ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಕೆಡ್ ಸ್ಟ್ರೀಟ್ ವಿನ್ಯಾಸದ ''ಟಿವಿಎಸ್ ರೈಡರ್'' ಬಿಡುಗಡೆ

|
Google Oneindia Kannada News

ಹೊಸೂರು, ಸೆಪ್ಟೆಂಬರ್ 17: ಟಿವಿಎಸ್ ಮೋಟರ್ ಕಂಪನಿ, ವಿಶ್ವದ ಹೆಸರಾಂತ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನ ಉತ್ಪಾದಕ ಸಂಸ್ಥೆಯಾಗಿದ್ದು, ಇಂದು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ 125 ಸಿಸಿ ಸಾಮರ್ಥ್ಯದ ಟಿವಿಎಸ್ ರೈಡರ್ ಅನ್ನು ಉತ್ಸಾಹಿ ಮತ್ತು ಹೊಸಪೀಳಿಗೆಯ ಗ್ರಾಹಕರಿಗಾಗಿ ಭಾರತ ಮತ್ತು ವಿಶ್ವಾದಾದ್ಯಂತ ಬಿಡುಗಡೆ ಮಾಡಿದೆ.

ಯುವೋತ್ಸಾಹದ, ಆಕರ್ಷಕ ಮೋಟರ್ ಸೈಕಲ್ ಇದೇ ಮೊದಲ ಬಾರಿಗೆ ಹಲವು ಹೊಸ ಸೌಲಭ್ಯಗಳನ್ನು ಅಳವಡಿಸಿದ್ದು, ರಿವರ್ಸ್ ಎಲ್‍ಸಿಡಿ ಡಿಜಿಟಲ್ ಸ್ಪೀಡೋಮೀಟರ್, ಆಪ್ಷನಲ್ 5 ಇಂಚ್ ಟಿಎಫ್‍ಟಿ ಕ್ಲಸ್ಟರ್, ವಾಯ್ಸ್ ಅಸಿಸ್ಟ್, ಮಲ್ಟಿಪಲ್ ರೈಡ್ ಮೋಡ್‍ಗಳು ಮತ್ತು ಇದೇ ಮೊದಲ ಬಾರಿಗೆ ಸೀಟ್ ಕೆಳಗಿನ ಸ್ಟೋರೇಜ್ ಅವಕಾಶವನ್ನು ಹೊಂದಿದೆ.

ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಟಿವಿಎಸ್ ಮೋಟರ್ ಕಂಪನಿಯ ನಿರ್ದೇಶಕ ಮತ್ತು ಸಿಇಒ ಕೆ. ಎನ್. ರಾಧಾಕೃಷ್ಣನ್ ಅವರು, ಟಿವಿಎಸ್ ಮೋಟಾರ್ ಕಂಪನಿಯು ಪ್ರತಿ ಉಪಖಂಡದ ಗ್ರಾಹಕರ ಅಗತ್ಯಗಳನ್ನು ಈಡೇರಿಸುತ್ತಿದೆ. ಜಾಗತಿಕವಾಗಿ ಈಗ ವಾಹನಗಳ ಪಟ್ಟಿಗೆ ಟಿವಿಎಸ್ ರೈಡರ್ ಸೇರ್ಪಡೆಗೊಳಿಸಲು ನಾವು ಉತ್ಸುಕರಾಗಿದ್ದೇವೆ. ಇದನ್ನು ಯುವ ಹಾಗೂ ಡಿಜಿಟಲ್ ಒಲವಿನ ಜೆನ್ Z ಗ್ರಾಹಕರನ್ನು ದೃಷ್ಟಿಯಲ್ಲಿ ಇರಿಸಿಕೊಂಡು ರೂಪಿಸಿದ್ದು, ಈ ವರ್ಗದ ವಾಹನಗಳಲ್ಲಿಯೇ ಅತ್ಯುತ್ತಮದ್ದಾಗಿದೆ. ಟಿವಿಎಸ್ ರೈಡರ್ ಯುವ ಗ್ರಾಹಕರಿಗೆ ಭಾರತ ಮತ್ತು ವಿಶ್ವದಲ್ಲಿಯೇ ಮೊದಲ ಆಯ್ಕೆಯಾಗುವ ವಿಶ್ವಾಸ ನಮ್ಮದಾಗಿದೆ' ಎಂದು ತಿಳಿಸಿದರು.

