ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿಯಲ್ಲಿ ಟಿವಿ, ಫ್ರಿಡ್ಜ್‌ , ಇತರೆ ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆ ಹೆಚ್ಚಳ ಸಾಧ್ಯತೆ

|
Google Oneindia Kannada News

ನವದೆಹಲಿ, ಡಿಸೆಂಬರ್ 28: ಹೊಸ ವರ್ಷದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಖರೀದಿ ಮಾಡಬೇಕು ಎಂದುಕೊಂಡಿದ್ದವರಿಗೆ ನಿರಾಸೆಯಾಗಬಹುದು. ಏಕೆಂದರೆ ಜನವರಿ, 2021ರಿಂದ ಟಿವಿ, ಫ್ರಿಡ್ಜ್‌, ವಾಶಿಂಗ್ ಮೆಷಿನ್ ಸೇರಿದಂತೆ ಗೃಹೋಪಯೋಗಿ ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆ ಶೇಕಡಾ 10ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ಹೀಗಾಗಿ ನೀವು ಟಿವಿ, ಫ್ರಿಜ್, ವಾಷಿಂಗ್ ಮೆಷಿನ್ ಅಥವಾ ಇತರ ಗೃಹೋಪಯೋಗಿ ಉಪಕರಣಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ಶೀಘ್ರದಲ್ಲೇ ಖರೀದಿಸಿದರೆ ಉತ್ತಮ.

ಎಲೆಕ್ಟ್ರಾನಿಕ್ಸ್‌ ಉಪಕರಣಗಳು ಶೇಕಡಾ 10ರಷ್ಟು ಹೆಚ್ಚಳ?

ಎಲೆಕ್ಟ್ರಾನಿಕ್ಸ್‌ ಉಪಕರಣಗಳು ಶೇಕಡಾ 10ರಷ್ಟು ಹೆಚ್ಚಳ?

ಎಲ್ಇಡಿ ಟಿವಿ ಮತ್ತು ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಮುಂತಾದ ಉಪಕರಣಗಳು ಮುಂದಿನ ವರ್ಷದ ಜನವರಿಯಿಂದ ಶೇಕಡಾ 10 ರಷ್ಟು ಹೆಚ್ಚು ದುಬಾರಿಯಾಗಲಿವೆ ಎನ್ನಲಾಗಿದೆ. ಪ್ರಮುಖ ಇನ್ಪುಟ್ ವಸ್ತುಗಳಾದ ತಾಮ್ರ, ಅಲ್ಯೂಮಿನಿಯಂ ಮತ್ತು ಉಕ್ಕಿನ ಬೆಲೆ ಏರಿಕೆ ಮತ್ತು ಸಮುದ್ರ ಮತ್ತು ವಾಯು ಸರಕುಗಳ ಹೆಚ್ಚಳ ಇದಕ್ಕೆ ಕಾರಣ.

ಹೊಸ ವರ್ಷಕ್ಕೆ ಚಿನ್ನದ ಬೆಲೆ 10 ಗ್ರಾಂ 63,000 ರೂ. ತಲುಪುವ ಸಾಧ್ಯತೆ!ಹೊಸ ವರ್ಷಕ್ಕೆ ಚಿನ್ನದ ಬೆಲೆ 10 ಗ್ರಾಂ 63,000 ರೂ. ತಲುಪುವ ಸಾಧ್ಯತೆ!

ಜಾಗತಿಕ ಮಾರಾಟಗಾರರಿಂದ ಕಡಿಮೆ ಪೂರೈಕೆಯಿಂದಾಗಿ ಟಿವಿ ಪ್ಯಾನೆಲ್‌ಗಳ (ಓಪನ್‌ಸೇಲ್) ಬೆಲೆಗಳು ಶೇಕಡಾ 200ರಷ್ಟು ಹೆಚ್ಚಾಗಿದೆ ಎಂದು ತಯಾರಕರು ಹೇಳುತ್ತಾರೆ. ಕಚ್ಚಾ ಬೆಲೆ ಹೆಚ್ಚಳದಿಂದಾಗಿ ಪ್ಲಾಸ್ಟಿಕ್ ಕೂಡ ದುಬಾರಿಯಾಗಿದೆ.

