ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಗ್ಗಿದ ಆಮದು ಸುಂಕ, ಎಲ್ಇಡಿ ಮತ್ತು ಎಲ್.ಸಿ.ಡಿ. ಟಿವಿ ಬೆಲೆ ಇಳಿಕೆ?

|
Google Oneindia Kannada News

ನವದೆಹೆಲಿ, ಸೆ. 18: ದೇಶಿ ಉತ್ಪಾದನಾ ಕ್ಷೇತ್ರಕ್ಕೆ ಪುಷ್ಟಿ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರವು ಓಪನ್ ಸೆಲ್ ಟಿವಿ ಪ್ಯಾನೆಲ್ ಮೇಲಿನ ಆಮದು ಸುಂಕ ರದ್ದುಗೊಳಿಸಿದೆ. ಇದರ ಪರಿಣಾಮ ಎಲ್ ಇಡಿ ಹಾಗೂ ಎಲ್ ಸಿಡಿ ಟಿವಿಗಳ ಬೆಲೆ ತಗ್ಗುವ ಸಾಧ್ಯತೆಯಿದೆ.

ಓಪನ್ ಸೆಲ್ ಟಿವಿ ಪ್ಯಾನಲ್ ಗಳ ಆಮದು ಮೇಲೆ ವಿಧಿಸಲಾಗುತ್ತಿದ್ದ 5% ಸುಂಕ ರದ್ದುಗೊಳಿಸಿರುವುದರಿಂದ ಟಿವಿ ಬೆಲೆ ಶೇ 4 ರಿಂದ 5ರಷ್ಟು ತಗ್ಗುವ ಸಾಧ್ಯತೆಯುದೆ.

ಮಹೀಂದ್ರಾ ಅಂಡ್ ಮಹೀಂದ್ರಾದಿಂದ ಕಾರು ಸಬ್ ಸ್ಕ್ರಿಪ್ಷನ್ ಗೆ ಚಾಲನೆ: ಏನಿದು ಸ್ಕೀಮ್?ಮಹೀಂದ್ರಾ ಅಂಡ್ ಮಹೀಂದ್ರಾದಿಂದ ಕಾರು ಸಬ್ ಸ್ಕ್ರಿಪ್ಷನ್ ಗೆ ಚಾಲನೆ: ಏನಿದು ಸ್ಕೀಮ್?

ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ(LCD) ಹಾಗೂ ಲೈಟ್ ಎಮಿಟಿಂಗ್ ಡಯೋಡ್(LED) ಟಿವಿ ಪ್ಯಾನೆಲ್ ಉತ್ಪಾದನೆಯಲ್ಲಿ ಬಳಸಲಾಗುವ ಓಪನ್ ಸೆಲ್(15.6 ಇಂಚು ಮತ್ತು ಮೇಲ್ಪಟ್ಟ) ಗಳ ಮೇಲೆ ವಿಧಿಸಲಾಗುತ್ತಿದ್ದ ಶೇಕಡ 5 ರಷ್ಟು ಆಮದು ಸುಂಕವನ್ನು ರದ್ದುಗೊಳಿಸಲಾಗಿದೆ.

TV prices may fallGovt scraps 5 pc import duty on open cell TV panel

ಇದಲ್ಲದೆ ಚಿಪ್, ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿ ಮೇಲಿನ ಸುಂಕವನ್ನು ತೆಗೆದು ಹಾಕಲಾಗಿದೆ. ಉತ್ಪಾದನಾ ವೆಚ್ಚ ತಗ್ಗುವುದರಿಂದ ಟಿವಿಗಳ ಬೆಲೆ ಇಳಿಕೆ ನಿರೀಕ್ಷಿಸಬಹುದು. ಇದರಿಂದ ಮೇಕ್ ಇನ್ ಇಂಡಿಯಾ ಟಿವಿ ಉತ್ಪಾದನೆಗೆ ಹೆಚ್ಚಿನ ಬಲ ಸಿಗಲಿದೆ ಎಂದು ವಿಡಿಯೋ ಟೆಕ್ಸ್ ಇಂಟರ್ ನ್ಯಾಷನಲ್ ನ ಅರ್ಜುನ್ ಬಜಾಜ್ ಅಭಿಪ್ರಾಯಪಟ್ಟಿದ್ದಾರೆ.

'ಟಿವಿ ಬೆಲೆಯಲ್ಲಿ ಶೇ 3 ರಿಂದ 4ರಷ್ಟು ಇಳಿಕೆಯಾಗುವುದನ್ನು ನಿರೀಕ್ಷಿಸಬಹುದು" ಎಂದು ಪ್ಯಾನಸೋನಿಕ್ ಇಂಡಿಯಾದ ಸಿಇ ಒ ಮನೀಶ್ ಶರ್ಮ ಹೇಳಿದ್ದಾರೆ. ಸರಿ ಸುಮಾರು 40,000 ಕೋಟಿ ರು ಟಿವಿ ಮಾರಾಟ, 50 ಸಾವಿರ ಉದ್ಯೋಗಗಳು ಈ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ.

English summary
In a bid to boost domestic manufacturing, the government has removed 5 per cent custom duty imposed on import of open cell TV panel, which are used in the manufacturing of LED TVs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X