ಟಿವಿಎಸ್ ಮೋಟರ್ ಕಂಪನಿಯ ಉಪಾಧ್ಯಕ್ಷ (ಮಾರ್ಕೆಟಿಂಗ್), ಕಾರ್ಪೊರೇಟ್ ಬ್ರಾಂಡ್ ಮತ್ತು ಡೀಲರ್ಸ್ ಟ್ರಾನ್ಸ್‍ಫರ್ಮೆಷನ್‍ನ ಎಸ್. ಅನಿರುದ್ಧ ಹಲ್ದರ್ ಅವರು, ಟಿವಿಎಸ್ ಮೋಟರ್ ಕಂಪನಯು ಹಲವು ವರ್ಷಗಳಿಂದ ಜೆನ್ Z ಜೊತೆಗೆ ಗುರುತಿಸಿಕೊಂಡಿದೆ. ಕಂಪನಿಯ ಕೆಲವು ಬ್ರಾಂಡ್‍ಗಳು ಯುವಪೀಳಿಗೆಯಲ್ಲಿ ಸ್ಥಿರವಾಗಿ ಉಳಿದಿವೆ. ಉದಾಹರಣೆಗೆ ಇವಿ ವಲಯದಲ್ಲಿ ಟಿವಿಎಸ್ ಐಕ್ಯೂಬ್, ಟಿವಿಎಸ್ ರೇಸಿಂಗ್ ಪ್ರೇರಿತ ಟಿವಿಎಸ್ ಅಪಾಚೆ ಸರಣಿ ಮತ್ತು ಟಿವಿಎಸ್ NTORQ 125 ವಾಹನಗಳನ್ನು ಹೆಸರಿಸಬಹುದು.

 ಅತ್ಯುತ್ತಮ ಸವಾರಿಯಾಗಿ ಗುರುತಿಸಿಕೊಳ್ಳಲಿದೆ

ಅತ್ಯುತ್ತಮ ಸವಾರಿಯಾಗಿ ಗುರುತಿಸಿಕೊಳ್ಳಲಿದೆ

ಅಕ್ಸಿಲಿರೇಷನ್, ರೈಡ್ ಮೋಡ್, ಮೊನೊ ಶಾಕ್ ಸೌಲಭ್ಯಗಳು ಟಿವಿಎಸ್ ಇಂಟೆಲಿಗೋ ಮತ್ತು ಇಟಿಎಫ್‍ಐ ಒಳಗೊಂಡ ಮೈಲೇಜ್ ಸಾಮಥ್ರ್ಯವನ್ನು ಹೊಂದಿದವೆ. ಗ್ರಾಹಕರು ನೂತನ ಟಿವಿಎಸ್ ರೈಡರ್ ವಾಹನವನ್ನು ಮೆಚ್ಚಿಕೊಳ್ಳುವ ವಿಶ್ವಾಸ ನಮಗಿದೆ. ಇದೇ ಮೊದಲ ಬಾರಿಗೆ ಈ ವಾಹನದಲ್ಲಿ ಎಲ್‍ಸಿಡಿ ಕ್ಲಸ್ಟರ್ ಅಳವಡಿಸಲಾಗಿದೆ. ನಾವು ಇದರ ಜೊತೆಗೆ SMARTXONNECT ಮಾದರಿಯನ್ನು ಬಿಡುಗಡೆಗೊಳಿಸಲಿದ್ದು, ಇದು ಬ್ಲೂಟೂತ್ ಕನೆಕ್ಟಿವಿಟಿ, ನ್ಯಾವಿಗೇಷನ್ ಮತ್ತು ವಾಯ್ಸ್ ಅಸಿಸ್ಟ್ ಸೌಲಭ್ಯವನ್ನು ಹೊಂದಿದೆ. ಜೆನ್ Z ಪೀಳಿಗೆಯ ಲೋಕದಲ್ಲಿ ಟಿವಿಎಸ್ ರೈಡ್ ಒಂದು ಅತ್ಯುತ್ತಮ ಸವಾರಿಯಾಗಿ ಗುರುತಿಸಿಕೊಳ್ಳಲಿದೆ.