ವಾಶಿಂಗ್ ಮೆಷಿನ್ , ಎಸಿ ಬೆಲೆ ಹೆಚ್ಚಳ ಸಾಧ್ಯತೆ

ವಾಶಿಂಗ್ ಮೆಷಿನ್ , ಎಸಿ ಬೆಲೆ ಹೆಚ್ಚಳ ಸಾಧ್ಯತೆ

ವಾಶಿಂಗ್ ಮೆಷಿನ್‌ ಮತ್ತು ಹವಾ ನಿಯತ್ರಣ(ಎಸಿ) ಬೆಲೆಗಳು ಶೇಕಡಾ 8 ರಿಂದ 10ರಷ್ಟು ಏರಿಕೆಯಾಗಬಹುದು. ಇನ್ನು ರೆಫ್ರಿಜರೇಟರ್‌ಗಳ ದರವು ಶೇಕಡಾ 12ರವರೆಗೆ ಏರಿಕೆಯಾಗಬಹುದು.

ಫ್ರಿಡ್ಜ್‌ , ಫ್ರೀಜರ್‌ಗಳು

ಫ್ರಿಡ್ಜ್‌ , ಫ್ರೀಜರ್‌ಗಳು

ರೆಫ್ರಿಜರೇಟರ್, ಫ್ರೀಜರ್‌ಗಳಲ್ಲಿ ಫೋಮ್‌ಗಳ ತಯಾರಿಕೆಯಲ್ಲಿ ಬಳಸುವ ಎಂಡಿಐ ಎಂಬ ರಾಸಾಯನಿಕ ಬೆಲೆ ಶೇಕಡಾ 200 ರಷ್ಟು ಏರಿಕೆಯಾಗಿದೆ. ಹೀಗಾಗಿ ಉತ್ಪಾದನಾ ವೆಚ್ಚದಲ್ಲಿ ಬೆಲೆ ಏರಿಕೆ ಸಾಧ್ಯತೆ ಇದ್ದು, ಮುಂದಿನ ತಿಂಗಳ ಆರಂಭದಿಂದ ಗೃಹೋಪಯೋಗಿ ಸರಕುಗಳ ಬೆಲೆ ಹೆಚ್ಚುವ ಸಾಧ್ಯತೆ ಇದೆ.

ಭಾರತದಲ್ಲಿ ಜೂನ್‌ 2021ಕ್ಕೆ ಟೆಸ್ಲಾ ಮಾಡೆಲ್ 3 ಕಾರುಗಳು ಬಿಡುಗಡೆಭಾರತದಲ್ಲಿ ಜೂನ್‌ 2021ಕ್ಕೆ ಟೆಸ್ಲಾ ಮಾಡೆಲ್ 3 ಕಾರುಗಳು ಬಿಡುಗಡೆ

ಹಲವಾರು ವರ್ಷಗಳ ಬಳಿಕ ಒಂದೇ ಸಮಯದಲ್ಲಿ ಬೆಲೆ ಏರಿಕೆ

ಹಲವಾರು ವರ್ಷಗಳ ಬಳಿಕ ಒಂದೇ ಸಮಯದಲ್ಲಿ ಬೆಲೆ ಏರಿಕೆ

ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಹಲವಾರು ವರ್ಷಗಳ ಬಳಿಕ ಒಂದೇ ಸಮಯದಲ್ಲಿ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಬೆಲೆ ಏರಿಕೆಯಾಗುತ್ತಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯು ಎಲ್ಲಾ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

English summary
Tv, washing machines, microwave ovens, and other home appliances are going to get costly this month due to a 10 per cent increase in input costs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X