಲಿಗಲ್ಲು: ಟಿವಿಎಸ್ ಸಂಸ್ಥೆಯ ಅಪಾಚೆ 40 ಲಕ್ಷ ಮಾರಾಟ

ನೂತನ ಟಿವಿಎಸ್ ಅಪಾಚೆ ಆರ್.ಟಿ.ಆರ್ 200 4ವಿ ಮೋಟರ್ ಸೈಕಲ್ ಒಟ್ಟು ಮೂರು ಮೋಡ್‍ಗಳಲ್ಲಿ ಅಂದರೆ ಸ್ಪೋರ್ಟ್, ಅರ್ಬನ್, ರೇನ್ ಮೋಡ್‍ಗಳಲ್ಲಿ ಲಭ್ಯವಿದೆ., ಈ ನೂತನ ಸೌಲಭ್ಯವು ಚಾಲಕರು ಚಾಲನೆಯಲ್ಲಿ ಇದ್ದಾಗಲೇ ವಿವಿಧ ಮೋಡ್‍ಗಳಿಗೆ ಬದಲಾಗಲು ನೆರವಾಗಲಿದೆ.

ಅರ್ಬನ್ ಮೋಡ್

ಅರ್ಬನ್ ಮೋಡ್

ಅರ್ಬನ್ ಮೋಡ್‍ನಲ್ಲಿ ಎಂಜಿನ್‍ನ ಸಾಮರ್ಥ್ಯವನ್ನು ಗರಿಷ್ಠ ಮಿತಿಯಲ್ಲಿ ಲಭ್ಯವಾಗುವಂತೆ ಹೊಂದಿಸಲಾಗಿದೆ. ಎಬಿಎಸ್ ತ್ವರಿತಗತಿಯಲ್ಲಿ ಸ್ಪಂದಿಸುವಂತೆ ಈ ಮೋಡ್ ಅನ್ನು ರೂಪಿಸಲಾಗಿದೆ.

ರೇನ್ ಮೋಡ್

ರೇನ್ ಮೋಡ್

ರೇನ್ ಮೋಡ್ ಪ್ರೈಮ್ಸ್ ನಲ್ಲಿ ಎಬಿಎಸ್ ಅನ್ನು ಗರಿಷ್ಠ ರೀತಿಯಲ್ಲಿ ಸ್ಪಂದಿಸುವಂತೆ ರೂಪಿಸಲಾಗಿದೆ. ಇದು, ಎಬಿಎಸ್ ತ್ವರಿತಗತಿಯಲ್ಲಿ, ನಿಖರವಾಗಿ ಸ್ಪಂದಿಸುವಂತೆ ರೂಪಿಸಲಾಗಿದೆ. ತೇವದ ರಸ್ತೆಯ ಸ್ಥಿತಿಯಲ್ಲಿಯೂ ವಾಹನದ ಮೇಲೆ ನಿಯಂತ್ರಣವನ್ನು ಹೊಂದುವುದು ಇದರಿಂದ ಸಾಧ್ಯವಾಗಲಿದೆ.

ಮಾರ್ವೆಲ್ ಅವೆಂಜರ್ಸ್‍ ಆವೃತ್ತಿ ಟಿವಿಎಸ್ NTORQ 125ಮಾರ್ವೆಲ್ ಅವೆಂಜರ್ಸ್‍ ಆವೃತ್ತಿ ಟಿವಿಎಸ್ NTORQ 125

ಸ್ಪೋರ್ಟ್ ಮೋಡ್

ಸ್ಪೋರ್ಟ್ ಮೋಡ್

ಸ್ಪೋರ್ಟ್ ಮೋಡ್‍ನಲ್ಲಿ ಗರಿಷ್ಠ ಸಾಮರ್ಥ್ಯ ಬಳಕೆಯಲ್ಲಿದ್ದು, ತ್ವರಿತಗತಿಯಲ್ಲಿ ಇದು ಸ್ಪಂದಿಸಲಿದೆ. ಮುಖ್ಯವಾಗಿ ಹೆದ್ದಾರಿಗಳಲ್ಲಿ ತಕ್ಷಣದಲ್ಲಿ ವಾಹನದ ಮೇಲೆ ನಿಯಂತ್ರಣ ಹೊಂದಲು ಸಹಕಾರಿಯಾಗಿದೆ. ಎಬಿಎಸ್ ಅನ್ನು ಈ ಮೋಡ್‍ನಲ್ಲಿ ಕನಿಷ್ಠ ಹಸ್ತಕ್ಷೇಪಕ್ಕೆ ಒಳಗಾಗುವಂತೆ ಹಾಗೂ ಅಧಿಕ ವೇಗದಲ್ಲಿ ಸ್ಪಂದಿಸುವಂತೆ ಹೊಂದಿಕೆ ಮಾಡಲಾಗಿದೆ.