ಅತ್ಯುತ್ತಮ ವಿನ್ಯಾಸದ ಥೀಮ್ ಸ್ಟೈಲ್

ಅತ್ಯುತ್ತಮ ವಿನ್ಯಾಸದ ಥೀಮ್ ಸ್ಟೈಲ್

ಟಿವಿಎಸ್ ರೈಡರ್ ವಾಹನವು ಕಂಪನಿಯ ವಿನ್ಯಾಸದ ಉತ್ಸಾಹವನ್ನು ಪರಿಣಾಮಕಾರಿಯಾಗಿ ಬಿಂಬಿಸಲಿದೆ. ಹೊಸತನ, ಅತ್ಯುತ್ತಮ ವಿನ್ಯಾಸದ ಥೀಮ್ ಅನ್ನು ಹೊಂದಿದೆ. ಮೋಟರ್ ಸೈಕಲ್ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿದ್ದು, ವಿಶೇಷ ಲೋಗೊ ಇದನ್ನು ಬಿಂಬಿಸಲಿದೆ. ಶಕ್ತಿಯುತ ಮತ್ತು ವಿಭಿನ್ನ ವಿನ್ಯಾಸದ ಟ್ಯಾಂಕ್ ಟಿವಿಎಸ್ ರೈಡರ್ ಸಾಮರ್ಥ್ಯವನ್ನು ಬಿಂಬಿಸಲಿದೆ. ಇದೇ ಸಮಯದಲ್ಲಿ ಇದು ಆಕರ್ಷಕ, ಸಮಗ್ರ ವಾಹನವಾಗಿದ್ದು, ನಿತ್ಯದ ಬಳಕೆಗೆ ಸೂಕ್ತವಾಗಿದೆ. ಇದು ಆಕರ್ಷಣೆಗಳಲ್ಲಿ ಗಮನಸೆಳಯುವ ಹೆಡ್ ಲ್ಯಾಂಪ್, ಟೇಲ್‍ಲ್ಯಾಂಪ್ ಕೂಡಾ ಸೇರಿದೆ. ಯುವೋತ್ಸಾದ ವರ್ಣಗಳು ವಿಶೇಷವಾಗಿ ಗಮನಸೆಳೆಯಲಿವೆ.

 ಟಿವಿಎಸ್ ರೈಡರ್ ಸಾಮರ್ಥ್ಯ

ಟಿವಿಎಸ್ ರೈಡರ್ ಸಾಮರ್ಥ್ಯ

ಟಿವಿಎಸ್ ರೈಡರ್ ಅತ್ಯಾಧುನಿಕ 124.8 ಸಿಸಿ. ಏರ್ ಮತ್ತು ಆಯಿಲ್ ಕೂಲ್ಡ್‍ನ 3ವಿ ಎಂಜಿನ್ ಒಳಗೊಂಡಿದೆ. ಇದರ ಸಾಮಥ್ರ್ಯ 8.37kW @ 7,500 rpm ಇದ್ದು ಟಾರ್ಕ್ ಸಾಮರ್ಥ್ಯ 11.2Nm @ 6,000 rpm ಆಗಿದೆ. ಮೋಟರ್ ಸೈಕಲ್ ಅತ್ಯುತ್ತಮ ಅಕ್ಸಿಲಿರೇಷನ್ ಅಂದರೆ 0-60 ಞm/h ವೇಗವನ್ನು 5.9 ಸೆಕೆಂಡ್‍ಗಳಲ್ಲಿ ಪಡೆಯಲಿದೆ. ಅತ್ಯುನ್ನತ ವೇಗವು 99 km/h ಆಗಿದೆ. 5 ಹಂತಗಳ ಹೊಂದಾಣಿಕೆಯ ಮೊನೊ ಶಾಕ್ ಸಸ್ಪೆನ್ಷನ್ ಇದ್ದು, ಮುಂಭಾಗದಲ್ಲಿ ಕಡಿಮೆ ಒತ್ತುವಿಕೆಯ ಸಸ್ಪೆನ್ಷನ್, ಮತ್ತು ಸ್ಪಿಲ್ಟ್ ಸೀಟ್, 5 ಸ್ಪೀಡ್ ಗೇರ್ ಬಾಕ್ಸ್, 17" ಇಂಚಿನ ಅಲಾಯ್ ಚಂಕಿ ವೈಡ್ ಟೈರ್ಸ್ ಹೊಂದಿದೆ.

ರಿವರ್ಸ್ ಎಲ್‍ಸಿಡಿ ಡಿಜಿಟಲ್ ಸ್ಪೀಡೊಮೀಟರ್, ರೈಡ್ ಮೋಡ್ ಗಳು ನವೀನ ಸೌಲಭ್ಯವಾಗಿದ್ದು, ಅತ್ಯಾಧುನಿಕ ಹೈಟೆಕ್ ಗ್ಯಾಜೆಟ್ ಹೊಂದಿದ್ದು, ಸುಲಭವಾಗಿ ಓದುವ ವಿವರಗಳನ್ನು ಹೊಂದಿವೆ. ಟಿವಿಎಸ್ ರೈಡರ್ ಇದರ ಜೊತೆಗೆ ಆಪ್ಷನಲ್ ಸ್ವರೂಪದಲ್ಲಿ 5 ಇಂಚಿನ ಟಿಎಫ್‍ಟಿ ಕ್ಲಸ್ಟರ್ ಮತ್ತು ಟಿವಿಎಸ್ SMARTXONNECTTM ಮಾದರಿಯು ಇದ್ದು, ಇದರಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ವಾಯ್ಸ್ ಅಸಿಸ್ಟ್ ಇರಲಿದೆ. ಸ್ವಿಚ್ ಕ್ಲಸ್ಟರ್, ಫುಟ್‍ಪೆಗ್, ಮೆಕಾನಿಕಲ್ ವಿವರಗಳನ್ನು ಅನುಕೂಲಕರ ರೀತಿಯಲ್ಲಿ ಹೊಂದಾಣಿಸಲಾಗಿದೆ.

ಅನುಕೂಲ, ಸುರಕ್ಷತೆ, ಆರಾಮದಾಯಕ

ಅನುಕೂಲ, ಸುರಕ್ಷತೆ, ಆರಾಮದಾಯಕ

ವಿಶೇಷ ಇಂಧನ ಕ್ಷಮತೆ ಅನುಕೂಲಗಳು ಟಿವಿಎಸ್ ರೈಡರ್‍ನ ಒಟ್ಟು ಸಾಮಥ್ರ್ಯವನ್ನು ಹೆಚ್ಚಿಸಲಿವೆ. ಎಕೊಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ (ETFi) ತಂತ್ರಜ್ಞಾನವು ಅತ್ಯುತ್ತಮ ಮೈಲೇಜ್, ಉತ್ತಮ ಸ್ಥಿರತೆ, ಬಾಳಿಕೆಯನ್ನು ನೀಡಲಿದೆ. ಟಿವಿಎಸ್ ಇಂಟಿಲಿಗೋ ಸವಾರಿ ಸೌಕರ್ಯ, ಮೈಲೇಜ್ ಹೆಚ್ಚಿಸುತ್ತದೆ ಮತ್ತು ಟ್ರಾಫಿಕ್ ಸಿಗ್ನಲ್‍ಗಳು ಮತ್ತು ಇತರ ಅಸ್ಥಿರ ನಿಲ್ದಾಣಗಳಂತಹ ಸುದೀರ್ಘ ಐಡ್ಲಿಂಗ್ ಸಮಯದಲ್ಲಿ ಇಂಜಿನ್ ಅನ್ನು ಬುದ್ಧಿವಂತಿಕೆಯಿಂದ ಸ್ವಿಚ್ ಆಫ್ ಮಾಡುವ ಮೂಲಕ ಎಮಿಶನ್ ಅನ್ನು ಕಡಿಮೆ ಮಾಡುತ್ತದೆ.