ಶೋವಾ ಹಿಂಬದಿಯ ಸಸ್ಪೆನ್ಷನ್

ಶೋವಾ ಹಿಂಬದಿಯ ಸಸ್ಪೆನ್ಷನ್

ನೂತನ ಮೋಟರ್ ಸೈಕಲ್‍ನಲ್ಲಿ ಈಗ ಈ ವರ್ಗದ ವಾಹನಗಳಲ್ಲಿಯೇ ಪ್ರಥಮ ಬಾರಿಗೆ ಹೊಂದಾಣಿಸ ಬಹುದಾದ ಸಸ್ಪೆನ್ಷನ್ ಅಳವಡಿಸಲಾಗಿದೆ. ಸಂಪೂರ್ಣ ನವನವೀನ ಉನ್ನತ ಸಾಮರ್ಥ್ಯದ ಶೋವಾ ಫ್ರಂಟ್ ಸಸ್ಪೆನ್ಷನ್‍ನಲ್ಲಿ ಈ ಮೊದಲೇ, ಚಾಲಕರು ತಮ್ಮ ಪ್ರಯಾಣಕ್ಕೆ ಅನುಗುಣವಾಗಿ ಹೊಂದಾಣಿಸಿಕೊಳ್ಳುವಂತೆ ರೂಪಿಸಲಾಗಿದೆ.

ಈಗ ಖರೀದಿಸಿ, 6 ತಿಂಗಳ ಬಳಿಕ ಪಾವತಿಸಿ ಟಿವಿಎಸ್ ಯೋಜನೆಈಗ ಖರೀದಿಸಿ, 6 ತಿಂಗಳ ಬಳಿಕ ಪಾವತಿಸಿ ಟಿವಿಎಸ್ ಯೋಜನೆ

ಅಂದರೆ ಚಾಲಕ, ಪ್ಲಷ್ ರೈಡ್, ಅಥವಾ ಟ್ರ್ಯಾಕ್ ರೈಡ್ ನಡುವೆ ಆಯ್ಕೆ ಮಾಡಿಕೊಳ್ಳಬಹುದು. ನೂತನ ಶೋವಾ ಹಿಂಬದಿಯ ಸಸ್ಪೆನ್ಷನ್ ಅನ್ನು ಉನ್ನತ ಸಾಮರ್ಥ್ಯಕ್ಕೆ ಪೂರಕವಾಗಿ ಅಳವಡಿಸಲಾಗಿದೆ.

ಇದು, ಹೊಂದಾಣಿಸಬಹುದಾದ ಬ್ರೇಕ್ಸ್ ಮತ್ತು ಕ್ಲಚ್ ಲಿವರ್ ಗಳನ್ನು ಹೊಂದಿದ್ದು, ಮೂರು ಹಂತದ ಅಡ್ಜಸ್ಟ್ ಮೆಂಟ್ ಹೊಂದಿದೆ. ಇದನ್ನು ಮಧ್ಯದ ಬೆರಳಿನಿಂದ ನಿರ್ವಹಿಸಲು ಅನುವಾಗುವಂತೆ ರೂಪಿಸಲಾಗಿದ್ದು, ಬಹುತೇಕ ಶೇ 5 ರಿಂದ 95ರಷ್ಟು ಚಾಲಕರು ಸುಲಭವಾಗಿ ಬಳಸಲು ಅನುವಾಗುವಂತೆ ರೂಪಿಸಲಾಗಿದೆ.

ನೂತನ ಟಿವಿಎಸ್ ಅಪಾಚೆ ಆರ್.ಟಿ.ಆರ್ 200 4ವಿ ಬೆಲೆ

ನೂತನ ಟಿವಿಎಸ್ ಅಪಾಚೆ ಆರ್.ಟಿ.ಆರ್ 200 4ವಿ ಬೆಲೆ

ಹೆಚ್ಚುವರಿಯಾಗಿ, ಈ ಮೋಟರ್ ಸೈಕಲ್ ತೂಕ ಸ್ವಲ್ಪ ಮಟ್ಟಿಗೆ ಕುಗ್ಗಿದ್ದು, ಸುಮಾರು ಒಂದು ಕೆ.ಜಿ.ಅಷ್ಟು ಕಡಿಮೆ ಮಾಡಲಾಗಿದೆ. ಬ್ರೇಕ್ ಸಿಸ್ಟಮ್‍ನ ಬದಲಾವಣೆಯು ಅತ್ಯುತ್ತಮ ಹಾಗೂ ಕ್ಷಿಪ್ರವಾಗಿ ಅಳವಡಿಸಬಹುದಾದ ಸಾಮರ್ಥ್ಯವನ್ನು ನೀಡಲಿದೆ.

ನೂತನ ಟಿವಿಎಸ್ ಅಪಾಚೆ ಆರ್.ಟಿ.ಆರ್ 200 4ವಿ ಮೋಟರ್ ಸೈಕಲ್ ಡ್ಯುಯೆಲ್ ಚಾನೆಲ್ ಎಬಿಎಸ್ ಜೊತೆಗೆ ಬರಲಿದ್ದು, ಗ್ಲೋಸ್ ಬ್ಲ್ಯಾಕ್, ಪರ್ಲ್ ವೈಟ್, ಹೊಸದಾಗಿ ಬಿಡುಗಡೆಯಾಗಿರುವ ಮ್ಯಾಟ್ ಬ್ಲೂ ವರ್ಣಗಳಲ್ಲಿ ಲಭ್ಯವಿದೆ. ಟಿವಿಎಸ್ ಒಎಂಸಿ ರೇಸ್ ಬೈಕ್‍ನಿಂದ ಪ್ರೇರೇಪಿತಗೊಂಡಿದ್ದು, ಆರಂಭಿಕ ದರ ₹. 1,31,050 ಆಗಿದೆ. (ಎಕ್ಸ್ ಷೋರೂಂ ದರ, ದೆಹಲಿ)

English summary
TVS Motor Company launches the new TVS Apache RTR 200 4V with first-in-segment features. The new Apache engineed with three model Sport, Urban and Rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X