ಟಿವಿಎಸ್ ರೈಡರ್ ನ ದಕ್ಷತಾಶಾಸ್ತ್ರವನ್ನು ಚಾಲಕನ ಅತ್ಯುತ್ತಮ ಆರಾಮದಾಯಕ ಅನುಭವವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ರೂಪಿಸಲಾಗಿದೆ.

 ಟಿವಿಎಸ್ ರೈಡರ್ ಬಣ್ಣ, ಬೆಲೆ

ಟಿವಿಎಸ್ ರೈಡರ್ ಬಣ್ಣ, ಬೆಲೆ

ಟಿವಿಎಸ್ ಮೋಟರ್ ಕಂಪನಿಯ ಸಾಮರ್ಥ್ಯ, ವಾಹನಗಳ ಗುಣಮಟ್ಟ, ಸೌಲಭ್ಯ, ಕಡಿಮೆ ಎತ್ತರದ ಸೀಟು ಹೊಂದಾಣಿಕೆ, ದೀರ್ಘ ವೀಲ್‍ಬೇಸ್ ಮೊನೊ ಶಾಕ್ ಒಟ್ಟು ವಾಹನ ಚಾಲನೆ, ನಿರ್ವಹಣೆಗೆ ಪೂರಕವಾಗಿದೆ. ಅತ್ಯುತ್ತಮ ವಿನ್ಯಾಸವು ಗಮನಸೆಳೆಯಲಿದೆ. ಇದೇ ಮೊದಲಬಾರಿಗೆ ಸೀಟಿನ ಕೆಳಗೆ ಸ್ಟೋರೇಜ್ ಸೌಲಭ್ಯವನ್ನು ಕಲ್ಪಿಸಿದ್ದು, ಅಗತ್ಯ ವಸ್ತುಗಳನ್ನು ಇಡಲು ಅನುಕೂಲಕರವಾಗಿದೆ. ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಎಂಜಿನ್ ಇನ್‍ಹಿಬಿಟರ್, ಹೆಲ್ಮೆಟ್ ರಿಮೈಂಡರ್, ಆಪ್ಷನಲ್ ಸೌಲಭ್ಯವಾದ ಯುಎಸ್‍ಬಿ ಚಾರ್ಜರ್ ಕೂಡಾ ಇದ್ದು, ಒಟ್ಟು ಚಾಲನಾ ಅನುಭವವನ್ನು ಉತ್ತಮಪಡಿಸಲಿದೆ.

ಬೈಕ್ ದರವು 77,500 (ಎಕ್ಸ್ ಶೋ ರೂಂ, ದೆಹಲಿ)ಆಗಿದ್ದು, ಟಿವಿಎಸ್ ರೈಡರ್ ಸ್ಟ್ರೈಕಿಂಗ್ ರೆಡ್ (ಕೆಂಪು), ಬ್ಲೇಜಿಂಗ್ ಬ್ಲೂ (ನೀಲಿ), ವಿಕೆಡ್ ಬ್ಲಾಕ್ (ಕಪ್ಪು) ಮತ್ತು ಫಿಯರಿ ಯೆಲ್ಲೋ (ಹಳದಿ) ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

English summary
TVS Motor Company launches Naked Street Design ‘TVS Raider’ motorcycle globally for the Gen Z.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X